ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,19,20,2017
Question 1 |
1. “2017 ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿ” ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಯಾರಿಗೆ ಲಭಿಸಿದೆ?
ಉಸೇನ್ ಬೋಲ್ಟ್ ಮತ್ತು ಸಿಮೋನ್ ಬೈಲ್ಸ್ | |
ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಸಿಮೋನ್ ಬೈಲ್ಸ್ | |
ಲೆಬ್ರೊನ್ ಜೇಮ್ಸ್ ಮತ್ತು ಸೆರೆನಾ ವಿಲಿಯಮ್ಸ್ | |
ಲಿಯೊನೆಲ್ ಮೆಸ್ಸಿ ಮತ್ತು ಪಿ ವಿ ಸಿಂಧು |
ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲೆಬ್ರೋನ್ ಜೇಮ್ಸ್ ಅವರನ್ನು ಹಿಂದಕ್ಕಿದ ಸ್ಪ್ರಿಂಟ್ ಕಿಂಗ್ ಉಸೇನ್ ಬೋಲ್ಟ್ ಅವರು ಲಾರೆಸ್ ವರ್ಷದ ಶ್ರೇಷ್ಠ ಕ್ರೀಡಾ ತಾರೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರು ದಾಖಲೆ ಸಮಬಲದ ನಾಲ್ಕನೇ ಬಾರಿ ಈ ಪ್ರಶಸ್ತಿಯಿಂದ ಪುರಸ್ಕೃತ ಗೊಂಡಿದ್ದಾರೆ. ಜಿಮ್ನಾಸ್ಟ್ ಸಿಮೋನ್ ಬೈಲ್ಸ್ ಶ್ರೇಷ್ಠ ವನಿತಾ ಕ್ರೀಡಾತಾರೆ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
Question 2 |
2. “Hema Malini: Beyond the Dream Girl” ಪುಸ್ತಕದ ಲೇಖಕರು __________?
ರಾಮ್ ಕಮಲ್ ಮುಖರ್ಜಿ | |
ಆಶಾ ಕಿರಣ್ | |
ಶತ್ರುಜ್ಞ ಸಿನ್ಹಾ | |
ಅಮರಿಂದರ್ ಗುಪ್ತಾ |
ಲೇಖಕ ಹಾಗೂ ಅಂಕಣಕಾರ ರಾಮ್ ಕಮಲ್ ಮುಖರ್ಜಿ ಅವರು “Hema Malini: Beyond the Dream Girl” ಪುಸ್ತಕದ ಲೇಖಕರು.
Question 3 |
3. 2017 ರಾಷ್ಟ್ರೀಯ ಯಶ್ ಚೋಪ್ರಾ ಸ್ಮರಣಾರ್ಥ ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಲಾಗಿದೆ?
ಶಾರೂಖ್ ಖಾನ್ | |
ಅಮೀರ್ ಖಾನ್ | |
ಸಂಜಯ್ ದತ್ತ್ | |
ಅಕ್ಷಯ್ ಕುಮಾರ್ |
4ನೇ ರಾಷ್ಟ್ರೀಯ ಯಶ್ ಚೋಪ್ರಾ ಸ್ಮರಣಾರ್ಥ ಪ್ರಶಸ್ತಿಗೆ ಶಾರೂಖ್ ಖಾನ್ ಅವರನ್ನು ಆಯ್ಕೆಮಾಡಲಾಗಿದೆ.
Question 4 |
4. ಮಲೇಷಿಯಾ ಮಾಸ್ಟರ್ಸ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್-2017 ನಲ್ಲಿ ಪ್ರಶಸ್ತಿಯನ್ನು ಗೆದ್ದವರು ಯಾರು?
ಪಿ ವಿ ಸಿಂಧು | |
ಸೈನಾ ನೆಹ್ವಾಲ್ | |
ಪಾವೀ ಚೊಚುವಾಂಗ್ | |
ಕಾರ್ಲ್ ಫ್ರಾನ್ಸಿಸ್ |
ಮಲೇಷಿಯಾ ಮಾಸ್ಟರ್ಸ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಅಂತಿಮ ಪಂದ್ಯದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅವರು ಥಾಲ್ಯಾಂಡ್ ನ 18 ವರ್ಷದ ಪೊರ್ನ್ ಪಾವೀ ಚೊಚುವಾಂಗ್ ಅವರನ್ನು 46 ನಿಮಿಷಗಳ ಆಟದಲ್ಲಿ 22-2-, 22-20 ಸೆಟ್ ಗಳಿಂದ ಮಣಿಸಿದರು.
Question 5 |
5. ಈ ಕೆಳಗಿನ ಯಾವುದು ಭಾರತದಲ್ಲಿ 2017ರಲ್ಲಿ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್ಗೆ ಟೂರ್ನಮೆಂಟ್ನ ಅಧಿಕೃತ ಲಾಂಛನವಾಗಿದೆ?
ಖೇಲೋ ಚೀತಾ | |
ಹಾರುವ ಚಿಟ್ಟೆ | |
ರಾಜಹಂಸ | |
ಸಾರಂಗ |
ಭಾರತದಲ್ಲಿ 2017ರಲ್ಲಿ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್ಗೆ 'ಖೇಲೋ' ಚೀತಾವನ್ನು ಟೂರ್ನಮೆಂಟ್ನ ಅಧಿಕೃತ ಲಾಂಛನವಾಗಿ ಶುಕ್ರವಾರ ಅನಾವರಣಗೊಳಿಸಲಾಗಿದೆ. ಅಂಡರ್-17 ವಿಶ್ವಕಪ್ ಭಾರತದಲ್ಲಿ ಅಕ್ಟೋಬರ್ 6 ರಿಂದ 28ರ ತನಕ ನಡೆಯಲಿದ್ದು, ಟೂರ್ನಮೆಂಟ್ನ ಡ್ರಾ ಪ್ರಕ್ರಿಯೆ 2017ರ ಜು.7ರಂದು ಕೋಲ್ಕತಾದಲ್ಲಿ ನಡೆಯಲಿರುವುದು. ಟೂರ್ನಿಯು ಕೋಲ್ಕತಾ, ಗುವಾಹಟಿ, ಕೊಚ್ಚಿ, ನವಿ ಮುಂಬೈ, ಗೋವಾ ಹಾಗೂ ಹೊಸದಿಲ್ಲಿಯಲ್ಲಿ ನಡೆಯಲಿದೆ. ಈ ತಾಣಗಳಲ್ಲಿ ವಿಶ್ವದಾದ್ಯಂತ ಆಟಗಾರರು ಆಡಲಿದ್ದಾರೆ.
Question 6 |
6. ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡವರು ಯಾರು?
ಓ ಪನ್ನೀರುಸೆಲ್ವಂ | |
ಕೆ ಪಳನಿಸ್ವಾಮಿ | |
ಶಶಿಕಲಾ ನಟರಾಜನ್ | |
ಮರಿಯಪ್ಪನ್ |
ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಸಿ ವಿದ್ಯಾಸಾಗರ್ ರಾವ್ ಅವರು ಪಳನಿಸ್ವಾಮಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
Question 7 |
7. “Oh My Gods” ಪುಸ್ತಕದ ಲೇಖಕರು__________?
ಮನೀಷ್ ಜೆಟ್ಲಿ | |
ಅರುಣ್ ಜೆಟ್ಲಿ | |
ರಾಮಚಂದ್ರ ಗುಹಾ | |
ಮನೋಹರ್ ಪಣಿಕ್ಕರ್ |
ನಿವೃತ್ತ ಲೆಫ್ಟಿನೆಂಟ್ ಮನೀಷ್ ಜೆಟ್ಲಿ ಅವರು “ಓ ಮೈ ಗಾಡ್ಸ್” ಪುಸ್ತಕದ ಲೇಖಕರು.
Question 8 |
8. “2017 ಬ್ರಾಂಡ್ ಲಾರಿಯೆಟ್ ಲೆಜೆಂಡರಿ (Brand Laureate Legendary)” ಪ್ರಶಸ್ತಿ ಯಾರಿಗೆ ಲಭಿಸಿದೆ?
ಲತಾ ಮಂಗೇಶ್ಕರ್ | |
ಆಶಾ ಬೋಸ್ಲೆ | |
ಚಿತ್ರಾ | |
ನೀತು ಅಂಬಾನಿ |
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಬ್ರಾಂಡ್ ಲಾರಿಯೆಟ್ ಲೆಜೆಂಡರಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ವಿಶ್ವಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
Question 9 |
9. 2017 ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಯಾವ ದೇಶದಲ್ಲಿ ನಡೆಯಲಿದೆ?
ಭಾರತ | |
ಇಂಗ್ಲೆಂಡ್ | |
ಆಸ್ಟ್ರೇಲಿಯಾ | |
ದಕ್ಷಿಣ ಆಫ್ರಿಕಾ |
2017 ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಇಂಗ್ಲೆಂಡ್ ನಲ್ಲಿ 24ನೇ ಜೂನ್ ನಿಂದ 23ನೇ ಜುಲೈ ವರೆಗೆ ನಡೆಯಲಿದೆ.
Question 10 |
10. ಈ ಕೆಳಗಿನ ಯಾವ ರಾಜ್ಯ ದಕ್ಷಿಣ ಏಷ್ಯಾ ಸ್ಪೀಕರ್ ಗಳ ಸಮಾವೇಶದ ಅತಿಥ್ಯವನ್ನು ವಹಿಸಲಿದೆ?
ಮಧ್ಯ ಪ್ರದೇಶ | |
ಕೇರಳ | |
ಗುಜರಾತ್ | |
ಆಂಧ್ರ ಪ್ರದೇಶ |
ದಕ್ಷಿಣ ಏಷ್ಯಾ ಸ್ಪೀಕರ್ ಗಳ ಸಮಾವೇಶಕ್ಕೆ ಮಧ್ಯ ಪ್ರದೇಶದ ಇಂಧೋರ್ ನಲ್ಲಿ ಲೋಕ ಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಚಾಲನೆ ನೀಡಿದರು. ಎರಡು ದಿನಗಳ ಕಾಲ ಈ ಸಮಾವೇಶ ನಡೆಯಲಿದೆ. ಆಫ್ಘಾನಿಸ್ತಾನ, ಬಾಂಗ್ಲದೇಶ, ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್ ಹಾಗೂ ಭಾರತದ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-19202017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ