ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,24,2017
Question 1 |
1. ಸ್ಟಾಕ್ ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ವರದಿ ಪ್ರಕಾರ 2012-16 ಅವಧಿ ವಿಶ್ವದ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದು ರಾಷ್ಟ್ರ ಯಾವುದು?
ಚೀನಾ | |
ರಷ್ಯಾ | |
ಭಾರತ | |
ಅಮೆರಿಕ |
ಸ್ಟಾಕ್ ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ವರದಿಯಂತೆ ಭಾರತ ವಿಶ್ವದ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದು ರಾಷ್ಟ್ರವಾಗಿ ಹೊರಹೊಮ್ಮಿದೆ. ವಿಶ್ವದ ಶೇ 13% ಶಸ್ತ್ರಾಸ್ತ್ರವನ್ನು ಭಾರತ 2012-16 ಅವಧಿಯಲ್ಲಿ ಆಮದು ಮಾಡಿಕೊಂಡಿದೆ. ಸೌದಿ ಅರೇಬಿಯಾ, ಯುಎಇ, ಚೀನಾ ಮತ್ತು ಅಲ್ಜೀರಿಯಾ ನಂತರದ ಸ್ಥಾನದಲ್ಲಿವೆ.
Question 2 |
2. ಅಂತಾರಾಷ್ಟ್ರೀಯ ಮಾತೃಭಾಷೆ ದಿನ __________?
ಫೆಬ್ರವರಿ 19 | |
ಫೆಬ್ರವರಿ 21 | |
ಫೆಬ್ರವರಿ 22 | |
ಫೆಬ್ರವರಿ 23 |
ಅಂತಾರಾಷ್ಟ್ರೀಯ ಮಾತೃಭಾಷೆ ದಿನವನ್ನು ಫೆಬ್ರವರಿ 21 ರಂದು ಆಚರಿಸಲಾಗುವುದು.
Question 3 |
3. ಈ ಕೆಳಗಿನ ಯಾವ ನಗರದಲ್ಲಿ ಗ್ರಾಮೀಣ ಖೇಲ್ ಮಹೋತ್ಸವದ ಮೊದಲ ಆವೃತ್ತಿಯನ್ನು ಆಯೋಜಿಸಲಾಗುತ್ತಿದೆ?
ಭೋಪಾಲ್ | |
ಗ್ವಾಲಿಯರ್ | |
ನವದೆಹಲಿ | |
ಹೈದ್ರಾಬಾದ್ |
ಗ್ರಾಮೀಣ ಖೇಲ್ ಮಹೋತ್ಸವದ ಮೊದಲ ಆವೃತ್ತಿ ಮಾರ್ಚ್ 25 ರಿಂದ ಮಾರ್ಚ್ 31 ರವರೆಗೆ ನವದೆಹಲಿಯಲ್ಲಿ ನಡೆಯಲಿದೆ. ಅಥ್ಲೆಟಿಕ್ಸ್, ಕಬಡ್ಡಿ, ಖೋ-ಖೋ, ವಾಲಿ ಬಾಲ್ ಮತ್ತು ಕುಸ್ತಿ ವಿಭಾಗದಲ್ಲಿ ಕ್ರೀಡೆಗಳು ಜರುಗಲಿವೆ.
Question 4 |
4. ಕೇಂದ್ರ ಸರ್ಕಾರ ಇತ್ತೀಚೆಗೆ ಅರುಣ್-3 ಜಲ ವಿದ್ಯುತ್ ಯೋಜನೆಗೆ ಬಂಡವಾಳ ಹೂಡಲು ಸಮ್ಮತಿ ಸೂಚಿಸಿದೆ. ಅಂದಹಾಗೆ ಈ ಯೋಜನೆ ಯಾವ ದೇಶಕ್ಕೆ ಸಂಬಂಧಿಸಿದೆ?
ಭೂತಾನ್ | |
ನೇಪಾಳ | |
ಶ್ರೀಲಂಕಾ | |
ಸಿಂಗಪುರ |
ಕೇಂದ್ರ ಆರ್ಥಿಕ ವ್ಯವಹಾರ ಸಚಿವ ಸಂಪುಟ ನೇಪಾಳದ ಅರುಣ್-3 ಜಲ ವಿದ್ಯುತ್ ಯೋಜನೆಗೆ ಬಂಡವಾಳ ಹೂಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಈ ಯೋಜನೆಯು 900 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
Question 5 |
5. ಈ ಕೆಳಗಿನ ಯಾರನ್ನು ಕಾವೇರಿ ನ್ಯಾಯಾಧೀಕರಣದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ?
ಗೋಪಾಲ ಗೌಡ | |
ಹರೀಶ್ ಕುಮಾರ್ | |
ಅಭಯ್ ಮನೋಹರ್ ಸಪ್ರೆ | |
ಜೆ ಎಸ್ ಖೇಹರ್ |
ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆಯವರನ್ನು ನ್ಯಾಯಾಧಿಕರಣದ ಮುಖ್ಯಸ್ಥರನ್ನಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ನೇಮಕ ಮಾಡಿದ್ದಾರೆ. ಬಲ್ಬೀರ್ ಸಿಂಗ್ ಚೌಹಣ್ ಅವರು ಕಾನೂನು ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡ ಕಾರಣ ಈ ಹುದ್ದೆ ತೆರವಾಗಿತ್ತು.
Question 6 |
6. ಯಾವ ದೇಶ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು “ರದ್ದ್-ಉಲ್-ಫಸಾದ್ (Radd-ul-Fassad)” ಹೆಸರಿನ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದೆ?
ಸಿರಿಯಾ | |
ಫ್ರಾನ್ಸ್ | |
ಪಾಕಿಸ್ತಾನ | |
ಆಫ್ಘಾನಿಸ್ತಾನ |
ಪಾಕಿಸ್ತಾನ ಸೇನೆ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು “ರದ್ದ್-ಉಲ್-ಫಸಾದ್” ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಪಾಕಿಸ್ತಾನದ ಮೂರು ವಿಧಧ ಸೇನೆ ಹಾಗೂ ಇತರೆ ಭದ್ರತಾ ಪಡೆಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲಿವೆ. ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿ ಗಡಿ ಸುರಕ್ಷತೆಯನ್ನು ಹೆಚ್ಚಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ.
Question 7 |
7. ದೇಶದ ಮೊದಲ ಹೆಲಿಕಾಪ್ಟರ್ ನಿಲ್ದಾಣ (ಹೆಲಿಪೋರ್ಟ್) ಯಾವ ನಗರದಲ್ಲಿ ಕಾರ್ಯಾರಂಭ ಮಾಡಲಿದೆ?
ನವದೆಹಲಿ | |
ಬೆಂಗಳೂರು | |
ಚೆನ್ನೈ | |
ಕಲ್ಕತ್ತಾ |
ದೇಶದ ಪ್ರಥಮ ಹೆಲಿಕಾಪ್ಟರ್ ನಿಲ್ದಾಣ (ಹೆಲಿಪೋರ್ಟ್) ನವದೆಹಲಿಯಲ್ಲಿ ಫೆಬ್ರವರಿ 28ರಂದು ಕಾರ್ಯಾರಂಭ ಮಾಡಲಿದೆ. ಸರ್ಕಾರಿ ಸ್ವಾಮ್ಯದ ಪವನ್ ಹಂಸ್ ಹೆಲಿಕಾಪ್ಟರ್ ಸಂಸ್ಥೆ ಈ ನಿಲ್ದಾಣದ ನಿರ್ವಹಣೆ ನೋಡಿಕೊಳ್ಳಲಿದೆ. ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಉತ್ತರ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಹೆಲಿಪೋರ್ಟ್ ನಿರ್ಮಿಸಲಾಗಿದೆ. ಈ ನಿಲ್ದಾಣದಲ್ಲಿ ಏಕಕಾಲದಲ್ಲಿ 16 ಹೆಲಿಕಾಪ್ಟರ್ ಗಳು ಇಳಿಯುವ ಮತ್ತು ಮೇಲಕ್ಕೇರುವ ಸ್ಥಳವಾಕಾಶವಿದೆ. ಒಟ್ಟು ಒಂಭತ್ತು ಪಾರ್ಕಿಂಗ್ ಬೇ (ನಿಲ್ದಾಣ ಮಾರ್ಗ) ಸೌಲಭ್ಯ ನೀಡಲಾಗಿದೆ. ಹೆಲಿಪೋರ್ಟಿನ ಟರ್ಮಿನಲ್ ಕಟ್ಟಡವು 150ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೌಕರ್ಯ ಒದಗಿಸಲು ಸಜ್ಜಾಗಿದೆ.
Question 8 |
8. ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ನ ವರ್ಷದ ಹಾಕಿ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡ “ಜಾನ್ ಜಾನ್ ದೊಹ್ಮೆನ್” ಯಾವ ದೇಶದವರು?
ಬೆಲ್ಜಿಯಂ | |
ಸ್ಪೇನ್ | |
ಭಾರತ | |
ಆಸ್ಟ್ರೇಲಿಯಾ |
ಬೆಲ್ಜಿಯಂನ ಜಾನ್ ಜಾನ್ ದೊಹ್ಮೆನ್ ಅವರು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ನ ವರ್ಷದ ಹಾಕಿ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Question 9 |
9. ಅಮೆರಿಕದ ಅಧ್ಯಕ್ಷರ ಅವಧಿಗೆ ಸಂಬಂಧಿಸಿದಂತೆ ನಡೆಸಲಾದ ಸಮೀಕ್ಷೆಯಲ್ಲಿ ಅತ್ಯುತ್ತಮ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
ಪ್ರಾಂಕ್ಲಿನ್ ರೂಸ್ವೆಲ್ಟ್ | |
ಅಬ್ರಾಹಾಂ ಲಿಂಕನ್ | |
ಜಾರ್ಜ್ ವಾಷಿಂಗ್ಟನ್ | |
ಥೀಯೊಡೆರ್ ರೂಸ್ವೆಲ್ಟ್ |
ಅಮೆರಿಕದ ಅಧ್ಯಕ್ಷರ ದಿನಕ್ಕೆ ಸಂಬಂಧಿಸಿ ನಡೆಸಲಾದ ಸಮೀಕ್ಷೆಯಲ್ಲಿ ಅಬ್ರಾಹಾಂ ಲಿಂಕನ್ ಅತ್ಯುತ್ತಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಾರ್ಜ್ವಾಷಿಂಗ್ಟನ್, ಪ್ರಾಂಕ್ಲಿನ್ ರೂಸ್ವೆಲ್ಟ್, ಥೀಯೋಡರ್ ರೂಸ್ವೆಲ್ಟ್, ಡೈವಟ್, ಐಸೋನೋವರ್ ಯಥಾಕ್ರಮವಾಗಿ ದ್ವಿತೀಯ ತೃತೀಯ, ನಾಲ್ಕನೇ ಹಾಗೂ ಐದನನೇ ಸ್ಥಾನವನ್ನು ಗಳಿಸಿದ್ದಾರೆ.
Question 10 |
10. ನೊಬೆಲ್ ಪ್ರಶಸ್ತಿ ವಿಜೇತ “ಕೆನ್ನೆಥ್ ಜೆ ಆಯರೋ” ಇತ್ತೀಚೆಗೆ ನಿಧನರಾದರು. ಅಂದಹಾಗೆ ಇವರಿಗೆ ಯಾವ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿತ್ತು?
ಅರ್ಥಶಾಸ್ತ್ರ | |
ವೈದ್ಯಕೀಯ | |
ರಸಾಯನ ಶಾಸ್ತ್ರ | |
ಭೌತಶಾಸ್ತ್ರ |
ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಕೆನ್ನೆಥ್ ಜೆ ಆಯರೋ ಅವರು ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಇನ್ನು 1972ರಲ್ಲಿ ಬ್ರಿಟೀಷ್ ಅರ್ಥ ಶಾಸ್ತ್ರಜ್ಞ ಸರ್ ಜಾನ್ ಆರ್ ಹಿಕ್ಸ್ ಅವರೊಂದಿಗೆ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಕೆನ್ನೆಥ್ ಜೆ ಆಯರೋ ಅವರು ಹಂಚಿಕೊಂಡಿದ್ದರು. ಅವರ "ಸಾಮಾನ್ಯ ಆರ್ಥಿಕ ಸಮತೋಲನ ಸಿದ್ದಾಂತ ಮತ್ತು ಜನಕಲ್ಯಾಣ ಸಿದ್ಧಾಂತ ಥಿಯರಿಗೆ ಈ ಪ್ರತಿಷ್ಟಿತ ಪ್ರಶಸ್ತಿ ಲಭಿಸಿತ್ತು. ಈ ಪ್ರಶಸ್ತಿಗೆ ಭಾಜನರಾದಾಗ ಅವರ ವಯಸ್ಸು ಕೇವಲ 45 ವರ್ಷಗಳಲಾಗಿತ್ತು. ಹೀಗಾಗಿ ನೊಬೆಲ್ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಅರ್ಥಶಾಸ್ತ್ರಜ್ಞ ಎಂಬ ಕೀರ್ತಿಗೂ ಕೆನ್ನೆಥ್ ಪಾತ್ರರಾಗಿದ್ದರು.
[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-242017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ