ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,17,18,2017
Question 1 |
1. ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಯಾವ ರಾಕೆಟ್ ಮೂಲಕ 104 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿ ದಾಖಲೆ ಬರೆಯಿತು?
ಪಿಎಸ್ಎಲ್ ವಿ-ಸಿ 37 | |
ಪಿಎಸ್ಎಲ್ ವಿ-ಸಿ 38 | |
ಪಿಎಸ್ಎಲ್ ವಿ-ಸಿ 40 | |
ಪಿಎಸ್ಎಲ್ ವಿ-ಸಿ 36 |
ಒಂದೇ ರಾಕೆಟ್ ನಿಂದ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಐತಿಹಾಸಿಕ ಸಾಧನೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 9.28ರ ಹೊತ್ತಿಗೆ 104ಉಪಗ್ರಹಗಳನ್ನು ಹೊತ್ತು ಪಿಎಸ್ಎಲ್ ವಿ -ಸಿ37ರಾಕೆಟ್ ನಭಕ್ಕೆ ಹಾರಿದೆ. 104 ಉಪಗ್ರಹಗಳ ಪೈಕಿ ಭಾರತದ ಕಾರ್ಟೋಸ್ಯಾಟ್-2, ಐಎನ್ಎಸ್-1ಎ ಹಾಗೂ ಐಎನ್ಎಸ್-1ಬಿ ಸೇರಿದಂತೆ ಮೂರು ಉಪಗ್ರಹಗಳು. ಅಮೆರಿಕದ 88 ಚಿಕ್ಕ ಉಪಗ್ರಹ(ಕ್ಯೂಬ್ಸ್ಯಾಟ್)ಗಳು ಕಕ್ಷೆ ಸೇರಿದೆ. ಅಮೆರಿಕ, ಜರ್ಮನಿ, ಇಸ್ರೇಲ್, ಯುಎಇ, ಹಾಲೆಂಡ್, ಬೆಲ್ಜಿಯಂ ಸೇರಿದಂತೆ ವಿದೇಶದ 101 ವಾಣಿಜ್ಯ ಉದ್ದೇಶಿತ ಉಪಗ್ರಹಗಳು ಒಳಗೊಂಡಿವೆ.
Question 2 |
2. 2017 ಭಾರತೀಯ ಪನೋರಮಾ ಸಿನಿಮಾ ಉತ್ಸವ ಯಾವ ನಗರದಲ್ಲಿ ನಡೆಯಲಿದೆ?
ಪೋರ್ಟ್ ಬ್ಲೇರ್ | |
ಪಣಜಿ | |
ಕಲ್ಕತ್ತಾ | |
ಪುಣೆ |
ಅಂಡಮಾನಿನ ಪೋರ್ಟ್ ಬ್ಲೇರ್ ನಲ್ಲಿ 2017 ಭಾರತೀಯ ಪನೋರಮಾ ಸಿನಿಮಾ ಉತ್ಸವ ಫೆಬ್ರವರಿ 15 ರಿಂದ ಆರಂಭಗೊಂಡಿದೆ. ಐದು ದಿನಗಳ ಕಾಲ ಈ ಸಿನಿಮೋತ್ಸವ ನಡೆಯಲಿದೆ. ವಿವಿಧ ಭಾಷೆಯ 15ಕ್ಕೂ ಹೆಚ್ಚು ಜನಪ್ರಿಯ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು.
Question 3 |
3. ಗಣಿಗಾರಿಕೆಯಲ್ಲಿ ಪಾರದರ್ಶಕತೆಯನ್ನು ತರುವ ಸಲುವಾಗಿ ಕೇಂದ್ರ ಸರ್ಕಾರ ಯಾವ ಪೋರ್ಟಲ್ ಅನ್ನು ಜಾರಿಗೆ ತಂದಿದೆ?
Tamra | |
Taboo | |
Tani | |
Tanra |
ಗಣಿಗಾರಿಕೆಯಲ್ಲಿ ಪಾರದರ್ಶಕತೆಯನ್ನು ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರ TAMRA ಹೆಸರಿನ ಮೊಬೈಲ್ ಅಪ್ಲಿಕೇಷನ್ ಹಾಗೂ ಪೋರ್ಟಲ್ ಅನ್ನು ಜಾರಿಗೆ ತಂದಿದೆ. TAMRA ಎಂದರೆ Transparency Auction Monitoring and Resource Augmentation.
Question 4 |
4. 2017 ಕಾಯಕಲ್ಪ ಪ್ರಶಸ್ತಿಯಡಿ ನೈರ್ಮಲ್ಯ ಹಾಗೂ ಸ್ವಚ್ಚತೆ ವಿಭಾಗದಡಿ ಮೊದಲ ಪ್ರಶಸ್ತಿಯನ್ನು ಪಡೆದುಕೊಂಡ ಭಾರತೀಯ ಆರೋಗ್ಯ ಸಂಸ್ಥೆ ಯಾವುದು?
AIIMS, ನವ ದೆಹಲಿ | |
NIMANS, ಬೆಂಗಳೂರು | |
NITRD, ನವ ದೆಹಲಿ | |
PGIMER, ಚಂಡೀಗರ್ |
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ನವದೆಹಲಿ 2017 ಕಾಯಕಲ್ಪ ಪ್ರಶಸ್ತಿಯಡಿ ನೈರ್ಮಲ್ಯ ಹಾಗೂ ಸ್ವಚ್ಚತೆ ವಿಭಾಗದಡಿ ಮೊದಲ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪ್ರಶಸ್ತಿಯು ರೂ 5 ಕೋಟಿ ನಗದು ಬಹುಮಾನವನ್ನು ಒಳಗೊಂಡಿದೆ. ನೈಮರ್ಲ್ಯ ಹಾಗೂ ಸ್ವಚ್ಚತೆಯ ನಿರ್ವಹಣೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
Question 5 |
5. ಇತ್ತೀಚೆಗೆ ನಿಧನರಾದ “ಟಿ ವಿ ಪರಶುರಾಮ್” ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
ಸಿನಿಮಾ | |
ವಿಜ್ಞಾನ | |
ಪತ್ರಿಕೋದ್ಯಮ | |
ಕಲೆ |
ಹಿರಿಯ ಪತ್ರಕರ್ತ ಟಿ ವಿ ಪರಶುರಾಮ್ ಅಮೆರಿಕದಲ್ಲಿ ನಿಧನರಾದರು. ಪರಶುರಾಮ್ ಅವರು ವಿಶ್ವಸಂಸ್ಥೆಯಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದರು. ಪರಶುರಾಮ್ ಅವರು ವಿವಿಧ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಪತ್ರಕರ್ತನಲ್ಲದೇ ಪುಸ್ತಕಗಳನ್ನು ಸಹ ಬರೆದಿದ್ದಾರೆ.
Question 6 |
6. ಈ ಕೆಳಗಿನ ಯಾವ ಅಂತಾರಾಷ್ಟ್ರೀಯ ಸಂಸ್ಥೆ ಭಾರತದಲ್ಲಿ ಇತ್ತೀಚೆಗೆ “South Asia Regional Training and Technical Assistance Center (SARTTAC)” ಕೇಂದ್ರವನ್ನು ಸ್ಥಾಪಿಸಿದೆ?
ಅಂತಾರಾಷ್ಟ್ರೀಯ ಹಣಕಾಸು ನಿಧಿ | |
ವಿಶ್ವಸಂಸ್ಥೆ | |
ಐರೋಪ್ಯ ಒಕ್ಕೂಟ | |
ಏಷ್ಯಾ ಅಭಿವೃದ್ದಿ ಬ್ಯಾಂಕ್ |
ಅಂತಾರಾಷ್ಟ್ರೀಯ ಹಣಕಾಸು ನಿಧಿ ನವದೆಹಲಿಯಲ್ಲಿ “South Asia Regional Training and Technical Assistance Center (SARTTAC)” ಕೇಂದ್ರವನ್ನು ಸ್ಥಾಪಿಸಿದೆ. ದಕ್ಷಿಣ ಏಷ್ಯಾದಲ್ಲಿ ಆರ್ಥಿಕ ಸಾಮರ್ಥ್ಯವನ್ನು ಅಭಿವೃದ್ದಿಪಡಿಸುವ ಸಲುವಾಗಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಐಎಂಎಫ್ ಹಾಗೂ ಸದಸ್ಯ ರಾಷ್ಟ್ರಗಳಾದ ಬಾಂಗ್ಲದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾ ರಾಷ್ಟ್ರಗಳ ಸಹಯೋಗದಲ್ಲಿ ಇದನ್ನು ಸ್ಥಾಪಿಸಲಾಗಿದೆ.
Question 7 |
7. ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯ ಅಧೀನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ “ಜೀನ್ ಪಿಯರ್ ಲ್ಯಾಕ್ರೊಯಾಕ್ಸ್” ಯಾವ ದೇಶದವರು?
ಜಪಾನ್ | |
ಫ್ರಾನ್ಸ್ | |
ಜರ್ಮನಿ | |
ಸ್ಪೇನ್ |
ಫ್ರಾನ್ಸ್ ನ ಜೀನ್ ಪಿಯರ್ ಲ್ಯಾಕ್ರೊಯಾಕ್ಸ್ ರವರು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯ ಅಧೀನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
Question 8 |
8. ಕ್ರೀಡಾ ಶ್ರೇಷ್ಠತೆಗಾಗಿ ಗೌರವ ಪದವಿಯನ್ನು ಪಡೆದ ಸಂದೀಪ್ ಸಿಂಗ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
ಕ್ರಿಕೆಟ್ | |
ಹಾಕಿ | |
ಪುಟ್ಬಾಲ್ | |
ಟೆನ್ನಿಸ್ |
ಭಾರತದ ವೃತ್ತಿಪರ ಹಾಕಿ ಆಟಗಾರ ಹಾಗೂ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ಅವರು ಕ್ರೀಡಾ ಶ್ರೇಷ್ಠತೆಗಾಗಿ ಗೌರವ ಪದವಿಯನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ಈ ಗೌರವವನ್ನು ಪಡೆದ ಭಾರತದ ಎರಡನೇ ಕ್ರೀಡಾಪಟು. ಪಂಜಾಬ್ ನ ದೇಶ್ ಭಗತ್ ಖಾಸಗಿ ವಿಶ್ವವಿದ್ಯಾಲಯ ಇವರಿಗೆ ಪದವಿಯನ್ನು ನೀಡಿ ಗೌರವಿಸಿದೆ. ಈ ಹಿಂದೆ ದಿಲೀಪ್ ಟಿರ್ಕೆ ಅವರಿಗೆ ಸಂಬಲಪುರ್ ವಿಶ್ವವಿದ್ಯಾಲಯದಿಂದ ಗೌರವ ಪದವಿಯನ್ನು ನೀಡಿ ಗೌರವಿಸಿತ್ತು.
Question 9 |
9. ವಿಶ್ವ ಚೆಸ್ ಫೆಡರೇಷನ್ ನ “ಕ್ಯಾಂಡಿಡೇಟ್ ಮಾಸ್ಟರ್” ಗೌರವಕ್ಕೆ ಪಾತ್ರರಾದ ಭಾರತದ ಚೆಸ್ ಆಟಗಾರ ಯಾರು?
ಕುಶ್ ಭಗತ್ | |
ಸಪ್ತರ್ಷಿ ರಾಯ್ | |
ಸುಂದರ್ ಎಂ ಶ್ಯಾಮ್ | |
ನಿರಂಜನ್ |
ಕುಶ್ ಭಗತ್, ಹಿಲ್ ಸ್ಪ್ರಿಂಗ್ ಅಂತಾರಾಷ್ಟ್ರೀಯ ಶಾಲೆಯ ದ್ವಿತೀಯ ಪಿಯು ವಿದ್ಯಾರ್ಥಿ ಅವರಿಗೆ ವಿಶ್ವ ಚೆಸ್ ಫೆಡರೇಷನ್ ನ “ಕ್ಯಾಂಡಿಡೇಟ್ ಮಾಸ್ಟರ್ (Candidate Master)” ಗೌರವ ಲಭಿಸಿದೆ.
Question 10 |
10. 2017 ಬ್ರಿಟನ್ ಶೌರ್ಯ ಪ್ರಶಸ್ತಿಗೆ ಭಾಜನರಾಗಿರುವ ಭಾರತ ಮೂಲದ ಅಧಿಕಾರಿ ಯಾರು?
ಹುಸೇನ್ ಭಾಷ | |
ಶಾಂದ್ ಪನೇಸರ್ | |
ಸುರ್ಜಿತ್ ಸಿಂಗ್ | |
ಬಾಲಾಜಿ ವರ್ಮಾ |
ಬೆಂಕಿ ಹೊತ್ತಿ ಉರಿಯುತ್ತಿರುವ ಮನೆಯೊಂದರಿಂದ ತಮ್ಮ ಜೀವದ ಹಂಗು ತೊರೆದು ಇಬ್ಬರನ್ನು ರಕ್ಷಿಸಿದ ಭಾರತ ಮೂಲದ ಸ್ಕಾಟ್ಲೆಂಡ್ ಯಾರ್ಡ್ ಅಧಿಕಾರಿಯೊಬ್ಬರಿಗೆ ಬ್ರಿಟನ್ನ ಶೌರ್ಯ ಪ್ರಶಸ್ತಿ ದೊರೆತಿದೆ. ಪೊಲೀಸ್ ಅಧಿಕಾರಿಗಳಾದ ಶಾಂದ್ ಪನೇಸರ್ ಮತ್ತು ಅವರ ಸಹೋದ್ಯೋಗಿ ಕ್ರೇಗ್ ನಿಕೊಲ್ಸನ್ ಅವರು ಜಂಟಿಯಾಗಿ ಈ ಪ್ರಶಸ್ತಿ ಪಡೆದಿದ್ದಾರೆ.
[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-17182017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Very good questions sir