ಪಿ. ವಿ. ಸಿಂಧು ಮುಡಿಗೆ ಇಂಡಿಯಾ ಓಪನ್ ಸೂಪರ್ ಸರಣಿ ಪ್ರಶಸ್ತಿ
ಓಲಂಪಿಕ್ ಪದಕ ವಿಜೇತೆ ಭಾರತದ ಉದಯೋನ್ಮುಖ ಆಟಗಾರ್ತಿ ಪಿ.ವಿ. ಸಿಂಧು ಅವರು ಇಂಡಿಯಾ ಓಪನ್ ಸೂಪರ್ ಸರಣಿಯ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು.
ಸಿರಿಪೋರ್ಟ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು 21–19, 21–16ರ ನೇರ ಗೇಮ್ಗಳಿಂದ ಸ್ಪೇನ್ನ ಕ್ಯಾರೊಲಿನಾ ಮರಿನ್ ಅವರ ವಿರುದ್ಧ ಜಯಿಸಿದರು.
ಪುರುಷರ ಸಿಂಗಲ್ಸ್ ನಲ್ಲಿ ವಿಕ್ಟರ್ಗೆ ಪ್ರಶಸ್ತಿ:
ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಡೆನ್ಮಾರ್ಕಿನ ವಿಕ್ಟರ್ ಅಕ್ಸೆಲ್ಸನ್ 21–13, 21–10 ನೇರ ಗೇಮ್ಗಳಿಂದ ಚೈನಿಸ್ ತೈಪೆಯ ಟೀನ್ ಚೆನ್ ಚೌ ಅವರನ್ನು ಸೋಲಿಸಿದರು.
ಡಬಲ್ಸ್ಪ್ರಶಸ್ತಿ:
ಪುರುಷರ ಡಬಲ್ಸ್ನಲ್ಲಿ ಇಂಡೋನೆಷ್ಯಾದ ಜೋಡಿ ಮಾರ್ಕಸ್ ಫರ್ನಾಲ್ಡಿ ಗಿಡಾನ್ ಮತ್ತು ಕೆವಿನ್ ಸಂಜಯಾ ಸುಕಾಮುಲ್ಜೊ 21–11, 21–15ರಿಂದ ಆರನೇ ಶ್ರೇಯಾಂಕದ ರಿಕಿ ಕರುಂದಾಸುವಾರ್ಡಿ ಮತ್ತು ಅಂಗಾ ಪ್ರತಾಮಾ ವಿರುದ್ಧ ಜಯ ಗಳಿಸಿದರು.
ಮಹಿಳೆಯರಡಬ್ಬಲ್ಸ್:
ಮಹಿಳೆಯರ ಡಬಲ್ಸ್ ಫೈನಲ್ನಲ್ಲಿ ಜಪಾನ್ ಜೋಡಿ ಶಿಹೊ ತನಾಕಾ ಮತ್ತು ಕೊಹರು ಯೊನೆಮೊಟೊ 16–21, 21–19, 21–10ರಿಂದ ಮೂರನೇ ಶ್ರೇಯಾಂಕದ ಫುಕುಮನ್ ಮತ್ತು ಕುರುಮಿ ಯೊನಾವೊ ವಿರುದ್ಧ ಗೆದ್ದರು.
ಮಿಶ್ರ ಡಬ್ಬಲ್ಸ್:
ಮಿಶ್ರ ಡಬಲ್ಸ್ ಫೈನಲ್ನಲ್ಲಿ ಚೀನಾದ ಸೀವಿ ಝೆಂಗ್ ಮತ್ತು ಕಿಂಗ್ಚೆನ್ ಚೆನ್ ಅವರು 22–24, 21–14, 21–17 ರಿಂದ ತಮ್ಮದೇ ದೇಶದ ಲೂ ಕೈ ಮತ್ತು ಹುವಾಂಗ್ ಯಾಕಿಯಾಂಗ್ ವಿರುದ್ಧ ಗೆದ್ದರು.
ಮಿಯಾಮಿ ಓಪನ್ ಟೆನ್ನಿಸ್: ಜೊಹಾನ್ನಾ ಕೊಂಥಾ, ಫೆಡರರ್ ಗೆ ಪ್ರಶಸ್ತಿ
ಮಹಿಳೆಯ ಸಿಂಗಲ್ಸ್:
ಆಸ್ಟ್ರೇಲಿಯಾ ಮೂಲದ ಜೊಹಾನ್ನಾ ಕೊಂಥಾ ಅವರು ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಕೊಂಥಾ 6–4, 6–3ರಲ್ಲಿ ಡೆನ್ಮಾರ್ಕ್ನ ಕ್ಯಾರೊಲಿನ್ ವೊಜ್ನಿಯಾಕಿ ಎದುರು ಗೆಲುವು ಪಡೆದು ಡಬ್ಲ್ಯುಟಿಎ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಹಿಂದಿನ 40 ವರ್ಷಗಳ ಅವಧಿಯಲ್ಲಿ ಬ್ರಿಟನ್ನ ಆಟಗಾರ್ತಿಯೊಬ್ಬರು ದೊಡ್ಡ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿರಲಿಲ್ಲ. 1977ರಲ್ಲಿ ವಿರ್ಜಿನಿಯಾ ವೇಡ್ ವಿಂಬಲ್ಡನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದು ಬ್ರಿಟನ್ ಆಟಗಾರ್ತಿಯ ಹಿಂದಿನ ಶ್ರೇಷ್ಠ ಸಾಧನೆ ಎನಿಸಿತ್ತು.
ಪುರುಷರ ಸಿಂಗಲ್ಸ್:
ಮಿಯಾಮಿ ಓಪನ್ ಟೆನಿಸ್ ಪಂದ್ಯಾವಳಿಯ ಪುರಷರ ವಿಭಾಗದಲ್ಲಿ ಫೈನಲ್ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಗೆಲುವು ಸಾಧಿಸಿದರು. ರಫೆಲ್ ನಡಾಲ್ ವಿರುದ್ಧ 6–3, 6–4 ಅಂತರದ ನೇರ ಸೆಟ್ಗಳ ಗೆಲುವು ದಾಖಲಿಸಿ ಮಿಯಾಮಿ ಓಪನ್ ಚಾಂಪಿಯನ್ಷಿಪ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
- ಗಿಲ್ಬರ್ಟ್ ಬೇಕರ್ ನಿಧನ: ಸಲಿಂಗಕಾಮಿ ಸಮುದಾಯದ ಸಂಕೇತವಾಗಿ ಕಾಮನಬಿಲ್ಲಿನ ಬಣ್ಣಗಳ ಬಾವುಟ ತಯಾರಿಸಿದ್ದ ಕಲಾವಿದ ಗಿಲ್ಬರ್ಟ್ ಬೇಕರ್ ಮರಣ ಹೊಂದಿದ್ದಾರೆ. ಸಲಿಂಗಕಾಮಿಗಳ ಸ್ವಾತಂತ್ರ್ಯ ದಿನದ ಆಚರಣೆಗಾಗಿ 1978ರಲ್ಲಿ ಅವರು ಎಂಟು ಬಣ್ಣಗಳಿರುವ ಬಾವುಟ ವಿನ್ಯಾಸಗೊಳಿಸಿದ್ದರು. ಬಳಿಕ ಅದನ್ನು ಆರು ಬಣ್ಣಗಳಿಗೆ ಬದಲಿಸಲಾಗಿತ್ತು. ಸಲಿಂಗಕಾಮಿಗಳ ಹಕ್ಕಿನ ಪರವಾಗಿ ಹೋರಾಟ ನಡೆಸಿದ್ದ ಬೇಕರ್, ‘ಲೈಂಗಿಕತೆ ಮಾನವನ ಹಕ್ಕು’ ಎಂದು ಪ್ರತಿಪಾದಿಸಿದ್ದರು.
- ಹೈದ್ರಾಬಾದ್ ದೇಶದ ಮೊದಲ ಗಿಗಾ ವೇಗದ ಇಂಟರ್ನೆಟ್ ಹೊಂದಿರುವ ನಗರ: ಹೈದ್ರಾಬಾದ್ ದೇಶದ ಮೊದಲ ಗಿಗಾ ವೇಗದ ಇಂಟರ್ನೆಟ್ ಹೊಂದಿರುವ ನಗರವೆಂಬ ಖ್ಯಾತಿಗೆ ಒಳಗಾಗಿದೆ. ಬೆಂಗಳೂರು ಮೂಲದ ಎಟ್ರಿಯಾ ಕರ್ನರ್ಜನ್ಸ್ ಟೆಕ್ನಾಲಾಜಿಸ್ ಪೈಬರ್ ನೆಟ್ ಪ್ರತಿ ಸೆಕೆಂಡಿಗೆ ಒಂದು ಗಿಗಾಬೈಟ್ ವೇಗದ ಇಂಟರ್ನೆಟ್ ವ್ಯವಸ್ಥೆಯನ್ನು ಹೈದ್ರಾಬಾದಿನಲ್ಲಿ ಅನಾವರಣಗೊಳಿಸಿದೆ. ಫೈಬರ್ ಆಪ್ಟಿಕ್ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುವ ಇಂಟರ್ನೆಟ್ ಸಾಮಾನ್ಯ ನೆಟ್ ವ್ಯವಸ್ಥೆಗಿಂತ 400 ಪಟ್ಟು ಹೆಚ್ಚು ವೇಗವನ್ನು ಹೊಂದಿದೆ.
- ಸಿಬಿಇಸಿ ಅಧ್ಯಕ್ಷರಾಗಿ ವನಜಾ ಸರ್ನ ನೇಮಕ: ಕೇಂದ್ರ ಅಬಕಾರಿ ಮತ್ತು ಸುಂಕ ಮಂಡಳಿ (ಸಿಬಿಇಸಿ)ಯ ಅಧ್ಯಕ್ಷರಾಗಿ ವನಜಾ ಎನ್ ಸರ್ನ ಅವರು ನೇಮಕಗೊಂಡಿದ್ದಾರೆ. ನಜೀಬ್ ಖಾನ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಸರ್ನ ಅವರನ್ನು ನೇಮಕ ಮಾಡಲಾಗಿದೆ. ಸರ್ನ ಅವರು 1980ನೇ ಬ್ಯಾಚಿನ ಐಎಎಸ್ ಅಧಿಕಾರಿ. ಸಿಬಿಇಸಿ ಪರೋಕ್ಷ ತೆರಿಗೆಗಳ ನೋಡಲ್ ಏಜೆನ್ಸಿ ಆಗಿದ್ದು, ಸುಂಕ, ಕೇಂದ್ರ ಅಬಕಾರಿ, ಸೇವಾ ತೆರಿಗೆ ನಿಯಂತ್ರಿಸುವ ಅಧಿಕಾರ ಹೊಂದಿದೆ.
- ವಿಶ್ವ ಆಟಿಸಂ ಜಾಗೃತಿ ದಿನ: ಏಪ್ರಿಲ್ 2 ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಆಟಿಸಂ ಮತ್ತು ಅದರಿಂದಾಗವು ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶ.