ಚೀನಾದ ಬೃಹತ್ ಜೆಟ್ ವಿಮಾನ ಹಾರಾಟ ಪ್ರಾರಂಭ
ಚೀನಾದ ಸ್ವದೇಶಿ ನಿರ್ಮಿತ C919 ಪ್ರಯಾಣಿಕರ ಜೆಟ್ ವಿಮಾನ ತನ್ನ ಮೊದಲ ಹಾರಾಟವನ್ನು ಪ್ರಾರಂಭಿಸಿದೆ. ಜಾಗತಿಕ ಏರ್ ಜೆಟ್ ಮಾರುಕಟ್ಟೆಯಲ್ಲಿ ಬೋಯಿಂಗ್ ಮತ್ತು ಏರ್ ಬಸ್ ಪ್ರಾಬಲ್ಯ ಹೊಂದಿರುವ ಪ್ರಾಬಲ್ಯವನ್ನು ಮುಂದಿನ ಎರಡು ದಶಕಗಳಲ್ಲಿ ಚೀನಾ ಪಡೆದುಕೊಳ್ಳುವ ಗುರಿ ಹೊಂದಿದ್ದು, ಜೆಟ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಜೆಟ್ ವಿಮಾನವನ್ನು ಚೀನಾದ ಮಹತ್ವಕಾಂಕ್ಷಿ “ಮೇಡ್ ಇನ್ ಚೀನಾ 2025” ಕಾರ್ಯಕ್ರಮದಡಿ ಅಭಿವೃದ್ದಿಪಡಿಸಲಾಗಿದೆ. ಪ್ರಾಯೋಗಿಕ ಪರೀಕ್ಷಾರ್ಥ ಹಾರಾಟದಲ್ಲಿ C919 ಜೆಟ್ ವಿಮಾನ 80 ನಿಮಿಷಗಳ ಕಾಲ ಯಾಂಗ್ಟ್ಜೆ ನದಿಯ ಮೇಲೆ ಹಾರಾಟ ನಡೆಸಿ ಶಾಂಘೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.
- ಚೀನಾದ ಸರ್ಕಾರಿ ಸಂಸ್ಥೆ “ಕಮರ್ಷಿಯಲ್ ಏರ್ ಕ್ರಾಪ್ಟ್ ಕಾರ್ಪೋರೇಶನ್ ಆಫ್ ಚೀನಾ” ಈ ಜೆಟ್ ವಿಮಾನವನ್ನು ವಿನ್ಯಾಸಗೊಳಿಸಿದೆ.
- 2008ರಲ್ಲಿ ಈ ಜೆಟ್ ವಿಮಾನ ತಯಾರಿಕೆಯ ಪರಿಕಲ್ಪನೆ ಪ್ರಾರಂಭವಾಯಿತು. 158-168 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
- ಜನರಲ್ ಎಲೆಕಕ್ಟ್ರಿಕ್, ಫ್ರಾನ್ಸ್ ಸಫ್ರಾನ್, ಹನಿವೆಲ್ ಇಂಟರ್ನ್ಯಾಷನಲ್ ಇಂಕ್ ನಂತಹ ವಿದೇಶಿ ಕಂಪನಿಗಳ ತಂತ್ರಜ್ಞಾನ ಬಳಸಿ ಅಭಿವೃದ್ದಿಪಡಿಸಲಾಗಿದೆ.
ಚೀನಾ, ಅಮೆರಿಕ ಮತ್ತು ಯುರೋಪಿನಿಂದ ಪ್ರಮಾಣೀಕರಣ ಪತ್ರ ಪಡೆಯಲು C919 ಜೆಟ್ ವಿಮಾನ ಕೆಲವು ವರ್ಷಗಳ ಕಾಲ ಪರೀಕ್ಷಾರ್ಥ ಹಾರಾಟ ನಡೆಸಬೇಕಿದೆ. ಆಗಾಗಿ ಮೊದಲ ಹಾರಾಟದಿಂದ ವಾಣಿಜ್ಯ ಬಳಕೆಗೆ ಹಲವು ವರ್ಷಗಳು ಬೇಕಾಗಲಿದೆ. ಈ ಹಿಂದೆ ಚೀನಾ ಅಭಿವೃದ್ದಿಪಡಿಸಿದ ARJ 21 ಜೆಟ್ ವಿಮಾನ ಪ್ರಾಯೋಗಿಕ ಹಾರಾಟ ನಡೆಸಿದ ಆರು ವರ್ಷಗಳ ನಂತರ ಅಧಿಕೃತ ಪ್ರಮಾಣಪತ್ರ ಪಡೆದುಕೊಂಡಿತ್ತು.
7 ಸಾರ್ವಜನಿಕ ವಲಯ ಬ್ಯಾಂಕುಗಳಿಗೆ ಮುಖ್ಯಸ್ಥರ ನೇಮಕ
ಬ್ಯಾಂಕಿಂಗ್ ಕ್ಷೇತ್ರದ ಪುನರ್ ನಿರ್ಮಾಣಕ್ಕೆ ಓತ್ತು ನೀಡುತ್ತಿರುವ ಕೇಂದ್ರ ಸರ್ಕಾರ 7 ಸಾರ್ವಜನಿಕ ವಲಯ ಬ್ಯಾಂಕುಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿ ಏಳು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡಿದೆ.
- ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಉಷಾ ಅನಂತಸುಬ್ರಮಣ್ಯಂ ಅವರನ್ನು ಕಲ್ಕತ್ತಾ ಮೂಲದ ಅಲಹಬಾದ್ ಬ್ಯಾಂಕಿನ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
- ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಕಾರ್ಯನಿರ್ವಾಹಕ ನಿರ್ದೇಶಕ ರಾಜ್ ಕಿರಣ್ ರಾಯ್ ಅವರನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಓ ಆಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.
- ಆರ್ ಸುಬ್ರಮಣ್ಯಂ, ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಪ್ರಸ್ತುತ ಕಾರ್ಯನಿರ್ವಾಹಕ ನಿರ್ದೇಶಕ ಇವರನ್ನು ಇದೇ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಓ ಆಗಿ ನೇಮಕ ಮಾಡಲಾಗಿದೆ.
- ಕಾರ್ಪೋರೇಶನ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಸುನೀಲ್ ಮೆಹ್ತಾ ಅವರನ್ನು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಖ್ಯಸ್ಥರಾಗಿ ನೇಮಿಸಲಾಗಿದೆ.
- ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಧೀನಬಂಧು ಮೊಹಪತ್ರ ಅವರನ್ನು ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಓ ನೇಮಕ ಮಾಡಲಾಗಿದೆ.
- ಆರ್, ಎ, ಶಂಕರ್ ನಾರಾಯಣ್ ಅವರನ್ನು ವಿಜಯ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಓ ಆಗಿ ನೇಮಕ ಮಾಡಲಾಗಿದೆ.
ರವೀಂದ್ರನಾಥ ಠ್ಯಾಗೋರ್ 156ನೇ ಜನ್ಮದಿನಾಚರಣೆ: ಈಜಿಪ್ಟ್ ನಲ್ಲಿ ಸಾಂಸ್ಕೃತಿಕ ಉತ್ಸವ
ಕವಿ ರವೀಂದ್ರನಾಥ ಠ್ಯಾಗೋರ್ ಅವರ 156ನೇ ಜನ್ಮದಿನಾಚರಣೆ ಅಂಗವಾಗಿ ಈಜಿಪ್ಟ್ನಲ್ಲಿ ಸಾಂಸ್ಕೃತಿಕ ಉತ್ಸವವನ್ನು ಮೇ 8-12 ರಿಂದ ಭಾರತ ಆಯೋಜಿಸಲಿದೆ. ಈಜಿಪ್ಟ್ ನ ಕೈರೋದಲ್ಲಿರುವ ಭಾರತದ ರಾಯಭಾರ ಕಚೇರಿಯ ಸಾಂಸ್ಕೃತಿಕ ವಿಭಾಗವಾದ “ಮೌಲಾನ ಅಜಾದ್ ಸೆಂಟರ್ ಫಾರ್ ಇಂಡಿಯನ್ ಕಲ್ಚರ್ “ ಉತ್ಸವವನ್ನು ಹಮ್ಮಿಕೊಂಡಿದೆ. ಈಜಿಪ್ಟ್ ನ ಸಾಂಸ್ಕೃತಿಕ ಸಚಿವಾಲಯ, ಕೈರೋ ಓಪೆರಾ ಹೌಸ್, ಕಲ್ಚರಲ್ ಪ್ರೊಡಕ್ಷನ್ ಹೌಸ್ ಹಾಗೂ ಭಾರತೀಯ ಸಮುದಾಯ ಒಕ್ಕೂಟ ಸಹ ಉತ್ಸವಕ್ಕೆ ಕೈಜೋಡಿಸಿವೆ. ಈ ಉತ್ಸವದಲ್ಲಿ ನೃತ್ಯ ಪ್ರದರ್ಶನ, ಸಿನಿಮಾ ಪ್ರದರ್ಶನ, ನಾಟಕ ಹಾಗೂ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಉತ್ಸವದ ಒಂದು ಭಾಗವಾಗಿ, ಟಾಗೋರ್ ಅವರ ‘ಚಿತ್ರಾಂಗದ’ ಎಂಬ ಕೃತಿಯನ್ನು ಆಧರಿಸಿದ ನೃತ್ಯ ನಾಟಕವನ್ನು ಕೋಲ್ಕತಾ ಮೂಲದ ಡ್ಯಾನ್ಸರ್ಸ್ ಗಿಲ್ಡ್ ನಡೆಸಲಿದೆ. ಮಹಾಭಾರತದಲ್ಲಿ ಚಿತ್ರಾಂಗದಾ ಒಬ್ಬ ಶೂರ ರಾಜಕುಮಾರಿ.
ಈಜಿಪ್ಟ್ ಸಂಬಂಧ:
ರವೀಂದ್ರನಾಥ್ ಠ್ಯಾಗೋರ್ ಅವರು ಯುವಕರಾಗಿದ್ದ 1878 ರಲ್ಲಿ ಹಾಗೂ ನಂತರ 1926 ರಲ್ಲಿ ಈಜಿಪ್ಟ್ ಗೆ ಭೇಟಿ ನೀಡಿದ್ದರು. ಈಜಿಪ್ಟಿನ ಬಲವಾದ ಸಾಹಿತ್ಯ ಪ್ರವೃತ್ತಿಗಳಿಂದ ಠ್ಯಾಗೋರ್ ಅವರು ಪ್ರಭಾವಿತರಾಗಿದ್ದರು. ತಮ್ಮ ಭೇಟಿಯ ವೇಳೆ ಅಲೆಕ್ಸಾಂಡ್ರಿಯಾ ಹಾಗೂ ಕೈರೋದಲ್ಲಿನ ಪ್ರಖ್ಯಾತ ಸಾಹಿತಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ಈಜಿಪ್ಟ್ನ ಕವಿ ಅಹ್ಮದ್ ಶೌಕಿ ಅವರೊಂದಿಗಿನ ನಿರಂತರ ಸ್ನೇಹವನ್ನು ಹೊಂದಿದ್ದ ಅವರು 1932 ರಲ್ಲಿ ಅವರ ಸಾವಿನ ಬಗ್ಗೆ ಚಲಿಸುವ ಸುವಾರ್ತೆ ಬರೆದರು. ನೈಲ್ ನದಿಯ ಮತ್ತು ಈಜಿಪ್ತಿಯನ್ನರ ಪ್ರವರ್ಧಮಾನ ನಾಗರಿಕತೆಯ ನಡುವಿನ ಸುಂದರ ಸಂಬಂಧ ಬಗ್ಗೆ ಸಹ ಅವರು ಬರೆದಿದ್ದಾರೆ.
ರವೀಂದ್ರನಾಥ್ ಠ್ಯಾಗೋರ್:
- ರವೀಂದ್ರನಾಥ್ ಠ್ಯಾಗೋರ್ (1861-1941) ಭಾರತದ ಶ್ರೇಷ್ಠ ಕವಿ.
- ನೊಬೆಲ್ ಪ್ರಶಸ್ತಿ ಪಡೆದ ಯುರೋಪಿಯನ್ ನೇತರ ಮೊದಲ ವ್ಯಕ್ತಿ. ರವೀಂದ್ರನಾಥ್ ಅವರ ಕವನ ಸಂಕಲನ “ಗೀತಾಂಜಲಿ”ಗೆ 1913ರಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
- ಠ್ಯಾಗೋರ್ ಅವರ ಕವಿತೆ, ನಾಟಕ, ಕಾದಂಬರಿಗಳು ವಿಶ್ವ ಮನ್ನಣೆ ಗಳಿಸಿವೆ. ಅಲ್ಲದೇ ವಿಶ್ವದಾದ್ಯಂತ ಭಾರಿ ಸಂಖ್ಯೆಯ ಓದುಗರನ್ನು ಆಕರ್ಷಿಸಿದ್ದವು. ಬಂಗಾಳಿ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ.
- ಠ್ಯಾಗೋರ್ ಅವರು ಜಲಿಯನ್ ವಾಲಬಾಗ್ ಹತ್ಯಕಾಂಡವನ್ನು ವಿರೋಧಿಸಿ ತಮಗೆ ನೀಡಿದ್ದ ನೈಟ್ ಹುಡ್ ಪ್ರಶಸ್ತಿಯನ್ನು ಹಿಂದಿರುಗಿಸಿದರು.