ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,13,14,2017
Question 1 |
1. 2017 ಕಾಮನ್ ವೆಲ್ತ್ ದಿನದ ಧ್ಯೇಯವಾಕ್ಯ ___________?
A Peace Building Commonwealth | |
Commonwealth for Peace | |
Commonwealth for better tomorrow | |
Peace for Need |
ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಸೋಮವಾರದಂದು ಕಾಮನ್ ವೆಲ್ತ್ ದಿನವನ್ನು ಆಚರಿಸಲಾಗುತ್ತದೆ. ಕಾಮನ್ ವೆಲ್ತ್ ಒಕ್ಕೂಟದ ಧ್ಯೇಯವನ್ನು ವಿಶ್ವಕ್ಕೆ ಸಾರುವುದು ಈ ದಿನದ ಉದ್ದೇಶ ಈ ವರ್ಷ ಮಾರ್ಚ್ 13 ರಂದು ಕಾಮನ್ ವೆಲ್ತ್ ದಿನವನ್ನು ಆಚರಿಸಲಾಗುತ್ತಿದ್ದು, A Peace Building Commonwealth ಧ್ಯೇಯವಾಕ್ಯವಾಗಿದೆ.
Question 2 |
2. 2017 ಹೀರೋ ಇಂಡಿಯನ್ ಓಪನ್ ಗಾಲ್ಫ್ ಟೂರ್ನಮೆಂಟಿನಲ್ಲಿ ಪ್ರಶಸ್ತಿಯನ್ನು ಗೆದ್ದವರು ಯಾರು?
ಶಿವ್ ಚೌರಸಿಯ | |
ಚಿಕ್ಕರಂಗಪ್ಪ | |
ಚಿನ್ನಸ್ವಾಮಿ ಮುನಿಯಪ್ಪ | |
ಜ್ಯೋತಿ ರಾಧ್ವ |
ಶಿವ್ ಶಂಕರ್ ಪ್ರಸಾದ್ ಚೌರಸಿಯ ಅವರು 2017 2017 ಹೀರೋ ಇಂಡಿಯನ್ ಓಪನ್ ಗಾಲ್ಫ್ ಟೂರ್ನಮೆಂಟಿನಲ್ಲಿ ಪ್ರಶಸ್ತಿಯನ್ನು ಜಯಿಸಿದರು. ಚೌರಸಿಯ ಅವರಿಗಿದು 6ನೇ ಅಂತಾರಾಷ್ಟ್ರೀಯ ಪ್ರಶಸ್ತಿ.
Question 3 |
3. “ಔರಂಗಜೇಜ್: ದಿ ಮ್ಯಾನ್ ಅಂಡ್ ದಿ ಮಿಥ್ (Aurangzeb: The Man and The Myth)” ಪುಸ್ತಕದ ಲೇಖಕರು ________?
ಡೇವಿಡ್ ಬೆತ್ಲೆಮ್ | |
ಆಡ್ರೆ ಟ್ರಸ್ಚ್ಕೆ | |
ಸಂಪತ್ ಕುಮಾರ್ | |
ಕಿರಣ್ ಜೈನ್ |
ಪ್ರಖ್ಯಾತ ಇತಿಹಾಸಗಾರ ಆಡ್ರೆ ಟ್ರಸ್ಚ್ಕೆ ಅವರು “ಔರಂಗಜೇಜ್: ದಿ ಮ್ಯಾನ್ ಅಂಡ್ ದಿ ಮಿಥ್ (Aurangzeb: The Man and The Myth)” ಪುಸ್ತಕದ ಲೇಖಕರು. ಮೊಘಲ್ ಸಾಮ್ರಾಜ್ಯದ ಆರನೇ ದೊರೆ ಔರಂಗಜೇಬಗೆ ಸಂಬಂಧಿಸಿದ ಮಾಹಿತಿಯನ್ನು ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ.
Question 4 |
4. ಈ ಕೆಳಗಿನ ಯಾರು “2017 ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್” ನಲ್ಲಿ ಪ್ರಶಸ್ತಿ ಜಯಿಸಿದರು?
ಲೀ ಚಾಂಗ್ ವೇಯ್ | |
ಷಿ ಯೂಕಿ | |
ಲೂ ಕಾಯ್ | |
ಲೀ ಚಾಂಗ್ ಯೂಕಿ |
ಮಲೇಷಿಯಾದ ಲೀ ಚಾಂಗ್ ವೇಯ್ ಅವರು 2017 ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಚೀನಾದ ಷಿ ಯೂಕಿಯನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು.
Question 5 |
5. ಈ ಮುಂದಿನ ಯಾವ ದೇಶ 22ನೇ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನ ಅತಿಥ್ಯವಹಿಸಲಿದೆ?
ಭಾರತ | |
ಜಪಾನ್ | |
ಚೀನಾ | |
ಪಾಕಿಸ್ತಾನ |
22ನೇ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ಒಡಿಶಾದ ಭುಬನೇಶ್ವರದಲ್ಲಿರುವ ಕಳಿಂಗ ಕ್ರೀಡಾಂಗಣದಲ್ಲಿ ಜುಲೈ 2017ರಲ್ಲಿ ನಡೆಯಲಿದೆ. ಈ ಕ್ರೀಡಾಕೂಟ ಮೂರನೇ ಬಾರಿಗೆ ಭಾರತದಲ್ಲಿ ಆಯೋಜನೆಗೊಳ್ಳುತ್ತಿದೆ. ಈ ಹಿಂದೆ ನವದೆಹಲಿ 1989 ರಲ್ಲಿ ಹಾಗೂ ಪುಣೆ 2013ರಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. 45 ದೇಶಗಳಿಂದ ಸುಮಾರು 800 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
Question 6 |
6. “ವಿಶ್ವ ಕಿಡ್ನಿ ದಿನ”ವನ್ನು ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ _______ ರಂದು ಆಚರಿಸಲಾಗುತ್ತದೆ?
ಬುಧವಾರ | |
ಗುರುವಾರ | |
ಮಂಗಳವಾರ | |
ಶನಿವಾರ |
ಪ್ರತೀ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರವನ್ನು ಕಿಡ್ನಿ ದಿನವೆಂದು ಆಚರಿಸಲಾಗುತ್ತದೆ. ಈ ಬಾರಿ ಮಾರ್ಚ್ 9ರಂದು ಇದನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಇಂಟರ್ನ್ಯಾಷನಲ್ ಸೊಸೈಟಿ ಆಫ್ ನೆಫ್ರೋಲಜಿ ಮತ್ತು ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಕಿಡ್ನಿ ಫೌಂಡೇಷನ್ ಜಂಟಿ ಸಮಿತಿ ಮೊದಲ ಬಾರಿ ವಿಶ್ವ ಕಿಡ್ನಿ ದಿನವನ್ನು ಆರಂಭಿಸಿತ್ತು. ಕಿಡ್ನಿ ಸಂಬಂಧಿತ ಹೆಚ್ಚಿನ ಸಮಸ್ಯೆಗಳನ್ನು ಬಾರದಂತೆ ತಡೆಯಬಹುದು ಮತ್ತು ಹಲವು ಕಾಯಿಲೆಗಳನ್ನು ಔಷಧದಿಂದ ಗುಣಪಡಿಸಲು ಸಾಧ್ಯವಿದೆ. ಆದರೆ ಈ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅಭಿಯಾನಗಳನ್ನು ನಡೆಸಿ ಎಲ್ಲರಿಗೂ ಮನವರಿಕೆಯಾಗುವಂತೆ ಮಾಡುವುದು ವಿಶ್ವ ಕಿಡ್ನಿ ದಿನದ ಪ್ರಮುಖ ಉದ್ದೇಶವಾಗಿದೆ.
Question 7 |
7. ಈ ಕೆಳಗಿನ ಯಾರು ಭಾರತದ ನೂತನ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ?
ಅರುಣ್ ಜೇಟ್ಲಿ | |
ರಾಜನಾಥ್ ಸಿಂಗ್ | |
ನಿತಿನ್ ಗಡ್ಕರಿ | |
ಮುಖ್ತರ್ ಅಬ್ಬಾಸ್ ನಾಕ್ವಿ |
ಕೇಂದ್ರ ಹಣಕಾಸು ಹಾಗೂ ಕಾರ್ಪೋರೆಟ್ ವ್ಯವಹಾರ ಸಚಿವ ಅರುಣ್ ಜೇಟ್ಲಿ ಅವರು ರಕ್ಷಣಾ ಸಚಿವರಾಗಿ ಹೆಚ್ಚುವರಿ ಅಧಿಕಾರವನ್ನು ವಹಿಸಿಕೊಂಡರು. ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮನೋಹರ್ ಪಣಿಕ್ಕರ್ ಅವರಿಂದ ತೆರವಾಗಿದ್ದ ಸ್ಥಾನವನ್ನು ಜೇಟ್ಲಿ ತುಂಬಿದ್ದಾರೆ.
Question 8 |
8. “2017 ವಿಶ್ವ ಗ್ರಾಹಕರ ಹಕ್ಕುಗಳ ದಿನ (World Consumer Rights Day)” ಧ್ಯೇಯವಾಕ್ಯ ________?
Building a Digital World Consumers can Trust | |
Consumer Rights for Corruption free Society | |
Our Consumers Our Rights | |
Ask your Rights |
ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನು ಮಾರ್ಚ್ 15 ರಂದು ಆಚರಿಸಲಾಗುತ್ತದೆ. Building a Digital World Consumers can Trust ಇದು ಈ ವರ್ಷದ ಧ್ಯೇಯವಾಕ್ಯ.
Question 9 |
9. ದೇಶದ ಅತಿ ದೊಡ್ಡ ತೇಲುವ ಸೌರ ವಿದ್ಯುತ್ ಘಟಕವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?
ಕೇರಳ | |
ಮಹಾರಾಷ್ಟ್ರ | |
ಗುಜರಾತ್ | |
ಮಧ್ಯ ಪ್ರದೇಶ |
ದೇಶದ ಅತಿ ದೊಡ್ಡ ತೇಲುವ ಸೌರ ವಿದ್ಯುತ್ ಘಟಕವನ್ನು ಕೇರಳದಲ್ಲಿ ಸ್ಥಾಪಿಸಲಾಗಿದೆ. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ ಈ ಸೌರ ಘಟಕವನ್ನು ಸ್ಥಾಪಿಸಿದೆ.
Question 10 |
10. ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
ಮನ್ಹರ್ ವಾಲ್ಜಿ ಬಾಯ್ ಝಲ | |
ಕಿಶೋರ್ ದೇಶಪಾಂಡೆ | |
ಚರಣ್ ಚಂದ್ರ | |
ಅರುಣ್ ಉಪಾಧ್ಯಯ |
ಗುಜರಾತ್ ನ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಮನ್ಹರ್ ವಾಲ್ಜಿ ಬಾಯ್ ಝಲ ಅವರನ್ನು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
[button link=”http://www.karunaduexams.com/wp-content/uploads/2017/04/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್13142017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
sudharanik463@gmail.com
Comment
Comment
Nice
sir KAS phaty karmad bagge vivarne kaodi sir
Tq sir
good sir,KAS related docs upload madi sir