ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,27,28,2017
Question 1 |
1. ‘ನ್ಯಾಷನಲ್ ಸೆಂಟರ್ ಫಾರ್ ಅಂಟಾರ್ಟಿಕ್ ಅಂಡ್ ಓಷನ್ ರಿಷರ್ಚ್ (NCAOR)’ ನ ಮುಖ್ಯ ಕಚೇರಿ ಎಲ್ಲಿದೆ?
ಮಿನಿಕಾಯ್ | |
ಆ್ಯಂಡ್ರಾಟ್ | |
ಕವರಟ್ಟಿ | |
ವಾಸ್ಕೋಡಗಾಮ |
‘ನ್ಯಾಷನಲ್ ಸೆಂಟರ್ ಫಾರ್ ಅಂಟಾರ್ಟಿಕ್ ಅಂಡ್ ಓಷನ್ ರಿಷರ್ಚ್ (NCAOR)’ ನ ಮುಖ್ಯ ಕಚೇರಿ ಗೋವಾದ ವಾಸ್ಕೋಡಗಾಮದಲ್ಲಿದೆ. ಧ್ರುವ ಪ್ರದೇಶದಲ್ಲಿ ಮತ್ತು ದಕ್ಷಿಣ ಸಮುದ್ರ ಪ್ರದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ಮುಖ್ಯ ಭೂಮಿಕೆ ವಹಿಸುತ್ತಿದೆ.
Question 2 |
2. “ವಿಶ್ವ ರಂಗಭೂಮಿ ದಿನ (World Theatre Day)”ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಮಾರ್ಚ್ 23 | |
ಮಾರ್ಚ್ 25 | |
ಮಾರ್ಚ್ 27 | |
ಮಾರ್ಚ್ 29 |
ವಿಶ್ವ ರಂಗಭೂಮಿ ದಿನವನ್ನು ಪ್ರತಿ ವರ್ಷ ಮಾರ್ಚ್ 27 ರಂದು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆ 1961 ರಲ್ಲಿ ಈ ದಿನಕ್ಕೆ ಚಾಲನೆ ನೀಡಿತು.
Question 3 |
3. ಸ್ವಸಹಾಯ ಸಂಘಗಳ ಮೂಲಕ ಬ್ಯಾಂಕ್ ರಹಿತ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳ ವಿಸ್ತರಣೆ ಮತ್ತು ಆರ್ಥಿಕ ಸೇರ್ಪಡೆ ಕಾರ್ಯಕ್ರಮವನ್ನು ಪ್ರಾರಂಭಿಸಿದ ಭಾರತದ ಪ್ರಥಮ ರಾಜ್ಯ ಯಾವುದು?
ಕರ್ನಾಟಕ | |
ಪಶ್ಚಿಮ ಬಂಗಾಳ | |
ಒಡಿಶಾ | |
ಕೇರಳ |
ಸ್ವಸಹಾಯ ಸಂಘಗಳ ಮೂಲಕ ಬ್ಯಾಂಕ್ ರಹಿತ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳ ವಿಸ್ತರಣೆ ಮತ್ತು ಆರ್ಥಿಕ ಸೇರ್ಪಡೆ ಕಾರ್ಯಕ್ರಮವನ್ನು ಒಡಿಶಾ ರಾಜ್ಯ ಪ್ರಾರಂಭಿಸಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದೊಂದಿಗೆ ರಾಜ್ಯ ಸರ್ಕಾರ ಈ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಮೊದಲ ಹಂತದಲ್ಲಿ ಬ್ಯಾಂಕಿಂಗ್ ಸೇವೆ ಹೊಂದಿರದ ಸುಮಾರು 1000 ಅತೀ ಹಿಂದುಳಿದ ಗ್ರಾಮಗಳಲ್ಲಿ ಸೇವೆಯನ್ನು ಪ್ರಾರಂಭಿಸಲಿದೆ.
Question 4 |
4. ಕೇಂದ್ರಿಕೃತ ಪಾವತಿ ವ್ಯವಸ್ಥೆ ಆಧಾರಿತ ಮೊಬೈಲ್ ಪಾವತಿ ಸೇವೆಯಾದ “ಟ್ರೂ ಕಾಲರ್ ಪೇ” ಯನ್ನು ಟ್ರೂ ಕಾಲರ್ ಯಾವ ಬ್ಯಾಂಕಿನ ಸಹಭಾಗಿತ್ವದಡಿ ಪ್ರಾರಂಭಿಸಿದೆ?
ಐಸಿಐಸಿಐ ಬ್ಯಾಂಕ್ | |
ಹೆಚ್.ಡಿ.ಎಫ್.ಸಿ. ಬ್ಯಾಂಕ್ | |
ಆಕ್ಸಿಸ್ ಬ್ಯಾಂಕ್ | |
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ |
ಕೇಂದ್ರಿಕೃತ ಪಾವತಿ ವ್ಯವಸ್ಥೆ ಆಧಾರಿತ ಮೊಬೈಲ್ ಪಾವತಿ ಸೇವೆಯಾದ “ಟ್ರೂ ಕಾಲರ್ ಪೇ” ಯನ್ನು ಟ್ರೂ ಕಾಲರ್ ಐಸಿಐಸಿಐ ಬ್ಯಾಂಕಿನ ಸಹಭಾಗಿತ್ವದಡಿ ಪ್ರಾರಂಭಿಸಿದೆ. ಟ್ರೂ ಕಾಲರ್ ಗ್ರಾಹಕರು ಈ ಆ್ಯಪ್ ನಲ್ಲಿ ವಿಶಿಷ್ಟ ವರ್ಚುಯಲ್ ಪೇಮೆಂಟ್ ಅಡ್ರೆಸ್ ನ್ನು ನೋಂದಾಯಿಸಿ ಮೊಬೈಲ್ ಮೂಲಕ ಹಣ ಪಾವತಿ ಮತ್ತು ಸ್ವೀಕೃತಿ ಸೇವೆಗಳನ್ನು ಪಡೆಯಬಹುದಾಗಿದೆ.
Question 5 |
5. ಸೆಂಟರ್ ಫಾರ್ ಏಷ್ಯಾ ಫೆಸಿಫಿಕ್ ಏವಿಯೇಷನ್ (CAPA) ಇತ್ತೀಚಿನ ವರದಿ ಪ್ರಕಾರ ದೇಶಿಯ ಪ್ರಯಾಣಿಕರ ದಟ್ಟಣೆಯ ವಿಭಾಗದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
ಒಂದು | |
ಮೂರು | |
ಐದು | |
ಆರು |
ಸಿಡ್ನಿ ಮೂಲದ ವಿಮಾನಯಾನ ಚಿಂತಕರ ಚಾವಡಿ “ಸೆಂಟರ್ ಫಾರ್ ಏಷ್ಯಾ ಫೆಸಿಫಿಕ್ ಏವಿಯೇಷನ್ (CAPA)” ಇತ್ತೀಚಿನ ವರದಿಯ ಪ್ರಕಾರ ದೇಶಿಯ ಪ್ರಯಾಣಿಕರ ದಟ್ಟಣೆಯ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದೆ. 2016 ರಲ್ಲಿ ಭಾರತದ ದೇಶಿಯ ವಿಮಾನ ಪ್ರಯಾಣಿಕರ ಸಂಖ್ಯೆ 100 ಮಿಲಿಯನ್ ರಷ್ಟಿದ್ದು, ಜಪಾನ್ (97 ಮಿಲಿಯನ್)ನನ್ನು ಹಿಂದಿಕ್ಕಿದೆ. ಅಮೆರಿಕ ಮೊದಲ ಸ್ಥಾನದಲ್ಲಿದ್ದಾರೆ, ಚೀನಾ ಎರಡನೇ ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಭಾರತ ಇದೆ.
Question 6 |
6. 2017 ಫಾರ್ಮೂಲಾ 1 ರೊಲೆಕ್ಸ್ ಆಸ್ಟ್ರೇಲಿಯಾ ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡವರು _______?
ಸೆಬಾಸ್ಟಿಯನ್ ವೆಟ್ಟಲ್ | |
ಲೂಯಿಸ್ ಹ್ಯಾಮಿಲ್ಟನ್ | |
ವಾಲ್ಟೆರಿ ಬೊಟ್ಟಸ್ | |
ನಿಕೊ ರೋಸ್ಬರ್ಗ್ |
Question 7 |
7. ಈ ಕೆಳಗಿನ ಯಾರು “ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (Animal Welfare Board of India)ಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?
ಶರದ್ ಸಿಂಗ್ ನೇಗಿ | |
ಅಮಿತ್ ಮಿಶ್ರಾ | |
ಜ್ಯೋತಿಸಿಂಗ್ ರಾಥೋಡ್ | |
ಕಲ್ಯಾಣ್ ಕುಮಾರ್ |
ಹಿರಿಯ ಐಎಫ್ಎಸ್ ಅಧಿಕಾರಿ ಶರದ್ ಸಿಂಗ್ ನೇಗಿ ಅವರು “ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ”ಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. “ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ”ಯು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಸಂವಿಧಾನಿಕ ಸಂಸ್ಥೆಯಾಗಿದ್ದು, ಇದರ ಕೇಂದ್ರ ಕಚೇರಿ ಚೆನ್ನೈನಲ್ಲಿದೆ.
Question 8 |
8. “ಕಿನ್ನೆರಸನಿ ವನ್ಯಜೀವಿ ಅಭಯಾರಣ್ಯ (Kinnerasani Wildlife Sanctuary)” ಯಾವ ರಾಜ್ಯದಲ್ಲಿದೆ?
ಒಡಿಶಾ | |
ತೆಲಂಗಣ | |
ಮಹಾರಾಷ್ಟ್ರ | |
ಗೋವಾ |
ಕಿನ್ನರಸನಿ ವನ್ಯಜೀವಿ ಅಭಯಾರಣ್ಯ ತೆಲಂಗಣ ರಾಜ್ಯದ ಖಮ್ಮಮ್ ಜಿಲ್ಲೆಯಲ್ಲಿದೆ.
Question 9 |
9. “ಅತ್ಯುತ್ತಮ ಸಣ್ಣ ಬ್ಯಾಂಕ್’ 2016 ಪ್ರಶಸ್ತಿಯನ್ನು ಪಡೆದ ಭಾರತೀಯ ಬ್ಯಾಂಕ್ ಯಾವುದು?
ಲಕ್ಷ್ಮೀ ವಿಲಾಸ್ ಬ್ಯಾಂಕ್ | |
ಯೆಎಸ್ ಬ್ಯಾಂಕ್ | |
ಕರೂರು ವೈಶ್ಯ ಬ್ಯಾಂಕ್ | |
ದೆನಾ ಬ್ಯಾಂಕ್ |
Question 10 |
10. 2016 ನೇ ಸಾಲಿನ ‘ಸರ್ ಗ್ಯಾರೀಫೀಲ್ಡ್ ಸೋಬರ್ಸ್ ಟ್ರೋಫಿ’ ಪ್ರಶಸ್ತಿ ಯನ್ನು ಪಡೆದ ಭಾರತೀಯ ಕ್ರಿಕೆಟ್ ಆಟಗಾರ ಯಾರು?
ವಿರಾಟ್ ಕೊಹ್ಲಿ | |
ಮಹೇಂದ್ರ ಸಿಂಗ್ ಧೋನಿ | |
ಅಜಿಂಕ್ಯಾ ರಹಾನೆ | |
ರವಿಚಂದ್ರನ್ ಅಶ್ವಿನ್ |
ಐಸಿಸಿ ವರ್ಷದ ಕ್ರಿಕೆಟ್ ಆಟಗಾರ ಮತ್ತು ವರ್ಷದ ಟೆಸ್ಟ್ ಕ್ರಿಕೆಟ್ ಆಟಗಾರನಿಗೆ ನೀಡುವ ‘ಸರ್ ಗ್ಯಾರೀಫೀಲ್ಡ್ ಸೋಬರ್ಸ್ ಟ್ರೋಫಿ’ ಪ್ರಶಸ್ತಿಯನ್ನು 2016 ನೇ ಸಾಲಿಗೆ ರವಿಚಂದ್ರನ್ ಅಶ್ವಿನ್ ಗೆ ನೀಡಲಾಯಿತು. ಈ ಮೂಲಕ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ನಂತರ ಸರ್ ಗ್ಯಾರೀಫೀಲ್ಡ್ ಸೋಬರ್ಸ್ ಟ್ರೋಫಿ ಪ್ರಶಸ್ತಿಯನ್ನು ಪಡೆದ ಭಾರತದ 3ನೇ ಕ್ರಿಕೆಟ್ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.
[button link=”http://www.karunaduexams.com/wp-content/uploads/2017/05/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್27282017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ