ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -28
Question 1 |
1. ಇತ್ತೀಚೆಗೆ ಸುದ್ದಿಯಲ್ಲಿದ್ದ ಸಿಂಹಕಟಾಂಜನ ಶಾಸನಕ್ಕೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಗಮನಿಸಿ:
I) ಇದು ಕನ್ನಡದ ಪ್ರಾಚೀನ ಶಾಸನವೆನ್ನಲಾದ ಹಲ್ಮಿಡಿ ಶಾಸನಕ್ಕಿಂತಲೂ ಅತ್ಯಂತ ಹಳೆಯದಾದ ಶಾಸನ ಎನ್ನಲಾಗಿದೆ
II) ಈ ಶಾಸನವನ್ನು ಶಿವಮೊಗ್ಗ ಜಿಲ್ಲೆಯ ತಾಳಗುಂದದಲ್ಲಿ ಪತ್ತೆಹಚ್ಚಲಾಗಿದೆ
ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಎರಡು ಹೇಳಿಕೆ ಸರಿ | |
ಎರಡು ಹೇಳಿಕೆ ತಪ್ಪು |
ಕೇಂದ್ರ ಪುರಾತತ್ವ ಇಲಾಖೆಯ ನಿವೃತ್ತ ಅಧೀಕ್ಷಕ ಟಿ.ಎಂ. ಕೇಶವ ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದದಲ್ಲಿ ನಡೆಸಿದ ಅಧ್ಯಯನಯದಲ್ಲಿ ಸಿಂಹಕಟಾಂಜನ (ಶಾಸನ) ಲಭ್ಯವಾಗಿದೆ. ಅದರಲ್ಲಿ ವಜಿನಾಗ(ಯ್ಯ) ಎಂಬ ಅಂಬಿಗನಿಗೆ ಭೂಮಿಯನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ಬೆಳಕು ಚೆಲ್ಲುತ್ತದೆ ಎಂದು ಪುರಾತತ್ವ ಇಲಾಖೆ ಪ್ರಕಟಿಸಿದೆ. ಈ ಶಾಸನದಲ್ಲಿ ತುಂಡರಿಸಿದ ಏಳು ಸಾಲುಗಳಿವೆ. ಕೊಟ್ಟಾರ್, ನಾಲ್ಕು, ಬೊಯ್ಗರಾ, ನಾಗಣ, ಪುಲಿಂದಿಗೆ, ಕೊಳ್ಳೆ ಎಂಬ ಕನ್ನಡ ಶಬ್ದಗಳು ಸೇರಿದಂತೆ ಸಂಸ್ಕೃತ ಹಾಗೂ ಕನ್ನಡ ಶಬ್ದಗಳನ್ನು ಬಳಸಲಾಗಿದೆ. ಇದು ಕನ್ನಡದ ಅತ್ಯಂತ ಹಳೆಯದಾದ ಶಾಸನ ಎನ್ನಲಾಗಿದೆ.
Question 2 |
2. ಭಾರತ ಹಾಗೂ ಮಧ್ಯ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ವಿಮಾನ ನಿಲ್ದಾಣ ಯಾವುದು?
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | |
ಮಂಗಳೂರು ವಿಮಾನ ನಿಲ್ದಾಣ | |
ಬೆಳಗಾವಿ ವಿಮಾನ ನಿಲ್ದಾಣ | |
ಮೈಸೂರು ವಿಮಾನ ನಿಲ್ದಾಣ |
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರತ ಹಾಗೂ ಮಧ್ಯ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೆದರ್ಲೆಂಡ್ ನ ಆ್ಯಮ್ ಸ್ಟರ್ಡ್ಯಾಮ್ ನಲ್ಲಿ ನಡೆದ ವಿಶ್ವದ ಏರ್ಪೋರ್ಟ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಗಿದೆ. ಪ್ರಯಾಣಿಕರ ಅಭಿಪ್ರಾಯ ಪಡೆದು ಸಮೀಕ್ಷೆ ನಡೆಸಿ 2017ರ ಏರ್ಪೋರ್ಟ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಜುಲೈ 2016ರಿಂದ 2017ರವರೆಗೆ ಜಗತ್ತಿನ 550 ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಭವವನ್ನು ಸಂಗ್ರಹಿಸಿ ಈ ಸಮೀಕ್ಷೆ ಮಾಡಲಾಗಿದೆ. ಚೆಕ್ ಇನ್, ಅರೈವಲ್, ಟ್ರಾನ್ಸ್ ಫರ್, ಶಾಪಿಂಗ್, ಸೆಕ್ಯೂರಿಟಿ, ಇಮಿಗ್ರೇಶನ್ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
Question 3 |
3. Numbeo.com ಸಮೀಕ್ಷೆ ಪ್ರಕಾರ ದೇಶದಲ್ಲೇ ಗುಣಮಟ್ಟದ ಜೀವನ ಸಾಗಿಸಲು ಅತ್ಯಂತ ಪ್ರಶಸ್ತ ತಾಣವೆಂಬ ಗೌರವಕ್ಕೆ ಪಾತ್ರವಾಗಿರುವ ಕರ್ನಾಟಕದ ನಗರ ಯಾವುದು?
ಮಂಗಳೂರು | |
ಬೆಂಗಳೂರು | |
ಧಾರವಾಡ | |
ಮೈಸೂರು |
numbeo.com ವೆಬ್ ಸೈಟ್ ನಡೆಸಿದ ಸಮೀಕ್ಷೆಯಲ್ಲಿ ದೇಶದಲ್ಲೇ ಗುಣಮಟ್ಟದ ಜೀವನ ಸಾಗಿಸಲು ಅತ್ಯಂತ ಪ್ರಶಸ್ತ ತಾಣ ಎಂಬ ಪಟ್ಟ ರಾಜ್ಯದ ಮಂಗಳೂರಿಗೆ ಲಭಿಸಿದೆ. ಜತೆಗೆ ಜಾಗತಿಕ ಆರೋಗ್ಯ ಸೇವೆಗಳ ಪಟ್ಟಿಯಲ್ಲೂ ಮಂಗಳೂರಿಗೆ 12ನೇ ಸ್ಥಾನ ಲಭಿಸಿದೆ. ಆಸ್ಟ್ರೇಲಿಯಾದ ಕ್ಯಾನ್ ಬೆರ್ರಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವೆನಿಜುವೆಲಾ 143ನೆ ಹಾಗೂ ಕೊನೆ ಸ್ಥಾನದಲ್ಲಿದೆ. ಏಷ್ಯಾದಲ್ಲಿ ಟರ್ಕಿಯ ಬುರ್ಸಾ ನಗರವನ್ನು ಹೊರತುಪಡಿಸಿದರೆ, ಮಂಗಳೂರು ಎರಡನೆ ಸ್ಥಾನದಲ್ಲಿದೆ.
Question 4 |
4. ರಾಜ್ಯ ಸರ್ಕಾರದ ಯೋಜನೆಗಳನ್ನು ಜನತೆಗೆ ತಿಳಿಸುವ ಸಲುವಾಗಿ ರಾಜ್ಯ ಸರ್ಕಾರ ಯಾವ ವೆಬ್ ಸೈಟ್ ಅನ್ನು ಆರಂಭಿಸಿದೆ?
ಪ್ರಗತಿ | |
ಪ್ರತಿಬಿಂಬ | |
ಚಂದನ | |
ಸಾಧನೆ |
ಸರ್ಕಾರದ ಯೋಜನೆ ಜನರಿಗೆ ತಿಳಿಸುವ ಸಲುವಾಗಿ ರಾಜ್ಯ ಸರ್ಕಾರ ಪ್ರತಿಬಿಂಬ ಎಂಬ ವೆಬ್ ತಾಣವನ್ನು ಆರಂಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಈ ವೆಬ್ ತಾಣಕ್ಕೆ ವಿಧಾನಸೌಧದ ಕಚೇರಿಯಲ್ಲಿ ಲೋಕಾರ್ಪಣೆ ಮಾಡಿದರು. ಪ್ರಗತಿಯ ಹೆಜ್ಜೆ ಗುರುತುಗಳನ್ನು ದಾಖಲಿಸುವ ತಾಣ ಇದಾಗಲಿದ್ದು, ಕರ್ನಾಟಕದ ಸರ್ಕಾರದ ಯೋಜನೆಗಳು, ಭಾಗ್ಯಗಳ ಸಂಪೂರ್ಣ ಮಾಹಿತಿ ಒಂದೇ ವೆಬ್ ತಾಣದಲ್ಲಿ ಸಿಗಲಿದೆ.
Question 5 |
5. ಗೊಮ್ಮಟೇಶ್ವರ ರೈಲು ರಾಜ್ಯದ ಯಾವ ಎರಡು ನಗರಗಳ ನಡುವೆ ಸಂಚರಿಸುತ್ತದೆ?
ಬೆಂಗಳೂರು-ಮಂಗಳೂರು | |
ಬೆಂಗಳೂರು-ಹಾಸನ | |
ಕಲ್ಬುರ್ಗಿ-ಬೆಂಗಳೂರು | |
ಬೆಂಗಳೂರು-ಕೊಯಮತ್ತೂರು |
ಮಂಗಳೂರು-ಬೆಂಗಳೂರು ರೈಲಿಗೆ ಗೊಮ್ಮಟೇಶ್ವರ ರೈಲು ಎಂದು ಹೆಸರಿಡಲಾಯಿತು. ಈ ರೈಲಿಗೆ ಹೇಮಾವತಿ, ಹಾಸನಾಂಬೆ ಅಥವಾ ಗೊಮ್ಮಟೇಶ್ವರ ಎಂದು ನಾಮಕರಣ ಮಾಡಬೇಕೆಂದು ಮನವಿ ಮಾಡಲಾಗಿತ್ತು. ಅಂತಿಮವಾಗಿ ಗೊಮ್ಮಟೇಶ್ವರ ಎಂದು ಹೆಸರಿಡಲಾಗಿದೆ.
Question 6 |
6. 2017-18ನೇ ಸಾಲಿನ ಬಜೆಟ್ನಲ್ಲಿ ಭೌಗೋಳಿಕ ಮತ್ತು ಆಡಳಿತಾತ್ಮಕ ಅಗತ್ಯಗಳ ಆಧಾರದಲ್ಲಿ ರಾಜ್ಯದ 21 ಜಿಲ್ಲೆಗಳಲ್ಲಿ ಎಷ್ಟು ಹೊಸ ತಾಲೂಕುಗಳನ್ನು ಘೋಷಣೆ ಮಾಡಲಾಗಿದೆ?
25 | |
39 | |
49 | |
51 |
ಮುಖ್ಯಮಂತ್ರಿ ಸಿದ್ದರಾಮಯ್ಯ 2017-18ನೆ ಸಾಲಿನ ಬಜೆಟ್ನಲ್ಲಿ ಭೌಗೋಳಿಕ ಮತ್ತು ಆಡಳಿತಾತ್ಮಕ ಅಗತ್ಯಗಳ ಆಧಾರದಲ್ಲಿ ರಾಜ್ಯದ 21 ಜಿಲ್ಲೆಗಳ 49 ಹೊಸ ತಾಲೂಕುಗಳನ್ನು ಘೋಷಣೆ ಮಾಡಿದ್ದಾರೆ.
Question 7 |
7. ಇತ್ತೀಚೆಗೆ ನಿಧನರಾದ ಫ್ರೊ. ಇಟಗಿ ಈರಣ್ಣರವರು ಏನೆಂದು ಪ್ರಸಿದ್ದರಾಗಿದ್ದರು?
ಕನ್ನಡದ ಮೊದಲ ಶಾಯಿರಿ ಕವಿ | |
ಕನ್ನಡದ ಮೊದಲ ಚುಟುಕು ಕವಿ | |
ಕನ್ನಡದ ಮೊದಲ ಅನುವಾದಕ ಕವಿ | |
ದಲಿತ ಕವಿ |
ಕನ್ನಡ ಮೊದಲ ಶಾಯಿರಿ ಕವಿ ವಿ ಪ್ರೊ. ಇಟಗಿ ಈರಣ್ಣನವರು ನಿಧನರಾಗಿದ್ದಾರೆ. ಕನ್ನಡ ಉಪನ್ಯಾಸಕರಾಗಿ, ಕವಿಯಾಗಿ, ನಾಟಕಕಾರರಾಗಿ ರಂಗಭೂಮಿಗೆ ನಾನು ನೀನು ರಾಜಿ ಏನ್ ಮಾಡ್ತಾನ್ ಖಾಜಿ, ರಾವಿ ನದಿಯ ದಂಡೆ, ತಾಜ್ ಮಹಲ್ ಟೆಂಡರ್, ಯಹೂದಿ ಹುಡುಗಿ ನಾಟಕಗಳನ್ನು ಅನುವಾದ ಮಾಡಿ , ಶಾಯರಿಗಳನ್ನು ಕನ್ನಡಕ್ಕೆ ಪರಿಚಯಿಸಿದ ಹೆಗ್ಗಳಿಕೆ ಈರಣ್ಣನವರದು. ರೂಪಾಂತರದ ಹಿತೈಷಿಗಳಾದ ಈರಣ್ಣನವರು. ಶಾಹಿರಿ ಮೂಲಕ ಈರಣ್ಣ ಕನ್ನಡ ಸಾರಸ್ವತ ಲೋಕದಲ್ಲಿ ಗಮನಾರ್ಹ ಕೆಲಸ ಮಾಡಿದ್ದಾರೆ.
Question 8 |
8. ಕರ್ನಾಟಕ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಗಮನಿಸಿ:
I) ಕರ್ನಾಟಕ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವನ್ನು ಪರಿಸರ ಕಾಯಿದೆ-1986ರ ಅಡಿಯಲ್ಲಿ ರಚಿಸಲಾಗಿದೆ.
II) ರಾಜ್ಯ ಪರಿಸರ ಮತ್ತು ಅರಣ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಪ್ರಾಧಿಕಾರದ ಮುಖ್ಯಸ್ಥರಾಗಿದ್ದಾರೆ.
III) ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ
ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಹೇಳಿಕೆ ಒಂದು ಮತ್ತು ಎರಡು ಸರಿ | |
ಮೇಲಿನ ಎಲ್ಲವೂ ಸರಿ |
ಕರ್ನಾಟಕ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವನ್ನು ಪರಿಸರ ಕಾಯಿದೆ-1986ರ ಅಡಿಯಲ್ಲಿ ರಚಿಸಲಾಗಿದೆ. ರಾಜ್ಯ ಪರಿಸರ ಮತ್ತು ಅರಣ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಪ್ರಾಧಿಕಾರದ ಮುಖ್ಯಸ್ಥರಾಗಿದ್ದಾರೆ. ಇದರ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ.
Question 9 |
9. 2017-18ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯದಲ್ಲಿ ಕೂಲಿದರವನ್ನು ಎಷ್ಟಕ್ಕೆ ನಿಗಧಿಪಡಿಸಲಾಗಿದೆ?
ರೂ 224 | |
ರೂ 236 | |
ರೂ 239 | |
ರೂ 242 |
Question 10 |
10. ‘ಕೆ.ಎಚ್.ಪಾಟೀಲ ಗ್ರಾಮಾಭಿವೃದ್ಧಿ ರಾಷ್ಟ್ರೀಯ ಪ್ರಶಸ್ತಿ’ಗೆ ಈ ಕೆಳಗಿನ ಯಾರನ್ನು ಆಯ್ಕೆ ಮಾಡಲಾಗಿದೆ?
ಹೆಚ್, ಕೆ. ಪಾಟೀಲ್ | |
ಶಾಂತರಾಮ ಹೆಗಡೆ | |
ವಿರೇಂದ್ರ ಹೆಗಡೆ | |
ಸುಧೀಂದ್ರ ಕುಲಕರ್ಣಿ |
ಕೆ.ಎಚ್.ಪಾಟೀಲ ಪ್ರತಿಷ್ಠಾನ ನೀಡುವ ‘ಕೆ.ಎಚ್.ಪಾಟೀಲ ಗ್ರಾಮಾಭಿವೃದ್ಧಿ ರಾಷ್ಟ್ರೀಯ ಪ್ರಶಸ್ತಿ’ಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಹಕಾರಿ ಧುರೀಣ ಶಾಂತಾರಾಮ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ. ಸಹಕಾರ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಹೆಗಡೆ ಅವರಿಗೆ 2017ನೇ ಸಾಲಿನ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿಯು ₹ 5 ಲಕ್ಷ ನಗದು ಹಾಗೂ ನೆನಪಿನ ಕಾಣಿಕೆ ಒಳಗೊಂಡಿದೆ.
[button link=”http://www.karunaduexams.com/wp-content/uploads/2017/04/ರಾಜ್ಯ-ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-28.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
superb
Good exam
Nice superb sir thanks
super
June month current affairs
Super sir