ಬಂಗಾಳದಲ್ಲಿ 1.04 ಕೋಟಿ ಜನರು ಆರ್ಸನೆಕ್ ಕಲುಷಿತಕ್ಕೆ ತುತ್ತು: ವರದಿ

ಪಶ್ಚಿಮ ಬಂಗಾಳದಲ್ಲಿ ದೇಶದಲ್ಲೆ ಅತಿ ಹೆಚ್ಚು ಜನರು ಆರ್ಸನಿಕ್ ಕಲುಷಿತದಿಂದ ಭಾದಿತರಿರುವುದಾಗಿ ಲೋಕಸಭೆಯಲ್ಲಿ ಮಂಡಿಸಿದ ವರದಿಯೊಂದರಲ್ಲಿ ಹೇಳಲಾಗಿದೆ. ಪಶ್ಚಿಮ ಬಂಗಾಳದ ಎಂಟು ಜಿಲ್ಲೆಗಳ 83 ತಾಲ್ಲೂಕಿನ ಅಂತರ್ಜಲ ಆರ್ಸನೆಕ್ ರಾಸಾಯನಿಕ ಅಂಶದಿಂದ ಕಲುಷಿತಗೊಂಡಿದೆ ಎನ್ನಲಾಗಿದೆ. ಆರ್ಸೆನಿಕ್ ಗಂಭೀರತೆಯನ್ನು ನಿರ್ಮೂಲನೆ ಮಾಡಲು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಆದರೂ ಇನ್ನೂ ಸಾಕಷ್ಟು ಮಾಡಬೇಕಿದೆ. ಇಲ್ಲಿಯವರೆಗೆ ಶೇ 52% ಆರ್ಸೆನಿಕ್ ಭಾದಿತ ಪ್ರದೇಶಗಳಿಗೆ ಮಾತ್ರ ಶುದ್ದ ನೀರನ್ನು ಪೂರೈಸಲಾಗುತ್ತಿದೆ.

ಪ್ರಮುಖಾಂಶಗಳು:

  • ಮಾರ್ಚ್ 2017ರ ಹೊತ್ತಿಗೆ ದೇಶದಲ್ಲಿ ಒಟ್ಟಾರೆ 1.48 ಕೋಟಿ ಜನರು ಆರ್ಸೆನಿಕ್ ನಿಂದ ಭಾದಿತರಾಗಿದ್ದಾರೆ.
  • ಪಶ್ಚಿಮ ಬಂಗಾಳ ಒಂದರಲ್ಲೆ 1.04 ಕೋಟಿ ಜನರು ಆರ್ಸೆನಿಕ್ ಕಲುಷಿತ ನೀರಿಗೆ ತುತ್ತಾಗಿದ್ದು, ದೇಶದಲ್ಲೆ ಅತಿ ಹೆಚ್ಚು.
  • ಬಿಹಾರ್ (16.44 ಲಕ್ಷ) ಹಾಗೂ ಅಸ್ಸಾಂ (14.48 ಲಕ್ಷ) ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
  • ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಾರ ಕುಡಿಯುವ ನೀರಿನಲ್ಲಿ ಆರ್ಸೆನಿಕ್ ಮಿತಿ 0.1 m/litre.

ಆರ್ಸೆನಿಕ್ :

  • ಆರ್ಸೆನಿಕ್ ಭೂಮಿಯ ಹೊರಪದರದಲ್ಲಿರುವ ಒಂದು ನೈಸರ್ಗಿಕ ಅಂಶ. ಇದು ಗಾಳಿ, ನೀರು ಹಾಗೂ ಭೂಮಿಯಲ್ಲಿ ವ್ಯಾಪಕವಾಗಿ ಪಸರಿಸಿದೆ. ಆರ್ಸೆನಿಕ್ ಅಜೈವಿಕ ರೂಪದಲ್ಲಿ ಅತ್ಯಂತ ವಿಷಕಾರಿ.
  • ಆರ್ಸೆನಿಕ್ ಕಲುಷಿತ ನೀರನ್ನು ಕುಡಿಯಲು ಬಳಸುವುದು, ಆಹಾರ ಬೆಳೆಗಳನ್ನು ಬೆಳೆಯಲು ಬಳಸುವುದು ಹಾಗೂ ಆಹಾರ ತಯಾರಿಕೆಯಲ್ಲಿ ಬಳಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
  • ದೀರ್ಘಕಾಲದವರೆಗೆ ಆರ್ಸೆನಿಕ್ ಬಳಸುವುದರಿಂದ ಕ್ಯಾನ್ಸರ್ , ನರ ಸಂಬಂಧಿ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಚರ್ಮದ ಕಲೆಗಳು ಉಂಟಾಗುತ್ತದೆ.
  • ಗಂಗಾ ನದಿ ಭೂಮಿಯಲ್ಲಿ ಅತಿ ಆಳದ ಬೋರ್ ವೆಲ್ ಕೊರೆಸಿ ಕುಡಿಯಲು ಬಳಸುತ್ತಿರುವುದು ಪಶ್ಚಿಮ ಬಂಗಾಳದಲ್ಲಿ ಆರ್ಸೆನಿಕ್ ಭಾದಿತರ ಸಂಖ್ಯೆ ಹೆಚ್ಚಿದೆ.

ಕೇಂದ್ರ ಸರ್ಕಾರದಿಂದ ಶೀಘ್ರದಲ್ಲಿ ದೇಶದ ಮೊದಲ ಸನ್ನೆ ಭಾಷೆ ನಿಘಂಟು

ಕಿವುಡರು ಹಾಗೂ ಮಾತು ಬಾರದವರು ಬಳಸುವ ಸನ್ನೆ ಭಾಷೆಯಲ್ಲಿ ಐಕ್ಯತೆ ತರಲು ಕೇಂದ್ರ ಸರ್ಕಾರ ಅತಿ ಶೀಘ್ರದಲ್ಲಿ ದೇಶದ ಮೊದಲ ಸನ್ನೆ ಭಾಷೆ ನಿಘಂಟನ್ನು ಹೊರತರಲಿದೆ. ಭಾರತೀಯ ಸನ್ನೆ ಭಾಷೆ ಸಂಶೋಧನೆ ಮತ್ತು ತರಭೇತಿ ಸಂಸ್ಥೆ ಈ ನಿಘಂಟನ್ನು ಅಭಿವೃದ್ದಿಪಡಿಸಿದ್ದು, ವಿಡಿಯೋ ಹಾಗೈ ಮುದ್ರಿತ ವಿಧಾನದಲ್ಲಿ ಲಭ್ಯವಿರಲಿದೆ.

ಪ್ರಮುಖಾಂಶಗಳು:

  • ಶ್ರವಣ ದೋಷಿಗಳು ಹಾಗೂ ಮಾತು ಬಾರದವರು ಬಳಸುವ ಜನಪ್ರಿಯ ಗ್ರಾಫಿಕ್ ಚಿತ್ರಣಗಳನ್ನು ಈ ನಿಘಂಟು ಒಳಗೊಂಡಿರಲಿದೆ. ಅಲ್ಲದೆ ಕಾನೂನು, ತಾಂತ್ರಿಕ ಹಾಗೂ ವೈದ್ಯಕೀಯ ಪದಗಳನ್ನು ಒಳಗೊಂಡಿರಲಿದೆ.
  • ಶ್ರವಣ ದೋಷ ಮತ್ತು ಮೂಕತನದಿಂದ ಬಳಲುತ್ತಿರುವ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಸನ್ನೆ ಭಾಷೆಯ ಬಳಕೆಯನ್ನು ಪ್ರೋತ್ಸಾಹಿಸುವ ಮೂಲಕ ಸಂವಹನ ಕೊರತೆಯನ್ನು ನೀಗಿಸಲಿದೆ.
  • ಅಲ್ಲದೇ ಆಸ್ಪತ್ರೆ, ಬ್ಯಾಂಕ್, ನ್ಯಾಯಾಲಯ, ವಿಮಾನ ನಿಲ್ದಾಣಗಳಲ್ಲಿ ಸೇವೆಯನ್ನು ಒದಗಿಸಲು ಸಹಾಯವಾಗಲಿದೆ.

ಭಾರತೀಯ ಸನ್ನೆ ಭಾಷೆ ಸಂಶೋಧನೆ ಮತ್ತು ತರಭೇತಿ ಸಂಸ್ಥೆ:

ಭಾರತೀಯ ಸನ್ನೆ ಭಾಷೆ ಸಂಶೋಧನೆ ಮತ್ತು ತರಭೇತಿ ಸಂಸ್ಥೆ ಒಂದು ಸ್ವಾಯತತೆ ಸಂಸ್ಥೆಯಾಗಿದ್ದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ. ಸೊಸೈಟಿ ನೋಂದಣಿ ಕಾಯಿದೆಯಡಿ ಇದನ್ನು ಸ್ಥಾಪಿಸಲಾಗಿದೆ. ಭಾರತೀಯ ಸನ್ನೆ ಭಾಷೆಯಲ್ಲಿ ಸಂಶೋಧನೆ ಕೈಗೊಂಡು ಅಭಿವೃದ್ದಿಪಡಿಸುವುದು ಸಂಸ್ಥೆಯ ಮುಖ್ಯ ಉದ್ದೇಶ.

Leave a Comment

This site uses Akismet to reduce spam. Learn how your comment data is processed.