ಖ್ಯಾತ ಹಿಂದೂಸ್ತಾನಿ ಗಾಯಕಿ ಕಿಶೋರಿ ಅಮೋನ್ಕರ್ನಿಧನ

ಖ್ಯಾತ ಹಿಂದೂಸ್ತಾನಿ ಗಾಯಕಿ ಕಿಶೋರಿ ಅಮೋನ್ಕರ್‌ (84) ನಿಧನರಾಗಿದ್ದಾರೆ. ಅಮೋನ್ಕರ್  ರವರು ಕೆಲಕಾಲದ  ಅನಾರೋಗ್ಯದಿಂದ ಬಳಲುತ್ತಿದ್ದರು.

  • ಕಿಶೋರಿ ಅಮೋನ್ಕರ್ ರವರು ಜೈಪುರ ಘರಾನಾ ಶೈಲಿಯ ಗಾಯಕಿಯಾಗಿ ಪ್ರಸಿದ್ದರಾಗಿದ್ದರು. ಅವರು ದೇಶದ ಶ್ರೇಷ್ಠ ಹಿಂದೂಸ್ತಾನಿ ಗಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದರು.
  • ಹಿಂದೂಸ್ತಾನಿ ಪಾರಂಪರಿಕ ರಾಗಗಳಲ್ಲಿ ಖ್ಯಾಲ್‌ ಹಾಡುವುದರಲ್ಲಿ ಕಿಶೋರಿ ಖ್ಯಾತರಾಗಿದ್ದರು. ಜತೆಗೆ ಲಘು ಸಂಗೀತದ ಠುಮರಿ, ಭಜನ್‌ ಹಾಗೂ ಚಿತ್ರ ಗೀತೆಗಳ ಗಾಯನದಲ್ಲೂ ಅವರು ಹೆಸರು ಗಳಿಸಿದ್ದರು.
  • ಸಂಗೀತಾ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಸರ್ವೋಚ್ಚ ಗೌರವಗಳಾದ ಪದ್ಮಭೂಷಣ (1987), ಪದ್ಮವಿಭೂಷಣ (2002) ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

NIRF ಸಮೀಕ್ಷೆಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ಪ್ರಥಮ ಸ್ಥಾನ

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಪ್ರಕಟಿಸಿರುವ ದೇಶದ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್​ಸಿ) ಮೊದಲ ಸ್ಥಾನ ಪಡೆದಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಎನ್​ಐಆರ್​ಎಫ್ ವಿಭಾಗವು ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟಾರೆ ಶೈಕ್ಷಣಿಕ ಸಂಸ್ಥೆಗಳ ಸ್ಥಾನಮಾನ, ಇಂಜಿನಿಯರಿಂಗ್, ಸಾಮಾನ್ಯ ಪದವಿ ಕಾಲೇಜು, ಮ್ಯಾನೇಜ್​ವೆುಂಟ್ ಸಂಸ್ಥೆಗಳು, ಫಾರ್ಮಸಿ ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯ ಎಂಬ 6 ಪ್ರತ್ಯೇಕ ವಿಭಾಗಗಳಲ್ಲಿ ತಲಾ 100 ಶ್ರೇಯಾಂಕ ನೀಡಲಾಗಿದೆ. ಕಲಿಕಾ ವಿಧಾನ, ಕಲಿಕಾ ಸಂಪನ್ಮೂಲ, ಸಂಶೋಧನೆ, ಪದವೀಧರರ ಸಂಖ್ಯೆ, ಶಿಕ್ಷಣ ಸಂಸ್ಥೆಯ ವ್ಯಾಪ್ತಿ ಹಾಗೂ ಸಂಸ್ಥೆ ಬಗೆಗಿನ ಅಭಿಪ್ರಾಯ ಆಧರಿಸಿ ಶ್ರೇಯಾಂಕ ನೀಡಲಾಗುತ್ತಿದೆ.

ಏನಿದು NIRF ಸಮೀಕ್ಷೆ?

ದೇಶದ ಉನ್ನತ ಶಿಕ್ಷಣಗಳ ಗುಣಮಟ್ಟವನ್ನು ಅಳೆಯುವ ದೇಶಿಯ ಶ್ರೇಯಾಂಕ ವ್ಯವಸ್ಥೆ ಇದಾಗಿದೆ. ಕಲಿಕಾ ವಿಧಾನ, ಕಲಿಕಾ ಸಂಪನ್ಮೂಲ, ಸಂಶೋಧನೆ, ಪದವೀಧರರ ಸಂಖ್ಯೆ, ಶಿಕ್ಷಣ ಸಂಸ್ಥೆಯ ವ್ಯಾಪ್ತಿ ಹಾಗೂ ಸಂಸ್ಥೆ ಬಗೆಗಿನ ಅಭಿಪ್ರಾಯ ಆಧರಿಸಿ ಶ್ರೇಯಾಂಕ ನೀಡಲಾಗುತ್ತಿದೆ. ಒಟ್ಟಾರೆ ಶೈಕ್ಷಣಿಕ ಸಂಸ್ಥೆಗಳ ಸ್ಥಾನಮಾನ, ಇಂಜಿನಿಯರಿಂಗ್, ಸಾಮಾನ್ಯ ಪದವಿ ಕಾಲೇಜು, ಮ್ಯಾನೇಜ್​ವೆುಂಟ್ ಸಂಸ್ಥೆಗಳು, ಫಾರ್ಮಸಿ ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯ ಎಂಬ 6 ಪ್ರತ್ಯೇಕ ವಿಭಾಗಗಳಲ್ಲಿ ತಲಾ 100 ಶ್ರೇಯಾಂಕ ನೀಡಲಾಗುತ್ತಿದೆ.

ಹಿನ್ನಲೆ:

ಎರಡನೇ ಸಮೀಕ್ಷೆಯಲ್ಲಿ ಒಟ್ಟು 2995 ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇವುಗಳಲ್ಲಿ 232 ವಿಶ್ವವಿದ್ಯಾಲಯಗಳು, 1024 ಎಂಜನಿಯರಿಂಗ್ ಶೈಕ್ಷಣಿಕ ಸಂಸ್ಥೆಗಳು, 546 ಮ್ಯಾನೆಜ್ಮೆಂಟ್ ಶೈಕ್ಷಣಿಕ ಸಂಸ್ಥೆಗಳು, 318 ಫಾರ್ಮಸಿ ಶೈಕ್ಷಣಿಕ ಸಂಸ್ಥೆಗಳು ಮತ್ತು 637 ಪದವಿ ಕಾಲೇಜುಗಳನ್ನು ಒಳಗೊಂಡಿದೆ.

ಟಾಪ್ ಐದು ಭಾರತದ ಶಿಕ್ಷಣ ಸಂಸ್ಥೆಗಳು (ಒಟ್ಟಾರೆ):

  • ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
  • ಐಐಟಿ, ಮದ್ರಾಸ್
  • ಐಐಟಿ, ಬಾಂಬೆ
  • ಐಐಟಿ, ಖರಗಪುರ
  • ಐಐಟಿ, ನವದೆಹಲಿ

ಟಾಪ್ ಐದು ಎಂಜನಿಯರಿಂಗ್ ಸಂಸ್ಥೆಗಳು:

  • ಐಐಟಿ, ಮದ್ರಾಸ್
  • ಐಐಟಿ ಬಾಂಬೆ
  • ಐಐಟಿ, ಖರಗಪುರ
  • ಐಐಟಿ, ನವ ದೆಹಲಿ
  • ಐಐಟಿ, ಖಾನ್ಪುರ

ಟಾಪ್ ಐದು ಮ್ಯಾನೇಜ್ಮೆಂಟ್ ಸಂಸ್ಥೆಗಳು:

  • ಐಐಎಂ, ಅಹಮದಬಾದ್
  • ಐಐಎಂ, ಬೆಂಗಳೂರು
  • ಐಐಎಂ, ಕಲ್ಕತ್ತಾ
  • ಐಐಎಂ, ಲಕ್ನೋ
  • ಐಐಎಂ, ಕೋಝಿಕೊಡೆ

ಟಾಪ್ ಐದು ಕಾಲೇಜುಗಳು:

  • ಮಿರಾಂಡ ಹೌಸ್, ನವದೆಹಲಿ
  • ಲೊಯೊಲ ಕಾಲೇಜು, ಚೆನ್ನೈ
  • ಶ್ರೀರಾಮ್ ಕಾಮರ್ಸ್ ಕಾಲೇಜ್, ನವದೆಹಲಿ
  • ಬಿಷಾಪ್ ಹೆಬೆರ್ ಕಾಲೇಜು, ತಿರುಚನಪಲ್ಲಿ
  • ಆತ್ಮರಾಮ್ ಸನಾತನ ಧರ್ಮ ಕಾಲೇಜು, ನವದೆಹಲಿ

ಟಾಪ್ ಐದು ಫಾರ್ಮಸಿ ಸಂಸ್ಥೆಗಳು:

  • ಜಾಮೀಯ ಹಮದರ್ದ್, ನವದೆಹಲಿ
  • ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಎಜುಕೇಷನ್ ಅಂಡ್ ರಿಸರ್ಚ್, ಮೊಹಲಿ, ಪಂಜಾಬ್
  • ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಸೈನ್ಸ್, ಚಂಡೀಗರ್
  • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಮುಂಬೈ
  • ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಎಜುಕೇಷನ್ ಅಂಡ್ ರಿಸರ್ಚ್, ಹೈದ್ರಬಾದ್

ಶ್ರೇಯಾಂಕದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಸಂಸ್ಥೆಗಳು:

  • 1. ಐಐಎಸ್​ಸಿ, ಬೆಂಗಳೂರು
  • 11. ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್, ಬೆಂಗಳೂರು
  • 25. ಐಐಎಂ, ಬೆಂಗಳೂರು
  • 30. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್
  • 57. ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾಲಯ
  • 60. ಎನ್​ಐಟಿ, ಸುರತ್ಕಲ್
  • 74. ಜೆಎಸ್​ಎಸ್ ವಿಶ್ವವಿದ್ಯಾಲಯ, ಮೈಸೂರು
  • 100. ಕೆಎಲ್​ಇ ಅಕಾಡೆಮಿ ಫಾರ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್, ಬೆಳಗಾವಿ

ಪದವಿ ಕಾಲೇಜುಗಳು

  • 29. ಸೇಂಟ್ ಜೋಸೆಫ್ ಕಾಲೇಜು, ಬೆಂಗಳೂರು
  • 44. ಸೇಂಟ್ ಅಲೋಶಿಯಸ್ ಕಾಲೇಜು, ಮಂಗಳೂರು
  • 71. ಎಸ್​ಡಿಎಂ ಕಾಲೇಜು, ಉಜಿರೆ
  • 89. ಪಿ.ಸಿ.ಜಾಬಿನ್ ಕಾಲೇಜು, ಹುಬ್ಬಳ್ಳಿ
  • 94. ಜೆ.ಜಿ.ವಾಣಿಜ್ಯ ಕಾಲೇಜು, ಧಾರವಾಡ
  • 96. ಪ್ರೆಸಿಡೆನ್ಸಿ ಕಾಲೇಜು, ಬೆಂಗಳೂರು

ಇಂಜಿನಿಯರಿಂಗ್ ಕಾಲೇಜು

  • 22. ಎನ್​ಐಟಿ, ಸುರತ್ಕಲ್ 43. ಮಣಿಪಾಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ್
  • 45. ಎಂ.ಎಸ್.ರಾಮಯ್ಯ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು
  • 49. ಆರ್.ವಿ.ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು 52. ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು
  • 72. ಸಿದ್ದಗಂಗಾ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು
  • 86. ಪಿಇಎಸ್ ವಿಶ್ವವಿದ್ಯಾಲಯ, ಬೆಂಗಳೂರು
  • 95. ಬಿಎಂಎಸ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ಮೆಂಟ್, ಬೆಂಗಳೂರು
  • ಮ್ಯಾನೇಜ್​ವೆುಂಟ್
  • ಶೈಕ್ಷಣಿಕ ಸಂಸ್ಥೆಗಳು
  • 2. ಐಐಎಂ, ಬೆಂಗಳೂರು 3. ಕ್ಸೇವೀಯರ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ವೆುಂಟ್ ಆಂಡ್ ಎಂಟರ್​ಪ್ರಿನರ್​ಶಿಪ್, ಬೆಂಗಳೂರು

ವಿಶ್ವವಿದ್ಯಾಲಯಗಳು

  • 1.ಐಐಎಸ್​ಸಿ, ಬೆಂಗಳೂರು
  • 4. ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್, ಬೆಂಗಳೂರು
  • 18. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್
  • 36. ಮಾನಸ ಮೈಸೂರು ಗಂಗೋತ್ರಿ ವಿಶ್ವವಿದ್ಯಾಲಯ
  • 45. ಜೆಎಸ್​ಎಸ್ ವಿಶ್ವವಿದ್ಯಾಲಯ, ಮೈಸೂರು
  • 62. ಕೆಎಲ್​ಇ ಅಕಾಡೆಮಿ ಫಾರ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್, ಬೆಳಗಾವಿ
  • 83. ನಿಟ್ಟೆ ವಿಶ್ವವಿದ್ಯಾಲಯ, ನಿಟ್ಟೆ
  • 94. ಪಿಇಎಸ್ ವಿಶ್ವವಿದ್ಯಾಲಯ, ಬೆಂಗಳೂರು

ಫಾರ್ಮಸಿ ಕಾಲೇಜುಗಳು

  • 7. ಮಣಿಪಾಲ್ ಕಾಲೇಜ್ ಆಫ್ ಫಾರ್ವಸುಟಿಕಲ್ ಸೈನ್ಸ್, ಮಣಿಪಾಲ್
  • 10. ಜೆಎಸ್​ಎಸ್ ಕಾಲೇಜ್ ಫಾರ್ಮಸಿ, ಮೈಸೂರು
  • 27. ಎನ್​ಜಿಎಸ್​ಎಂ ಇನ್​ಸ್ಟಿಟ್ಯೂಟ್ ಆಫ್ ಫಾರ್ವಸುಟಿಕಲ್ ಸೈನ್ಸ್, ಮಂಗಳೂರು
  • 37. ಕೆಎಲ್​ಇ ಅಕಾಡೆಮಿ ಫಾರ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್, ಬೆಳಗಾವಿ

ಪ್ಲಾಸ್ಟಿಕ್ ತಿನ್ನುವ ಶಿಲೀಂಧ್ರಗಳನ್ನು ಪತ್ತೆಹಚ್ಚಿದ ವಿಜ್ಞಾನಿಗಳು

ಪ್ಲಾಸ್ಟಿಕ್ ತಿನ್ನುವ ಶಿಲೀಂಧ್ರವನ್ನು ಚೀನಾ ಅಕಾಡೆಮಿ ಆಫ್ ಸೈನ್ಸ್ನ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಅಸ್ಪರ್ಜಿಲ್ಲಸ್ ಟುಬಿನ್ ಜೆನ್ಸಿಸ್ (Aspergillus Tubengensis)  ಹೆಸರಿನ ಶಿಲೀಂಧ್ರವು ಕಿಣ್ವಗಳನ್ನು ಬಳಸಿಕೊಂಡು ವೇಗವಾಗಿ ಪ್ಲಾಸ್ಟಿಕ್ ಅನ್ನು ವಿಭಜಿಸುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ಪ್ಲಾಸ್ಟಿಕ್ ತಿನ್ನುವ ಈ ಶಿಲೀಂಧ್ರಗಳನ್ನು ಪಾಕಿಸ್ತಾನದ ಇಸ್ಲಮಬಾದಿನಲ್ಲಿ ಪತ್ತೆಹಚ್ಚಲಾಗಿದೆ. ಪ್ಲಾಸ್ಟಿಕ್ ನಿಂದ ಪರಿಸರದ ಮೇಲೆ ಮಾರಕವಾಗಿ ಹಾನಿಯಾಗುತ್ತಿದ್ದು, ಈ ಸಂಶೋಧನೆಯಿಂದ ಪರಿಸರದ ಮೇಲಾಗುವ ಮಾರಕವನ್ನು ತಪ್ಪಿಸಬಹುದಾಗಿದೆ.

ಪ್ರಮುಖಾಂಶಗಳು:

  • ಭೂಮಿಯ ಮೇಲೆ ಸಾಮಾನ್ಯವಾಗಿ ಕಂಡು ಬರುವ “ಅಸ್ಪರ್ಜಿಲ್ಲಸ್ ಟುಬಿನ್ ಜೆನ್ಸಿಸ್” ಪ್ಲಾಸ್ಟಿಕ್ ಮೇಲೆಯೂ ಬೆಳೆಯುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ.
  • ಪ್ಲಾಸ್ಟಿಕ್ ಮೇಲೆ ಬೆಳೆಯುವಾಗ ಈ ಶಿಲೀಂಧ್ರವು ಪ್ಲಾಸ್ಟಿಕ್ ಮೇಲ್ಮೈ ಮೇಲೆ ಕಿಣ್ವವೊಂದನ್ನು ಸೃವಿಸುವ ಮೂಲಕ ಪ್ಲಾಸ್ಟಿಕ್ ನಲ್ಲಿರುವ ರಾಸಾಯನಿಕ ಬಾಂಡ್ ಗಳನ್ನು ವಿಭಜನೆಗೊಳಿಸುತ್ತದೆ.

ಸಂಶೋಧನೆಯ ಮಹತ್ವ:

ಪ್ಲಾಸ್ಟಿಕ್ ಪದಾರ್ಥಗಳು ಕೊಳೆಯದೆ ಇರುವ ಕಾರಣ ಬಹು ಕಾಲ ವಾತಾವರಣದಲ್ಲಿ ಉಳಿದುಕೊಂಡು ಬಿಡುತ್ತವೆ. ಭೂಮಿಯಲ್ಲಿ ಮುಚ್ಚುವುದು, ಮರು ಬಳಕೆ ಮಾಡುವುದು ಹಾಗೂ ಸುಡುವ ಮೂಲಕ ಪ್ಲಾಸ್ಟಿಕ್ ಪದಾರ್ಥಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಆದರೆ ಈ ವಿಧಗಳು ಅಷ್ಟೇನೂ ಸೂಕ್ತವಲ್ಲದ ಕಾರಣ ವಿಷಯುಕ್ತ ಪದಾರ್ಥಗಳನ್ನು ಪರಿಸರದಲ್ಲೆ ಬಿಡುವುದಲ್ಲದೆ, ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಹೊಸ ಸಂಶೋಧನೆಯಿಂದ ಪ್ಲಾಸ್ಟಿಕ್ ವಿಲೇವಾರಿಗೆ ಸರಳ ವಿಧಾನವನ್ನು ಕಂಡುಕೊಳ್ಳುವುದಲ್ಲದೆ, ಪರಿಸರ ಮತ್ತು ಆರೋಗ್ಯದ ಮೇಲೂ ಯಾವುದೇ ಪರಿಣಾಮವನ್ನು ಬೀರುವುದಿಲ್ಲ.

Leave a Comment

This site uses Akismet to reduce spam. Learn how your comment data is processed.