ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,11,12,2017
Question 1 |
1. ‘ವಿಶ್ವ ಸೈಬರ್ ಸೆನ್ಸರ್ ಷಿಪ್ ವಿರೋಧಿ ದಿನ’ ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಮಾರ್ಚ್ 10 | |
ಮಾರ್ಚ್ 11 | |
ಮಾರ್ಚ್ 12 | |
ಮಾರ್ಚ್ 13 |
Question 2 |
2. ಸಂತೋಷ್ ಟ್ರೋಫಿ ಫುಟ್ ಬಾಲ್ ಟೂರ್ನಮೆಂಟ್-2017 ನಲ್ಲಿ ಚಾಂಪಿಯನ್ನಾಗಿ ಹೊರಹೊಮ್ಮಿದ ಭಾರತದ ತಂಡ ಯಾವುದು?
ಪಂಜಾಬ್ | |
ಬಂಗಾಳ | |
ರೈಲ್ವೇಸ್ | |
ಮುಂಬೈ |
Question 3 |
3. ಗಡಿ ಸಂರಕ್ಷಣೆ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರಕ್ಕೆ ಯಾವ ಸಮಿತಿಯನ್ನು ರಚಿಸಿತ್ತು?
ಎಸ್.ಜೆ.ಠಾಕೂರ್ ಸಮಿತಿ | |
ಜೆ.ಜೆ. ಚಟರ್ಜಿ ಸಮಿತಿ | |
ನಾಗೇಂದ್ರ ಸಮಿತಿ | |
ಮಧುಕರ್ ಗುಪ್ತ ಸಮಿತಿ |
ಭಾರತ-ಪಾಕಿಸ್ತಾನ ದೇಶದ ಗಡಿಯಲ್ಲಿ ಸುರಕ್ಷತೆ ಹೆಚ್ಚಿಸಲು ಮತ್ತು ಪ್ರಸ್ಥಾವಿತ ತಂತಿ ಬೇಲಿಯ ಸಾಧಕ-ಬಾಧಕಗಳನ್ನು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಮಧುಕರ್ ಗುಪ್ತ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಸದ್ಯ ಈ ಸಮಿತಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಗಡಿ ಸಂರಕ್ಷಣೆಯಲ್ಲಿ ಮೂಲಭೂತ ಸೌಕರ್ಯ, ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯಗಳು, ಗಡಿಯಲ್ಲಿ ಸೈನ್ಯದ ಜಮಾವಣೆ ಮತ್ತು ಗಡಿ ರಕ್ಷಣೆಯಲ್ಲಿ ಉದ್ಭವವಾಗುವಂತ ಸಮಸ್ಯಗಳ ಬಗ್ಗೆ ಸಮಿತಿ ದೀರ್ಘವಾದ ವರದಿ ನೀಡಿದೆ.
Question 4 |
4. ಉದ್ಯೋಗದಲ್ಲಿ ಆರೋಗ್ಯ ಮತ್ತು ರಕ್ಷಣೆ ಬಗ್ಗೆ “ಅಂತರರಾಷ್ಟ್ರೀಯ ವಿಷನ್ ಜೀರೋ” ಸಮ್ಮೇಳನವನ್ನು ಯಾವ ನಗರದಲ್ಲಿ ಆಯೋಜಿಸಲಾಗಿತ್ತು?
ಬೆಂಗಳೂರು | |
ದೆಹಲಿ | |
ಗಾಂಧಿನಗರ | |
ಪುಣೆ |
ಉದ್ಯೋಗದಲ್ಲಿ ಆರೋಗ್ಯ ಮತ್ತು ರಕ್ಷಣೆ ಬಗ್ಗೆ “ಅಂತರರಾಷ್ಟ್ರೀಯ ವಿಷನ್ ಜೀರೋ” ಸಮ್ಮೇಳನವನ್ನು ದೆಹಲಿಯಲ್ಲಿ ಆಯೋಜಿಸಲಾಗಿತ್ತು. ಉದ್ಯೋಗದ ಸ್ಥಳದಲ್ಲಿ ಆರೋಗ್ಯ ಮತ್ತು ರಕ್ಷಣೆ ಉತ್ತೇಜಿಸುವ ಸಲುವಾಗಿ ಈ ಸಮ್ಮೇಳನದಲ್ಲಿ ಮಾಹಿತಿ ವಿನಿಮಯ ಮತ್ತು ಅನುಭವ ಹಂಚಿಕೊಳ್ಳಲು ವೇದಿಕೆಯಾಗಿದೆ.
Question 5 |
5. ಮಹಿಳೆಯರ ಸುರಕ್ಷತೆಗಾಗಿ “ಅಮ್ಮಾವಿನ್ ಆರನ್” (Ammavin Aran) ಎಂಬ ರಕ್ಷಣಾ ಆ್ಯಪ್ ನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?
ಕೇರಳ | |
ತಮಿಳುನಾಡು | |
ಮಹಾರಾಷ್ಟ್ರ | |
ಗುಜರಾತ್ |
ತಮಿಳುನಾಡಿನ ಎಐಎಡಿಎಂಕೆ ಯ ಮಾಹಿತಿ ತಂತ್ರಜ್ಞಾನ ಅಂಗ ಸಂಸ್ಥೆ ಮಹಿಳೆಯರ ಸುರಕ್ಷತೆಗಾಗಿ “ಅಮ್ಮಾವಿನ್ ಆರನ್” (Ammavin Aran) ಎಂಬ ರಕ್ಷಣಾ ಆ್ಯಪ್ ನ್ನು ಪ್ರಾರಂಭಿಸಿದೆ. ಈ ಆ್ಯಪ್ ನಲ್ಲಿ ಬಳಕೆದಾರರಿಗೆ ಹತ್ತಿರದ ಆರಕ್ಷಕ ಠಾಣೆಯ ಮತ್ತು ಆಸ್ಪತ್ರೆ ದೂರವಾಣಿ ಸಂಖ್ಯೆ ಮತ್ತು ಭೂಪಟದ ಮಾಹಿತಿ ನೀಡುತ್ತದೆ. ಯಾವುದೇ ಅಹಿತಕರ ಸನ್ನಿವೇಶದಲ್ಲಿ ದೊಡ್ಡದಾದ ಶಬ್ಧ ಮಾಡುವ ವ್ಯವಸ್ಥೆಯನ್ನು ಈ ಆ್ಯಪ್ ನಲ್ಲಿ ಕಲ್ಪಿಸಲಾಗಿದೆ.
Question 6 |
6. ಮಹಿಳಾ ಉದ್ಯಮಿಗಳಿಗೆ ಬಂಡವಾಳ ಒದಗಿಸುವ ಸಲುವಾಗಿ Idea2POC ಎಂಬ ಅನುದಾನ ವ್ಯವಸ್ಥೆಯನ್ನು ಕಲ್ಪಿಸಿದ ರಾಜ್ಯ ಯಾವುದು?
ಗುಜರಾತ್ | |
ಮಹಾರಾಷ್ಟ್ರ | |
ರಾಜಸ್ತಾನ | |
ಕರ್ನಾಟಕ |
ಮಹಿಳಾ ಉದ್ಯಮಿಗಳಿಗೆ ಬಂಡವಾಳ ಒದಗಿಸುವ ಸಲುವಾಗಿ ರೂ. 10 ಕೋಟಿಯ Idea2POC ಎಂಬ ಅನುದಾನ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಪ್ರಾರಂಭಿಸಿದೆ. ಈ ಯೋಜನೆಯಡಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಬಯೋಟೆಕ್ನಾಲಜಿ ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆ ರೂ. 50 ಲಕ್ಷದವರೆಗೆ ಹೊಸ ಅನ್ವೇಷಣೆ ಕೈಗೊಳ್ಳುವ ಮಹಿಳಾ ಉದ್ಯಮಿಗಳಿಗೆ ಅನುದಾನ ಒದಗಿಸಲಿದೆ.
Question 7 |
7. ಗ್ರಾಮೀಣ ಬಡ ಜನರಿಗಾಗಿ “ಆದರ್ಶ್ ಗ್ರಾಮ ಯೋಜನೆ” ಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?
ಅರುಣಾಚಲ ಪ್ರದೇಶ | |
ಕರ್ನಾಟಕ | |
ಉತ್ತರ ಪ್ರದೇಶ | |
ಒಡಿಸ್ಸಾ |
ಅರುಣಾಚಲ ಪ್ರದೇಶ ರಾಜ್ಯ ಸರ್ಕಾರ ಗ್ರಾಮೀಣ ಬಡ ಜನರಿಗಾಗಿ “ಆದರ್ಶ್ ಗ್ರಾಮ ಯೋಜನೆ” ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ತನ್ನ ರಾಜ್ಯದ ಗ್ರಾಮೀಣ ಭಾಗದ ಬಡ ಜನರ ಕಲ್ಯಾಣ ಈ ಯೋಜನೆಯ ಮೂಲ ಉದ್ದೇಶ. 2017-18 ರಲ್ಲಿ ಸುಮಾರು 123 ಗ್ರಾಮಗಳನ್ನು ಆದರ್ಶ ಗ್ರಾಮಗಳನ್ನಾಗಿ ಪರಿವರ್ತಿಸುವುದು ಈ ಯೋಜನೆಯ ಧ್ಯೇಯವಾಗಿದೆ. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಉದ್ಯೋಗ ಅವಕಾಶ ಮತ್ತು ಸಮುದಾಯ ಆಸ್ತಿ ನಿರ್ಮಾಣ ಮಾಡುವುದಕ್ಕಾಗಿ ಸುಮಾರು ರೂ. 93 ಕೋಟಿಗಳನ್ನು ಮೀಸಲಿರಿಸಿದೆ.
Question 8 |
8. ದೇಶದಲ್ಲಿ ಬ್ಲೂ ರೆವಲ್ಯೂಷನ್ ಸಾಧಿಸುವುದಕ್ಕಾಗಿ ಕೇಂದ್ರ ಕೃಷಿ ಸಚಿವಾಲಯ ಯಾವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ?
ಮಿಷನ್ ಬ್ಲೂ ಲೈಫ್ | |
ಮಿಷನ್ ಫಿಂಗರ್ ಲಿಂಗ್ | |
ಓಷನ್ ಫಿಂಗರ್ ಲಿಂಗ್ | |
ನ್ಯಾಷನಲ್ ಬ್ಲೂ ಲೈಫ್ |
Question 9 |
9. ಕೆಳಗಿನ ಹೇಳಿಕೆಗಳನ್ನು ಗಮನಿಸಿ:
1 ಕರ್ನಾಟಕ ಸರ್ಕಾರ “ನಮ್ಮ (ಇಂದಿರಾ) ಕ್ಯಾಂಟೀನ್“ನ್ನು ರಾಜ್ಯದೆಲ್ಲೆಡೆ ಪ್ರಾರಂಭಿಸಲಿದೆ.
2 ತಮಿಳುನಾಡು ಸರ್ಕಾರ “ಅಮ್ಮಾ ಕ್ಯಾಂಟೀನ್” ನ್ನು ರಾಜ್ಯದೆಲ್ಲೆಡೆ ಪ್ರಾರಂಭಿಸಿದೆ
ಹೇಳಿಕೆ 1 ಮಾತ್ರ ಸರಿಯಾಗಿದೆ | |
ಹೇಳಿಕೆ 2 ಮಾತ್ರ ಸರಿಯಾಗಿದೆ | |
ಹೇಳಿಕೆ 1 ಮತ್ತು 2 ಸರಿಯಾಗಿದೆ | |
ಹೇಳಿಕೆ 1 ಮತ್ತು 2 ತಪ್ಪಾಗಿದೆ |
Question 10 |
10. “Crime and Criminal Tracking Network & Systems (CCTNS)” ನೊಂದಿಗೆ ಸಂಪರ್ಕ ಹೊಂದಿದ ಭಾರತದ ಪ್ರಪ್ರಥಮ ಪೊಲೀಸ್ ಠಾಣೆ ಯಾವ ನಗರದಲ್ಲಿದೆ?
ಬೆಂಗಳೂರು | |
ಹೈದರಾಬಾದ್ | |
ಶಿಮ್ಲಾ | |
ಮುಂಬೈ |
ಹಿಮಾಚಲ ಪ್ರದೇಶದ ಶಿಮ್ಲಾ ನಗರದ ಸಂಜೋಲಿ ಪೊಲೀಸ್ ಠಾಣೆ ದೇಶವ್ಯಾಪಿ ಆನ್ ಲೈನ್ ವ್ಯವಸ್ಥೆಯಾದ “Crime and Criminal Tracking Network & Systems (CCTNS)” ನೊಂದಿಗೆ ಸಂಪರ್ಕ ಹೊಂದಿದ ಭಾರತದ ಪ್ರಪ್ರಥಮ ಪೊಲೀಸ್ ಠಾಣೆಯಾಗಿದೆ. ಈ ವ್ಯವಸ್ಥೆಯಡಿ ಸಾರ್ವಜನಿಕರು ಆನ್ ಲೈನ್/ಆಫ್ ಲೈನ್ ಮುಖೇನ ದೂರು ದಾಖಲಿಸಲು, ಉದ್ಯೋಗಾಕಾಂಕ್ಷಿಗಳ ಪೊಲೀಸ್ ಸತ್ಯಾಪನೆ ಮಾಡಲು, ಬಾಡಿಗೆದಾರರ ನಡವಳಿ ಪ್ರಮಾಣಪತ್ರ ಪಡೆಯಲು ಬಳಸಬಹುದಾಗಿದೆ.
[button link=”http://www.karunaduexams.com/wp-content/uploads/2017/04/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್11122017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ