ಗುಜರಾತ್ ಪ್ರಾಣಿ ಸಂರಕ್ಷಣೆ (ತಿದ್ದುಪಡಿ) ಮಸೂದೆ-2017

ಗುಜರಾತ್ ಪ್ರಾಣಿ ಸಂರಕ್ಷಣೆ (ತಿದ್ದುಪಡಿ) ಮಸೂದೆ-2017ಗೆ ಗುಜರಾತ್ ವಿಧಾನ ಸಭೆಯಲ್ಲಿ ಅನುಮೋದನೆ ದೊರೆತಿದೆ. ಈ ಮಸೂದೆಯು ಗುಜರಾತ್ ಪ್ರಾಣಿ ಸಂರಕ್ಷಣೆ ಕಾಯಿದೆ-1954ಕ್ಕೆ ತಿದ್ದುಪಡಿ ತರಲಿದೆ. ಆ ಮೂಲಕ ರಾಜ್ಯದಲ್ಲಿ ಗೋಹತ್ಯೆ ಮಾಡುವವರಿಗೆ ಕಠಿಣ ಶಿಕ್ಷೆ ಹಾಗೂ ಅಧಿಕ ದಂಡವನ್ನು ವಿಧಿಸಲು ಕಾಯಿದೆಯಡಿ ಅವಕಾಶ ಕಲ್ಪಿಸಲಾಗಿದೆ.

ಪ್ರಮುಖಾಂಶಗಳು:

  • ಗೋಹತ್ಯೆ ನಡೆಸುವುದು ಹಾಗೂ ಗೋಹತ್ಯೆಗೆ ಹಸುಗಳ ಸಾಗಾಣಿಕೆ ಮಾಡುವ ಅಪರಾಧಗಳಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವನ್ನು ಮಸೂದೆಯಡಿ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರದ ಅಧಿಕೃತ ಪ್ರಾಧಿಕಾರದಿಂದ ಅನುಮತಿ ಪಡೆದು ಹಸುಗಳ ಸಾಗಾಣಿಕ ಮಾಡಬಹುದು.
  • ಈ ಮುಂಚೆ 25 ಅಧಿಕಾರಿಗಳು ಅನುಮತಿ ನೀಡುವ ಅಧಿಕಾರವನ್ನು ಹೊಂದಿದ್ದರು, ಆದರೆ ಈಗ ಈ ಅಧಿಕಾರವನ್ನು 7 ಜನರಿಗೆ ಮಾತ್ರ ನೀಡಲಾಗಿದೆ.
  • ರಾತ್ರಿ ವೇಳೆ ಹಸುಗಳ ಸಾಗಾಣಿಕೆ ಮಾಡುವಂತಿಲ್ಲ.
  • ಕಾಯ್ದೆ ಉಲ್ಲಂಘಿಸಿದವರಿಗೆ ಕನಿಷ್ಠ 10 ವರ್ಷ ಜೈಲು ಶಿಕ್ಷೆಯಿಂದ ಹಿಡಿದು ಜೀವಾವಧಿವರೆಗೂ ಶಿಕ್ಷೆ ವಿಧಿಸಲು ಅವಕಾಶವಿದೆ. ಕಾನೂನುಬಾಹಿರವಾಗಿ ಹಸು, ಗೋಮಾಂಸ ಅಥವಾ ಗೋಮಾಂಸದ ಉತ್ಪನ್ನಗಳನ್ನು ಸಾಗಾಟ ಮಾಡುವವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಹಿಂದೆ ಮೂರು ವರ್ಷ ಮಾತ್ರ ಶಿಕ್ಷೆ ವಿಧಿಸಬಹುದಿತ್ತು.
  • ಹಸುಗಳ ಸಾಗಾಣಿಕೆ ಮಾಡಲು ಬಳಸುವ ವಾಹನಗಳನ್ನು ಸರ್ಕಾರ ಶಾಶ್ವತವಾಗಿ ವಶಕ್ಕೆ ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ ಆರು ತಿಂಗಳ ಕಾಲ ಮಾತ್ರ ಸರ್ಕಾರ ತನ್ನ ವಶಕ್ಕೆ ಪಡೆಯಬಹುದಿತ್ತು.

ಕ್ಯಾರಿ ಲ್ಯಾಮ್ ಹಾಂಕಾಂಗ್ ನ ಮೊದಲ ಮಹಿಳಾ ಸಿಇಓ

ಚೀನಾದ ವಿಶೇಷ ಆಡಳಿತ ಭಾಗವಾಗಿರುವ ಹಾಂಕಾಂಗ್ ನ ಮೊದಲ ಮಹಿಳಾ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕ್ಯಾರಿ ಲ್ಯಾಮ್ ಅವರು ನೇಮಕಗೊಂಡಿದ್ದಾರೆ. ಲ್ಯಾಮ್ ಅವರು ಜುಲೈ 1, 2017 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದು, ಲಿಯಾಂಗ್ ಚುನ್-ಯಿಂಗ್ ಅವರ ಉತ್ತರಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

  • ಮುಖ್ಯಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಲ್ಯಾಮ್ ಅವರು 777 ಮತಗಳನ್ನು ಪಡೆದುಕೊಂಡರೆ, ಅವರ ಪ್ರತಿ ಸ್ಪರ್ಧಿ 365 ಮತಗಳನ್ನು ಪಡೆಯುವಲ್ಲಿ ಶಕ್ತರಾದರು.
  • ಈ ನೇಮಕಾತಿಗೆ ಮುನ್ನ ಲ್ಯಾಮ್ ಅವರು ಹಾಂಕಾಂಗ್ ಎಸ್ಎಆರ್ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
  • ಹಾಂಕಾಂಗ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಂಕಾಂಗ್ ಸರ್ಕಾರದ ಪ್ರತಿನಿಧಿ ಹಾಗೂ ಮುಖ್ಯಸ್ಥರಾಗಿರಲ್ಲಿದ್ದಾರೆ.

ಕನ್ಹಾ ಹುಲಿ ಸಂರಕ್ಷಣಾ ವಲಯ ಅಧಿಕೃತ ಚಿನ್ಹೆ ಹೊಂದಿದ ದೇಶದ ಮೊದಲ ಹುಲಿ ಸಂರಕ್ಷಣಾ ವಲಯ

ಮಧ್ಯ ಪ್ರದೇಶದ ಕನ್ಹಾ ಹುಲಿ ಸಂರಕ್ಷಣಾ ವಲಯ ಅಧಿಕೃತ ಚಿನ್ಹೆ ಹೊಂದಿದ ದೇಶದ ಮೊದಲ ಹುಲಿ ಸಂರಕ್ಷಣಾ ವಲಯವೆಂಬ ಗೌರವಕ್ಕೆ ಪಾತ್ರವಾಗಿದೆ. “ಬೂರ್ಸಿಂಗ್ ದಿ ಬರಸಿಂಘ (Bhoorsingh the Barasingha)” ವನ್ನು ಇದರ ಅಧಿಕೃತ ಚಿನ್ಹೆ ಎಂದು ಘೋಷಿಸಲಾಗಿದೆ. ಈ ಚಿನ್ಹೆಯನ್ನು ಇನ್ನುಮುಂದೆ ಪಾರ್ಕಿನ ಜಾಹೀರಾತು ಪೋಸ್ಟರ್ ಗಳಲ್ಲಿ ಬಳಸಲಾಗುವುದು.

ಪ್ರಮುಖಾಂಶಗಳು:

  • ಯುವ ಜನತೆಗೆ ವನ್ಯಜೀವಿಗಳೊಂದಿಗೆ ಸಂಪರ್ಕ ಬೆಸೆಯುವ ಮೂಲಕ ಅವುಗಳ ಸಂರಕ್ಷಣೆಗೆ ಮುಂದಾಗಿಸುವ ಸಲುವಾಗಿ ಚಿನ್ಹೆಯನ್ನು ಅಳವಡಿಸಿಕೊಳ್ಳಲಾಗಿದೆ.
  • ಬರಸಿಂಗ ಅಥವಾ ಜೌಗು ಜಿಂಕೆ (Swamp Deer) ಬಗ್ಗೆ ಅರಿವು ಮೂಡಿಸಿ ಸಾಧ್ಯವಾದಷ್ಟು ಸಂರಕ್ಷಿಸುವುದು.
  • ಅಲ್ಲದೇ ಕನ್ಹಾ ಹುಲಿ ಸಂರಕ್ಷಣಾ ವಲಯಕ್ಕೂ ಇದೊಂದು ವಿಶಿಷ್ಠ ಗುರುತು ನೀಡಲಿದೆ.
  • ಈ ಚಿನ್ಹೆಯನ್ನು ಪ್ರಖ್ಯಾತ ವ್ಯಂಗಚಿತ್ರಕಾರ ರೋಹನ್ ಚಕ್ರವರ್ತಿ ಅವರು ರಚಿಸಿದ್ದಾರೆ.

ಬರಸಿಂಘ:

  • ಬರಸಿಂಘ ಅಥವಾ ಜೌಗು ಪ್ರದೇಶದ ಜಿಂಕೆಗಳು ಭಾರತ ಉಪಖಂಡದಲ್ಲಿ ಕಂಡುಬರುವ ಜಿಂಕೆ ಪ್ರಭೇದಗಳಲ್ಲಿ ಒಂದು. ಬರಸಿಂಘ ಮಧ್ಯ ಪ್ರದೇಶದ ರಾಜ್ಯ ಪ್ರಾಣಿ.
  • ಮಧ್ಯ ಪ್ರದೇಶದ ಕನ್ಹಾ ಹುಲಿ ಸಂರಕ್ಷಣಾ ತಾಣದಲ್ಲಿ ಮಾತ್ರ ಬರಸಿಂಘಗಳು ವಿಶ್ವದಲ್ಲಿ ಕಾಣ ಸಿಗುತ್ತವೆ.
  • ಐಯುಸಿನ್ ಕೆಂಪು ಪಟ್ಟಿಯಲ್ಲಿ ಇವುಗಳನ್ನು ಅಪಾಯದಲ್ಲಿರುವ ಪ್ರಭೇದಗಳು ಎಂದು ಗುರುತಿಸಲಾಗಿದೆ.

2 Thoughts to “ಪ್ರಚಲಿತ ವಿದ್ಯಮಾನಗಳು-ಮಾರ್ಚ್,30,31,2017”

  1. Ravi

    8971417123 add me

  2. Fakeerappa Mudaguri

    Good

Leave a Comment

This site uses Akismet to reduce spam. Learn how your comment data is processed.