ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,27,28,2017
Question 1 |
1. ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ನಲ್ಲಿ ಐಓಸಿ ಅಥ್ಲೇಟ್ಸ್ ಕಮೀಷನ್ ಪ್ರತಿನಿಧಿಸಲಿರುವ ಭಾರತೀಯ ಕ್ರೀಡಾಪಟು ಯಾರು?
ಸೈನಾ ನೆಹ್ವಾಲ್ | |
ಪಿ ವಿ ಸಿಂಧು | |
ಗೀತಾ ಪೊಗಟ್ | |
ಕಿಡಂಬಿ ಶ್ರೀಕಾಂತ್ |
ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ನಲ್ಲಿ ಐಓಸಿ ಅಥ್ಲೇಟ್ಸ್ ಕಮೀಷನ್ ಪ್ರತಿನಿಧಿಸಲಿದ್ದಾರೆ. ಭಾರತೀಯ ಕ್ರೀಡಾಪಟುಗೆ ಸಲ್ಲುತ್ತಿರುವ ಅಪರೂಪದ ಗೌರವ ಇದಾಗಿದೆ. ಸೈನಾ ಅವರು 2016 ರಲ್ಲಿ ಐಓಸಿ ಅಥ್ಲೇಟ್ಸ್ ಕಮೀಷನ್ನ ಸದಸ್ಯರಾಗಿ ನೇಮಕಗೊಂಡಿದ್ದರು.
Question 2 |
2. 89ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಯಲ್ಲಿ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡ ಸಿನಿಮಾ ಯಾವುದು?
ಲಾ ಲಾ ಲ್ಯಾಂಡ್ | |
ಮೂನ್ ಲೈಟ್ | |
ಹಿಡನ್ ಫಿಗರ್ಸ್ | |
ಸ್ಟೋರಿ ಆಫ್ ಯೂರ್ ಲೈಫ್ |
ಅಮೆರಿಕದ ಮೂನ್ ಲೈಟ್ ಸಿನಿಮಾ 89ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಯಲ್ಲಿ ಅತ್ಯುತ್ತಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಬ್ಯಾರಿ ಜೆಂಕಿನ್ಸ್ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲದ ಮಹೆರ್ಶಾಲ ಅಲಿ ಅವರು ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡ ಮೊದಲ ಮುಸ್ಲಿಂ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮೂನ್ ಲೈಟ್ ಚಿತ್ರದಲ್ಲಿನ ಪೋಷಕಪಾತ್ರಕ್ಕಾಗಿ ಅಲಿ ಅವರಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ.
Question 3 |
3. ದೂರದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೃದಯ ಕಾಯಿಲೆಯ ಚಿಕಿತ್ಸೆಗಾಗಿ “ರಹತ್ (RAHAT)” ಯೋಜನೆಯನ್ನು ಯಾವ ರಾಜ್ಯ ಜಾರಿಗೊಳಿಸಿದೆ?
ಗುಜರಾತ್ | |
ಗೋವಾ | |
ರಾಜಸ್ತಾನ | |
ಪಶ್ಚಿಮ ಬಂಗಾಳ |
ರಾಜಸ್ತಾನ ಸರ್ಕಾರ “ರಾಜಸ್ತಾನ ಹಾರ್ಟ್ ಆಟ್ಯಾಕ್ ಟ್ರೀಟ್ಮೆಂಟ್ ಪ್ರೋಗ್ರಾಂ (Rajasthan Heart Attack Treatment Programme)” ಹೆಸರಿನ ವೈದ್ಯಕೀಯ ಯೋಜನೆಗೆ ಜೈಪುರದ ಎಟರ್ನಲ್ ಆಸ್ಪತ್ರೆಯಲ್ಲಿ ಆರಂಭಿಸಿದೆ. ಈ ಯೋಜನೆಯಡಿ ಹಾರ್ಟ್ ಅಟ್ಯಾಕ್ ರೋಗಿಗಳಿಗೆ ತುರ್ತು ಅಂಬುಲೆನ್ಸ್ ಸೇವೆ ಹಾಗೂ ಟೆಲಿಮೆಡಿಸಿನ್ ಸೇವೆಯನ್ನು ಒದಗಿಸಲಾಗುವುದು.
Question 4 |
4. ಯಾವ ರಾಜ್ಯದಲ್ಲಿ ಭಾರತದ ಮೊದಲ ಗಿರಿಧಾಮ ಸೈಕಲ್ ಪಥವನ್ನು ಆರಂಭಿಸಲಾಗಿದೆ?
ಓಡಿಶಾ | |
ಪಶ್ಚಿಮ ಬಂಗಾಳ | |
ತಮಿಳುನಾಡು | |
ತೆಲಂಗಣ |
ದೇಶದ ಮೊದಲ ಗಿರಿಧಾಮ ಸೈಕಲ್ ಪಥವನ್ನು ಪಶ್ಚಿಮ ಬಂಗಾಳದ ಡಾರ್ಜಲಿಂಗ್ ನಲ್ಲಿ ಆರಂಭಿಸಲಾಗಿದೆ. ಪಶ್ಚಿಮ ಬಂಗಾಳದ ಸೆಂಚಾಲ್ ವನ್ಯಜೀವಿಧಾಮದ ಮುಖಾಂತರ ಈ ಸೈಕಲ್ ಪಥ ಹಾದುಹೋಗಲಿದೆ.
Question 5 |
5. ಪ್ರಧಾನಿ ಮೋದಿ ರವರು ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯನ್ನು ಯಾವ ರಾಜ್ಯದಲ್ಲಿ ಆನಾವರಣಗೊಳಿಸಿದರು?
ಕೇರಳ | |
ತಮಿಳುನಾಡು | |
ತೆಲಂಗಣ | |
ಆಂಧ್ರ ಪ್ರದೇಶ |
ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಇಶಾ ಫೌಂಡೇಷನ್ ನಿರ್ಮಿಸಿರುವ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದಾರೆ. ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಷನ್ ನಿರ್ಮಿಸಿರುವ ಧ್ಯಾನ ಭಂಗಿಯಲ್ಲಿ ಕುಳಿತಿರುವ 112 ಅಡಿ ಎತ್ತರದ ಪರಶಿವನ ಪ್ರತಿಮೆಯನ್ನು ಪ್ರಧಾನಿ ಲೋಕಾರ್ಪಣೆಗೊಳಿಸಿದರು.
Question 6 |
6. ಏಕದಿನ ಕ್ರಿಕೆಟ್ ನಲ್ಲಿ ಅತಿ ವೇಗದ 9 ಸಾವಿರ ರನ್ ಪೂರೈಸಿದ ದಾಖಲೆ ನಿರ್ಮಿಸಿದ ಕ್ರಿಕೆಟ್ ಆಟಗಾರ _________________?
ಎಬಿ ಡಿವಿಲಿಯರ್ಸ್ | |
ವಿರಾಟ್ ಕೊಹ್ಲಿ | |
ರಾಸ್ ಟೇಲರ್ | |
ಎಂ ಎಸ್ ಧೋನಿ |
ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್ ಮತ್ತೊಂದು ದಾಖಲೆ ನಿರ್ಮಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ ಅತಿ ವೇಗದ 9 ಸಾವಿರ ರನ್ ಪೂರೈಸಿದ ದಾಖಲೆ ನಿರ್ಮಿಸಿದ್ದಾರೆ. ಹ್ಯಾಮಿಲ್ಟನ್ ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಎಬಿಡಿ ಈ ಸಾಧನೆ ಮಾಡಿದ್ದು, ಎಬಿಡಿ 37 ರನ್ ಗಳಿಸುತ್ತಿದ್ದಂತೆಯೇ ಸೌರವ್ ಗಂಗೂಲಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಹಿಂದೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ 228 ಇನ್ನಿಂಗ್ಸ್ ಗಳಲ್ಲಿ 98 ಸಾವಿರ ರನ್ ಪೂರೈಸಿದ್ದರೆ ಎಬಿಡಿ ಕೇವಲ 205 ಇನ್ನಿಂಗ್ಸ್ ಗಳಲ್ಲಿ 9 ಸಾವಿರ ರನ್ ಪೂರೈಸಿದ್ದರು. ಆ ಮೂಲಕ 13 ವರ್ಷಗಳ ಬಳಿಕ ಸೌರವ್ ಗಂಗೂಲಿ ದಾಖಲೆಯನ್ನು ಎಬಿಡಿ ಮುರಿದಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 9 ಸಾವಿರ ರನ್ ಪೂರೈಕೆಗಾಗಿ 235 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
Question 7 |
7. 2017 ಕೋಲ್ ಇಂಡಿಯಾ ಹಾಕಿ ಇಂಡಿಯಾ ಲೀಗ್ ನಲ್ಲಿ ಪ್ರಶಸ್ತಿ ಗೆದ್ದ ತಂಡ ಯಾವುದು?
ದೆಹಲಿ ವೇವ್ ರೈಡರ್ಸ್ | |
ದಬಾಂಗ್ ಮುಂಬೈ | |
ಉತ್ತರ ಪ್ರದೇಶ ವಿಝಾರ್ಡ್ | |
ಕಳಿಂಗ ಲ್ಯಾನ್ಸರ್ಸ್ |
ಕಳಿಂಗ ಲ್ಯಾನ್ಸರ್ಸ್ ತಂಡ 2017 ಕೋಲ್ ಇಂಡಿಯಾ ಹಾಕಿ ಇಂಡಿಯಾ ಲೀಗ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಫೈನಲ್ ಪಂದ್ಯದಲ್ಲಿ ದಬಾಂಗ್ ಮುಂಬೈಯನ್ನು ಸೋಲಿಸಿ ಪ್ರಶಸ್ತಿಯನ್ನು ಬಾಚಿಕೊಂಡಿತು.
Question 8 |
8. ಇತ್ತೀಚೆಗೆ ಭಾರತ ಈ ಕೆಳಗಿನ ಯಾವ ದೇಶದೊಂದಿಗೆ ಸಾಮಾಜಿಕ ಭದ್ರತಾ ಒಪ್ಪಂದಕ್ಕೆ ಸಹಿಹಾಕಿದೆ?
ಜಪಾನ್ | |
ಜರ್ಮನಿ | |
ಫ್ರಾನ್ಸ್ | |
ಅಮೆರಿಕ |
ಭಾರತ ಮತ್ತು ಜರ್ಮನಿ ನಡುವಿನ ಸಾಮಾಜಿಕ ಭದ್ರತಾ ಒಪ್ಪಂದವನ್ನು ಉಭಯ ದೇಶಗಳು ಅನುಮೋದಿಸಿವೆ. ಮೇ 1 ರಿಂದ ಈ ಒಪ್ಪಂದ ಜಾರಿಗೆ ಬರಲಿದ್ದು, ಉಭಯ ದೇಶಗಳ ನಡುವೆ ಬಂಡವಾಳ ಹರಿಯುವಿಕೆ ಹೆಚ್ಚಿಸಲು ಸಹಾಯವಾಗಲಿದೆ.
Question 9 |
9. ನ್ಯೂ ವರ್ಲ್ಡ್ ವೆಲ್ತ್ ವರದಿ ಪ್ರಕಾರ ಭಾರತದ ಅತ್ಯಂತ ಶ್ರೀಮಂತ ನಗರ ಯಾವುದು?
ಬೆಂಗಳೂರು | |
ಮುಂಬೈ | |
ಹೈದ್ರಾಬಾದ್ | |
ಚೆನ್ನೈ |
ಭಾರತದ ಆರ್ಥಿಕ ರಾಜಧಾನಿ ಮುಂಬೈ ಭಾರತದ ಶ್ರೀಮಂತ ನಗರ ಎಂಬ ಹಿರಿಮೆಗೆ ಪಾತ್ರವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈನಲ್ಲಿ 46 ಸಾವಿರ ಲಕ್ಷಾಧಿಪತಿಗಳು ಮತ್ತು 28 ಜನ ಕೋಟ್ಯಧಿಪತಿಗಳು ನೆಲೆಯೂರಿದ್ದಾರೆ. ಮುಂಬೈನಲ್ಲಿರುವ ಸಂಪತ್ತಿನ ಪ್ರಮಾಣ 820 ಬಿಲಿಯನ್ ಅಮೆರಿಕನ್ ಡಾಲರ್ (₹ 54.94 ಲಕ್ಷ ಕೋಟಿ) ಎಂದು ನ್ಯೂ ವರ್ಲ್ಡ್ ವೆಲ್ತ್ ವರದಿ ತಿಳಿಸಿದೆ. ರಾಷ್ಟ್ರ ರಾಜಧಾನಿ ನವದೆಹಲಿ 23 ಸಾವಿರ ಲಕ್ಷಾಧಿಪತಿಗಳು ಮತ್ತು 18 ಕೋಟ್ಯಧಿಪತಿಗಳನ್ನು ಹೊಂದಿದೆ. 450 ಬಿಲಿಯನ್ ಡಾಲರ್ (₹ 30.15 ಲಕ್ಷ ಕೋಟಿ) ಶ್ರೀಮಂತಿಕೆ ಹೊಂದಿದೆ.
Question 10 |
10. ವಿದೇಶಾಂಗ ವ್ಯವಹಾರ ಸಚಿವಾಲಯದ ನೂತನ ವಕ್ತಾರ (Spokeperson)ರಾಗಿ ಯಾರು ನೇಮಕಗೊಂಡಿದ್ದಾರೆ?
ವಿಕಾಸ್ ಸ್ವರೂಪ್ | |
ಗೋಪಾಲ್ ಬಗ್ಲೆ | |
ಪಿ ಬಷಿಯಾ | |
ಸೋನಿಯಾ ನಾರಂಗ್ |
ಭಾರತೀಯ ವಿದೇಶ ಸೇವೆ (ಐಎಫ್ಎಸ್)ಯ ಹಿರಿಯ ಅಧಿಕಾರಿ ಗೋಪಾಲ್ ಬಗ್ಲೆ ಅವರು ವಿದೇಶಾಂಗ ವ್ಯವಹಾರ ಸಚಿವಾಲಯದ ನೂತನ ವಕ್ತಾರರಾಗಿ ನೇಮಕಗೊಂಡಿದ್ದಾರೆ.
[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-27282017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ