ಕನ್ನಡ ಉಪನ್ಯಾಸಕ ಆಕಾಂಕ್ಷಿಗಳ ಕೈಪಿಡಿ
ಸ್ಪರ್ಧಾತ್ಮಕ ಶ್ರೇಯಸ್ಸು
ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ಆಯ್ಕೆ ಪರೀಕ್ಷೆಗೆ ಕೆ.ಇ.ಎ. ಕೊಟ್ಟ ಸಿಲ್ಯಾಬಸ್ ಪ್ರಕಾರ, ಅನೇಕ ಹಳೆಯ – ಹೊಸ ತಲೆಮಾರಿನ ಪುಸ್ತಕಗಳನ್ನು ಓದಬೇಕು. ಒಂದೆಡೆ ಅದು ದುಬಾರಿ ಖರ್ಚಿನ ಬಾಬತ್ತಿನದು, ಇನ್ನೊಂದೆಡೆ, ಸಮಯ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ.
ಅಭ್ಯರ್ಥಿಗಳ ಈ ಸಂದಿಗ್ಧ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ‘ಅರವಿಂದ ಇಂಡಿಯಾ’ ಪ್ರಕಾಶನದವರು ‘ಸ್ಪರ್ಧಾ ಶ್ರೇಯಸ್ಸು’ ಎಂಬ ಪುಸ್ತಕ ಹೊರತಂದಿದ್ದಾರೆ. ಇದು ಪತ್ರಿಕೆ – 2ಕ್ಕೆ ಸಂಬಂಧಪಟ್ಟ ಪುಸ್ತಕ.
ಪುಸ್ತಕವು ಮೂರು ಭಾಗಗಳಲ್ಲಿ ವಿಭಾಗಿಸಲ್ಪಟ್ಟಿದೆ. 1. ಪ್ರಾಚೀನ ಕನ್ನಡ ಸಾಹಿತ್ಯ 2. ಮಧ್ಯಕಾಲೀನ ಕನ್ನಡ ಸಾಹಿತ್ಯ, 3. ಆಧುನಿಕ ಕನ್ನಡ ಸಾಹಿತ್ಯ (ಪುಸ್ತಕದ ಒಳಗಡೆ ಏನೇನಿದೆ ಎಂದು ತಿಳಿಯಲು ಇದರ ಜತೆಗೆ ಕೊಟ್ಟಿರುವ ಚಿತ್ರವನ್ನು ಹಿಗ್ಗಿಸಿ ನೋಡಿ.)
ಈರಪ್ಪ ಶಿ. ಮಹಾಲಿಂಗಪುರ ಅವರು ರೂಪಿಸಿರುವ ಈ ಪುಸ್ತಕ ಉತ್ತಮ ಗುಣಮಟ್ಟದ ಕಾಗದ ಹಾಗೂ ಅಚ್ಚುಕಟ್ಟಾದ ಮುದ್ರಣದೊಂದಿಗೆ ಗಮನ ಸೆಳೆಯುತ್ತದೆ. ಈ ಪುಸ್ತಕದ ಬೆಲೆ: 475ರೂ.
ಪುಸ್ತಕ ತರಿಸಿಕೊಳ್ಳುವ ಆಸಕ್ತರು Ashok GC ಅವರ Whatsapp ನಂಬರಿಗೆ (7795680405) ಸಂಪೂರ್ಣ ವಿಳಾಸದೊಂದಿಗೆ ಸಂದೇಶ ಕಳುಹಿಸಿ.
Very very good book