ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಏಪ್ರಿಲ್,10,2017
Question 1 |
1. 2017 ರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು (NCFF) ಯಾವ ನಗರದಲ್ಲಿ ಆಯೋಜಿಸಲಾಗುತ್ತಿದೆ?
ಹೈದರಾಬಾದ್ | |
ವಿಶಾಖಪಟ್ಟಣಂ | |
ಜೈಪುರ | |
ಭೋಪಾಲ್ |
2017 ರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ಹೈದ್ರಾಬಾದಿನಲ್ಲಿ ಚಾಲನೆ ನೀಡಲಾಯಿತು. ಕೇಂದ್ರ ಮಾಹಿತಿ ಮತ್ತು ಪ್ರಸರಣ ಖಾತೆ ಸಚಿವ ವೆಂಕಯ್ಯನಾಯ್ಡು ಅವರ ಈ ಸಿನಿಮೋತ್ಸವಕ್ಕೆ ಚಾಲನೆ ನೀಡಿದರು. ಮೂರು ದಿನಗಳ ಈ ಸಿನಿಮೋತ್ಸವವನ್ನು ಚಿಲ್ಡ್ರನ್ ಫಿಲ್ಮ್ ಸೊಸೈಟಿ ಆಯೋಜಿಸಿದೆ.
Question 2 |
2. ಭಾರತದ ಮೊದಲ NBA ಬಾಸ್ಕೆಟ್ ಬಾಲ್ ಶಾಲೆ ಯಾವ ನಗರದಲ್ಲಿ ಸ್ಥಾಪನೆಯಾಗಲಿದೆ?
ಜೈಪುರ | |
ಮುಂಬೈ | |
ಹೈದ್ರಾಬಾದ್ | |
ಚೆನ್ನೈ |
ರಾಷ್ಟ್ರೀಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್ (NBA) ದೇಶದ ಮೊಟ್ಟ ಮೊದಲ ಬಾಸ್ಕೆಟ್ ಬಾಲ್ ಶಾಲೆಯನ್ನು ಮುಂಬೈನಲ್ಲಿ ಆರಂಭಿಸಿದೆ. 6-18 ವರ್ಷದೊಳಗಿನ ಬಾಲಕ-ಬಾಲಕಿಯರು ಈ ಶಾಲೆಯಲ್ಲಿ ತರಭೇತಿ ಪಡೆದುಕೊಳ್ಳಬಹುದಾಗಿದೆ.
Question 3 |
3. ಈ ಮುಂದಿನ ಯಾರು ವಿಶ್ವಸಂಸ್ಥೆಯ ಅತ್ಯಂತ ಕಿರಿಯ ಶಾಂತಿಧೂತೆಯಾಗಿ ನೇಮಕಗೊಂಡಿದ್ದಾರೆ?
ಮಲಾಲ ಯೂಸಫ್ ಜಾಯಿ | |
ಜಾಸ್ಮಿನ್ ಹಡ್ಸನ್ | |
ಸ್ವೆಟಲಾನ ಮ್ಯಾಡ್ರಿಡ್ | |
ಲೀನಾ ಮಾವಿನ್ |
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ 19 ವರ್ಷದ ಮಲಾಲ ಯೂಸೂಫ್ ಗೆ ಅತ್ಯಂತ ಕಿರಿಯ ಶಾಂತಿ ದೂತ ಪಟ್ಟವನ್ನು ಘೋಷಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಆಂಟೋನಿಯೋ ಗುಟೆರಸ್, ವಿಶ್ವಸಂಸ್ಥೆಯ ಆದರ್ಶಗಳು ಮತ್ತು ಉದ್ದೇಶಗಳಿಗೆ ಮಲಾಲ ಸೇವೆ ಹಾಗೂ ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನತೆಯ ಹಕ್ಕನ್ನು ಸಮರ್ಥಿಸಿಕೊಂಡ ಧೈರ್ಯಕ್ಕಾಗಿ ಅತ್ಯಂತ ಕಿರಿಯ ಶಾಂತಿದೂತ ಪಟ್ಟ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
Question 4 |
4. “ವರ್ಷದ ಏಷ್ಯಾ ಉದ್ಯಮಿ” ಪ್ರಶಸ್ತಿಗೆ ಭಾಜನರಾಗಿರುವ ಭಾರತೀಯ ಮೂಲದ ಯಾವ ಶಿಕ್ಷಣತಜ್ಞೆ ಯಾರು?
ಆಶಾ ಖೇಮ್ಕಾ | |
ಸಂಗೀತಾ ಗುಪ್ತಾ | |
ರಂಜಿತ ಶ್ರೀನಿಧಿ | |
ನಳಿನಿ ರಾಮಸ್ವಾಮಿ |
ಯುಕೆ ಯಲ್ಲಿ ನೆಲೆಸಿರುವ ಭಾರತೀಯ ಮೂಲದ ಶಿಕ್ಷಣ ತಜ್ಞೆ ಆಶಾ ಖೇಮ್ಕಾ ಅವರಿಗೆ “ವರ್ಷದ ಏಷ್ಯಾ ಉದ್ಯಮಿ” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಸ್ತುತ ಇವರು ಇಂಗ್ಲೆಂಡಿನ ವೆಸ್ಟ್ ನಾಟಿಂಗ್ಶೈರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
Question 5 |
5. ಯಾವ ದೇಶ ಗಾಂಜಾ ಉತ್ಪಾದನೆ, ಮಾರಾಟ ಮತ್ತು ಸೇವನೆಯನ್ನು ಕಾನೂನು ಬದ್ದಗೊಳಿಸಿದೆ?
ಉರುಗ್ವೆ | |
ನಾರ್ವೆ | |
ಚೀನಾ | |
ರಷ್ಯಾ |
ಉರುಗ್ವೆ ರಾಷ್ಟ್ರ ಗಾಂಜಾ ಉತ್ಪಾದನೆ, ಮಾರಾಟ ಮತ್ತು ಸೇವನೆಯನ್ನು ಕಾನೂನು ಬದ್ದಗೊಳಿಸಿದೆ. ಆ ಮೂಲಕ ಗಾಂಜಾ ಉತ್ಪಾದನೆ, ಮಾರಾಟ ಮತ್ತು ಸೇವನೆಯನ್ನು ಕಾನೂನು ಬದ್ದಗೊಳಿಸಿದ ವಿಶ್ವದ ಮೊದಲ ರಾಷ್ಟ್ರವೆನಿಸಿದೆ.
Question 6 |
6. ಬಡವರಿಗೆ ಸಬ್ಸಿಡಿ ದರದಲ್ಲಿ ಆಹಾರ ನೀಡಲು “ದೀನದಯಾಳ್ ರಸೋಯಿ ಯೋಜನೆ”ಯನ್ನು ರಾವ ರಾಜ್ಯ ಸರ್ಕಾರ ಜಾರಿಗೆ ತಂದಿದೆ?
ಉತ್ತರ ಪ್ರದೇಶ | |
ಮಧ್ಯ ಪ್ರದೇಶ | |
ಗುಜರಾತ್ | |
ರಾಜಸ್ತಾನ |
ಬಡವರಿಗೆ ಸಬ್ಸಿಡಿ ದರದಲ್ಲಿ ಆಹಾರ ನೀಡಲು ಮಧ್ಯ ಪ್ರದೇಶ ಸರ್ಕಾರ “ದೀನದಯಾಳ್ ರಸೋಯಿ ಯೋಜನೆ”ಯನ್ನು ಜಾರಿಗೆ ತಂದಿದೆ. ಯೋಜನೆಯಡಿ ರೂ 5ಕ್ಕೆ ಊಟ ದೊರೆಯಲಿದೆ.
Question 7 |
7. 64ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಯಲ್ಲಿ ಅತ್ಯುತ್ತಮ ಮಕ್ಕಳ ಸಿನಿಮಾ ಪ್ರಶಸ್ತಿ ಯಾವ ಸಿನಿಮಾಗೆ ಲಭಿಸಿದೆ?
ಧಾನಕ್ | |
ರೈಲ್ವೆ ಚಿಲ್ಡ್ರನ್ | |
ಜಲ್ದೀಪ್ | |
ಅಭಯಂ |
ಹಿಂದಿ ಚಿತ್ರ ಧಾನಕ್ 64ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಯಲ್ಲಿ ಅತ್ಯುತ್ತಮ ಮಕ್ಕಳ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ. ನಾಗೇಶ್ ಕುಕುನೂರ್ ಈ ಸಿನಿಮಾದ ಕಥೆ ಯನ್ನು ಬರೆದಿದ್ದು, ನಿರ್ದೇಶನ ಸಹ ಮಾಡಿದ್ದಾರೆ.
Question 8 |
8. ವಿಶ್ವ ಹೊಮಿಯೋಪಥಿ ದಿನದ ಅಂತಾರಾಷ್ಟ್ರೀಯ ಸಮ್ಮೇಳನ ಯಾವ ನಗರದಲ್ಲಿ ಜರುಗಿತು?
ಬೆಂಗಳೂರು | |
ನವದೆಹಲಿ | |
ಕೊಲ್ಕತ್ತ | |
ಮುಂಬೈ |
Question 9 |
9. ಭಾರತದ ಮೊದಲ ಸೂಕ್ಷ ನಾಟಕ ಉತ್ಸವ “ಥೆಪ್ಸಿಸ್ (Thepsis)” ಯಾವ ನಗರದಲ್ಲಿ ಆರಂಭಗೊಂಡಿತು?
ಪಾಟಿಯಾಲ | |
ನವದೆಹಲಿ | |
ಪಣಜಿ | |
ಕೊಚ್ಚಿ |
ಭಾರತದ ಮೊದಲ ಸೂಕ್ಷ ನಾಟಕ ಉತ್ಸವ “ಥೆಪ್ಸಿಸ್” ನವದೆಹಲಿಯ “ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆಟ್ಸ್”ನಲ್ಲಿ ಏಪ್ರಿಲ್ 9 ರಂದು ಆರಂಭಗೊಂಡಿತು. ಈ ಉತ್ಸವದಲ್ಲಿ ಹತ್ತು ನಿಮಿಷ ಅವಧಿಗಿಂತ ಕಡಿಮೆ ಅವಧಿಯ ಸರಿ ಸುಮಾರು 25 ಕಿರು ನಾಟಕಗಳನ್ನು ಪ್ರದರ್ಶಿಸಲಾಗುವುದು.
Question 10 |
10. 12ನೇ ಭಾರತ-ಮಂಗೋಲಿಯಾ ಮಿಲಿಟರಿ ಅಭ್ಯಾಸ “ನೊಮಾಡಿಕ್ ಎಲಿಫೆಂಟ್” ಯಾವ ರಾಜ್ಯದಲ್ಲಿ ನಡೆಯುತ್ತಿದೆ?
ಮಿಜೋರಾಂ | |
ಅಸ್ಸಾಂ | |
ಗೋವಾ | |
ರಾಜಸ್ತಾನ |
12ನೇ ಭಾರತ-ಮಂಗೋಲಿಯಾ ಮಿಲಿಟರಿ ಅಭ್ಯಾಸ “ನೊಮಾಡಿಕ್ ಎಲಿಫೆಂಟ್” ಮಿಜೋರಾಂನ ವೈರೆಂಗ್ಟೆಯಲ್ಲಿ ಆರಂಭಗೊಂಡಿದೆ. ಏಪ್ರಿಲ್ 5, 2017 ರಿಂದ ಏಪ್ರಿಲ್ 18, 2017 ರವರೆಗೆ ಈ ಮಿಲಿಟರಿ ಅಭ್ಯಾಸ ನಡೆಯಲಿದೆ. ಭಯೋತ್ಪಾದನೆ ನಿಗ್ರಹ, ಒಳನುಸುಳುವಿಕೆ ವಿರುದ್ದ ಕಾರ್ಯಾಚರಣೆ ಕುರಿತಾದ ತರಭೇತಿಯಲ್ಲಿ ಉಭಯ ದೇಶಗಳ ಸೇನಾ ಪಡೆಗಳು ತಾಲೀಮು ನಡೆಸಲಿವೆ.
[button link=”http://www.karunaduexams.com/wp-content/uploads/2017/05/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಏಪ್ರಿಲ್102017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Go fast sir please atlest upload may 20 .. 1month back any how we study but u still now near 2month back still date ..