ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಏಪ್ರಿಲ್, 1,2,2017
Question 1 |
1. ಈ ಕೆಳಗಿನ ಯಾವ ರಾಜ್ಯದಲ್ಲಿ ದೇಶದ ಮೊದಲ “ಕಾಲು ಮತ್ತು ಬಾಯಿ ರೋಗ ಅಂತಾರಾಷ್ಟ್ರೀಯ ಕೇಂದ್ರವನ್ನು ಸ್ಥಾಪಿಸಲಾಗಿದೆ?
ಒಡಿಶಾ | |
ಆಂಧ್ರ ಪ್ರದೇಶ | |
ತೆಲಂಗಣ | |
ಕರ್ನಾಟಕ |
ದೇಶದ ಮೊದಲ “ಕಾಲು ಮತ್ತು ಬಾಯಿ ರೋಗ ಅಂತಾರಾಷ್ಟ್ರೀಯ ಕೇಂದ್ರ (International Centre for Foot and Mouth Disease)”ವನ್ನು ಕೇಂದ್ರ ಕೃಷಿ ಸಚಿವ ರಾಧಮೋಹನ್ ಸಿಂಗ್ ಅವರು ಒಡಿಶಾದ ಭುಬನೇಶ್ವರದಲ್ಲಿ ಉದ್ಘಾಟಿಸಿದರು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಜಂಟಿಯಾಗಿ ಈ ಕೇಂದ್ರವನ್ನು ಸ್ಥಾಪಿಸಿದ್ದು, ವೈರಸ್ ನಿಂದ ಉಂಟಾಗುವ ರೋಗದ ಮೇಲೆ ಸಂಶೋಧನೆ ನಡೆಸಲಿದೆ.
Question 2 |
2. ಕೇಂದ್ರ ಅಬಕಾರಿ ಮತ್ತು ಸುಂಕ ಮಂಡಳಿಯ ನೂತನ ಅಧ್ಯಕ್ಷರಾಗಿ ಈ ಮುಂದಿನ ಯಾರು ನೇಮಕಗೊಂಡಿದ್ದಾರೆ?
ಕೀರ್ತನ ಜೈನ್ | |
ವನಜಾ ಸರ್ಣ | |
ಗೋಪಾಲ್ ವರ್ಮಾ | |
ಅಮಿತಾಬ್ ಕಾಂತ್ |
1980ನೇ ಬ್ಯಾಚಿನ ಭಾರತೀಯ ಕಂದಾಯ ಸೇವೆ ಅಧಿಕಾರಿ ವನಜಾ ಸರ್ಣ ಅವರು ಕೇಂದ್ರ ಅಬಕಾರಿ ಮತ್ತು ಸುಂಕ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಸಿಬಿಎಸ್ಇ ಯು ಪರೋಪ ತೆರಿಗೆ ಹಾಗೂ ಕೇಂದ್ರ ಅಬಕಾರಿ ತೆರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರವನ್ನು ಹೊಂದಿದೆ.
Question 3 |
3. ಯಾವ ದೇಶ “ದಕ್ಷಿಣ ಏಷ್ಯಾ ಉಪ-ಪ್ರಾದೇಶಿಕ ಆರ್ಥಿಕ ಸಹಕಾರ (SASEC)” ಕಾರ್ಯಕ್ರಮದ ನೂತನ ಸದಸ್ಯ ರಾಷ್ಟ್ರವಾಗಿ ನೇಮಕಗೊಂಡಿದೆ?
ಮ್ಯಾನ್ಮಾರ್ | |
ಪಾಕಿಸ್ತಾನ | |
ಇರಾನ್ | |
ಫಿಲಿಫೈನ್ಸ್ |
ಏಷ್ಯಾ ಅಭಿವೃದ್ದಿ ಬ್ಯಾಂಕಿನ ದಕ್ಷಿಣ ಏಷ್ಯಾ ಉಪ-ಪ್ರಾದೇಶಿಕ ಆರ್ಥಿಕ ಸಹಕಾರ (SASEC)” ಕಾರ್ಯಕ್ರಮದ ನೂತನ ಸದಸ್ಯ ರಾಷ್ಟ್ರವಾಗಿ ಮ್ಯಾನ್ಮಾರ್ ನೇಮಕಗೊಂಡಿದೆ. ಭಾರತ, ಬಾಂಗ್ಲದೇಶ, ನೇಪಾಳ ಮತ್ತು ಭೂತಾನ್ ರಾಷ್ಟ್ರಗಳ ಕೋರಿಕೆ ಮೇರೆಗೆ ಈ ಕಾರ್ಯಕ್ರಮವನ್ನು 2001ರಲ್ಲಿ ಜಾರಿಗೊಳಿಸಲಾಯಿತು. ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ ಸಹಕಾರ ಒದಗಿಸುವುದು ಕಾರ್ಯಕ್ರಮದ ಉದ್ದೇಶ.
Question 4 |
4. ಆಯುಷ್ ವೈದ್ಯಕೀಯ ಪದ್ದತಿಯ ನಿಯಂತ್ರಕ ಸಂಸ್ಥೆಗಳ ಕಾರ್ಯವೈಖರಿಯನ್ನು ಪರಾಮರ್ಶಿಸುವ ಸಲುವಾಗಿ ರಚಿಸಲಾಗಿರುವ ಉನ್ನತ ಮಟ್ಟದ ಸಮಿತಿ ಯಾವುದು?
ರಮೇಶ್ ಭಾಟಿಯಾ ಸಮಿತಿ | |
ಉಮೇಶ್ ಚಂದ್ರ ಸಮಿತಿ | |
ಅರವಿಂದ್ ಪನಗಾರಿಯಾ ಸಮಿತಿ | |
ರಾಕೇಶ್ ಮೋಹನ್ ಸಮಿತಿ |
ಆಯುಷ್ ವೈದ್ಯಕೀಯ ಪದ್ದತಿಯ ನಿಯಂತ್ರಕ ಸಂಸ್ಥೆಗಳಾದ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (CCIM) ಮತ್ತು ಸೆಂಟ್ರಲ್ ಕೌನ್ಸಿಲ್ ಆಫ್ ಹೊಮಿಯೋಪತಿ ಮತ್ತು ಇವುಗಳಿಗೆ ಸಂಬಂಧಿಸಿದ ಇಂಡಿಯನ್ ಮೆಡಿಸಿನ್ ಸೆಂಟ್ರಲ್ ಕೌನ್ಸಿಲ್ ಆಕ್ಟ್-1970 ಹಾಗೂ ಹೊಮೊಯೋಪತಿ ಸೆಂಟ್ರಲ್ ಕೌನ್ಸಿಲ್ ಆಕ್ಟ್-1973 ಕಾರ್ಯವೈಖರಿ ಬಗ್ಗೆ ಅಧ್ಯಯನ ನಡೆಸಿ ಸುಧಾರಣೆ ತರಲು ಶಿಫಾರಸ್ಸು ಮಾಡುವಂತೆ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ.
Question 5 |
5. ಲಿಂಗಕಾಮಿ ಸಮುದಾಯದ ಸಂಕೇತವಾಗಿ ಕಾಮನಬಿಲ್ಲಿನ ಬಣ್ಣಗಳ ಬಾವುಟ ತಯಾರಿಸಿದ್ದ ಕಲಾವಿದ ಗಿಲ್ಬರ್ಟ್ ಬೇಕರ್ ನಿಧನರಾದರು. ಅವರು ಯಾವ ದೇಶಕ್ಕೆ ಸಂಬಂಧಿಸಿದ್ದಾರೆ?
ಅಮೆರಿಕ | |
ಸ್ವೀಡನ್ | |
ನಾರ್ವೆ | |
ದಕ್ಷಿಣ ಆಫ್ರಿಕಾ |
ಸಲಿಂಗಕಾಮಿ ಸಮುದಾಯದ ಸಂಕೇತವಾಗಿ ಕಾಮನಬಿಲ್ಲಿನ ಬಣ್ಣಗಳ ಬಾವುಟ ತಯಾರಿಸಿದ್ದ ಸ್ಯಾನ್ಫ್ರಾನ್ಸಿಸ್ಕೊದ ಕಲಾವಿದ ಗಿಲ್ಬರ್ಟ್ ಬೇಕರ್ (65) ಮೃತಪಟ್ಟಿದ್ದಾರೆ. ಸಲಿಂಗಕಾಮಿಗಳ ಸ್ವಾತಂತ್ರ್ಯ ದಿನದ ಆಚರಣೆಗಾಗಿ 1978ರಲ್ಲಿ ಅವರು ಎಂಟು ಬಣ್ಣಗಳಿರುವ ಬಾವುಟ ವಿನ್ಯಾಸಗೊಳಿಸಿದ್ದರು. ಬಳಿಕ ಅದನ್ನು ಆರು ಬಣ್ಣಗಳಿಗೆ ಬದಲಿಸಲಾಗಿತ್ತು. ಸಲಿಂಗಕಾಮಿಗಳ ಹಕ್ಕಿನ ಪರವಾಗಿ ಹೋರಾಟ ನಡೆಸಿದ್ದ ಬೇಕರ್, ‘ಲೈಂಗಿಕತೆ ಮಾನವನ ಹಕ್ಕು’ ಎಂದು ಪ್ರತಿಪಾದಿಸಿದ್ದರು.
Question 6 |
6. ನಳಂದ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?
ಅರವಿಂದ್ ಚಂದ್ರ | |
ಸುನೈನಾ ಸಿಂಗ್ | |
ರಂಜಿತ್ ಚೌಧರಿ | |
ರಾಕೇಶ್ ಮಿತ್ರ |
ಸುನೈನಾ ಸಿಂಗ್ ಅವರು ನಳಂದ ವಿಶ್ವವಿದ್ಯಾಲಯದ ಉಪ ಕುಲಪತಿ ನೇಮಕಗೊಂಡಿದ್ದಾರೆ. ಸಿಂಗ್ ಅವರು ಹೈದ್ರಾಬಾದಿನ ಇಂಗ್ಲೀಷ್ ಮತ್ತು ಫಾರಿನ್ ಲಾಂಗ್ವೆಜ್ ವಿಶ್ವವಿದ್ಯಾಲಯದ ಉಪ ಕುಲಪತಿ ಆಗಿದ್ದಾರೆ.
Question 7 |
7. ಈ ಕೆಳಗಿನ ಯಾವ ನಗರ 1Gbps ವೈರ್ ಬ್ರಾಡ್ ಬ್ಯಾಂಡ್ ವೇಗದ ಇಂಟರ್ನೆಟ್ ಸೇವೆಯನ್ನು ಹೊಂದಿರುವ ಭಾರತದ ಮೊದಲ ನಗರ ಎಂಬ ಖ್ಯಾತಿಗೆ ಒಳಗಾಗಿದೆ?
ಬೆಂಗಳೂರು | |
ಹೈದ್ರಾಬಾದ್ | |
ಚೆನ್ನೈ | |
ಕಲ್ಕತ್ತಾ |
ಬೆಂಗಳೂರು ಮೂಲದ ಏಟ್ರಿಯಾ ಕನ್ವರ್ಜೆನ್ಸ್ ಟೆಕ್ನಲಾಜಿಸ್ ಫೈಬರ್ ನೆಟ್ 1 ಗಿಗಾಬಿಟ್/ಸೆಕೆಂಡ್ ವೈರ್ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆಯನ್ನು ಹೈದ್ರಾಬಾದಿನಲ್ಲಿ ಆರಂಭಿಸಿದೆ. ಆ ಮೂಲಕ ಗಿಗಾ ವೇಗದ ಇಂಟರ್ನೆಟ್ ಸೌಲಭ್ಯ ಹೊಂದಿರುವ ದೇಶದ ಮೊದಲ ನಗರ ಎಂಬ ಖ್ಯಾತಿ ಹೈದ್ರಾಬಾದ್ಗೆ ಸಂದಿದೆ.
Question 8 |
8. ಯುಎಸ್ಐಬಿಸಿ (USIBC) ಪರಿವರ್ತನಕಾರ ಮುಖ್ಯಮಂತ್ರಿ (ಟಿಸಿಎಂ) ಪ್ರಶಸ್ತಿಗೆ ಯಾವ ಭಾರತೀಯ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗಿದೆ?
ನಿತೀಶ್ ಕುಮಾರ್ | |
ಸರ್ಬಾನಂದ ಸೋನೋವಾಲ್ | |
ಎನ್ ಚಂದ್ರಬಾಬು ನಾಯ್ಡು | |
ರಮಣ್ ಸಿಂಗ್ |
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಭಾರತ-ಅಮೆರಿಕ ವಾಣಿಜ್ಯ ಮಂಡಳಿ (USIBC) ಪರಿವರ್ತನಕಾರ ಪ್ರಶಸ್ತಿ ಲಭಿಸಿದೆ. ಕ್ಯಾಲಿಪೋರ್ನಿಯಾದಲ್ಲಿ ನಡೆದ ವೆಸ್ಟ್ ಕೋಸ್ಟ್ ಶೃಂಗಸಭೆಯಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
Question 9 |
9. ದಿವಾಳಿತನ ಮತ್ತು ದಿವಾಳಿತನ ಮಂಡಳಿಯ (ಐಬಿಬಿಐ) ಹೊಸ ಪೂರ್ಣ ಸಮಯ ಸದಸ್ಯರಾಗಿ (ಡಬ್ಲುಟಿಎಂ) ಯಾರು ನೇಮಕಗೊಂಡಿದ್ದಾರೆ?
ಅಮರ್ದೀಪ್ ಸಿಂಗ್ ಭಾಟಿಯಾ | |
ನವರಾಂಗ್ ಸೈನಿ | |
ಅಜಯ್ ತ್ಯಾಗಿ | |
ಉನ್ನಿಕೃಷ್ಣನ್ |
Question 10 |
10. 2017 ದಿಯೋದರ್ ಟ್ರೋಫಿಯನ್ನು ಗೆದ್ದುಕೊಂಡ ಕ್ರಿಕೆಟ್ ತಂಡ ಯಾವುದು?
ತಮಿಳುನಾಡು | |
ಮಹಾರಾಷ್ಟ್ರ | |
ಕೇರಳ | |
ಇಂಡಿಯಾ ಬಿ |
[button link=”http://www.karunaduexams.com/wp-content/uploads/2017/05/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಏಪ್ರಿಲ್-122017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ