ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,7,8,2017
Question 1 |
1. ಈ ಕೆಳಗಿನ ಯಾರಿಗೆ “2016 ಮೂರ್ತಿ ದೇವಿ” ಪ್ರಶಸ್ತಿ ಲಭಿಸಿದೆ?
ಎಂ ಪಿ ವಿರೇಂದ್ರ ಕುಮಾರ್ | |
ವೀರಪ್ಪ ಮೊಹ್ಲಿ | |
ಅನುಪಮಾ | |
ಚೇತನ್ ಭಗತ್ |
ಮಲಯಾಳಂನ ಪ್ರಖ್ಯಾತ ಸಾಹಿತಿ ಹಾಗೂ ಪತ್ರಕರ್ತ ಎಂ ಪಿ ವಿರೇಂದ್ರ ಕುಮಾರ್ ಅವರಿಗೆ 2016 ಮೂರ್ತಿ ದೇವಿ ಪ್ರಶಸ್ತಿಯನ್ನು ನೀಡಲಾಗಿದೆ. ವಿರೇಂದ್ರ ಕುಮಾರ್ ಅವರ ಪ್ರವಾಸಿಕಥನ “ಹಿಮಾವತಭೂವಿಲ್”ಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
Question 2 |
2. “2017 ಅಂತಾರಾಷ್ಟ್ರೀಯ ಮಹಿಳಾ ದಿನ”ದ ಧ್ಯೇಯವಾಕ್ಯ _________?
Women in the Changing World of Work: Planet 50-50 by 2030 | |
Women Is Power Respect Her | |
Women Now Everywhere | |
Respect Every Women |
ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. Women in the Changing World of Work: Planet 50-50 by 2030 ಇದು ಈ ವರ್ಷದ ಥೀಮ್.
Question 3 |
3. ಇತ್ತೀಚೆಗೆ ನಿಧನರಾದ ಕಾಳಿಕಾ ಪ್ರಸಾದ್ ಭಟ್ಟಾಚಾರ್ಯ ಯಾವ ಭಾಷೆಯ ಪ್ರಸಿದ್ದ ಜಾನಪದ ಗಾಯಕ?
ಬಂಗಾಳಿ | |
ತೆಲುಗು | |
ಮರಾಠಿ | |
ತಮಿಳು |
ಬಂಗಾಳಿ ಭಾಷೆಯ ಪ್ರಸಿದ್ದ ಜಾನಪದ ಗಾಯಕ ಕಾಳಿಕಾ ಪ್ರಸಾದ್ ಭಟ್ಟಾಚಾರ್ಯ ಅವರು ನಿಧನರಾದರು. ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಸಂಗೀತಾ ಪ್ರಸಿದ್ದವಾಗಲು ಭಟ್ಟಾಚಾರ್ಯ ಅವರು ಅಪಾರ ಕೊಡುಗೆ ನೀಡಿದ್ದರು.
Question 4 |
4. “ದಿ ಸಿಕ್ರೇಟ್ ಡೈರಿ ಆಫ್ ಕಸ್ತೂರಬಾ (The Secret Dairy of Kasturaba)” ಪುಸ್ತಕದ ಲೇಖಕರು ಯಾರು?
ಮನ್ವೀರ್ ಸಿಂಗ್ | |
ಮೃಣನಿ ಪ್ರಸಾದ್ | |
ನೀಲಿಮಾ ಪ್ರಸಾದ್ ಅಧರ್ | |
ಕೀರ್ತಿ ವಾಜಪೇಯಿ |
Question 5 |
ನರ್ಮದಾ | |
ತಪತಿ | |
ಕೃಷ್ಣಾ | |
ಗೋದಾವರಿ |
ನರ್ಮದಾ ನದಿಯ ಮೇಲೆ ನಿರ್ಮಿಸಲಾಗಿರುವ ದೇಶದ ಅತಿ ದೊಡ್ಡ ಕೇಬಲ್ ಆಧರಿತ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಲಾರ್ಸನ್ & ಟರ್ಬೊ ಈ ಸೇತುವೆಯನ್ನು ನಿರ್ಮಿಸಿದೆ.
Question 6 |
6. 11ನೇ “ಈಶಾನ್ಯ ಉದ್ದಿಮೆ ಶೃಂಗಸಭೆ (North East Business Summit)” ಯಾವ ನಗರದಲ್ಲಿ ನಡೆಯಿತು?
ಇಂಫಾಲ್ | |
ಗುವಾಹಟಿ | |
ಶಿಲ್ಲಾಂಗ್ | |
ನವ ದೆಹಲಿ |
11ನೇ ಈಶಾನ್ಯ ಉದ್ದಿಮೆ ಶೃಂಗಸಭೆ ನವದೆಹಲಿಯಲ್ಲಿ ನಡೆಯತಿ. ಈಶಾನ್ಯ ಭಾಗದಲ್ಲಿ ಬಂಡವಾಳ ಹೂಡಲು ಇರುವ ಅವಕಾಶ ಹಾಗೂ ಹೂಡಿಕೆಯನ್ನು ಪ್ರೋತ್ಸಾಹಿಸುವುದು ಶೃಂಗಸಭೆಯ ಧ್ಯೇಯ.
Question 7 |
7. ಈ ಕೆಳಗಿನ ಯಾವ ದೇಶದಲ್ಲಿ “India by the Nile” ಸಾಂಸ್ಕೃತಿಕ ಉತ್ಸವ ಆರಂಭಗೊಂಡಿತು?
ಮಾರಿಷಸ್ | |
ಆಸ್ಟ್ರೇಲಿಯಾ | |
ಈಜಿಪ್ಟ್ | |
ನೈಜೀರಿಯಾ |
“ಇಂಡಿಯಾ ಬೈ ದಿ ನೈಲ್” ಮೆಗಾ ಸಾಂಸ್ಕೃತಿಕ ಉತ್ಸವ ಈಜಿಪ್ಟ್ ನ ಕೈರೊದಲ್ಲಿ ಆರಂಭಗೊಂಡಿತು. ಮಾರ್ಚ್ 8 ರಿಂದ 14 ರವರೆಗೆ ಈ ಉತ್ಸವ ಜರುಗಲಿದೆ. ಈ ವರ್ಷ ಭಾರತದ ಇತಿಹಾಸದಲ್ಲಿ ಸ್ಮರಣೀಯವಾಗಿದ್ದು 70ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದೆ ಅಲ್ಲದೇ ಭಾರತ ಮತ್ತು ಈಜಿಪ್ಟ್ ನಡುವಿನ ದ್ವಿಪಕ್ಷೀಯ ಸಹಕಾರಕ್ಕೆ 70 ವರ್ಷ ತುಂಬಲಿದೆ.
Question 8 |
8. ಮಹಿಳಾ ನೇಕಾರರಿಗೆ ಹಾಗೂ ಮಹಿಳಾ ಕರಕುಶಲಕರ್ಮಿಗಳಿಗಾಗಿ “ಕಮಲದೇವಿ ಚಟ್ಟೋಪಾಧ್ಯಯ ರಾಷ್ಟ್ರೀಯ ಪ್ರಶಸ್ತಿ”ಯನ್ನುಯಾವ ಸಚಿವಾಲಯ ಸ್ಥಾಪಿಸಿದೆ?
ಗ್ರಾಮೀಣಭಿವೃದ್ದಿ ಸಚಿವಾಲಯ | |
ಜವಳಿ ಸಚಿವಾಲಯ | |
ಪಂಚಾಯತ್ ರಾಜ್ ಸಚಿವಾಲಯ | |
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ |
ಕೇಂದ್ರ ಜವಳಿ ಸಚಿವೆ ಸೃತಿ ಇರಾನಿ ಅವರು ಮಹಿಳಾ ನೇಕಾರರಿಗೆ ಹಾಗೂ ಮಹಿಳಾ ಕರಕುಶಲಕರ್ಮಿಗಳಿಗಾಗಿ “ಕಮಲದೇವಿ ಚಟ್ಟೋಪಾಧ್ಯಯ ರಾಷ್ಟ್ರೀಯ ಪ್ರಶಸ್ತಿ”ಯನ್ನು ಇತ್ತೀಚೆಗೆ ಸ್ಥಾಪಿಸಿದ್ದಾರೆ. ಇದರ ಜೊತೆಗೆ ಮಹಿಳಾ ನೇಕಾರರು ಮತ್ತು ಮಹಿಳಾ ಕರಕುಶಲಕರ್ಮಿಗಳಿಗೆ ಮುದ್ರಾ ಯೋಜನೆಯಡಿ ಸಾಲ ವಿತರಿಸಲು “ಮಹಿಳಾ ವಿಕಾಸ್ ಮಹಿಳಾ ಕೆ ಸಾಥ್” ಅಭಿಯಾನವನ್ನು ಸಹ ಆರಂಭಿಸಲಾಯಿತು.
Question 9 |
9. ಸಾರ್ವಜನಿಕ ವಲಯದ ಯಾವ ಬ್ಯಾಂಕ್ ಇತ್ತೀಚೆಗೆ ತನ್ನ ನೌಕರರಿಗೆ “ವರ್ಕ್ ಫ್ರಮ್ ಹೋಮ್ (Work from Home)” ಅವಕಾಶವನ್ನು ಜಾರಿಗೆ ತಂದಿದೆ?
ಭಾರತೀಯ ಸ್ವೇಟ್ ಬ್ಯಾಂಕ್ | |
ಕೆನರಾ ಬ್ಯಾಂಕ್ | |
ಸಿಂಡಿಕೇಟ್ ಬ್ಯಾಂಕ್ | |
ವಿಜಯಾ ಬ್ಯಾಂಕ್ |
ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ನೌಕರರಿಗೆ ತುರ್ತು ಸಂದರ್ಭದಲ್ಲಿ ಮೊಬೈಲ್ ಬಳಸಿ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಕಲ್ಪಿಸಿದೆ.
Question 10 |
10. “ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅಂಡ್ ಆವಾರ್ಡ್ಸ್ ಆಫ್ ಆಸ್ಟ್ರೇಲಿಯಾ (IFFAA)” ದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಭಾರತೀಯ ನಟಿ ಯಾರು?
ಸೋನಾಕ್ಷಿ ಸಿನ್ಹಾ | |
ಮಾಧುರಿ ದೀಕ್ಷಿತ್ | |
ಐಶ್ವರ್ಯಾ ರೈ ಬಚ್ಚನ್ | |
ದೀಪಿಕಾ ಪಡುಕೋಣೆ |
ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು “ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅಂಡ್ ಆವಾರ್ಡ್ಸ್ ಆಫ್ ಆಸ್ಟ್ರೇಲಿಯಾ (IFFAA)” ದಲ್ಲಿಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು. 2016ರಲ್ಲಿ ತೆರೆಕಂಡ ಸರ್ಬ್ಜಿತ್ ಚಿತ್ರದಲ್ಲಿನ ಅಭಿನಯಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.
[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್782017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Thank you Sir ….
Thank u sir