ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,15,16,2017

Question 1

1. ಈ ಕೆಳಗಿನ ಯಾವ ಸಚಿವಾಲಯ ನೀಲಿ ಕ್ರಾಂತಿಯನ್ನು ಸಾಧಿಸುವ ಸಲುವಾಗಿ “ಮಿಷನ್ ಫಿಂಗರ್ಲಿಂಗ್” ಕಾರ್ಯಕ್ರಮವನ್ನು ಜಾರಿಗೊಳಿಸಿದೆ?

A
ಕೇಂದ್ರ ಆಹಾರ ಸಂಸ್ಕರಣ ಸಚಿವಾಲಯ
B
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ
C
ಕೇಂದ್ರ ಬಂದರು ಸಚಿವಾಲಯ
D

ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ದಿ ಮತ್ತು ಗಂಗಾ ಪುನರ್ಜ್ಜೀವನ ಸಚಿವಾಲಯ

Question 1 Explanation: 
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ನೀಲಿ ಕ್ರಾಂತಿಯನ್ನು ಸಾಧಿಸುವ ಸಲುವಾಗಿ “ಮಿಷನ್ ಫಿಂಗರ್ಲಿಂಗ್” ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಮೀನುಗಾರಿಕೆ ಕ್ಷೇತ್ರವನ್ನು ಸುಸ್ಥಿರ ಮತ್ತು ಸಮಗ್ರ ಅಭಿವೃದ್ದಿ ಮಾಡುವ ಮೂಲಕ ಮತ್ತು ಮೀನುಗಾರಿಕೆ ರೈತರ ಹಿತರಕ್ಷಣೆ ಕಾಯುವುದು ಕಾರ್ಯಕ್ರಮದ ಧ್ಯೇಯ.

Question 2

2. “ಕ್ರೈಂ ಅಂಡ್ ಕ್ರಿಮಿನಲ್ ಟ್ರಾಕಿಂಗ್ ನೆಟ್ವರ್ಕ್ & ಸಿಸ್ಟಂ” ನೊಂದಿಗೆ ಸಂಪರ್ಕ ಹೊಂದಿದ ದೇಶದ ಮೊಟ್ಟ ಮೊದಲ ಪೊಲೀಸ್ ಠಾಣೆ ಯಾವುದು?

A
ಗುವಾಹಟಿ
B
ಶಿಮ್ಲಾ
C
ಪುಣೆ
D
ಹೈದ್ರಾಬಾದ್
Question 2 Explanation: 
ಶಿಮ್ಲಾ

ಹಿಮಾಚಲ ಪ್ರದೇಶದ ಶಿಮ್ಲಾ ನಗರದಲ್ಲಿರುವ ಸಂಜೌಲಿ ಪೊಲೀಸ್ ಠಾಣೆ ಕ್ರೈಂ ಅಂಡ್ ಕ್ರಿಮಿನಲ್ ಟ್ರಾಕಿಂಗ್ ನೆಟ್ವರ್ಕ್ & ಸಿಸ್ಟಂ” ನೊಂದಿಗೆ ಸಂಪರ್ಕ ಹೊಂದಿದ ದೇಶದ ಮೊಟ್ಟ ಮೊದಲ ಪೊಲೀಸ್ ಠಾಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವಿಭದ್ರ ಸಿಂಗ್ ಅವರು ಸಿಸಿಟಿಎನ್ಎಸ್ ಸಿಸ್ಟಂ ಅನ್ನು ಉದ್ಘಾಟಿಸಿದರು.

Question 3

3. “2017 ರಾಷ್ಟ್ರೀಯ ರಂಗಭೂಮಿ ಉತ್ಸವ (National Theatre Festival)” ಆತಿಥ್ಯ ವಹಿಸಲಿರುವ ರಾಜ್ಯ ಯಾವುದು?

A
ಕೇರಳ
B
ಜಾರ್ಖಂಡ್
C
ಉತ್ತರ ಪ್ರದೇಶ
D
ಕರ್ನಾಟಕ
Question 3 Explanation: 
ಕೇರಳ

2017 ರಾಷ್ಟ್ರೀಯ ರಂಗಭೂಮಿ ಉತ್ಸವ ಕೇರಳದ ಠಾಗೂರ್ ಥಿಯೇಟರ್ ನಲ್ಲಿ ಆರಂಭಗೊಂಡಿತು. ಮಾರ್ಚ್ 16 ರಿಂದ ಮಾರ್ಚ್ 24ರ ವರೆಗೆ ಈ ಉತ್ಸವ ನಡೆಯಲಿದೆ. ಭಾರತ ರಂಗಭೂಮಿ ಕ್ಷೇತ್ರದ ದಿಗ್ಗಜ ಕವಲಂ ನಾರಾಯಣ ಪಣಿಕ್ಕರ್ ಅವರಿಗೆ ಈ ಬಾರಿಯ ಉತ್ಸವವನ್ನು ಅರ್ಪಿಸಲಾಗಿದೆ.

Question 4

4. “So You Want to Know About the Environment” ಪುಸ್ತಕದ ಲೇಖಕರು __________?

A
ಬಿಜಲ್ ವಚ್ಚರಜನಿ
B
ಸುಧೀಂದ್ರ ಚಟರ್ಜಿ
C
ಶೇಖರ್ ಮೆನನ್
D
ಶ್ರೀಧರ್ ಚಂದ್ರನ್
Question 4 Explanation: 
ಬಿಜಲ್ ವಚ್ಚರಜನಿ
Question 5

5. 2017 ಜಿ-20 ರಾಷ್ಟ್ರಗಳ ಹಣಕಾಸು ಸಚಿವರ ಹಾಗೂ ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳ ಸಭೆ ಯಾವ ದೇಶದಲ್ಲಿ ಜರುಗಿತು?

A
ಫ್ರಾನ್ಸ್
B
ಜರ್ಮನಿ
C
ಇಟಲಿ
D
ಜಪಾನ್
Question 5 Explanation: 
ಜರ್ಮನಿ

2017 ಜಿ-20 (G-20) ರಾಷ್ಟ್ರಗಳ ಹಣಕಾಸು ಸಚಿವರ ಹಾಗೂ ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳ ಸಭೆ ಜರ್ಮನಿಯ ಬಡೆನ್-ಬಡೆನ್ ನಗರದಲ್ಲಿ ನಡೆಯಿತು. ಎರಡು ದಿನಗಳ ಕಾಲ ನಡೆದ ಈ ಸಭೆಯಲ್ಲಿ ಜಾಗತಿಕ ಆರ್ಥಿಕತೆಯ ಅಭಿವೃದ್ದಿಯ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು.

Question 6

6. ಈ ಕೆಳಗಿನ ಯಾವ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಭೌದ್ದ ಸಮ್ಮೇಳನ “21ನೇ ಶತಮಾನದಲ್ಲಿ ಭೌದ್ದಧರ್ಮ” ಆಯೋಜಿಸಲಾಗಿತ್ತು?

A
ಮಹಾರಾಷ್ಟ್ರ
B
ಕೇರಳ
C
ಬಿಹಾರ
D
ನಾಗಲ್ಯಾಂಡ್
Question 6 Explanation: 
ಬಿಹಾರ

ಮೂರು ದಿನಗಳ ಅಂತಾರಾಷ್ಟ್ರೀಯ ಭೌದ್ದ ಸಮ್ಮೇಳನ “21ನೇ ಶತಮಾನದಲ್ಲಿ ಭೌದ್ದಧರ್ಮ” ಬಿಹಾರದ ನವ ನಳಂದ ಮಹಾವೀರ, ರಾಜಗಿರ್ ನಲ್ಲಿ ಮಾರ್ಚ್ 17 ರಿಂದ ಆರಂಭಗೊಂಡಿದೆ. 35 ದೇಶಗಳ ಭೌದ್ದ ಧರ್ಮದ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

Question 7

7. ಈ ಮುಂದಿನ ಯಾವ ಸಂಸದೀಯ ಸಮಿತಿ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಸಂಸ್ಥೆಗಳ ದೀರ್ಘಕಾಲದ ಉಳಿವಿಕೆಗಾಗಿ ವಿಲೀನಿಗೊಳಿಸುವಂತೆ ಶಿಫಾರಸ್ಸು ಮಾಡಿದೆ?

A
ಭಗತ್ ಸಿಂಗ್ ಕೋಶ್ಯಾರಿ ಸಮಿತಿ
B
ಅರವಿಂದ್ ಸಾವಂತ್ ಸಮಿತಿ
C
ಅಶೋಕ್ ಲಾವಸ ಸಮಿತಿ
D
ವೀರಪ್ಪ ಮೊಹ್ಲಿ ಸಮಿತಿ
Question 7 Explanation: 
ಭಗತ್ ಸಿಂಗ್ ಕೋಶ್ಯಾರಿ ಸಮಿತಿ

ಬಿಜೆಪಿ ಸಂಸದ ಭಗತ್ ಸಿಂಗ್ ಕೋಶ್ಯಾರಿ ನೇತೃತ್ವದ ಸಂಸತ್ತು ಅರ್ಜಿಗಳ ಸಮಿತಿ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ದೂರವಾಣಿ ಸಂಸ್ಥೆಗಳನ್ನು ವಿಲೀನಗೊಳಿಸುವಂತೆ ಶಿಫಾರಸ್ಸು ಮಾಡಿದೆ. ವಿಲೀನ ಪ್ರಕ್ರಿಯೆಯಿಂದ ಸರ್ಕಾರಿ ಸ್ವಾಮ್ಯದ ದೊಡ್ಡ ಸಂಸ್ಥೆಗೆ ನಾಂದಿಯಾಗಲಿದ್ದು, ಖಾಸಗಿ ಸಂಸ್ಥೆಗಳಿಗೆ ಪ್ರತಿಸ್ಪರ್ಧೆ ಒಡ್ಡಲು ಸಾಧ್ಯವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Question 8

8. ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಆಡಳಿತ ಮಂಡಳಿಗೆ ನೂತನ ಸದಸ್ಯರಾಗಿ ನೇಮಕಗೊಂಡ ಬ್ಯಾಡ್ಮಿಂಟನ್ ಕ್ರೀಡಾಪಟು ಯಾರು?

A
ಜ್ವಾಲಾ ಗುಟ್ಟ
B
ಪಿ ವಿ ಸಿಂಧು
C
ಸೈನಾ ನೆಹ್ವಾಲ್
D
ಪ್ರಕಾಶ್ ಪಡುಕೋಣೆ
Question 8 Explanation: 
ಜ್ವಾಲಾ ಗುಟ್ಟ

ಭಾರತದ ಖ್ಯಾತ ಬ್ಯಾಡ್ಮಿಂಟನ್ ಕ್ರೀಡಾಪಟು ಜ್ವಾಲಾ ಗುಟ್ಟ ಅವರು ಭಾರತೀಯ ಕ್ರೀಡಾ ಪ್ರಾಧಿಕಾರದ ಆಡಳಿತ ಮಂಡಳಿಗೆ ಸದಸ್ಯರಾಗಿ ನೇಮಕಗೊಂಡಿದ್ದಾರೆ.

Question 9

9. ಟೈಮ್ಸ್ ಉನ್ನತ ಶಿಕ್ಷಣದ ಏಷ್ಯಾ ವಿಶ್ವವಿದ್ಯಾಲಯಗಳ ಶ್ರೇಯಾಂಕ-2017 ರಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ವಿಶ್ವವಿದ್ಯಾಲಯ ಯಾವುದು?

A

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು

B
ಪೆಕಿಂಗ್ ವಿಶ್ವವಿದ್ಯಾಲಯ, ಚೀನಾ
C

ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಪುರ

D
ಐಐಟಿ, ಬಾಂಬೆ
Question 9 Explanation: 
ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಪುರ

ಟೈಮ್ಸ್ ಉನ್ನತ ಶಿಕ್ಷಣದ ಏಷ್ಯಾ ವಿಶ್ವವಿದ್ಯಾಲಯಗಳ ಶ್ರೇಯಾಂಕ-2017 ರಲ್ಲಿ ಏಷ್ಯಾದ 300 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಪುರ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಶ್ರೇಯಾಂಕದಲ್ಲಿ ಬೆಂಗಳೂರಿನ ಐಐಎಸ್ಸಿ 27ನೇ ಸ್ಥಾನ ಹಾಗೂ ಐಐಟಿ ಬಾಂಬೆ 42ನೇ ಸ್ಥಾನವನ್ನು ಪಡೆದುಕೊಂಡಿದೆ.

Question 10

10. ಅಮೆರಿಕದ ಅತ್ಯಂತ ಪ್ರತಿಷ್ಠಿತ “ರೆಜೆನೆರಾನ್ ಸೈನ್ಸ್ ಟ್ಯಾಲೆಂಟ್ ಸರ್ಚ್ (STS) -2017” ಪಡೆದುಕೊಂಡ ಭಾರತ-ಅಮೆರಿಕಾ ವ್ಯಕ್ತಿ ಯಾರು?

A
ಇಂದ್ರಾಣಿ ದಾಸ್
B
ಅಶುತೋಷ್ ಸಿಂಗ್
C
ಅಭಿಲಾಷ ಗೌಡ
D
ನವೀನ್ ಭಟ್ಟಚಾರ್ಯ
Question 10 Explanation: 
ಇಂದ್ರಾಣಿ ದಾಸ್

ಅಮೆರಿಕದ ಅತ್ಯಂತ ಪ್ರತಿಷ್ಠಿತ ವಿಜ್ಞಾನ ಮತ್ತು ಗಣಿತ ಪ್ರಶಸ್ತಿ ರೆಜೆನೆರಾನ್ ಸೈನ್ಸ್ ಟ್ಯಾಲೆಂಟ್ ಸರ್ಚ್ (STS) -2017”ಯನ್ನು ಭಾರತ ಸಂಜಾತ ಬಾಲಕಿ ಇಂದ್ರಾಣಿ ದಾಸ್ (17) ಅವರು ಪಡೆದಿದ್ದಾರೆ. ಈ ಪ್ರಶಸ್ತಿಯ ಮೊತ್ತ ₹1.67 ಕೋಟಿ. ಮಿದುಳಿನ ಗಾಯದಿಂದ ನರಕೋಶಗಳಿಗೆ ಹಾನಿಯಾಗುವುದನ್ನು ತಡೆಗಟ್ಟುವ ಬಗ್ಗೆ ನಡೆಸಿದ ಸಂಶೋಧನೆಗೆ ಈ ಪ್ರಶಸ್ತಿ ನೀಡಲಾಗಿದೆ. ಇಂಡಿಯಾನದ ಅರ್ಜುನ್ ರಮಣಿ (18) ಅವರು ತೃತೀಯ ಸ್ಥಾನ ಪಡೆದಿದ್ದು, ₹1 ಕೋಟಿ ಮೊತ್ತದ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2017/05/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್15162017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.