ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಏಪ್ರಿಲ್,5,2017

Question 1

1. ಈ ಕೆಳಗಿನ ಯಾವ ದೇಶ ಬಿಟ್ ಕಾಯಿನ್ ಮತ್ತು ಡಿಜಿಟಲ್ ಕರೆನ್ಸಿಗಳನ್ನು ನ್ಯಾಯಬದ್ದವಾದ ಹಣವೆಂದು ಅಧಿಕೃತವಾಗಿ ಘೋಷಿಸಿದೆ?

A
ಜಪಾನ್
B
ಅಮೆರಿಕ
C
ರಷ್ಯಾ
D
ಚೀನಾ
Question 1 Explanation: 
ಜಪಾನ್

ಜಪಾನ್ ಸರ್ಕಾರ ಬಿಟ್ ಕಾಯಿನ್ ಮತ್ತು ಡಿಜಿಟಲ್ ಕರೆನ್ಸಿಗಳನ್ನು ನ್ಯಾಯಬದ್ದವಾದ ಹಣವೆಂದು ಅಧಿಕೃತವಾಗಿ ಘೋಷಿಸಿದ್ದು, ಏಪ್ರಿಲ್ 1, 2017 ರಿಂದ ಜಾರಿಗೆ ಬರಲಿದೆ.

Question 2

2. ನಗರಸಭೆ ಸೇವೆಗಳನ್ನು ಆನ್ ಲೈನ್ ನಲ್ಲಿ ನೀಡಲು ಯಾವ ರಾಜ್ಯ “ಇ-ನಗರಪಾಲಿಕ” ಆಪ್ ಅನ್ನು ಬಿಡುಗಡೆಗೊಳಿಸಿದೆ?

A
ಮಧ್ಯ ಪ್ರದೇಶ
B
ಮಹಾರಾಷ್ಟ್ರ
C
ಕೇರಳ
D
ಕರ್ನಾಟಕ
Question 2 Explanation: 
ಮಧ್ಯ ಪ್ರದೇಶ

ಮಧ್ಯ ಪ್ರದೇಶ ಸರ್ಕಾರ ವಿವಿಧ ಮುನಿಪಾಲಿಟಿ ಸೇವೆಗಳನ್ನು ಆನ್ ಲೈನ್ ನಲ್ಲಿ ನೀಡಲು “MP e-Nagarapalika” ಆಪ್ ಜಾರಿಗೆ ತಂದಿದೆ. ತೆರಿಗೆ ಪಾವತಿ, ಜನನ/ಮರಣ ಪ್ರಮಾಣ ಸೇರಿದಂತೆ 378 ಸೇವೆಗಳು ಈ ಆಪ್ ನಲ್ಲಿ ದೊರೆಯಲಿವೆ. ಇದಲ್ಲದೆ ಕಸ ವಿಲೇವಾರಿ, ನೈರ್ಮಲ್ಯತೆ ಸೇರಿದಂತೆ ನಾಗರಿಕರು ದೂರಗಳನ್ನು ದಾಖಲಿಸಬಹುದು.

Question 3

3. ಈ ಕೆಳಗಿನ ಯಾರು ದೇಶದ ಮೊದಲ ತೃತೀಯ ಲಿಂಗಿ ಪೊಲೀಸ್ ಸಬ್ ಇನ್ಸಪೆಕ್ಟರ್ ಆಗಿದ್ದಾರೆ?

A
ಪ್ರೀತಿಕಾ ಯಶಿನಿ
B
ಉಮಾ ದೇವಿ
C
ರಂಜಿತ ನಾಯಕ್
D
ಸುವರ್ಣ ಕುಮಾರಿ
Question 3 Explanation: 
ಪ್ರೀತಿಕಾ ಯಶಿನಿ

ಕೆ.ಪ್ರೀತಿಕಾ ಯಶಿನಿ ದೇಶದ ಮೊದಲ ತೃತೀಯ ಲಿಂಗಿ ಪೊಲೀಸ್ ಅಧಿಕಾರಿ ಎನಿಸಲಿದ್ದಾಳೆ. ಈಕೆ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಹಳಾಗಿದ್ದು, ಉದ್ಯೋಗ ನೀಡುವಂತೆ ತಮಿಳುನಾಡು ಸಾರ್ವಜನಿಕ ಸೇವಾ ಉದ್ಯೋಗ ಮಂಡಳಿಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಮುಂದಿನ ಉದ್ಯೋಗ ನೇಮಕಾತಿಗಳ ಸಂದರ್ಭದಲ್ಲಿ ತೃತೀಯ ಲಿಂಗಿಗಳನ್ನು ‘ಮೂರನೇ ವಿಭಾಗ’ ಎಂಬ ವಿಭಾಗದಡಿ ಪರಿಗಣಿಸುವಂತೆಯೂ ನ್ಯಾ.ಸಂಜಯ್‌ಕಿಶನ್ ಕೌಲ್, ನ್ಯಾ.ಪುಷ್ಪಾ ಸತ್ಯನಾರಾಯಣ ಅವರನ್ನೊಳಗೊಂಡ ಮೊದಲ ಪೀಠ ನಿರ್ದೇಶಿಸಿದೆ.

Question 4

4. ಇತ್ತೀಚೆಗೆ ನಡೆದ ಈಕ್ವೆಡಾರ್ ರಾಷ್ಟ್ರಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸದವರು ಯಾರು?

A
ಲೆನಿನ್ ಮೊರೆನೊ
B
ರಫೆಲ್ ಕೊರಿಯ
C
ಸ್ವೀವನ್ ಮಾರ್ಟಿನ್
D
ಸ್ಟ್ರಾಸ್ ಜೋಸೆಫ್
Question 4 Explanation: 
ಲೆನಿನ್ ಮೊರೆನೊ

ಲೆನಿನ್ ಮೊರೆನೊ ಗಾರ್ಸೆಸ್ ಅವರು ಈಕ್ವೆಡಾರ್ ಚುನಾವಣೆಯಲ್ಲಿ ಶೇ 51.16% ಮತಗಳನ್ನು ಗಳಿಸುವ ಮೂಲಕ ರಾಷ್ಟ್ರಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೊರೆನೊ ಅವರು ಈಕ್ವೆಡಾರಿನ 44ನೇ ಅಧ್ಯಕ್ಷರಾಗಿದ್ದು, ಮೇ 24, 2017 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. 2007 ರಿಂದ 2013 ರವರೆಗೆ ಉಪ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

Question 5

5. ಈ ಕೆಳಗಿನ ಯಾರು ನೂತನವಾಗಿ ಸ್ಥಾಪಿಸಲಾಗಿರುವ “ನ್ಯಾಷನಲ್ ಬೋರ್ಡ್ ಫಾರ್ ಎಲೆಕ್ಟ್ರಿಕ್ ಮೊಬಿಲಿಟಿ”ಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

A
ಗಿರೀಶ್ ಶಂಕರ್
B
ಶಂಕರಮೂರ್ತಿ
C
ಗಿರಿಜಾ ಶಂಕರ್
D
ಜಗದೀಶ್ ಸಿಂಗ್
Question 5 Explanation: 
ಗಿರೀಶ್ ಶಂಕರ್

ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಎಲೆಕ್ಟ್ರಾನಿಕ್ ವಾಹನ ಮತ್ತು ಬಿಡಿಭಾಗಗಳ ತಯಾರಿಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ “ನ್ಯಾಷನಲ್ ಬೋರ್ಡ್ ಫಾರ್ ಎಲೆಕ್ಟ್ರಿಕ್ ಮೊಬಿಲಿಟಿ”ಯನ್ನು ಸ್ಥಾಪಿಸಿದೆ. ಭಾರಿ ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ಗಿರೀಶ್ ಶಂಕರ್ ಅವರನ್ನು ಇದರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

Question 6

6. “ಅಲೆಕ್ಸಾಂಡರ್ ವೊಸಿಕ್” ಅವರು ಯಾವ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?

A
ಸರ್ಬಿಯಾ
B
ಮೆಕ್ಸಿಕೊ
C
ಇಟಲಿ
D
ನಾರ್ವೆ
Question 6 Explanation: 
ಸರ್ಬಿಯಾ

ಸರ್ಬಿಯಾದ ಪ್ರಸ್ತುತ ಪ್ರಧಾನಿ ಅಲೆಕ್ಸಾಂಡರ್ ವೊಸಿಕ್ ಅವರು ಸರ್ಬಿಯಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ವೊಸಿಕ್ ಅವರು ಶೇ 55% ರಷ್ಟು ಮತಗಳನ್ನು ಪಡೆದುಕೊಂಡರು. ವೊಸಿಕ್ ಅವರು ಸರ್ಬಿಯಾ ಪ್ರೊಗ್ರೇಸಿವ್ ಪಕ್ಷದ ನಾಯಕ.

Question 7

7. 2012ನೇ ಸಾಲಿನ NTR ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯನ್ನು ಈ ಕೆಳಗಿನ ಯಾರಿಗೆ ನೀಡಲಾಯಿತು?

A
ಡಾ. ಶಿವರಾಜ್ ಕುಮಾರ್
B
ಡಾ. ಎಸ್.ಪಿ. ಬಾಲಸುಬ್ರಮಣ್ಯಂ
C
ಡಾ. ಅಂಬರೀಶ್
D
ಎಸ್. ಎಲ್ ಭೈರಪ್ಪ
Question 7 Explanation: 
ಡಾ. ಎಸ್.ಪಿ. ಬಾಲಸುಬ್ರಮಣ್ಯಂ

ಖ್ಯಾತ ಹಿನ್ನೆಲ ಗಾಯಕ, ನಟ ಮತ್ತು ಸಂಗೀತಾ ನಿರ್ದೇಶಕ ಎಸ್.ಪಿ. ಬಾಲಸುಬ್ರಮಣ್ಯಂ ಅವರಿಗೆ 2012ನೇ ಸಾಲಿನ NTR ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯನ್ನು ನೀಡಲಾಗಿದೆ. ಹಿಂದಿ ಸಿನಿಮಾ ನಟಿ ಹೇಮಾ ಮಾಲಿನ ಅವರಿಗೆ 2013ನೇ ಸಾಲಿನ ಪ್ರಶಸ್ತಿಯನ್ನು ನೀಡಲಾಗಿದೆ.

Question 8

8. ಈ ಕೆಳಗಿನ ಯಾರು ವಿಸ್ಡೆನ್ ಶ್ರೇಷ್ಠ ಕ್ರಿಕೆಟಿಗ-2016 ಗೌರವಕ್ಕೆ ಪಾತ್ರರಾಗಿದ್ದಾರೆ?

A
ವಿರಾಟ್ ಕೊಹ್ಲಿ
B
ಆರ್ ಅಶ್ವಿನ್
C
ಹಸೀಮ್ ಆಮ್ಲಾ
D
ಕ್ರಿಸ್ ವೋಕ್ಸ್
Question 8 Explanation: 
ವಿರಾಟ್ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಸ್ಡನ್ ಶ್ರೇಷ್ಠ ಕ್ರಿಕೆಟಿಗ ಗೌರವ ಒಲಿದಿದೆ. 2016ರಲ್ಲಿ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 1215 ರನ್ಗಳನ್ನುಗಳಿಸಿದ್ದಾರೆ. 10 ಏಕದಿನ ಪಂದ್ಯಗಳಿಂದ 739 ರನ್ಗಳನ್ನು 92.37ರ ಸರಾಸರಿಯಲ್ಲಿ ಗಳಿಸಿದ್ದಾರೆ. ಟ್ವೆಂಟಿ–20 ಪಂದ್ಯ ಗಳಲ್ಲಿ 641 ರನ್ಗಳನ್ನು 106.83ರ ಸರಾಸರಿಯಲ್ಲಿ ಪೇರಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ ಅವರು ಶ್ರೇಷ್ಠ ಆಟಗಾರ್ತಿ ಗೌರವ ಗಳಿಸಿದ್ದಾರೆ. ಪೆರ್ರಿ ಅವರು ಆರು ಟೆಸ್ಟ್ ಪಂದ್ಯ ಗಳಿಂದ 219 ರನ್ ಗಳಿಸಿದ್ದು, 27 ವಿಕೆಟ್ ಪಡೆದಿದ್ದಾರೆ.ಏಕದಿನ ಕ್ರಿಕೆಟ್ ನಲ್ಲಿ 83 ಪಂದ್ಯಗಳನ್ನು ಆಡಿ 1899 ರನ್ ಗಳಿಸಿ, 113 ವಿಕೆಟ್ಗಳನ್ನು ಕಬಳಿಸಿದ್ದಾರೆ. ಟಿ–20 ಯಲ್ಲಿ 82 ಪಂದ್ಯಗಳಿಂದ 797 ರನ್ ಕಲೆ ಹಾಕಿದ್ದಾರೆ.

Question 9

9. ವಿಶ್ವಸಂಸ್ಥೆ (ಯುಎನ್) ಗೆ ಭಾರತದ ಹೊಸ ರಾಯಭಾರಿ ಮತ್ತು ಖಾಯಂ ಪ್ರತಿನಿಧಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?

A
ಜೈ ಸಿಂಗ್
B
ನಿರಂಜನ್ ಜೋಶಿ
C
ಅಜಿತ್ ಕುಮಾರ್
D
ರಾಜೀವ್ ಚಂದರ್
Question 9 Explanation: 
ರಾಜೀವ್ ಚಂದರ್

ರಾಜೀವ್ ಕುಮಾರ್ ಚಂದರ್, 1983ನೇ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿ ಅವರನ್ನು ವಿಶ್ವಸಂಸ್ಥೆಯ ಭಾರತದ ಹೊಸ ರಾಯಭಾರಿ ಹಾಗೂ ಖಾಯಂ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ. ಅಜಿತ್ ಕುಮಾರ್ ಅವರ ಉತ್ತಾರಧಿಕಾರಿಯಾಗಿ ಇವರು ಕಾರ್ಯನಿರ್ವಹಿಸಲಿದ್ದಾರೆ.

Question 10

10. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನ ಹೊಸ ಉಪ ಗವರ್ನರ್ ಆಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?

A
ಅಶ್ವನಿ ಕುಮಾರ್
B
ಎನ್ ಎಸ್. ವಿಶ್ವನಾಥನ್
C
ಬಿ ಪಿ ಕಾನುಂಗೊ
D
ಟಿ ಎಸ್ ಅಹುಜಾ
Question 10 Explanation: 
ಬಿಪಿ ಕಾನುಂಗೊ
There are 10 questions to complete.

[button link=”http://www.karunaduexams.com/wp-content/uploads/2017/05/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಏಪ್ರಿಲ್52017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಏಪ್ರಿಲ್,5,2017”

  1. sir pls add a next button to jump for next day quiz.
    Thank You

    Regards,
    Hemanth Kumar S G

Leave a Comment

This site uses Akismet to reduce spam. Learn how your comment data is processed.