ಹಾಲಿವುಡ್ ನಟಿ ಎಮ್ಮಾ ವ್ಯಾಟನ್ಸ್ ಗೆ ಪ್ರಪ್ರಥಮ ಲಿಂಗಧಾರ ರಹಿತ ಪ್ರಶಸ್ತಿ

ಎಂಟಿವಿ ಮೂವಿ ಮತ್ತು ಟಿವಿ ಪ್ರಶಸ್ತಿಯಲ್ಲಿ ಹಾಲಿವುಡ್ ನಟಿ ಎಮ್ಮಾ ವ್ಯಾಟ್ಸನ್ ಅತ್ಯುತ್ತಮ ನಟಿ ವಿಭಾಗದಲ್ಲಿ ಮೊದಲ ಬಾರಿಗೆ ಲಿಂಗಧಾರ ರಹಿತ (Genderless) ನಟನೆ ಪ್ರಶಸ್ತಿಯನ್ನು ಪಡೆದು ಕೊಂಡಿದ್ದಾರೆ.

  • ಲಿಂಗವನ್ನು ಆಧರಿಸಿದೆ ಪ್ರತ್ಯೇಕವಾಗಿ ನಾಮಕರಣಗೊಳ್ಳದ ಮೊದಲ ಲಿಂಗಧಾರ ರಹಿತ ಪ್ರಶಸ್ತಿಯಾಗಿದೆ.
  • 2017ರ ಎಪ್ರಿಲ್ 7, 2017 ರಂದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿ ಎಂಟಿವಿ ಮೂವಿ & ಟಿವಿ ಪ್ರಶಸ್ತಿಯ ಆವೃತ್ತಿಯನ್ನು ಆಯೋಜಿಸಲಾಗಿತ್ತು. ಇದು ಪ್ರಶಸ್ತಿಯ 26 ನೇ ಆವೃತ್ತಿಯಾಗಿದೆ.
  • ಎಮ್ಮಾ ವ್ಯಾಟ್ಸನ್ ಒಬ್ಬ ಬ್ರಿಟಿಷ್ ನಟಿ, ರೂಪದರ್ಶಿ ಮತ್ತು ಕಾರ್ಯಕರ್ತೆ. ಹ್ಯಾರಿ ಪಾಟರ್ ಫಿಲ್ಮ್ ಸರಣಿಯಲ್ಲಿ ಹೆರ್ಮಿಯೋನ್ ಗ್ರ್ಯಾಂಗರ್ ಪಾತ್ರದಲ್ಲಿ ಅವರು ಹೆಸರುವಾಸಿಯಾಗಿದ್ದಾರೆ.

ಅಮೆರಿಕದ FERCಗೆ ಭಾರತ ಮೂಲದ ನೀಲ್ ಚಟರ್ಜಿ ನೇಮಕ

ಭಾರತ ಮೂಲದ ಅಮೆರಿಕ ಪ್ರಜೆ ನೀಲ್ ಚಟರ್ಜಿ ಅವರನ್ನು ಅಮೆರಿಕದ ಫೆಡರಲ್ ಎನರ್ಜಿ ರೆಗ್ಯೂಲೇಟರ್ ಕಮೀಷನ್ (FERC)ನ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಅಮೆರಿಕದ ವಿದ್ಯುತ್ ಗ್ರಿಡ್ ಮೇಲ್ವಿಚಾರಣೆ ಮತ್ತು ಬಹು ಶತಕೋಟಿ ಡಾಲರ್ ಇಂಧನ ಯೋಜನೆಗಳನ್ನು ನಿರ್ಧರಿಸುವ ಜವಾಬ್ದಾರಿಯು ಈ ಆಯೋಗದಾಗಿದೆ. ಚಟರ್ಜಿ ಅವರ ಅವಧಿಯು ಜೂನ್ 30, 2021 ರಂದು ಮುಕ್ತಾಯಗೊಳ್ಳಲಿದೆ. ಫೆಡರಲ್ ಎನರ್ಜಿ ರೆಗ್ಯುಲೇಟರಿ ಆಯೋಗದ ಸದಸ್ಯರಾಗಿ ಅಧಿಕಾರ ಸ್ವೀಕರಿಸುವ ಮೊದಲು US ಸೆನೆಟ್ ಚಟರ್ಜಿ ಅವರನ್ನು ಅನುಮೋದಿಸಬೇಕು.

ನೀಲ್ ಚಟರ್ಜಿ:

ನೀಲ್ ಚಟರ್ಜಿಯವರು ಕೆಂಟುಕಿ ಮೂಲದವರು. ಅವರು ಸೇಂಟ್ ಲಾರೆನ್ಸ್ ವಿಶ್ವವಿದ್ಯಾಲಯದಿಂದ ಮತ್ತು ಸಿನ್ಸಿನ್ನಾಟಿ ಕಾಲೇಜ್ ಆಫ್ ಲಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಚಟರ್ಜಿ ರಾಷ್ಟ್ರೀಯ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಸರ್ಕಾರಿ ಸಂಬಂಧಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯು.ಎಸ್. ಸೆನೇಟ್ ಮೆಜಾರಿಟಿ ಲೀಡರ್ ಮಿಚ್ ಮ್ಯಾಕ್ ಕಾನ್ನೆಲ್ಗೆ ಇಂಧನ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ನ್ಯಾಯಾಂಗ ನಿಂದನೆ: ನ್ಯಾಯಾಮೂರ್ತಿ ಕರ್ಣನ್ ಗೆ 6 ತಿಂಗಳ ಶಿಕ್ಷೆ

ಕಲ್ಕತ್ತಾ ನ್ಯಾಯಾಮೂರ್ತಿ ಸಿ.ಎಸ್. ಕರ್ಣನ್  ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಮೂರ್ತಿ ನ್ಯಾ.ಖೇಹರ್ ಸಿಂಗ್ ನೇತೃತ್ವದ ಏಳು ಮಂದಿ ನ್ಯಾಯಾಧೀಶರ ಪೀಠ 6 ತಿಂಗಳ ಜೈಲ ಶಿಕ್ಷೆ ವಿಧಿಸಿ  ಆದೇಶ ಹೊರಡಿಸಿದೆ. ನ್ಯಾಯಾಂಗ ನಿಂದನೆ ಹಿನ್ನಲೆಯಲ್ಲಿ ಕರ್ಣನ್ ಅವರಿಗೆ ಶಿಕ್ಷೆಯನ್ನು ವಿಧಿಸಲಾಗಿದೆ. ಹೈಕೋರ್ಟ್ ನ್ಯಾಯಾಧೀಶರೊಬ್ಬರಿಗೆ ನ್ಯಾಯಾಂಗ ನಿಂದನೆ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸುತ್ತಿರುವುದು ಇದೇ ಮೊದಲು.  ಇದೇ ವೇಳೆ ಕರ್ಣನ್ ಅವರು ಹೊರಡಿಸುವ ಯಾವುದೇ ಆದೇಶವನ್ನು ಪ್ರಕಟಿಸದಂತೆ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಹಿನ್ನಲೆ:

ನ್ಯಾ. ಕರ್ಣನ್ ಅವರು ಕೆಲವು ನ್ಯಾಯಾಧೀಶರ ವಿರುದ್ದ ಭ್ರಷ್ಟಾಚಾರ, ಜಾತಿ ನಿಂದನೆ ಆರೋಪ ವರಿಸಿ ನಿಂದಿಸಿದ ಹಿನ್ನಲೆಯಲ್ಲಿ ಮುಖ್ಯನ್ಯಾಯಾಮೂರ್ತಿ ನ್ಯಾ.ಖೇಹರ್ ಸಿಂಗ್ ಅವರು ಕರ್ಣನ್ ವಿರುದ್ದ ನ್ಯಾಯಾಂಗ ನಿಂದನೆ ನೋಟಿಸು ಜಾರಿ ಮಾಡಿದ್ದರು. ಮಾರ್ಚ್ 1 ರಂದು ಕರ್ಣನ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ವೈದ್ಯರ ತಂಡವನ್ನು ರಚಿಸಿ ವರದಿಯನ್ನು ಸಲ್ಲಿಸುವಂತೆ ಆದೇಶಿಸಿತ್ತು.   ಆದರೆ ನ್ಯಾ. ಕರ್ಣನ್ ಅವರು ಸುಪ್ರೀಂ ಕೋರ್ಟಿನ ಆದೇಶವನ್ನು ತಿರಸ್ಕರಿಸಿದರಲ್ಲದೆ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್  ಹಾಗೂ ಇತರೆ 7 ಮಂದಿ ನ್ಯಾಯಾಧೀಶರಿಗೆ ಐದು ವರ್ಷ ಕಠಿಣ ಸಜೆ ಮತ್ತು 1 ಲಕ್ಷ ರು.ದಂಡ ವಿಧಿಸಿ ಸುಪ್ರೀಂಕೋರ್ಟ್ ನ ಕೆಂಗಣ್ಣಿಗೆ ತುತ್ತಾಗಿದ್ದರು. ಅದರ ಪರಿಣಾಮ ಎಂಬಂತೆ ಇದೀಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕರ್ಣನ್ ಅವರಿಗೆ 6 ತಿಂಗಳ ಸೆರೆವಾಸ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ

ಚೂರು ಪಾರು:

  • ಸಾಕ್ಷ್ಯಚಿತ್ರಗಳನಿರ್ದೇಶಕ”ಚಲಂಬೆನ್ನೂರ್ಕರ್‌”ನಿಧನ: ಸಾಕ್ಷ್ಯಚಿತ್ರಗಳ ನಿರ್ದೇಶಕ ಚಲಂ ಬೆನ್ನೂರ್‌ಕರ್‌ (62) ನಿಧನರಾಗಿದ್ದಾರೆ. ವಕಾಶಿಯ ಬೆಂಕಿಕಡ್ಡಿ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ  ಬಾಲಕಾರ್ಮಿಕರ ಬದುಕಿನ ಕುರಿತು ಅವರು ‘ಕುಟ್ಟಿ ಜಪಾನಿನ್ ಕುಳಂದೈಗಳ್’ (Children of Mini Japan) ಸಾಕ್ಷ್ಯಚಿತ್ರ ನಿರ್ಮಿಸಿದ್ದರು. ಇದು ಹಲವು ಪ್ರಶಸ್ತಿಗಳನ್ನು ಗಳಿಸಿತ್ತು.ತೃತೀಯ ಲಿಂಗಿಗಳ ಬದುಕಿನ ಕುರಿತ ‘ಆಲ್‌ ಅಬೌಟ್‌ ಅವರ್‌ ಫಾಮಿಲಾ’  ಸಾಕ್ಷ್ಯಚಿತ್ರ ಅವರಿಗೆ ಖ್ಯಾತಿ ತಂದು ಕೊಟ್ಟಿತ್ತು. ಮಹಿಳೆಯರ ಸಮಸ್ಯೆಗಳ ಕುರಿತಾಗಿಯೇ 1970ರಲ್ಲಿ ಬೆಂಗಳೂರು ಫಿಲ್ಮ್‌ ಸೊಸೈಟಿ ಸಹಯೋಗದಲ್ಲಿ ಚಿತ್ರೋತ್ಸವ ಆಯೋಜಿಸಿದ್ದರು.
  • ಎಮ್ಯಾನುಯಲ್ ಮ್ಯಾಕ್ರನ್ಫ್ರಾನ್ಸನ ಅಧ್ಯಕ್ಷ: ಫ್ರಾನ್ಸ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ 39ವರ್ಷದ ಎಮ್ಯಾನುಯಲ್ ಮ್ಯಾಕ್ರನ್‌ ಆಯ್ಕೆಯಾಗಿದ್ದು,  ದೇಶದ ಅತ್ಯಂತ ಕಿರಿಯ ಅಧ್ಯಕ್ಷರಾಗಿ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಎಮ್ಯಾನುಯಲ್  ಶೇ1 ಮತ್ತು ಮೆಲೀನ್‌ ಲೇ ಪೆನ್‌  ಶೇ 34.9ರಷ್ಟು ಮತ ಗಳಿಸಿದ್ದಾರೆ.
  • ಕಿರಣ್ ಮಜುಮ್ದಾರ್ ಷಾ ಅವರಿಗೆ AWSM Excellence ಪ್ರಶಸ್ತಿ: ಬಯೋಕಾನ್ ಲಿಮಿಟೆಡ್‌ನ ಮುಖ್ಯಸ್ಥೆ ಕಿರಣ್ ಮಜುಮ್‌ದಾರ್ ಷಾ ಅವರಿಗೆ ಫೀನ್‌ಸ್ಟೀನ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಮೆಡಿಕಲ್‌ ರಿಸರ್ಚ್‌ನ ‘ವಿಜ್ಞಾನ ಮತ್ತು ಔಷಧೀಯ ಕ್ಷೇತ್ರದ ಮುಂಚೂಣಿ ಮಹಿಳೆ’ (AWSM Excellence 2017) ಪುರಸ್ಕಾರ ದೊರೆತಿದೆ. ನ್ಯೂಯಾರ್ಕ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಅವರು ಪುರಸ್ಕಾರ ಸ್ವೀಕರಿಸಿದರು.
  • ಸೊಹೈಲ್ ಮಹ್ಮೂದ್ ಭಾರತದಲ್ಲಿನ ಪಾಕಿಸ್ತಾನದ ನೂತನ ಹೈಕಮೀಷನರ್: ಹಿರಿಯ ರಾಜತಾಂತ್ರಿಕ ಸೊಹೈಲ್‌ ಮಹ್ಮೂದ್‌ ಅವರನ್ನು ಭಾರತದಲ್ಲಿನ ಪಾಕಿಸ್ತಾನದ ನೂತನ ಹೈಕಮಿಷನರ್‌ ಆಗಿ ನೇಮಿಸಲಾಗಿದೆ. ಮಹ್ಮೂದ್‌ ಪ್ರಸ್ತುತ ಟರ್ಕಿಯಲ್ಲಿ ರಾಯಭಾರಿಯಾಗಿದ್ದಾರೆ. ಈಗಿರುವ ಹೈಕಮಿಷನರ್ ಅಬ್ದುಲ್‌ ಬಾಸಿತ್‌ ಮೂರು ವರ್ಷಗಳ ಅವಧಿ ಪೂರೈಸಿರುವುದರಿಂದ ಹೊಸ ನೇಮಕ ಮಾಡಲಾಗಿದೆ.
  • ವಿಜ್ಞಾನಿ ಯು.ಆರ್. ರಾವ್ ಅವರಿಗೆ “ಭಾಸ್ಕರ ಪ್ರಶಸ್ತಿ”: ಸಿಂದಗಿಯ ಸಾರಂಗ ಮಠ– ಗಚ್ಚಿನ ಮಠದ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ ‘ಭಾಸ್ಕರ ಪ್ರಶಸ್ತಿ’ಗೆ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್ ಅವರನ್ನು ಆಯ್ಕೆ ಮಾಡಲಾಗಿದೆ.‘ಈ ಪ್ರಶಸ್ತಿಯು ₹1 ಲಕ್ಷ ನಗದು, ಬೆಳ್ಳಿಯ ಪದಕ, ಸ್ಮರಣಿಕೆ ಒಳಗೊಂಡಿದೆ.
  • ಜೂಲನ್ ಗೋಸ್ವಾಮಿ ವಿಶ್ವದಾಖಲೆ: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಜೂಲನ್ ಗೋಸ್ವಾಮಿ ಅವರು ಅಂತರರಾಷ್ಟ್ರೀಯ ಏಕದಿನ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌  ಪಡೆದ   ವಿಶ್ವದಾಖಲೆ ನಿರ್ಮಿಸಿದರು. ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಅವರು   ಮೂರು ವಿಕೆಟ್‌ಗಳನ್ನು ಪಡೆದು ಒಟ್ಟು ವಿಕೆಟ್‌ ಗಳಿಕೆಯ ಸಾಧನೆಯನ್ನು 181ಕ್ಕೇರಿಸಿದರು.  ಹತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಆಟಗಾರ್ತಿ ಕ್ಯಾಥರಿನ್ ಫಿಟ್‌ಪ್ಯಾಟ್ರಿಕ್ ಅವರು 103 ಪಂದ್ಯಗಳಲ್ಲಿ 180 ವಿಕೆಟ್‌ಗಳನ್ನು ಗಳಿಸಿದ್ದ ದಾಖಲೆಯನ್ನು  ಜೂಲನ್ ಅಳಿಸಿಹಾಕಿದರು. ಅವರು 153 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರು.

Leave a Comment

This site uses Akismet to reduce spam. Learn how your comment data is processed.