ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,1,2017
Question 1 |
1. ದೇಶದ ಮೊದಲ ಅಂತ್ಯೋದಯ ಎಕ್ಸಪ್ರೆಸ್ ರೈಲಿಗೆ ಕೇಂದ್ರ ರೈಲ್ವೆ ಸಚಿವಾಲಯ ಚಾಲನೆ ನೀಡಿದೆ. ಅಂದಹಾಗೆ ಈ ರೈಲು ಯಾವ ಎರಡು ನಗರಗಳ ನಡುವೆ ಸಂಚರಿಸಲಿದೆ?
ನವದೆಹಲಿ-ಕೊಲ್ಕತ್ತ | |
ಮುಂಬೈ-ನವದೆಹಲಿ | |
ಎರ್ನಾಕುಲಂ-ಹೌರ | |
ಕೊಚ್ಚಿ-ಗೋವಾ |
ದೇಶದ ಮೊದಲ ಅಂತ್ಯೋದಯ ಎಕ್ಸಪ್ರೆಸ್ ರೈಲಿಗೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಚಾಲನೆ ನೀಡಿದರು. ಈ ರೈಲು ಎರ್ನಾಕುಲಂ ಮತ್ತು ಹೌರ ನಡುವೆ ಸಂಚರಿಸಲಿದೆ. ಟಿಕೆಟ್ ರಿಸರ್ವೆಷನ್ ಮಾಡಿಸಿಕೊಳ್ಳದ ಪ್ರಯಾಣಿಕರಿಗಾಗಿ ಪ್ರಯಾಣಿಕರ ದಟ್ಟಣೆಯ ಮಾರ್ಗಗಳಲ್ಲಿ ಅಂತ್ಯೋದಯ ಎಕ್ಸ್ ಪ್ರೆಸ್ ರೈಲುಗಳನ್ನು ಭಾರತೀಯ ರೈಲ್ವೆ ಅನಾವರಣಗೊಳಿಸಿದೆ. ದೀನದಯಾಳು ಬೋಗಿಗಳನ್ನು ಹೋಲುವ ಅಂತ್ಯೋದಯ ಎಕ್ಸ್ಪ್ರೆಸ್ ರೈಲುಗಾಡಿಗಳ ಕಿಟಕಿಗಳಲ್ಲಿ ಕೆಂಪು ಮತ್ತು ಹಳದಿ ಬಣ್ಣ ಹಾಗೂ ವಿಶಿಷ್ಠ ವಿನ್ಯಾಸ, ಸಾಮಾನ್ಯ ಸ್ಲೀಪರ್ ಬೋಗಿಗಳಿಗಿಂತ ಹೆಚ್ಚಿನ ನೀರು ಶುದ್ಧೀಕರಣ ವ್ಯವಸ್ಥೆ, ಸೂಚನಾ ಫಲಕಗಳು, ಜೈವಿಕ ಶೌಚಗೃಹಗಳು, ಆಗ್ನಿಶಾಮಕಗಳು, ಕಳ್ಳತನ ನಿರೋಧಿ ವ್ಯವಸ್ಥೆ ಇತ್ಯಾದಿ ಆಧುನಿಕ ಸವಲತ್ತುಗಳಿವೆ.
Question 2 |
2. ಖ್ಯಾತ ಅಂಕಣಕಾರ, ನಾಟಕಕಾರ “ತಾರಕ್ ಮೆಹ್ತಾ” ಇತ್ತೀಚೆಗೆ ನಿಧನರಾದರು. ಇವರು ಯಾವ ರಾಜ್ಯಕ್ಕೆ ಸಂಬಂಧಿಸಿದ್ದಾರೆ?
ಕೇರಳ | |
ಗುಜರಾತ್ | |
ರಾಜಸ್ತಾನ | |
ಮಧ್ಯ ಪ್ರದೇಶ |
ಭಾರತದ ಖ್ಯಾತ ಅಂಕಣಕಾರ, ಹಾಸ್ಯ ಲೇಖಕ ಹಾಗೂ ನಾಟಕಕಾರ ತಾರಕ್ ಮೆಹ್ತಾ ಅವರು ಬುಧವಾರ ನಿಧನರಾಗಿದ್ದಾರೆ. ತಮ್ಮ ಹಾಸ್ಯ ಲೇಖನ ಮತ್ತು ವಿಡಂಬನಾತ್ಮಕ ಅಂಕಣಗಳಿಂದ ಖ್ಯಾತಿ ಗಳಿಸಿದ್ದ ತಾರಕ್ ಮೆಹ್ತಾ ಅವರು ಗುಜರಾತ್ ಭಾಷೆಯಲ್ಲಿ ಬರೆದಿದ್ದ ಅಂಕಣವನ್ನು ಆಧರಿಸಿ 2008ರಲ್ಲಿ ಸಬ್ ಟಿವಿಯಲ್ಲಿ ‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ ಎಂಬ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ಕಾರ್ಯಕ್ರಮದಿಂದಾಗಿ ಚಾನಲ್ಗೆ ಭಾರೀ ಖ್ಯಾತಿ ಗಳಿಸಿತ್ತು. ಸಾಮಾನ್ಯ ಸಾಮಾಜಿಕ ಬೆಳವಣಿಗೆಗಳು ಹಾಗೂ ಜನಜೀವನದಲ್ಲಿನ ಸಣ್ಣ ಬದಲಾವಣೆಗಳನ್ನು ತಮ್ಮ ಹಾಸ್ಯ ಬರವಣಿಗೆ ಮೂಲಕ ತಾರಕ್ ಮೆಹ್ತಾ ವಿಡಂಬನೆ ಮಾಡುತ್ತಿದ್ದರು. 2015ರಲ್ಲಿ ತಾರಕ್ ಮೆಹ್ತಾ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿ
Question 3 |
3. “The Wrong Turn: Love and Betrayal in the Time of Netaji” ಪುಸ್ತಕದ ಲೇಖಕರು ಯಾರು?
ಪೂನಂ ಸಿಂಗ್ | |
ನಮಿತ ರಾಯ್ ಘೋಷ್ | |
ಅರವಿಂದ್ ಬೋಸ್ | |
ನರೇಂದ್ರ ಜ್ಯೋದ್ |
Question 4 |
4. 2017 ರಾಷ್ಟ್ರೀಯ ವಿಜ್ಞಾನ ದಿನದ ಧ್ಯೇಯವಾಕ್ಯ ___________?
Science for Sustainable Future | |
Science and Technology for Specially Abled Persons | |
Science for Digital India | |
Fostering Scientific Temper |
ಭಾರತದಲ್ಲಿ ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಭಾರತದ ಖ್ಯಾತ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರು ರಾಮನ್ ಎಫೆಕ್ಟ್ ಅನ್ವೇಷಿಸಿದ ದಿನವನ್ನು ವಿಜ್ಞಾನ ದಿನವೆಂದು ಆಚರಿಸಲಾಗುವುದು. Science and Technology for Specially Abled Persons ಇದು ಈ ವರ್ಷದ ಥೀಮ್.
Question 5 |
5. ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
ಜಗನ್ನಾಥ್ ಕಾಳೆ | |
ರಮೇಶ್ ಸಿಂಪಿಗಿ | |
ನಂದ್ ಕುಮಾರ್ ಸಾಯ್ | |
ಚರಣ್ ಬಾಟಿಯಾ |
ಹಿರಿಯ ಬುಡಕಟ್ಟು ಜನಾಂಗದ ನಾಯಕ ಹಾಗೂ ಮಾಜಿ ಸಂಸದ ನಂದ್ ಕುಮಾರ್ ಸಾಯ್ ರವರು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
Question 6 |
6. ಈ ಕೆಳಗಿನ ಯಾರನ್ನು “ESPNcricinfo 2017ನೇ ವರ್ಷದ ನಾಯಕ (Captain of the year)” ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ?
ಡು ಫ್ಲೆಸಿ | |
ವಿರಾಟ್ ಕೊಹ್ಲಿ | |
ಸ್ಟೀವೆನ್ ಸ್ಮಿತ್ | |
ಬೆನ್ ಸ್ಟೋಕ್ಸ್ |
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ESPNcricinfo 2017ನೇ ವರ್ಷದ ನಾಯಕ (Captain of the year)” ಪ್ರಶಸ್ತಿ ನೀಡಲಾಗಿದೆ. ಕಳೆದ ವರ್ಷ ಆಡಿದ ಟೆಸ್ಟ್ ಪಂದ್ಯಗಳಲ್ಲಿ 12 ಪಂದ್ಯ ಪೈಕಿ 9 ಪಂದ್ಯಗಳನ್ನು ಕೊಹ್ಲಿ ತಂಡ ಗೆದ್ದುಕೊಂಡಿದೆ.
Question 7 |
7. 2017 ಅಂತಾರಾಷ್ಟ್ರೀಯ ಯೋಗ ಉತ್ಸವ ಯಾವ ರಾಜ್ಯದಲ್ಲಿ ಆರಂಭಗೊಂಡಿದೆ?
ಉತ್ತರಖಂಡ್ | |
ಪಶ್ಚಿಮ ಬಂಗಾಳ | |
ತಮಿಳು ನಾಡು | |
ಗುಜರಾತ್ |
29ನೇ ಅಂತಾರಾಷ್ಟ್ರೀಯ ಯೋಗ ಉತ್ಸವ ಉತ್ತರಖಂಡದ ಪರ್ಮಥ್ ನಿಕೇತನದಲ್ಲಿ ಆರಂಭಗೊಂಡಿತು.
Question 8 |
8. ಈ ಕೆಳಗಿನ ಯಾರು “ಸಾರ್ಕ್”ನ ನೂತನ ಜನರಲ್ ಸೆಕ್ರೆಟರಿ ಆಗಿ ನೇಮಕಗೊಂಡಿದ್ದಾರೆ?
ಅಹ್ಮದ್ ಸಲೀಂ | |
ಮಹಮ್ಮದ್ ಜಾವೇದ್ | |
ಅಮ್ಜದ್ ಹುಸೇನ್ ಬಿ ಸಿಯಾಲ್ | |
ಶಫಿಕುದ್ದೀನ್ |
ಪಾಕಿಸ್ತಾನದ ಹಿರಿಯ ರಾಜತಾಂತ್ರಿಕ ಅಮ್ಜದ್ ಹುಸೇನ್ ಬಿ ಸಿಯಾಲ್ ಸಾರ್ಕ್”ನ ನೂತನ ಜನರಲ್ ಸೆಕ್ರೆಟರಿ ಆಗಿ ನೇಮಕಗೊಂಡಿದ್ದಾರೆ. ನೇಪಾಳದ ಅರ್ಜುನ್ ಬಹುದ್ದೂರ್ ಥಾಪ ಅವರ ಉತ್ತರಾಧಿಕಾರಿಯಾಗಿ ಇವರು ಕಾರ್ಯನಿರ್ವಹಿಸಲಿದ್ದಾರೆ.
Question 9 |
9. ಭಾರತೀಯ ಷೇರು ವಿನಿಮಯ ಮಂಡಳಿ (ಸೆಬಿ)ಯ ನೂತನ ಅಧ್ಯಕ್ಷರು ಯಾರು?
ಅಜಯ್ ತ್ಯಾಗಿ | |
ಸುರೇಂದ್ರ ಕಾರ್ಣಿಕ್ | |
ಜಿತೇಂದ್ರ ಷಾ | |
ಅರವಿಂದ್ ಜೋಷಿ |
Question 10 |
10. “ಇಸ್ರೋ ಟೆಲಿಮೆಟ್ರಿ ಟ್ರಾಕಿಂಗ್ ಅಂಡ್ ಕಮಾಂಡ್ ನೆಟ್ವರ್ಕ್ “ISRO Telemetry Tracking and Command Network (ISTRAC)” ಎಲ್ಲಿದೆ?
ಬೆಂಗಳೂರು | |
ಅಂಡಮಾನ್ ಅಂಡ್ ನಿಕೋಬರ್ | |
ಲಕ್ಷದ್ವೀಪ | |
ಚೆನ್ನೈ |
[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್12017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Very usefull sir