ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,29,30,2017
Question 1 |
1. ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ (WFP)ದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
ಡೇವಿಡ್ ಬಿಯಾಸ್ಲೆ | |
ಜೇಮ್ಸ್ ಸ್ಮಿತ್ | |
ಡೇವಿಡ್ ಬೆತ್ಲೆಮ್ | |
ನಿಕ್ಕಿ ಹ್ಯಾಲೆ |
ಸೌತ್ ಕ್ಯಾಲಿಪೋರ್ನಿಯಾದ ಮಾಜಿ ಗವರ್ನರ್ ಡೇವಿಡ್ ಬಿಯಾಸ್ಲೆ ಅವರು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮದ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. WFP ವಿಶ್ವದ ಅತಿ ದೊಡ್ಡ ಮಾನವೀಯ ಸಂಘಟನೆಯಾಗಿದ್ದು, ಪ್ರತಿವರ್ಷ 75 ದೇಶಗಳಲ್ಲಿ 80 ದಶಲಕ್ಷ ಜನರಿಗೆ ಆಹಾರ ಸಹಾಯ ಒದಗಿಸುತ್ತಿದೆ. ಇದರ ಕೇಂದ್ರ ಕಚೇರಿ ಇಟಲಿಯ ರೋಮ್ ನಲ್ಲಿದೆ.
Question 2 |
2. ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯವು ಆನ್ ಲೈನ್ ಮುಖಾಂತರ ಸಿನಿಮಾ ಪ್ರಮಾಣಪತ್ರವನ್ನು ನೀಡುವ ಸಲುವಾಗಿ ಪ್ರಾರಂಭಿಸಿದ ವ್ಯವಸ್ಥೆ ಯಾವುದು?
ಇ-ಸಿನಿಪ್ರಮಾಣ್ | |
ಇ-ಸೆನ್ಸಾರ್ | |
ಇ-ಸಿನಿಮಾ | |
ಇ-ಪ್ರಮಾಣ್ |
ಚಲನಚಿತ್ರ ಉದ್ಯಮದಲ್ಲಿ ಪಾರದರ್ಶಕತೆ ಮತ್ತು ಸುಲಲಿತಗೊಳಿಸುವ ಉದ್ದೇಶದಿಂದ ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯವು ಆನ್ ಲೈನ್ ಮುಖಾಂತರ ಸಿನಿಮಾ ಪ್ರಮಾಣಪತ್ರವನ್ನು ನೀಡುವ ಸಲುವಾಗಿ ಇ-ಸಿನಿಪ್ರಮಾಣ್ ಎಂಬ ಆನ್ ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ.
Question 3 |
3. ಸ್ಪೋರ್ಟ್ಸ ಅಥಾರಿಟಿ ಆಫ್ ಇಂಡಿಯಾದ ನೂತನ ಸದಸ್ಯರಾಗಿ ಯಾರನ್ನು ನೇಮಕ ಮಾಡಲಾಗಿದೆ?
ಸಾನಿಯಾ ಮಿರ್ಜಾ | |
ಸಿದ್ದಾರ್ಥ ಉಪಾಧ್ಯಾಯ | |
ಗೋಪಿಚಂದ್ | |
ವಿಜೆಯೇಂದ್ರ ಸಿಂಗ್ |
Question 4 |
4. ಅಟ್ಲಾಂಟಿಕ್ ಕೌನ್ಸಿಲ್ನ ಅಂತರರಾಷ್ಟ್ರೀಯ ಸಲಹಾ ಮಂಡಳಿಗೆ ಸೇರ್ಪಡೆಗೊಂಡ ಭಾರತೀಯ ವ್ಯಕ್ತಿ ಯಾರು?
ಎ.ಆರ್.ರೆಹಮಾನ್ | |
ಭರತ್ ಗೋಪಾಲಸ್ವಾಮಿ | |
ಅನಿಲ್ ಅಂಬಾನಿ | |
ಸಚಿನ್ ತಂಡೂಲ್ಕರ್ |
ರಿಲಾಯನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಅನಿಲ್ ಅಂಬಾನಿ ಅವರು ಅಟ್ಲಾಂಟಿಕ್ ಕೌನ್ಸಿಲ್ನ ಅಂತರರಾಷ್ಟ್ರೀಯ ಸಲಹಾ ಮಂಡಳಿಗೆ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ. ಅಟ್ಲಾಂಟಿಕ್ ಕೌನ್ಸಿಲ್ ನ ಕೇಂದ್ರ ಕಚೇರಿ ವಾಷಿಂಗ್ಟನ್ ಡಿ.ಸಿ ನಲ್ಲಿದೆ.
Question 5 |
5. ಅಡ್ವರ್ಟೈಸಿಂಗ್ ಸ್ಟಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾದೊಂದಿಗೆ ಸದಸ್ಯತ್ವ ಹೊಂದಿದ ಭಾರತದ ಪ್ರಥಮ ಇ-ಕಾಮರ್ಸ್ ಕಂಪನಿ ಯಾವುದು?
ಫ್ರೀಚಾರ್ಜ್ | |
ಅಮೆಜಾನ್ | |
ಕ್ಲಿಯರ್ ಟ್ರಿಪ್ | |
ಪೇಟಿಯಂ |
Question 6 |
6. ಕ್ರೆಡಿಟ್ ಕಾರ್ಡ್ ಬಳಕೆ ಪ್ರೋತ್ಸಾಹಿಸುವ ಉದ್ದೇಶದಿಂದ ‘ಉನ್ನತಿ’ ಎಂಬ ಕ್ರೆಡಿಟ್ ಕಾರ್ಡ್ ಪ್ರಾರಂಭಿಸಿದ ಬ್ಯಾಂಕ್ ಯಾವುದು?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | |
ಬ್ಯಾಂಕ್ ಆಫ್ ಬರೋಡ | |
ಪಂಜಾಬ್ ನ್ಯಾಷನಲ್ ಬ್ಯಾಂಕ್ | |
ಹೆಚ್.ಡಿ.ಎಫ್.ಸಿ.ಬ್ಯಾಂಕ್ |
ಕ್ರೆಡಿಟ್ ಕಾರ್ಡ್ ಬಳಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉನ್ನತಿ ಹೆಸರಿನ ಕ್ರೆಡಿಟ್ ಕಾರ್ಡ್ ಪರಿಚಯಿಸಿದೆ. ಕೇಂದ್ರ ಸಚಿವ ಪಿಯುಷ್ ಗೊಯೆಲ್ ಅವರು ನವದೆಹಲಿಯಲ್ಲಿ ಕಾರ್ಡ್ ಬಿಡುಗಡೆಗೊಳಿಸಿದರು. “ಉನ್ನತಿ” ಕ್ರೆಡಿಟ್ ಕಾರ್ಡ್ ಎಲ್ಲಾ ಎಸ್.ಬಿ.ಐ ಶಾಖೆಯಲ್ಲಿ ಲಭ್ಯವಿರಲಿದೆ. ಮೊದಲ ನಾಲ್ಕು ವರ್ಷ ಯಾವುದೇ ವಾರ್ಷಿಕ ಶುಲ್ಕವನ್ನು ಕಾರ್ಡ್ ಮೇಲೆ ವಿಧಿಸುವುದಿಲ್ಲ.
Question 7 |
7. ಏಷ್ಯಾ ಹಾಕಿ ಫೆಡರೇಷನ್ ನ “2016 ಏಷ್ಯಾ ವರ್ಷದ ಹಾಕಿ ಆಟಗಾರ” ಪ್ರಶಸ್ತಿ ಯಾರಿಗೆ ಲಭಿಸಿದೆ?
ದಿಲೀಪ್ ಟರ್ಕಿ | |
ಎಸ್ ವಿ ಸುನೀಲ್ | |
ಹರ್ಮನ್ ಪ್ರೀತ್ ಸಿಂಗ್ | |
ಶ್ರೇಜೇಶ್ |
ಕರ್ನಾಟಕದ ಎಸ್ ವಿ ಸುನೀಲ್ ಅವರಿಗೆ ಏಷ್ಯಾ ಹಾಕಿ ಫೆಡರೇಷನ್ ನ ಸೀನಿಯರ್ ಪುರುಷರ ವಿಭಾಗದಲ್ಲಿ “2016 ಏಷ್ಯಾ ವರ್ಷದ ಹಾಕಿ ಆಟಗಾರ” ಪ್ರಶಸ್ತಿ ಲಭಿಸಿದೆ. ಜೂನಿಯರ್ ವಿಭಾಗದಲ್ಲಿ ಹರ್ಮನ್ ಪ್ರೀತ್ ಸಿಂಗ್ ಅವರಿಗೆ 2016 ಭರವಸೆಯ ವರ್ಷದ ಆಟಗಾರ ಪ್ರಶಸ್ತಿ ಲಭಿಸಿದೆ.
Question 8 |
8. ರಾಷ್ಟ್ರವ್ಯಾಪ್ತಿ ಗಣಿಗಾರಿಕೆ ಮೇಲೆ ನಿಷೇಧ ಹೇರಿದ ವಿಶ್ವದ ಮೊದಲ ರಾಷ್ಟ್ರ ಯಾವುದು?
ಎಲ್ ಸಲ್ವಡಾರ್ | |
ಅಂಗೋಲ | |
ಮೊರಾಕೊ | |
ಸೂಡನ್ |
ಸೆಂಟ್ರಲ್ ಅಮೆರಿಕದ ಪುಟ್ಟ ರಾಷ್ಟ್ರ ಎಲ್ ಸಲ್ವಡಾರ್ ರಾಷ್ಟ್ರವ್ಯಾಪ್ತಿ ಗಣಿಗಾರಿಕೆ ಮೇಲೆ ನಿಷೇಧ ಹೇರಿದೆ.
Question 9 |
9. ಪ್ರಕೃತಿಯನ್ನು ಆರಾಧಿಸುವ ಹಬ್ಬವಾದ ‘ಸರ್ ಹುಲ್’ ಎಂಬ ಹಬ್ಬವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು?
ಅಸ್ಸಾಂ | |
ಜಾರ್ಖಂಡ್ | |
ಮಧ್ಯಪ್ರದೇಶ | |
ಒಡಿಸ್ಸಾ |
Question 10 |
10. ಈ ಕೆಳಗಿನ ಯಾವ ಹುಲಿ ಸಂರಕ್ಷಣಾ ವಲಯ ಅಧಿಕೃತ ಲಾಂಛನ ಹೊಂದಿದ ದೇಶದ ಮೊದಲ ಹುಲಿ ಸಂರಕ್ಷಣಾ ತಾಣವೆನಿಸಿದೆ?
ಕನ್ಹಾ ಹುಲಿ ಸಂರಕ್ಷಣಾ ತಾಣ | |
ಸರಿಸ್ಕ ಹುಲಿ ಸಂರಕ್ಷಣಾ ತಾಣ | |
ಕಾರ್ಬೆಟ್ ಹುಲಿ ಸಂರಕ್ಷಣಾ ತಾಣ | |
ಸಂಜಯ್ ಹುಲಿ ಸಂರಕ್ಷಣಾ ತಾಣ |
ಮಧ್ಯ ಪ್ರದೇಶದ ಕನ್ಹಾ ಹುಲಿ ಸಂರಕ್ಷಣಾ ತಾಣ ಅಧಿಕೃತ ಲಾಂಛನ ಹೊಂದಿದ ದೇಶದ ಮೊದಲ ಹುಲಿ ಸಂರಕ್ಷಣಾ ತಾಣ ಎಂಬ ಗೌರವಕ್ಕೆ ಪಾತ್ರವಾಗಿದೆ. ಜೌಗು ಜಿಂಕೆಯನ್ನು ಅಧಿಕೃತ ಲಾಂಛನವಾಗಿ ಘೋಷಿಸಲಾಗಿದೆ. ಜೌಗು ಜಿಂಕೆ ಮಧ್ಯ ಪ್ರದೇಶದ ರಾಜ್ಯ ಪ್ರಾಣಿ ಕೂಡ ಆಗಿದೆ.
[button link=”http://www.karunaduexams.com/wp-content/uploads/2017/05/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್29302017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ