ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,3,4,2017
Question 1 |
ಮಾರ್ಚ್ 1 | |
ಮಾರ್ಚ್ 2 | |
ಮಾರ್ಚ್ 3 | |
ಮಾರ್ಚ್ 4 |
ವಿಶ್ವ ವನ್ಯಜೀವಿ ದಿನ (World Wildlife Day)ವನ್ನು ಪ್ರತಿ ವರ್ಷ ಮಾರ್ಚ್ 4 ರಂದು ಆಚರಿಸಲಾಗುವುದು. “ಸೈಟ್ಸ್ (CITES)” ಒಪ್ಪಂದಕ್ಕೆ ಸಹಿ ಹಾಕಿದ ಈ ದಿನವನ್ನು ವಿಶ್ವ ವನ್ಯಜೀವಿ ದಿನವೆಂದು ಆಚರಿಸಲಾಗುತ್ತಿದೆ. “ಯುವಜನತೆಗೆ ಕಿವಿಕೊಡಿ” ಇದು ಈ ವರ್ಷದ ವನ್ಯಜೀವಿ ದಿನದ ಧ್ಯೇಯವಾಕ್ಯ.
Question 2 |
2. ವಿಶ್ವದ ಶ್ರೇಷ್ಠ ಪುಟ್ಬಾಲ್ ಆಟಗಾರ “ರೇಮಂಡ್ ಕೊಪ” ಇತ್ತೀಚೆಗೆ ನಿಧನರಾದರು. ಅಂದಹಾಗೆ ಕೊಪ ಯಾವ ದೇಶಕ್ಕೆ ಸಂಬಂಧಿಸಿದ್ದಾರೆ?
ಫ್ರಾನ್ಸ್ | |
ಇಟಲಿ | |
ಮೆಕ್ಸಿಕೊ | |
ಬ್ರೆಜಿಲ್ |
ಫ್ರಾನ್ಸ್ ನ ಪುಟ್ಬಾಲ್ ಕ್ರೀಡೆಯ ದಂತಕತೆ ಎನಿಸಿದ್ದ “ರೇಮಂಡ್ ಕೊಪ” ರವರು ನಿಧನರಾದರು. ಕೊಪ ಅವರು ಸರ್ವಕಾಲೀಕ ಶ್ರೇಷ್ಠ ಮಿಡ್ ಫೀಲ್ಡರ್ ಆಟಗಾರನಾಗಿ ಜನಪ್ರಿಯರಾಗಿದ್ದರು.
Question 3 |
3. “ಮಹಾನಗರ ಟೆಲಿಪೋನ್ ನಿಗಮ ಲಿಮಿಟೆಡ್ (MTNL)”ನ ನೂತನ ಮುಖ್ಯಸ್ಥರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಯಾರು ನೇಮಕಗೊಂಡಿದ್ದಾರೆ?
ಸುಭಾಷ್ ಚಂದ್ರ | |
ವಿಜಯ ಪ್ರಕಾಶ್ | |
ಪಿ ಕೆ ಪುರ್ವರ್ | |
ಪ್ರತಾಪ್ ಸಿಂಗ್ |
ಪಿ ಕೆ ಪುರ್ವರ್ ಅವರು “ಮಹಾನಗರ ಟೆಲಿಪೋನ್ ನಿಗಮ ಲಿಮಿಟೆಡ್ (MTNL)”ನ ನೂತನ ಮುಖ್ಯಸ್ಥರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಪುರ್ವರ್ ಅವರು ಎಂಟಿಎನ್ಎಲ್ ನ ಹಣಕಾಸು ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
Question 4 |
4. ರಾಷ್ಟ್ರ ವ್ಯಾಪ್ತಿಯ “ಸ್ವಚ್ಚ ಶಕ್ತಿ ಸಪ್ತಾಹ”ಕ್ಕೆ ಯಾವ ನಗರದಲ್ಲಿ ಚಾಲನೆ ನೀಡಲಾಯಿತು?
ಗುರುಗ್ರಾಮ | |
ಪುಣೆ | |
ಭೂಪಾಲ್ | |
ಅಹಮದಬಾದ್ |
ಹರಿಯಾಣದ ಗುರುಗ್ರಾಮದಲ್ಲಿ ರಾಷ್ಟ್ರವ್ಯಾಪ್ತಿಯ “ಸ್ವಚ್ಚ ಶಕ್ತಿ ಸಪ್ತಾಹ”ಕ್ಕೆ ಕೇಂದ್ರ ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಚಾಲನೆ ನೀಡಿದರು. ನೈಮರ್ಲ್ಯ ಹಾಗೂ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವುದು ಈ ಸಪ್ತಾಹದ ಉದ್ದೇಶ. ಸ್ವಚ್ಚ ಶಕ್ತಿ ಸಪ್ತಾಹ ವನ್ನು ಮಾರ್ಚ್ 1 ರಿಂದ ಮಾರ್ಚ್ 8, 2017 ರವರೆಗೆ ಆಚರಿಸಲಾಗುವುದು.
Question 5 |
5. “2017 ಹಿಂದೂ ಮಹಾಸಾಗರ ದಂಡೆಯ ರಾಷ್ಟ್ರಗಳ ಒಕ್ಕೂಟ (Indian Ocean Rim Association)” ಶೃಂಗಸಭೆಯನ್ನು ಯಾವ ರಾಷ್ಟ್ರದಲ್ಲಿ ಆಯೋಜಿಸಲಾಗುವುದು?
ಇಂಡೋನೇಷಿಯಾ | |
ಶ್ರೀಲಂಕಾ | |
ಭಾರತ | |
ತಾಂಜಾನಿಯ |
2017 ಹಿಂದೂ ಮಹಾಸಾಗರ ದಂಡೆಯ ರಾಷ್ಟ್ರಗಳ ಒಕ್ಕೂಟ (Indian Ocean Rim Association)” ಶೃಂಗಸಭೆ ಇಂಡೋನೇಷಿಯಾದ ಜರ್ಕಾತದಲ್ಲಿ ಮಾರ್ಚ್ 7 ರಿಂದ ನಡೆಯಲಿದೆ. ಸಾಗರೋತ್ತರ ಸಹಕಾರ ಹಾಗೂ ಭಯೋತ್ಪಾದನೆ ಕುರಿತು ಶೃಂಗಸಭೆಯಲ್ಲಿ ಚರ್ಚಿಸಲಾಗುವುದು. “ಹಿಂದೂ ಮಹಾಸಾಗರ ದಂಡೆಯ ರಾಷ್ಟ್ರಗಳ ಒಕ್ಕೂಟ (Indian Ocean Rim Association)”ದ 21 ರಾಷ್ಟ್ರಗಳು ಹಾಗೂ ಏಳು ವೀಕ್ಷಣಾ ರಾಷ್ಟ್ರಗಳು ಶೃಂಗಸಭೆಯಲ್ಲಿ ಭಾಗವಹಿಸಲಿವೆ.
Question 6 |
6. “When Crime Pays – Money and Muscle in Indian Politics” ಪುಸ್ತಕದ ಲೇಖಕರು _____-?
ಪಂಕಜ್ ಮಿಶ್ರಾ | |
ಅಮಿತಾಬ್ ಕಾಂತ್ | |
ರಾಜೇಂದ್ರ ಸಿಂಗ್ | |
ಮಿಲನ್ ವೈಷ್ಣವ್ |
“When Crime Pays – Money and Muscle in Indian Politics” ಪುಸ್ತಕವನ್ನು ಮಿಲನ್ ವೈಷ್ಣವ್ ಬರೆದಿದ್ದಾರೆ. ಭಾರತೀಯ ರಾಜಕೀಯತೆಯಲ್ಲಿರುವ ಭ್ರಷ್ಟಾಚಾರ ಹಾಗೂ ಅಪರಾಧಿತನದ ಬಗ್ಗೆ ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ.
Question 7 |
7. ಪ್ರಸಿದ್ದ ಬುಡಕಟ್ಟು ಉತ್ಸವ “ಭಗೊರಿಯ (Bhagoria)” ಯಾವ ರಾಜ್ಯದಲ್ಲಿ ಆರಂಭಗೊಂಡಿದೆ?
ಮಧ್ಯ ಪ್ರದೇಶ | |
ಮಣಿಪುರ | |
ತ್ರಿಪುರ | |
ಜಾರ್ಖಂಡ್ |
ವಾರ್ಷಿಕ ಬುಡಕಟ್ಟು ಉತ್ಸವ “ಭಗೋರಿಯ” ಮಧ್ಯಪ್ರದೇಶದ ಜಾಬೊವ ಹಾಗೂ ಇತರೆ ನಾಲ್ಕು ಜಿಲ್ಲೆಗಳಲ್ಲಿ ಆರಂಭಗೊಂಡಿತು.
Question 8 |
8. 13ನೇ “ಆರ್ಥಿಕ ಸಹಕಾರ ಒಕ್ಕೂಟ (Economic Co-operation Association)”ದ ಶೃಂಗಸಭೆ ಯಾವ ದೇಶದಲ್ಲಿ ನಡೆಯಿತು?
ಭಾರತ | |
ಪಾಕಿಸ್ತಾನ | |
ತಜಕಿಸ್ತಾನ | |
ಉಜ್ಬೇಕಿಸ್ತಾನ |
13ನೇ “ಆರ್ಥಿಕ ಸಹಕಾರ ಒಕ್ಕೂಟ (Economic Co-operation Association)” ಶೃಂಗಸಭೆ ಪಾಕಿಸ್ತಾನದ ಇಸ್ಲಮಾಬಾದ್ ನಲ್ಲಿ ಮಾರ್ಚ್ 1 ರಂದು ನಡೆಯಿತು. ವ್ಯಾಪಾರ, ಇಂಧನ, ಪ್ರವಾಸೋದ್ಯಮ, ಆರ್ಥಿಕ ಬೆಳವಣಿಗೆ ಸಂಬಂಧಿಸಿದಂತೆ ಪರಸ್ಪರ ಸಹಕಾರ ಸಾಧಿಸುವುದು ಶೃಂಗಸಭೆಯ ಧ್ಯೇಯ. ಟರ್ಕಿಯ ಹಲಿಲ್ ಇಬ್ರಾಹಿಂ ಅಕಾ ಅವರು ಈ ಒಕ್ಕೂಟದ ಪ್ರಸ್ತುತ ಸೆಕ್ರೆಟರಿ ಜನರಲ್ ಆಗಿದ್ದಾರೆ.
Question 9 |
9. ಇತ್ತೀಚೆಗೆ ನಿಧನರಾದ “ರೆನೆ ಪ್ರೆವಲ್” ಅವರು ಯಾವ ದೇಶದ ಮಾಜಿ ಅಧ್ಯಕ್ಷರು?
ಹೈಟಿ | |
ಇಸ್ರೇಲ್ | |
ಜಪಾನ್ | |
ಫಿಲಿಫೈನ್ಸ್ |
ಹೈಟಿಯ ಮಾಜಿ ಅಧ್ಯಕ್ಷ “ರೆನೆ ಗಾರ್ಸಿಯಾ ಪ್ರೆವಲ್” ಅವರು ನಿಧನರಾದರು. ಬಡವರ ಬಂಧು ಎಂದೇ ಖ್ಯಾತರಾಗಿದ್ದ ಅವರು ಎರಡು ಬಾರಿಯ ಹೈಟಿಯ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು.
Question 10 |
10. ಯಾವ ರಾಜ್ಯ ಇತ್ತೀಚೆಗೆ ಅಳಿವಿನಂಚಿನಲ್ಲಿರುವ “ಕುರುಖ್” ಭಾಷೆಗೆ ಅಧಿಕೃತ ಭಾಷೆ ಸ್ಥಾನಮಾನವನ್ನು ನೀಡಿತು?
ಪಶ್ಚಿಮ ಬಂಗಾಳ | |
ಆಂಧ್ರ ಪ್ರದೇಶ | |
ತೆಲಂಗಣ | |
ಓಡಿಶಾ |
[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್342017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
kkkkk
Super sir