ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಏಪ್ರಿಲ್,8,9,2017

Question 1

1. 64ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಯಾವ ಸಿನಿಮಾಕ್ಕೆ ಲಭಿಸಿದೆ?

A
ರುಸ್ತುಂ
B
ಕಸಾವ್
C
ಮದಿಪು
D
ಅಲ್ಲಮ
Question 1 Explanation: 
ಕಸಾವ್

64ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಮರಾಠಿಯ ‘ಕಸಾವ್’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಹಿಂದಿಯ ‘ರುಸ್ತುಂ’ ಚಿತ್ರದ ಅಭಿನಯಕ್ಕಾಗಿ ಅಕ್ಷಯ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರೆ, ಮಲಯಾಳಂನ ಸುರಭಿ ‘ಮಿನ್ನಾಮಿನುಂಗು’ ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ನಿಖಿಲ್ ಮಂಜೂ ನಿರ್ದೇಶನದ ‘ರಿಸರ್ವೇಶನ್’, ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಚೇತನ್ ಮುಂಡಾಡಿ ನಿರ್ದೇಶನದ ‘ಮದಿಪು’ ಅತ್ಯುತ್ತಮ ತುಳು ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

Question 2

2. ಭಾರತೀಯ ರಿಸರ್ವ್ ಬ್ಯಾಂಕಿನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ?

A
ಮಾಳ್ವಿಕ ಸಿನ್ಹಾ
B
ಅಜಯ್ ಜೈರಾಜ್
C
ಚಂದನ ಮಿಶ್ರಾ
D
ದಾಮೋದರ್ ನಾಯಕ್
Question 2 Explanation: 
ಮಾಳ್ವಿಕ ಸಿನ್ಹಾ

ಭಾರತೀಯ ರಿಸರ್ವ್ ಬ್ಯಾಂಕಿನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮಾಳ್ವಿಕ ಸಿನ್ಹಾ ಅವರು ನೇಮಕಗೊಂಡಿದ್ದಾರೆ. ಇತ್ತೀಚೆಗಷ್ಟೇ ಬಿ ಪಿ ಕುನುಂಗೊ ಅವರನ್ನು ಡೆಪ್ಯೂಟಿ ಗವರ್ನರ್ ಆಗಿ ನೇಮಕ ಮಾಡಲಾಗಿತ್ತು.

Question 3

3. ಈ ಕೆಳಗಿನ ಯಾವ ದೇಶದೊಂದಿಗೆ ಭಾರತ ಇತ್ತೀಚೆಗೆ “ಮಧ್ಯಮ ಶ್ರೇಣಿ ಮೇಲ್ಮೈನಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆ (MRSAM”ಗೆ ಸಹಿ ಹಾಕಿದೆ?

A
ಇಸ್ರೇಲ್
B
ಅಮೆರಿಕ
C
ರಷ್ಯಾ
D
ಜಪಾನ್
Question 3 Explanation: 
ಇಸ್ರೇಲ್

ಸುಧಾರಿತ ಕ್ಷಿಪಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಇಸ್ರೇಲ್ ಮತ್ತು ಭಾರತ ನಡುವೆ 2 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಶತ್ರು ಯುದ್ದ ವಿಮಾನ, ಕ್ಷಿಪಣಿ ಮತ್ತು ಡ್ರೋಣ್ ಗಳನ್ನು 70 ಕಿ.ಮೀ ದೂರದಲ್ಲೆ ನಾಶಪಡಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿಗಳು ಹೊಂದಿವೆ.

Question 4

4. ಶ್ಯಾಮ್ ಕುಮಾರ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

A
ಚೆಸ್
B
ಬಾಕ್ಸಿಂಗ್
C
ಟೆನ್ನಿಸ್
D
ಹಾಕಿ
Question 4 Explanation: 
ಬಾಕ್ಸಿಂಗ್

ಭಾರತದ ಬಾಕ್ಸರ್ ಶ್ಯಾಮ್ ಕುಮಾರ್ ಅವರು ಥಾಯ್ಲೆಂಡ್ ಅಂತಾರಾಷ್ಟ್ರೀಯ ಟೂರ್ನಮೆಂಟಿನಲ್ಲಿ 49 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು.

Question 5

5. 2017 ವಿಶ್ವ ಆರ್ಥಿಕ ವೇದಿಕೆ ಜಾಗತಿಕ ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
35
B
40
C
55
D
63
Question 5 Explanation: 
40

2017 ವಿಶ್ವ ಆರ್ಥಿಕ ವೇದಿಕೆ ಜಾಗತಿಕ ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ 137 ರಾಷ್ಟ್ರಗಳ ಪೈಕಿ ಭಾರತ 40ನೇ ಸ್ಥಾನದಲ್ಲಿದೆ. ಸೂಚ್ಯಂಕದಲ್ಲಿ ಸ್ಪೇನ್ ಮೊದಲ ಸ್ಥಾನದಲ್ಲಿದೆ. ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಯುಕೆ ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

Question 6

6. ಭಾರತೀಯ ಪಶುವೈದ್ಯ ಸಂಶೋಧನಾ ಸಂಸ್ಥೆ (Indian Veterinary Research Institute) ಎಲ್ಲಿದೆ?

A
ರಾಜಸ್ತಾನ
B
ಉತ್ತರ ಪ್ರದೇಶ
C
ಮಧ್ಯ ಪ್ರದೇಶ
D
ಕರ್ನಾಟಕ
Question 6 Explanation: 
ಉತ್ತರ ಪ್ರದೇಶ
Question 7

7. ಪ್ರಾಥಮಿಕ ಶಿಕ್ಷಣವನ್ನು ಸುಧಾರಿಸುವ ಸಲುವಾಗಿ ಯಾವ ರಾಜ್ಯ “ಗುಣೋತ್ಸಾವ” ಯೋಜನೆಯನ್ನು ಜಾರಿಗೆ ತಂದಿದೆ?

A
ಅಸ್ಸಾಂ
B
ಅರುಣಾಚಲ ಪ್ರದೇಶ
C
ಗುಜರಾತ್
D
ಸಿಕ್ಕಿಂ
Question 7 Explanation: 

ಪ್ರಾಥಮಿಕ ಶಿಕ್ಷಣವನ್ನು ಸುಧಾರಿಸುವ ಸಲುವಾಗಿ ಅಸ್ಸಾಂ ಸರ್ಕಾರ ಗುಣೋತ್ಸಾವ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಈ ಕಾರ್ಯಕ್ರಮದಡಿ ವಿದ್ಯಾರ್ಥಿಗಳ ಗುಣಮಟ್ಟವನ್ನು ಪರೀಕ್ಷಿಸಲು ಬಾಹ್ಯ ಮೌಲ್ಯಮಾಪಕರನ್ನು ನಿಯೋಜಿಸಲಾಗುವುದು.

Question 8

8. ಗುಜರಾತಿನ ಮೊದಲ ಮಹಿಳಾ ನಿರ್ದೇಶಕ ಜನರಲ್ (ಡಿಜಿಪಿ) ಯಾರನ್ನು ನೇಮಕ ಮಾಡಲಾಗಿದೆ?

A
ನಿಧಿ ಮಾಥುರ್
B
ನಿಕಿತಾ ಶರ್ಮಾ
C
ಗೀತಾ ಜೋಹ್ರಿ
D
ನೇಹಾ ಅರುಶಿಯಾ
Question 8 Explanation: 
ಗೀತಾ ಜೋಹ್ರಿ
Question 9

9. ದಿಬಾಂಗ್ ವನ್ಯಜೀವಿ ಧಾಮ (Dibang Wildlife Sanctuary) ಯಾವ ರಾಜ್ಯದಲ್ಲಿದೆ?

A
ತ್ರಿಪುರ
B
ಮಿಜೋರಾಮ್
C
ಅಸ್ಸಾಂ
D
ಅರುಣಾಚಲ ಪ್ರದೇಶ
Question 9 Explanation: 
ಅರುಣಾಚಲ ಪ್ರದೇಶ
Question 10

10. ಲಿಂಗ ವೇತನ ಅಂತರವನ್ನು ತಟಸ್ಥಗೊಳಿಸಲಿರುವ ವಿಶ್ವದ ಮೊದಲ ರಾಷ್ಟ್ರ ಯಾವುದು?

A
ಸ್ವೀಡನ್
B
ಐಸ್ಲ್ಯಾಂಡ್
C
ಫಿನ್ಲ್ಯಾಂಡ್
D
ನಾರ್ವೆ
Question 10 Explanation: 
ಐಸ್ಲ್ಯಾಂಡ್

ಪುರುಷ ಮತ್ತು ಮಹಿಳೆಯರ ನಡುವೆ ಲಿಂಗ ವೇತನ ತಾರತಮ್ಯವನ್ನು ಹೋಗಲಾಡಿಸಿ ಸಮಾನ ವೇತನ ಜಾರಿಗೆ ತರುವ ಮಸೂದೆಯನ್ನು ಐಸ್ಲ್ಯಾಂಡ್ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಮಸೂದೆಯ ಪ್ರಕಾರ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಸಮಾನ ವೇತನ ನೀಡುವುದನ್ನು ಖಾತರಿಪಡಿಸುವುದು ಕಡ್ಡಾಯ. ಈ ಮಸೂದೆ ಕಾನೂನು ಆಗಿ ಜಾರಿಗೆ ಬಂದರೆ ಲಿಂಗ ವೇತನ ಅಂತರವನ್ನು ತಟಸ್ಥಗೊಳಿಸಿದ ವಿಶ್ವದ ಮೊದಲ ರಾಷ್ಟ್ರ ಐಸ್ಲ್ಯಾಂಡ್ ಆಗಲಿದೆ.

There are 10 questions to complete.

[button link=”http://www.karunaduexams.com/wp-content/uploads/2017/05/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಏಪ್ರಿಲ್892017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಏಪ್ರಿಲ್,8,9,2017”

  1. Mallesh

    question no ten we have confuse plz clearify……..

Leave a Comment

This site uses Akismet to reduce spam. Learn how your comment data is processed.