ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,25,26,2017
Question 1 |
1. ಪ್ರತಿಷ್ಟಿತ ‘ಕಲಾ ರತ್ನ ಪ್ರಶಸ್ತಿ’ ಗೌರವಕ್ಕೆ ಪಾತ್ರವಾಗಿರುವ ಭಾರತೀಯ ಚಲನಚಿತ್ರ ನಟ ಯಾರು?
ಅಕ್ಷಯ್ ಕುಮಾರ್ | |
ಮೋಹನ್ ಲಾಲ್ | |
ಅನುಪಮ್ ಖೇರ್ | |
ಜಾನಿ ಲಿವರ್ |
ಹಿಂದಿ ಚಿತ್ರರಂಗದ ಹಿರಿಯ ನಟ ಅನುಪಮ್ ಖೇರ್ ಪ್ರತಿಷ್ಟಿತ ‘ಕಲಾ ರತ್ನ ಪ್ರಶಸ್ತಿ’ ಗೌರವಕ್ಕೆ ಪಾತ್ರರಾಗಿದ್ದು, ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರಿಂದ ಪ್ರಶಸ್ತಿ ಪಡೆಯಲಿದ್ದಾರೆ. ಅನುಪಮ್ ಖೇರ್ ರವರು ಭಾರತೀಯ ಚಲನಚಿತ್ರ ಮತ್ತು ಕಲೆಗೆ ನೀಡಿರುವ ಸೇವೆಗಾಗಿ 2004 ರಲ್ಲಿ ಪದ್ಮಶ್ರೀ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಬಾಲಿವುಡ್ ಅಲ್ಲದೆ ಹಾಲಿವುಡ್ ಸಿನಿಮಾಗಳಲ್ಲಿಯೂ ಸಹ ತಮ್ಮ ನಟನಾ ಕೌಶಲ್ಯವನ್ನು ಮೆರೆದಿರುವುದು ವಿಶಿಷ್ಟ.
Question 2 |
2. ಭಾರತದಲ್ಲಿ ಮೊದಲ ಬಾರಿಗೆ ‘ವರ್ಟಿಕಲ್ ಗಾರ್ಡನ್’ ಪರಿಕಲ್ಪನೆಯನ್ನು ಈ ಕೆಳಕಂಡ ಯಾವ ನಗರದಲ್ಲಿ ಸಾಕಾರಗೊಳಿಸಲಾಗಿದೆ?
ದೆಹಲಿ | |
ಬೆಂಗಳೂರು | |
ಗುರ್ ಗಾವ್ | |
ಕೊಚ್ಚಿ |
ವಾಯು ಮಾಲಿನ್ಯ ಮಟ್ಟವನ್ನು ನಿಯಂತ್ರಿಸುವ ಸಲುವಾಗಿ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ‘ವರ್ಟಿಕಲ್ ಗಾರ್ಡನ್’ ಪರಿಕಲ್ಪನೆಯನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಅಳವಡಿಸಲಾಗುತ್ತಿದೆ. ಈ ಉದ್ಯಾನ ಶಬ್ಧ ಮಾಲಿನ್ಯವನ್ನೂ ಸಹ ಕಡೆಮೆಗೊಳಿಸಲಿದೆ. ಸರ್ಕಾರೇತರ ಸಂಸ್ಥೆ ‘ಸೇ-ಟ್ರೀಸ್’ ಈ ಕಾರ್ಯಕ್ರಮದ ಮುಖ್ಯ ರೂವಾರಿ. ಈ ಮೇಲ್ಸೇತುವೆಯ ಪಿಲ್ಲರ್ ಗಳಿಗೆ ಸಾವಯವ ಗಿಡ-ಬಳ್ಳಿಗಳನ್ನು ಪ್ರಾಕೃತಿಕವಾಗಿ ಬೆಳೆಯುವಂತೆ ಮಾಡಲಾಗುತ್ತದೆ. ಅಲ್ಲದೆ ಈ ಉದ್ಯಾನಕ್ಕೆ ಸ್ವಯಂ ಚಾಲಿತ ಹನಿ ನೀರಾವರಿ ವ್ಯವಸ್ಥೆಯನ್ನು ಸಹಾ ಮಾಡಲಾಗುತ್ತದೆ.
Question 3 |
3. ‘ವರ್ಲ್ಡ್ ಕಾನ್ಫರೆನ್ಸ್ ಆನ್ ಎನ್ವಿರಾನ್ಮೆಂಟ್’ನ 3ನೇ ಆವೃತ್ತಿ ಯಾವ ದೇಶದಲ್ಲಿ ಆಯೋಜನೆಗೊಂಡಿತ್ತು?
ಭಾರತ | |
ಚೀನಾ | |
ಫ್ರಾನ್ಸ್ | |
ಫಿಲಿಫೈನ್ಸ್ |
ಮೂರನೇ ಪರಿಸರ ಕುರಿತಾದ ಸಮ್ಮೇಳನ ಭಾರತದ ರಾಜಧಾನಿ ನವದೆಹಲಿಯಲ್ಲಿ ಮಾರ್ಚ್ 25 ರಂದು ಆರಂಭಗೊಂಡಿತು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈ ಸಮ್ಮೇಳನವನ್ನು ಆಯೋಜಿಸಿದ್ದು, ರಾಷ್ಟ್ರಪತಿ ಪ್ರಣಭ್ ಮುಖರ್ಜಿ ಅವರು ಚಾಲನೆ ನೀಡಿದರು.
Question 4 |
4. “ವಿಶ್ವ ಗುಬ್ಬಿ ದಿನಾಚರಣೆ” ಯನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಮಾರ್ಚ್ 18 | |
ಮಾರ್ಚ್ 20 | |
ಮಾರ್ಚ್ 23 | |
ಮಾರ್ಚ್ 28 |
“ವಿಶ್ವ ಗುಬ್ಬಿ ದಿನಾಚರಣೆ” ಯನ್ನು ಪ್ರತಿವರ್ಷ ಮಾರ್ಚ್ 20 ರಂದು ಆಚರಿಸಲಾಗುತ್ತಿದೆ. ನಗರವಾಸಿಯಾದ ಗುಬ್ಬಚ್ಚಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ನಗರ ಮಾಲಿನ್ಯದಿಂದ ಪಕ್ಷಿ ಸಂಕುಲಕ್ಕೆ ಉಂಟಾಗಿರುವ ತೀವ್ರ ಸಂಕಷ್ಟದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ.
Question 5 |
5. ಈ ಕೆಳಗಿನ ಯಾವ ದೇಶ “2017 ವಿಶ್ವ ಪರಿಸರ ಶಿಕ್ಷಣ ಕಾಂಗ್ರೆಸ್” ಆಯೋಜಿಸಲಿದೆ?
ಭಾರತ | |
ರಷ್ಯಾ | |
ಕೆನಡಾ | |
ಸ್ಪೇನ್ |
9ನೇ ವಿಶ್ವ ಪರಿಸರ ಶಿಕ್ಷಣ ಕಾಂಗ್ರೆಸ್-2017 ಕೆನಡಾದಲ್ಲಿ ಸೆಪ್ಟೆಂಬರ್ 9-15 ರವರೆಗೆ ನಡೆಯಲಿದೆ.
Question 6 |
6. ಸಮುದ್ರದ ಮಾರ್ಗದ ಮೂಲಕ ವರ್ಲಿ ಕೊಲಿವಾಡ ದಿಂದ ದಿ ಗೇಟ್ ವೇ ಆಫ್ ಇಂಡಿಯಾ ವರೆಗೂ ಯಶಸ್ವಿಯಾಗಿ ಸಮುದ್ರಯಾನ ಮಾಡಿದ ಪ್ರಪ್ರಥಮ ಭಾರತೀಯ ಮಹಿಳೆ ಯಾರು?
ಗೌರಿ ಸಿಂಗ್ | |
ನಿಖಿತ ಭರದ್ವಾಜ್ | |
ರೇಖಾ ನಿಗಮ್ | |
ದೀಪಿಕಾ ಕುಮಾರಿ |
ರಾಜಸ್ಥಾನದ 14 ವರ್ಷದ ಗೌರಿ ಸಿಂಗ್ ಸಮುದ್ರದ ಮಾರ್ಗದ ಮೂಲಕ ವರ್ಲಿ ಕೊಲಿವಾಡ ದಿಂದ ದಿ ಗೇಟ್ ವೇ ಆಫ್ ಇಂಡಿಯಾ ವರೆಗೂ ಯಶಸ್ವಿಯಾಗಿ ಸಮುದ್ರಯಾನ ಮಾಡಿದ ಪ್ರಪ್ರಥಮ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ. 36 ಕಿ.ಮೀ ಉದ್ದದ ಜಲ ಮಾರ್ಗವನ್ನು ಸುಮಾರು 6 ಗಂಟೆ 30 ನಿಮಿಷದಲ್ಲಿ ಪೂರ್ಣಗೊಳಿಸಿದರು.
Question 7 |
7. ಮಾನವ ದೇಹದ ಕೆಳಗಿನ ಯಾವ ಅಂಗ/ಅಂಗಾಂಶ ಸೀಸ ಸೇವೆನೆಗೆ ಹೆಚ್ಚು ಸಂವೇಧನ ಶೀಲವಾಗಿರುತ್ತದೆ?
ಬ್ರೈನ್ | |
ಕಿಡ್ನಿ | |
ಜಠರ | |
ಸಣ್ಣ ಕರಳು |
ಸೀಸದ ವಿಷಕ್ಕೆ ಮಿದುಳು ಅತಿ ಹೆಚ್ಚು ಸಂವೇದನಾಶೀಲವಾದ ಮಾನವನ ಅಂಗ/ಅಂಗಾಂಶವಾಗಿದೆ.
Question 8 |
8. ಸಂತೋಷ್ ಟ್ರೋಫಿ ಫುಟ್ ಬಾಲ್ ಟೂರ್ನಮೆಂಟ್-2017 ನ್ನು ಗೆದ್ದುಕೊಂಡ ಫುಟ್ ಬಾಲ್ ತಂಡ ಯಾವುದು?
ಗೋವಾ | |
ರೈಲ್ವೇಸ್ | |
ತಮಿಳುನಾಡು | |
ಪಶ್ಚಿಮ ಬಂಗಾಳ |
Question 9 |
9. ಭಾರತೀಯ ವಿಜ್ಞಾನ ಕಾಂಗ್ರೆಸ್ -2018, 105 ನೇ ಆವೃತ್ತಿಯನ್ನು ಯಾವ ನಗರದಲ್ಲಿ ಆಯೋಜಿಸಲಾಗುತ್ತಿದೆ?
ದೆಹಲಿ | |
ಬೆಂಗಳೂರು | |
ಚೆನ್ನೈ | |
ಹೈದರಾಬಾದ್ |
[button link=”http://www.karunaduexams.com/wp-content/uploads/2017/05/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್25262017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ