ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,17,18,2017
Question 1 |
1. ಬೇರ್ಪಟ್ಟ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಭಾರತ ಈ ಕೆಳಗಿನ ಯಾವ ದೇಶದೊಂದಿಗೆ ಸಾಮಾಜಿಕ ಭದ್ರತಾ ಒಪ್ಪಂದಕ್ಕೆ ಇತ್ತೀಚೆಗೆ ಸಹಿ ಮಾಡಿದೆ?
ಜರ್ಮನಿ | |
ಜಪಾನ್ | |
ಬ್ರೆಜಿಲ್ | |
ಮೆಕ್ಸಿಕೊ |
ಬೇರ್ಪಟ್ಟ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಭಾರತ ಸರ್ಕಾರ ಬ್ರೆಜಿಲ್ ನೊಂದಿಗೆ ಸಾಮಾಜಿಕ ಭದ್ರತಾ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಪ್ರಕಾರ ಉಭಯ ದೇಶಗಳಲ್ಲಿರುವ ಬೇರ್ಪಟ್ಟ ಕಾರ್ಮಿಕರು ತಮ್ಮ ದೇಶಗಳಲ್ಲಿ ಸಾಮಾಜಿಕ ಭದ್ರತೆಗೆ ದೇಣಿಗೆ ನೀಡುತ್ತಿದ್ದಲ್ಲಿ, ಅಂತವರು ಕೆಲಸ ಮಾಡುವ ದೇಶದಲ್ಲಿ ದೇಣಿಗೆ ನೀಡುವುದರಿಂದ ವಿನಾಯತಿ ನೀಡಲಾಗಿದೆ. ಭಾರತ ಇದುವರೆಗೆ 18 ರಾಷ್ಟ್ರಗಳೊಂದಿಗೆ ಇಂತಹ ಒಪ್ಪಂದಕ್ಕೆ ಸಹಿ ಹಾಕಿದೆ.
Question 2 |
2. “ಇಂಡಿಕಾ: ಎ ಡೀಪ್ ನ್ಯಾಚುರಲ್ ಹಿಸ್ಟರಿ ಆಫ್ ದಿ ಇಂಡಿಯನ್ ಸಬ್ ಕಾಂಟಿನೆಂಟ್ (Indica: A Deep Natural History of the Indian Subcontinent)” ಪುಸ್ತಕದ ಲೇಖಕರು ಯಾರು?
ಜಾನ್ ಮಿಲ್ಲರ್ | |
ಸ್ವೀವನ್ ಸ್ಮಿತ್ | |
ಪ್ರಣಯ್ ಲಾಲ್ | |
ವಾಲ್ಮೀಕಿ ಥಾಪರ್ |
Question 3 |
3. ಈ ಕೆಳಗಿನ ಯಾರು ಉತ್ತರಖಂಡದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ?
ಆರ್ ಪಿ ನಿಶಾಂಕ್ | |
ತ್ರಿವೇಂದ್ರ ಸಿಂಗ್ ರಾವತ್ | |
ಬಿ ಸಿ ಖಂಡೂರಿ | |
ಅಮರ್ ನಾಥ್ ಸಿಂಗ್ |
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ತ್ರಿವೇಂದ್ರ ಸಿಂಗ್ ರಾವತ್ ಅವರು ಉತ್ತರಖಂಡದ 8ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 70 ಕ್ಷೇತ್ರಗಳ ಪೈಕಿ 57 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
Question 4 |
4. ಇತ್ತೀಚೆಗೆ ನಿಧನರಾದ ರಾಕ್ ಆ್ಯಂಡ್ ರೋಲ್ ದಂತಕತೆ “ಚಕ್ ಬೆರಿ (Chuck Berry)” ಯಾವ ದೇಶದವರು?
ಅಮೆರಿಕ | |
ಬ್ರಿಟನ್ | |
ಸ್ಪೇನ್ | |
ಆಸ್ಟ್ರೇಲಿಯಾ |
ಅಮೆರಿಕದ ರಾಕ್ ಆ್ಯಂಡ್ ರೋಲ್ ಸಂಗೀತದ ದಂತಕತೆ ಚಕ್ ಬೆರಿ (90) ನಿಧನರಾದರು. ರೋಲ್ ಓವರ್ ಬಿಥೋವೆನ್,ಯು ನೆವರ್ ಕಾನ್ಟ್ ಕ್ಯಾಚ್ ಮಿ, ಸ್ವೀಟ್ ಲಿಟಿಲ್ ಸಿಕ್ಸ್ಟೀನ್ , ಜೋನಿ ಬಿ ಗುಡಿ ಮೊದಲಾದ ಆಲ್ಬಂಗಳ ಮೂಲಕ ಜನಪ್ರಿಯತೆ ಗಳಿಸಿದ ಸಂಗೀತಗಾರನಾಗಿದ್ದರು ಚಾರ್ಲ್ಸ್ ಎಡ್ವರ್ಡ್ ಆಂಡರ್ಸನ್ ಬೆರಿ ಎಂಬ ಚಕ್ ಬೆರಿ. Johnny B. Goode ಹಾಡು 2010ರ ನ್ ಮ್ಯಾಗಜಿನ್ನಲ್ಲಿ ಶ್ರೇಷ್ಠ ಹಾಡುಗಳ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿತ್ತು.ಸಂಗೀತ ಲೋಕಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಇವರಿಗೆ 1984ರಲ್ಲಿ ಗ್ರ್ಯಾಮಿ ಪ್ರಶಸ್ತಿ ನೀಡಲಾಗಿತ್ತು.
Question 5 |
5. ಭಾರತದಲ್ಲೇ ತಯಾರಿಸಿ ಯೋಜನೆ ಅನುಸಾರ ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನ ಬಳಸಿ ನಿರ್ಮಿಸಿದ “ಮೇಧಾ” ರೈಲು ಯಾವ ಮಾರ್ಗದಲ್ಲಿ ಸಂಚಾರ ಪ್ರಾರಂಭಿಸಿತು?
ಪುಣೆ-ಮುಂಬೈ | |
ದಾದರ್-ಬೊರಿವಲಿ | |
ಹೈದರಾಬಾದ್-ಕನ್ಯಾಕುಮಾರಿ | |
ಪಾಟ್ನಾ-ಕೋಲ್ಕೊತ್ತಾ |
ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನ ಬಳಸಿ ನಿರ್ಮಿಸಿದ 12 ಬೋಗಿಗಳ “ಮೇಧಾ” ರೈಲು, ದಾದರ್-ಬೊರಿವಲಿ ಮಾರ್ಗದಲ್ಲಿ ತನ್ನ ಸಂಚಾರ ಪ್ರಾರಂಭಿಸಿತು. ಈ ರೈಲನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ರೈಲು ಗಂಟೆಗೆ 110 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ, ವಿದ್ಯುತ್ ಶಕ್ತಿ ಉಳಿಸುವ ಸಲುವಾಗಿ ರೈಲಿನಲ್ಲಿ ಎಲ್.ಇ.ಡಿ. ಬಲ್ಬ್ ಬಳಕೆ ಮಾಡಲಾಗಿದ್ದು ಇದರಿಂದ ಶೇ.30 ರಿಂದ 35 ರಷ್ಟು ಶಕ್ತಿ ಉಳಿತಾಯವಾಗಲಿದೆ.
Question 6 |
6. ಸ್ತನ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ವಿಶ್ವದ ಮೊಟ್ಟಮೊದಲ ಮೊಬೈಲ್ ಆ್ಯಪ್ ನ್ನು ಯಾರು ಅನಾವರಣಗೊಳಿಸಿದರು?
ಅಮಿರ್ ಖಾನ್ | |
ಅಕ್ಷಯ್ ಕುಮಾರ್ | |
ಅಮಿತಾಬ್ ಬಚ್ಚನ್ | |
ದೀಪಿಕಾ ಪಡುಕೋಣೆ |
ಅಮಿತಾಬ್ ಬಚ್ಚನ್ ರವರು ವಿಶ್ವದ ಮೊಟ್ಟಮೊದಲ ಸ್ತನ ಆರೋಗ್ಯದ ಬಗ್ಗೆ ಮಾಹಿತಿ ನೀಡುವ “ABC ಆಫ್ ಬ್ರೆಸ್ಟ್ ಹೆಲ್ತ್” ಎಂಬ ಮೊಬೈಲ್ ಆ್ಯಪ್ ನ್ನು ಮುಂಬೈನಲ್ಲಿ ಲೋಕಾರ್ಪಣೆ ಮಾಡಿದರು. ಈ ಅ್ಯಪ್ ಒಟ್ಟು 12 ಭಾಷೆಗಳಲ್ಲಿ ಲಭ್ಯವಿದ್ದು, ಜನರಲ್ಲಿ ಸ್ತನ ಕ್ಯಾನ್ಸರ್ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ, ಆರೋಗ್ಯ ಕಾಪಾಡಲು ಸಹಾಯ ಮಾಡುವುದು ಈ ಆ್ಯಪ್ ನ ಉದ್ದೇಶವಾಗಿದೆ.
Question 7 |
7. ಈ ಕೆಳಗಿನ ಯಾವ ದೇಶ ಅಂತಾರಾಷ್ಟ್ರೀಯ ವಜ್ರ ಸಮ್ಮೇಳನ “ಮೈನ್ಸ್ ಟು ಮಾರ್ಕೆಟ್ (Mines to Market)-2017” ಆತಿಥ್ಯ ವಹಿಸಲಿದೆ?
ಭಾರತ | |
ದಕ್ಷಿಣ ಆಫ್ರಿಕಾ | |
ಬ್ರೆಜಿಲ್ | |
ಕೀನ್ಯಾ |
ಮುಂಬೈನ ಹೋಟೆಲ್ ಗ್ರಾಂಡ್ ಯಾಟ್ ನಲ್ಲಿ ಅಂತಾರಾಷ್ಟ್ರೀಯ ವಜ್ರ ಸಮ್ಮೇಳನ “ಮೈನ್ಸ್ ಟು ಮಾರ್ಕೆಟ್ (Mines to Market)-2017” ಮಾರ್ಚ್ 19 ರಿಂದ ನಡೆಯಲಿದೆ. ದೇಶ ವಿದೇಶಗಳ ವಜ್ರ ಗಣಿಗಾರಿಕೆಗಾರರು, ರಫ್ತುದಾರರು, ರಿಟೇಲ್ ವ್ಯಾಪಾರಸ್ಥರು ಹಾಗೂ ತಜ್ಞರು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಜಾಗತಿಕ ಮಟ್ಟದಲ್ಲಿ ವಜ್ರ ಉದ್ದಿಮೆ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಲಿವೆ.
Question 8 |
8. “2017 ಈಡೆನ್ ವಿಶ್ವ ಮಹಿಳಾ ಸ್ನೂಕರ್ ಚಾಂಪಿಯನ್ ಷಿಪ್” ನಲ್ಲಿ ಬೆಳ್ಳಿ ಗೆದ್ದ ಭಾರತೀಯ ಕ್ರೀಡಾಪಟು ಯಾರು?
ವಿದ್ಯಾ ಪಿಳ್ಳೈ | |
ಚಿತ್ರಾ ಮಗಿಮೈರಾಜ್ | |
ಅರಾಂತ್ಕ್ಸಾ ಸಂಚಿಸ್ | |
ಉಮಾದೇವಿ ನಾಗರಾಜ್ |
Question 9 |
9. 2018 ರಲ್ಲಿ ನೆಡೆಯುವ ಅಂಧರ ಏಕ ದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ರಾಯಭಾರಿಯಾಗಿ ಆಯ್ಕೆಯಾದ ಕ್ರಿಕೆಟ್ ಆಟಗಾರ ಯಾರು?
ವಿರಾಟ್ ಕೊಹ್ಲಿ | |
ಸಚಿನ್ ತೆಂಡೂಲ್ಕರ್ | |
ಗ್ರೇಮ್ ಸ್ಮಿತ್ | |
ಶಾಹಿದ್ ಅಫ್ರೀದಿ |
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರೀದಿ ಅವರು 5ನೇ ಅಂಧರ ಏಕ ದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ-2018ರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಯುಎಇ ಮತ್ತು ಪಾಕಿಸ್ತಾನದಲ್ಲಿ ಈ ವಿಶ್ವಕಪ್ ಟೂರ್ನಿ ನಡೆಯಲಿದೆ.
Question 10 |
10. ವಿಶ್ವಸಂಸ್ಥೆಯ ‘ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆಂನ್ಸ್” ಗುಂಪಿಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾದವರು ಯಾರು?
ಸೌಮ್ಯ ಸ್ವಾಮಿನಾಥನ್ | |
ಮುಕುಲ್ ಆನಂದ್ | |
ಅರವಿಂದ್ ಪನಗಾರಿಯ | |
ಮೇಘರಾಜ್ ಸಹಾ |
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನಿರ್ದೇಶಕರಾಗಿರುವ ಸೌಮ್ಯ ಸ್ವಾಮಿನಾಥನ್ ಅವರು ವಿಶ್ವಸಂಸ್ಥೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ‘ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆಂನ್ಸ್” ಗುಂಪಿಗೆ ಭಾರತದ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ. ಸ್ವಾಮಿನಾಥನ್ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಡಿಪಾರ್ಟಮೆಂಟ್ ಆಫ್ ಹೆಲ್ತ್ ರಿಸರ್ಚಿನ ಕಾರ್ಯದರ್ಶಿ ಸಹ ಆಗಿದ್ದಾರೆ.
[button link=”http://www.karunaduexams.com/wp-content/uploads/2017/05/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್17182017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ