ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,19,20,2017

Question 1

1. ಗ್ರಾಮೀಣ ಭಾಗದ ಗ್ರಾಹಕರಿಗಾಗಿ “ಮೇರಾ ಐ-ಮೊಬೈಲ್” ಎಂಬ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ನ್ನು ಪ್ರಾರಂಭಿಸಿದ ಬ್ಯಾಂಕ್ ಯಾವುದು?

A
ಆಕ್ಸಿಸ್ ಬ್ಯಾಂಕ್
B
ಪಂಜಾಬ್ ನ್ಯಾಷನಲ್ ಬ್ಯಾಂಕ್
C
ಐಸಿಐಸಿಐ ಬ್ಯಾಂಕ್
D
ಕಾರ್ಪೊರೇಷನ್ ಬ್ಯಾಂಕ್
Question 1 Explanation: 
ಐಸಿಐಸಿಐ ಬ್ಯಾಂಕ್

ಗ್ರಾಮೀಣ ಭಾಗದ ಗ್ರಾಹಕರಿಗೆ ಬ್ಯಾಂಕಿಂಗ್ ಮತ್ತು ಕೃಷಿ ಸೇವೆಯ ಮಾಹಿತಿ ನೀಡುವ ಉದ್ದೇಶದಿಂದ ಐಸಿಐಸಿಐ ಬ್ಯಾಂಕ್ “ಮೇರಾ ಐ-ಮೊಬೈಲ್” ಎಂಬ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ನ್ನು ಪ್ರಾರಂಭಿಸಿದೆ. ಸದ್ಯ 11 ಭಾರತೀಯ ಭಾಷೆಗಳಲ್ಲಿ ಆ್ಯಪ್ ಲಭ್ಯವಿದ್ದು, ಈ ಆ್ಯಪ್ ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್, ಗೋಲ್ಡ್ ಲೋನ್, ಕೃಷಿ ಸಲಕರಣೆಗಳ ಸಾಲ ಮುಂತಾದ ಸೇವೆಗಳ ಬಗ್ಗೆ ಮಾಹಿತಿ ಲಭ್ಯವಿರುತ್ತದೆ.

Question 2

2. ಇತ್ತೀಚೆಗೆ ನಿಧನರಾದ “ಚಿನು ಮೋದಿ” ಅವರು ಯಾವ ಭಾಷೆಯ ಪ್ರಸಿದ್ದ ಕವಿ?

A
ಗುಜರಾತಿ
B
ಮಲೆಯಾಳಂ
C
ತೆಲುಗು
D
ಭೋಜಪುರಿ
Question 2 Explanation: 
ಗುಜರಾತಿ

ಗುಜರಾತಿನ ಪ್ರಸಿದ್ದ ಕವಿ ಹಾಗೂ ಘಜಲ್ ಬರಹಗಾರ ಚಿನು ಮೋದಿ ಅಹಮದಾಬಾದಿನಲ್ಲಿ ನಿಧನರಾದರು. ಮೋದಿ ಅವರು ಹಲವಾರು ಕವಿತೆ, ನಾಟಕ, ಕಾದಂಬರಿಗಳನ್ನು ರಚಿಸುವ ಮೂಲಕ ಗುಜರಾತಿ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದರು.

Question 3

ಈ ಕೆಳಗಿನ ಯಾರು 2017ನೇ "ಇಂಡಿಯನ್ ವೆಲ್ಸ್ ಎಟಿಪಿ ಟೆನಿಸ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು?

A
ರೋಜರ್ ಫೆಡರರ್
B
ಸ್ಟಾನಿಸ್ಲಾಸ್ ವಾವ್ರಿಂಕ
C
ನೊವಾಕ್ ಜೊಕೊವಿಕ್
D
ಆಂಡಿ ಮುರ್ರೆ
Question 3 Explanation: 
ರೋಜರ್ ಫೆಡರರ್

ಸ್ವಿಟ್ಸರ್ಲ್ಯಾಂಡಿನ ಟೆನಿಸ್ ತಾರೆ ರೋಜರ್ ಫೆಡರರ್ 2017ನೇ ಸಾಲಿನ "ಇಂಡಿಯನ್ ವೆಲ್ಸ್ ಎಟಿಪಿ ಟೆನಿಸ್' ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಅವರು ತಮ್ಮದೇ ದೇಶದ ಸ್ಟಾನಿಸ್ಲಾಸ್ ವಾವ್ರಿಂಕ ವಿರುದ್ಧ 6-4, 7-5 ಅಂತರದ ಜಯ ಸಾಧಿಸಿದರು. ಫೆಡರರ್ ಇಂಡಿಯನ್ ವೆಲ್ಸ್ ಪ್ರಶಸ್ತಿ ಗೆಲ್ಲುತ್ತಿರುವುದು ಇದು 5ನೇ ಸಲ. ಇದರೊಂದಿಗೆ ನೊವಾಕ್ ಜೊಕೋವಿಕ್ ಅವರ ಸರ್ವಾಧಿಕ ಗೆಲುವಿನ ದಾಖಲೆಯನ್ನು ಅವರು ಸರಿದೂಗಿಸಿದರು. ಇದಕ್ಕೂ ಮುನ್ನ ಫೆಡರರ್ 2004, 2005, 2006 ಹಾಗೂ 2012ರಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದರು. 35ರ ಹರೆಯದ ರೋಜರ್ ಫೆಡರರ್ ಎಟಿಪಿ ಪ್ರಶಸ್ತಿ ಗೆದ್ದ ಅತೀ ಹಿರಿಯ ಟೆನಿಸಿಗನೆಂಬ ಹೆಗ್ಗಳಿಕೆಗೂ ಪಾತ್ರರಾದರು.

Question 4

4. “2017 ಅಂತಾರಾಷ್ಟ್ರೀಯ ಅರಣ್ಯ ದಿನ (International Day of Forest)” ಧ್ಯೇಯವಾಕ್ಯ ______?

A
ಫಾರೆಸ್ಟ್ & ಎನರ್ಜಿ
B
ಫಾರೆಸ್ಟ್ & ಫ್ಯೂಲ್
C
ಫಾರೆಸ್ಟ್ ಫಾರ್ ಟೂಮಾರೊ
D
ಫಾರೆಸ್ಟ್ ಫಾರ್ ಬೆಟರ್ ವರ್ಲ್ಡ್
Question 4 Explanation: 
ಫಾರೆಸ್ಟ್ & ಎನರ್ಜಿ

ಅಂತಾರಾಷ್ಟ್ರೀಯ ಅರಣ್ಯ ದಿನವನ್ನು ಪ್ರತಿವರ್ಷ ಮಾರ್ಚ್ 21 ರಂದು ಆಚರಿಸಲಾಗುತ್ತದೆ. ಪ್ರಸ್ತುತ ಹಾಗೂ ಭವಿಷ್ಯದ ಪೀಳಿಗೆಗೆ ಅರಣ್ಯದ ಮಹತ್ವವನ್ನು ಸಾರುವುದು ಈ ದಿನದ ಉದ್ದೇಶ. ಈ ವರ್ಷದ ಧ್ಯೇಯವಾಕ್ಯ “ಫಾರೆಸ್ಟ್ & ಎನರ್ಜಿ (Forest and Energy)”.

Question 5

5. ಭಾರತದಲ್ಲಿ ನಡೆದ 2017 ನೇ ಸಾಲಿನ ವಿಜಯ್ ಹಜಾರೆ ಕ್ರಿಕೆಟ್ ಟ್ರೋಫಿಯನ್ನು ಗೆದ್ದ ತಂಡ ಯಾವುದು?

A
ಕರ್ನಾಟಕ
B
ಮುಂಬೈ
C
ತಮಿಳುನಾಡು
D
ರೈಲ್ವೇಸ್
Question 5 Explanation: 
ತಮಿಳುನಾಡು

ತಮಿಳುನಾಡು ತಂಡ 2017ನೇ ಸಾಲಿನ ವಿಜಯ್ ಹರಾರೆ ಕ್ರಿಕೆಟ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಪಶ್ಚಿಮ ಬಂಗಾಳ ತಂಡವನ್ನು 37 ರನ್ ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

Question 6

6. “ವಿಶ್ವ ಸಂತೋಷ ಸೂಚ್ಯಂಕ (ವರ್ಲ್ಡ್ ಹ್ಯಾಪಿನೆಸ್ ಇಂಡೆಕ್ಸ್ 2017” ರಲ್ಲಿ ಭಾರತ ಯಾವ ಶ್ರೇಣಿಯಲ್ಲಿದೆ?

A
118 ನೇ ಶ್ರೇಯಾಂಕ
B
122 ನೇ ಶ್ರೇಯಾಂಕ
C
140 ನೇ ಶ್ರೇಯಾಂಕ
D
151 ನೇ ಶ್ರೇಯಾಂಕ
Question 6 Explanation: 
122 ನೇ ಶ್ರೇಯಾಂಕ

ವಿಶ್ವ ಸಂಸ್ಥೆ ಪ್ರಕಟಿತ “ವಿಶ್ವ ಸಂತೋಷ ಸೂಚ್ಯಂಕ 2017” ಪಟ್ಟಿಯಲ್ಲಿ ಒಟ್ಟು 155 ದೇಶಗಳ ಪೈಕಿ ಭಾರತ 122 ನೇ ಸ್ಥಾನದಲ್ಲಿ. ನಾರ್ವೆ ಅಗ್ರ ಶ್ರೇಯಾಂಕ ಹೊಂದಿದ್ದು ಡೆನ್ಮಾರ್ಕ್, ಐಸ್ ಲ್ಯಾಂಡ್, ಸ್ವಿಟ್ಜರ್ ಲ್ಯಾಂಡ್ ಮತ್ತು ಫಿನ್ ಲ್ಯಾಂಡ್ ನಂತರದ ಸ್ಥಾನಗಳಲ್ಲಿವೆ. ದೇಶದ ನಾಗರಿಕನ ಜಿಡಿಪಿ, ನಿರೀಕ್ಷಿತ ಜೀವಿತಾವಧಿ ಈ ಅಂಶಗಳನ್ನಾಧರಿಸಿ ಸಮೀಕ್ಷೆ ನಡೆಸಲಾಗಿದೆ.

Question 7

7. ‘ಬ್ಲೂಂಬರ್ಗ್ ಗ್ಲೋಬಲ್ ಹೆಲ್ತ್ ಇಂಡೆಕ್ಸ್-2017’ ರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದ ದೇಶ ಯಾವುದು?

A
ನಾರ್ವೆ
B
ಇಟಲಿ
C
ಆಸ್ಟ್ರೇಲಿಯ
D
ಸ್ವಿಟ್ಜರ್ ಲ್ಯಾಂಡ್
Question 7 Explanation: 
ಇಟಲಿ

ಇತ್ತೀಚೆಗೆ ಪ್ರಕಟಗೊಂಡ ಬ್ಲೂಂಬರ್ಗ್ ಜಾಗತಿಕ ಆರೋಗ್ಯ ಸೂಚ್ಯಂಕ-2017 ರಲ್ಲಿ ಇಟಲಿ ಅಗ್ರಸ್ಥಾನ ಪಡೆದುಕೊಂಡಿದೆ. ಅಧ್ಯಯನದ ಪ್ರಕಾರ ಇಟಲಿಯ ಸರಾಸರಿ ಜೀವಾತವಧಿ 80-89 ವರ್ಷಗಳು. ಐಸ್ ಲ್ಯಾಂಡ್ ಎರಡನೇ ಸ್ಥಾನ, ಸ್ವಿಟ್ಜರ್ಲ್ಯಾಂಡ್ ಮೂರನೇ ಸ್ಥಾನ ಹಾಗೂ ಸಿಂಗಪುರ ನಾಲ್ಕನೇ ಸ್ಥಾನ ಪಡೆದುಕೊಂಡಿವೆ.

Question 8

8. ಅಂತಾರಾಷ್ಟ್ರೀಯ ಸೌರ ಒಕ್ಕೂಟದ (ಇಂಟರ್ ನ್ಯಾಷನಲ್ ಸೋಲಾರ್ ಅಲಯನ್ಸ್) ಪೂರ್ಣಕಾಲಿಕ ಹಂಗಾಮಿ ಡೈರಕ್ಟರ್ ಜನರಲ್ ಆಗಿ ನೇಮಕಗೊಂಡವರು ಯಾರು?

A
ಮುನೀಷ್ ಮೌದ್ಗೀಲ್
B
ನವೀನ್ ಜೈನ್
C
ಉಪೇಂದ್ರ ತ್ರಿಪಾಟಿ
D
ಪ್ರಭಾವತಿ
Question 8 Explanation: 
ಉಪೇಂದ್ರ ತ್ರಿಪಾಟಿ

ಹಿರಿಯ ಐಎಎಸ್ ಅಧಿಕಾರಿ ಕರ್ನಾಟಕ ಸೇವೆಯ ಉಪೇಂದ್ರ ತ್ರಿಪಾಟಿಯವರು ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಪೂರ್ಣಕಾಲಿಕ ಹಂಗಾಮಿ ಡೈರಕ್ಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಕೇಂದ್ರ ಕಚೇರಿ ಗುರುಗಾಂವ್ ನ ಗ್ವಲಪಹರಿಯಲ್ಲಿರುವ ರಾಷ್ಟ್ರೀಯ ಸೌರ ಶಕ್ತಿ ಸಂಸ್ಥೆಯಲ್ಲಿದೆ.

Question 9

9. ವಿಶ್ವ ಚಳಿಗಾಲದ ವಿಶೇಷ ಒಲಂಪಿಕ್ ಕ್ರೀಡಾಕೂಟ 2017 ನ್ನು ಯಾವ ದೇಶದಲ್ಲಿ ಆಯೋಜಿಸಲಾಗಿತ್ತು?

A
ಫ್ರಾನ್ಸ್
B
ಕೆನಡಾ
C
ಲಕ್ಸಂಬರ್ಗ್
D
ಆಸ್ಟ್ರಿಯ
Question 9 Explanation: 
ಆಸ್ಟ್ರಿಯ

ವಿಶ್ವ ಚಳಿಗಾಲದ ವಿಶೇಷ ಒಲಂಪಿಕ್ ಕ್ರೀಡಾಕೂಟ 2017 ಆಸ್ಟ್ರೀಯಾದಲ್ಲಿ ಮಾರ್ಚ್ 14 ರಿಂದ ಆರಂಭಗೊಂಡಿದ್ದು, ಮಾರ್ಚ್ 24ರವರೆಗೆ ನಡೆಯಲಿದೆ. 105 ದೇಶಗಳಿಂದ 2,600 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

Question 10

10. ದುಬೈನಲ್ಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ ನೂತನ ಮುಖ್ಯ ಲೆಕ್ಕಾಧಿಕಾರಿ ಯಾಗಿ ನೇಮಕಗೊಂಡವರು ಯಾರು?

A
ಅಂಕುರ್ ಖನ್ನಾ
B
ಸುಜಿತ್ ಕುಮಾರ್
C
ರೇಖಾ ಭರದ್ವಾಜ್
D
ವಿಶಾಲ್ ಕೃಷ್ಣ
Question 10 Explanation: 
ಅಂಕುರ್ ಖನ್ನಾ
There are 10 questions to complete.

[button link=”http://www.karunaduexams.com/wp-content/uploads/2017/05/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್19202017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.