ಮಹಿಳಾ ಸಂಸದರ ಪ್ರಮಾಣ: ಭಾರತಕ್ಕೆ 148ನೇ ಸ್ಥಾನ

ಇತ್ತೀಚೆಗೆ ಬಿಡುಗಡೆಗೊಂಡ 2017 ರಾಜಕೀಯದಲ್ಲಿ ಮಹಿಳೆಯರು ವರದಿಯಲ್ಲಿ ವಿಶ್ವದಲ್ಲಿ ಮಹಿಳಾ ಸಂಸದರ ಸಂಖ್ಯೆಯಲ್ಲಿ ಭಾರತ 148ನೇ ಸ್ಥಾನ ಹೊಂದಿದೆ. ವಿಶ್ವಸಂಸ್ಥೆ ವುವೆನ್ ಹಾಗೂ ಇಂಟರ್-ಪಾರ್ಲಿಯಮೆಂಟರಿ ಯೂನಿಯನ್ ಈ ವರದಿಯನ್ನು ಬಿಡುಗಡೆಗೊಳಿಸಿದೆ.

ವರದಿಯ ಪ್ರಮುಖಾಂಶಗಳು:

  • 2015 ರಿಂದ ಜಾಗತಿಕವಾಗಿ ಸಂಸತ್ತು ಹಾಗೂ ಕಾರ್ಯನಿರ್ವಾಹಕ ಸರ್ಕಾರದಲ್ಲಿ ಮಹಿಳೆಯರ ಪಾಲು ಸ್ಥಿರವಾಗಿದ್ದು, ಗಮನಾರ್ಹ ಬದಲಾವಣೆ ಆಗಿಲ್ಲವೆಂದು ವರದಿಯಲ್ಲಿ ಹೇಳಲಾಗಿದೆ.
  • ಟಾಪ್ ಹತ್ತು ರಾಷ್ಟ್ರಗಳು: ಹೆಚ್ಚು ಮಹಿಳಾ ಸಂಸದರನ್ನು ಒಳಗೊಂಡಿರುವ ಟಾಪ್ ಹತ್ತು ರಾಷ್ಟ್ರಗಳೆಂದರೆ ರಾವಂಡ, ಬೊಲಿವಿಯಾ, ಕ್ಯೂಬಾ, ಐಸ್ ಲ್ಯಾಂಡ್, ನಿಕಾರಗುವ, ಸ್ವೀಡೆನ್, ಸೆನೆಗಲ್, ಮೆಕ್ಸಿಕೋ, ಫಿನ್ಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ.
  • ಭಾರತದಲ್ಲಿ ಲೋಕಸಭೆಯಲ್ಲಿ 542 ಮಂದಿ ಸದಸ್ಯರಲ್ಲಿ 64 ಮಂದಿ ಮಹಿಳಾ ಸಂಸದರು ಇರುವ ಮೂಲಕ ಶೇಕಡಾ8ರಷ್ಟು ಮತ್ತು ರಾಜ್ಯಸಭೆಯ 245 ಮಂದಿ ಸದಸ್ಯರ ಪೈಕಿ 27 ಮಂದಿ ಮಹಿಳೆಯರಿದ್ದು ಅವರ ಪ್ರಮಾಣ ಶೇಕಡಾ 11ರಷ್ಟಿದೆ.
  • ಮಹಿಳಾ ಸಚಿವರ ವಿಚಾರ ಬಂದಾಗ ಭಾರತ 88ನೇ ಸ್ಥಾನದಲ್ಲಿದ್ದು ಸಂಪುಟದಲ್ಲಿ ಐವರು ಅಥವಾ ಶೇಕಡಾ5ರಷ್ಟು ಮಹಿಳಾ ಸಚಿವೆಯರಿದ್ದಾರೆ.
  • ಆದರೂ ಭಾರತದಲ್ಲಿ ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಇಬ್ಬರು ಮಹಿಳೆಯರು ಪ್ರಮುಖ ಸ್ಥಾನ ಹೊಂದಿದ್ದಾರೆ. ಸುಮಿತ್ರಾ ಮಹಾಜನ್ ಸ್ಪೀಕರ್ ಆದರೆ ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವೆಯಾಗಿದ್ದಾರೆ.
  • 2015ರ ಅಂಕಿಅಂಶ ಪ್ರಕಾರ ಸಂಸತ್ತಿನಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಶೇಕಡಾ6 ಇದ್ದರೆ, 2016ರಲ್ಲಿ ಶೇಕಡಾ 23.3 ಆಗಿದೆ. ವಿಶ್ವದ ಮಹಿಳಾ ಸಂಸದರ ಅರ್ಧದಷ್ಟು ಭಾರತದಲ್ಲಿದ್ದಾರೆ.

2030ಕ್ಕೆ ಕ್ಷಯರೋಗ ನಿರ್ಮೂಲನೆ ಮಾಡುವ ವಿಶ್ವ ಆರೋಗ್ಯ ಸಂಸ್ಥೆಯ ಕರೆಗೆ ಭಾರತ ಸಹಿ

ವಿಶ್ವಸಂಸ್ಥೆ-ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ 2030ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ವಿಶ್ವ ಆರೋಗ್ಯ ಸಂಸ್ಥೆಯ ಕರೆಗೆ (Call to End Tuberculosis by 2030) ಭಾರತ ಹಾಗೂ ಇತರೆ ರಾಷ್ಟ್ರಗಳು ಸಹಿ ಹಾಕಿವೆ. ನವದೆಹಲಿಯಲ್ಲಿ ಕ್ಷಯರೋಗ ನಿರ್ಮೂಲನೆ ಸಲುವಾಗಿ ನಡೆದ ಎರಡು ದಿನಗಳ ಸಭೆಯಲ್ಲಿ ಭಾಗವಹಿಸಿದ್ದ ವಿಶ್ವಸಂಸ್ಥೆ-ಆಗ್ನೇಯ ಏಷ್ಯಾ ರಾಷ್ಟ್ರಗಳ ಆರೋಗ್ಯ ಸಚಿವರ ಸಭೆಯಲ್ಲಿ ಸಹಿ ಮಾಡಲಾಯಿತು.

  • 2030ರ ವೇಳಗೆ ವಿಶ್ವಸಂಸ್ಥೆ ಆಗ್ನೇಯ ಏಷ್ಯಾ ವಲಯ(WHO-SEARO)ವನ್ನು ಕ್ಷಯರೋಗದಿಂದ ಮುಕ್ತಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು.
  • ಕ್ಷಯರೋಗ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಸಂಪನ್ಮೂಲ ವಿನಿಮಯಕ್ಕೆ ಸಂಬಂಧಿಸಿದಂತೆ “ವಲಯ ಅನುಷ್ಠಾನ ನಿಧಿ”ಯನ್ನು ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಯಿತು.
  • 2030ರ ವೇಳಗೆ ಜಾಗತಿಕ ಮಟ್ಟದಲ್ಲಿ ಕ್ಷಯರೋಗದಿಂದಾಗುವ ಮರಣ ಪ್ರಮಾಣವನ್ನು ಶೇ 90% ಹಾಗೂ ಹೊಸ ಪ್ರಕರಣಗಳನ್ನು ಶೇ 80% ಕಡಿಮೆಗೊಳಿಸುವ ಗುರಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಹೊಂದಿದೆ.

ಹಿನ್ನಲೆ:

ಜಗತ್ತಿನ ಅರ್ಧದಷ್ಟು ಕ್ಷಯರೋಗ ಪ್ರಕರಣಗಳು ವಿಶ್ವಸಂಸ್ಥೆ-ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಕಂಡುಬಂದಿವೆ. ಈ ಭಾಗದ ಆರು ದೇಶಗಳಾದ ಬಾಂಗ್ಲದೇಶ, ದಕ್ಷಿಣ ಕೊರಿಯಾ, ಭಾರತ, ಇಂಡೋನೇಷಿಯಾ, ಮಯನ್ಮಾರ್ ಮತ್ತು ಥಾಯ್ಲೆಂಡ್ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಕ್ಷಯರೋಗ ಪ್ರಕರಣಗಳನ್ನು ಹೊಂದಿರುವ 30 ರಾಷ್ಟ್ರಗಳ ಪಟ್ಟಿಯಲ್ಲಿವೆ.

  • ವಿಶ್ವಸಂಸ್ಥೆ-ಆಗ್ನೇಯ ಏಷ್ಯಾ ರಾಷ್ಟ್ರಗಳ ವಲಯ ಭೂತಾನ್, ಬಾಂಗ್ಲದೇಶ, ದಕ್ಷಿಣ ಕೊರಿಯಾ, ಭಾರತ, ಇಂಡೋನೇಷಿಯಾ, ಮಯನ್ಮಾರ್, ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ, ಥಾಯ್ಲೆಂಡ್ ಮತ್ತು ತಿಮೊರ್-ಲೆಸ್ಟೆ ರಾಷ್ಟ್ರಗಳನ್ನು ಒಳಗೊಂಡಿದೆ.

ರಾಜ್ಯದಲ್ಲಿ ಹೊಸದಾಗಿ 49 ತಾಲ್ಲೂಕುಗಳ ರಚನೆ

ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ರಾಜ್ಯದಲ್ಲಿ ಹೊಸದಾಗಿ 49 ಹೊಸ ತಾಲ್ಲೂಕುಗಳ ರಚನೆಯನ್ನು ಘೋಷಿಸಲಾಗಿದೆ. ‘ಬೌಗೋಳಿಕ ಹಾಗೂ ಆಡಳಿತಾತ್ಮಕ ಅಗತ್ಯಗಳನ್ನು ಪರಿಗಣಿಸಿ ಹೊಸ ತಾಲ್ಲೂಕುಗಳ ರಚನೆಗೆ ಕ್ರಮಕೈಗೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹೊಸ ತಾಲ್ಲೂಕುಗಳು:
* ಚಾಮರಾಜನಗರ ಜಿಲ್ಲೆ: ಹನೂರು
* ದಾವಣಗೆರೆ ಜಿಲ್ಲೆ: ನ್ಯಾಮತಿ
* ಬೀದರ್‌ ಜಿಲ್ಲೆ: ಬಿಟಗುಪ್ಪ, ಹುಲಸೂರು ಮತ್ತು ಕಮಲಾನಗರ

* ಬಾಗಲಕೋಟೆ ಜಿಲ್ಲೆ: ಗುಳೇದಗುಡ್ಡ, ರಬಕವಿ–ಬನಹಟ್ಟಿ ಮತ್ತು ಇಳಕಲ್‌
* ಬೆಳಗಾವಿ ಜಿಲ್ಲೆ: ನಿಪ್ಪಾಣಿ, ಮೂಡಲಗಿ ಮತ್ತು ಕಾಗವಾಡ

* ಕೊಪ್ಪಳ ಜಿಲ್ಲೆ: ಕುಕನೂರು, ಕನಕಗಿರಿ ಮತ್ತು ಕಾರಟಗಿ
* ರಾಯಚೂರು ಜಿಲ್ಲೆ: ಮಸ್ಕಿ ಮತ್ತು ಸಿರವಾರ
* ಉಡುಪಿ ಜಿಲ್ಲೆ: ಬ್ರಹ್ಮಾವರ, ಕಾಪು ಮತ್ತು ಬೈಂದೂರು
* ದಕ್ಷಿಣ ಕನ್ನಡ ಜಿಲ್ಲೆ: ಮೂಡುಬಿದರೆ ಮತ್ತು ಕಡಬ
* ಬೆಂಗಳೂರು ನಗರ ಜಿಲ್ಲೆ: ಯಲಹಂಕ

* ವಿಜಯಪುರ ಜಿಲ್ಲೆ: ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರಹಿಪ್ಪರಗಿ, ತಾಳಿಕೋಟೆ, ಚಡಚಣ ಮತ್ತು ಕೋಲ್ಹಾರ

* ಹಾವೇರಿ ಜಿಲ್ಲೆ: ರಟ್ಟೀಹಳ್ಳಿ
* ಮೈಸೂರು ಜಿಲ್ಲೆ: ಸರಗೂರು
* ಚಿಕ್ಕಮಗಳೂರು ಜಿಲ್ಲೆ: ಅಜ್ಜಂಪುರ
* ಉತ್ತರ ಕನ್ನಡ ಜಿಲ್ಲೆ: ದಾಂಡೇಲಿ
* ಕೋಲಾರ ಜಿಲ್ಲೆ: ಕೆಜಿಎಫ್‌

* ಬಳ್ಳಾರಿ ಜಿಲ್ಲೆ: ಕುರುಗೋಡು, ಕೊಟ್ಟೂರು ಮತ್ತು ಕಂಪ್ಲಿ
* ಧಾರವಾಡ ಜಿಲ್ಲೆ: ಅಣ್ಣಿಗೇರಿ, ಅಳ್ನಾವರ ಮತ್ತು ಹುಬ್ಬಳ್ಳಿ ನಗರ
* ಗದಗ ಜಿಲ್ಲೆ: ಗಜೇಂದ್ರಗಡ ಮತ್ತು ಲಕ್ಷ್ಮೇಶ್ವರ
* ಕಲಬುರಗಿ ಜಿಲ್ಲೆ: ಕಾಳಗಿ, ಕಮಲಾಪುರ, ಯಡ್ರಾವಿ ಮತ್ತು ಶಹಾಬಾದ್‌
* ಯಾದಗಿರಿ ಜಿಲ್ಲೆ: ಹುಣಸಗಿ, ವಡಗೆರೆ ಮತ್ತು ಗುರುಮಿಟ್ಕಲ್‌

ಪಂಚರಾಜ್ಯಗಳ ಚುನಾವಣಾ ಫಲಿತಾಂಶ: ಬಿಜೆಪಿ ಮೇಲುಗೈ

ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ನೋಟು ರದ್ದತಿ ನಂತರ ಮೋದಿ ಅವರ ಮೇಲೆ ಜನರ ವಿಶ್ವಾಸ ಹೇಗಿರಲಿದೆ ಎಂಬುದರ ಬಗ್ಗೆ ಫಲಿತಾಂಶ ತೀವ್ರ ಕುತೂಹಲವನ್ನು ಕೆರಳಿಸಿತ್ತು. ನರೇಂದ್ರಮೋದಿ ನೇತೃತ್ವದ ಬಿಜೆಪಿ ಉತ್ತರಪ್ರದೇಶ, ಉತ್ತರಾಖಂಡ್`ನಲ್ಲಿ ಐತಿಹಾಸಿಕ ಜಯ ದಾಖಲಿಸಿದೆ. ಕಾಂಗ್ರೆಸ್ ಪಂಜಾಬ್`ನಲ್ಲಿ ಗೆಲುವು ಸಾಧಿಸಿದೆ. ಗೋವಾ ಮತ್ತು ಮಣಿಪುರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಚುನಾವಣೆ ಫಲಿತಾಂಶ ಹೀಗಿದೆ:

ಉತ್ತರ ಪ್ರದೇಶ ಒಟ್ಟು ಸ್ಥಾನ: 403, ಬಿಜೆಪಿ 325, ಎಸ್.ಪಿ-ಕಾಂಗ್ರೆಸ್-54, ಬಿಎಸ್ಪಿ-19, ಇತರೆ-05

ಪಂಜಾಬ್ ಒಟ್ಟು ಸ್ಥಾನ 117: ಕಾಂಗ್ರೆಸ್ 77, ಆಪ್ ಪಕ್ಷ -20, ಬಿಜೆಪಿ-ಅಕಾಲಿದಳ-18, ಇತರೆ-02

ಮಣಿಪುರ ಒಟ್ಟು ಸ್ಥಾನ 60: ಕಾಂಗ್ರೆಸ್ 27, ಬಿಜೆಪಿ 22, ಎನ್ ಫಿಎಫ್-04, ಇತರೆ-07

ಗೋವಾ ಒಟ್ಟು ಸ್ಥಾನ 40: ಕಾಂಗ್ರೆಸ್ 17, ಬಿಜೆಪಿ 13, ಇತರೆ 10.

ಉತ್ತರಖಂಡ್ ಒಟ್ಟು ಸ್ಥಾನ 70: ಜಿಜೆಪಿ 57, ಕಾಂಗ್ರೆಸ್ 11, ಇತರೆ 02.

ಚೂರು ಪಾರು:   

  • ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನೀಡುವ ‘ರೈತ ಅನ್ವೇಷಣಾ ಪ್ರಶಸ್ತಿ’ಗೆ ಜಮಖಂಡಿ ತಾಲ್ಲೂಕು ಹುಲ್ಯಾಳದ ರುದ್ರಪ್ಪ ಮಾಳಪ್ಪ ಜುಲ್ಫಿ ಆಯ್ಕೆಯಾಗಿದ್ದಾರೆ.
  • ಕೆ.ಎಚ್‌.ಪಾಟೀಲ ಪ್ರತಿಷ್ಠಾನ ನೀಡುವ ‘ಕೆ.ಎಚ್‌.ಪಾಟೀಲ ಗ್ರಾಮಾಭಿವೃದ್ಧಿ ರಾಷ್ಟ್ರೀಯ ಪ್ರಶಸ್ತಿ’ಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಹಕಾರಿ ಧುರೀಣ ಶಾಂತಾರಾಮ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ. ಸಹಕಾರ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಹೆಗಡೆ ಅವರಿಗೆ 2017ನೇ ಸಾಲಿನ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿಯು ₹ 5 ಲಕ್ಷ ನಗದು ಹಾಗೂ ನೆನಪಿನ ಕಾಣಿಕೆ ಒಳಗೊಂಡಿದೆ.

One Thought to “ಪ್ರಚಲಿತ ವಿದ್ಯಮಾನಗಳು-ಮಾರ್ಚ್,19,20,2017”

  1. Annappa S Barki

    supper Sir

Leave a Comment

This site uses Akismet to reduce spam. Learn how your comment data is processed.