ಸಂಜಯ್ ಪ್ರತಿಹಾರ್ ರವರಿಗೆ INSA ಯುವ ವಿಜ್ಞಾನಿ ಪ್ರಶಸ್ತಿ

ಅಸ್ಸಾಂನ ತೇಜ್ಪುರ ವಿಶ್ವವಿದ್ಯಾಲಯದ ವಿಜ್ಞಾನಿ ಸಂಜಯ್ ಪ್ರತಿಹಾರ್ ರವರಿಗೆ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ನೀಡುವ ಯುವ ವಿಜ್ಞಾನಿ-2017 ಪ್ರಶಸ್ತಿ ಲಭಿಸಿದೆ. “ಬಹು-ಲೋಹದ ಸಂಕೀರ್ಣಗಳು, ಸೈದ್ಧಾಂತಿಕ ತಿಳುವಳಿಕೆ, Hq2 + ಅಯಾನುಗಳ ಆಯ್ದ ಸಂವೇದನೆ ಮತ್ತು ಕೃಷಿಯಲ್ಲಿನ ಪ್ರಮುಖ ಅನ್ವಯಿಕೆಗಳಿಗೆ” ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸಂಜಯ್ ಪ್ರತಿಹಾರ್ ಅವರು ಆರ್ಗನಿಕ್ ಕೆಮಿಸ್ಟ್ರಿಯಲ್ಲಿ ಪಿ.ಎಚ್.ಡಿ ಪದವಿಯನ್ನು ಐಐಟಿ, ಖರಗಪುರದಿಂದ ಪಡೆದಿದ್ದಾರೆ.

  • 2012ರಲ್ಲಿ DST-INSPIRE Faculty ಪ್ರಶಸ್ತಿಯನ್ನು ಸಂಜಯ್ ಅವರು ಪಡೆದುಕೊಂಡಿದ್ದಾರೆ.
  • INSA ಪ್ರಶಸ್ತಿಯು ಕಂಚಿನ ಪದಕ ಹಾಗೂ ರೂ 25,0000 ಗಳನ್ನು ಒಳಗೊಂಡಿದೆ.
  • ಡಿಸೆಂಬರ್ ನಲ್ಲಿ ನಡೆಯಲಿರುವ INSA ವಾರ್ಷಿಕ ಸಭೆಯಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು.

ಪ್ರಶಸ್ತಿಯ ಬಗ್ಗೆ:

  • ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಈ ಪ್ರಶಸ್ತಿಯನ್ನು 1974ರಲ್ಲಿ ಸ್ಥಾಪಿಸಿದೆ. ಅಂದಿನಿಂದ ಪ್ರತಿ ವರ್ಷ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಕೊಡುಗೆ ನೀಡುವ ಯುವ ವಿಜ್ಞಾನಿಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಒಡಿಶಾದ ಸುಲ್ಗಿರಿ ಮತ್ತು ಸ್ವಾಲ್ಗಿರಿ ಸಮುದಾಯಗಳನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ

ಒಡಿಶಾದ ಸುಲ್ಗಿರಿ ಮತ್ತು ಸ್ವಾಲ್ಗಿರಿ ಸಮುದಾಯಗಳನ್ನು ಪರಿಶಿಷ್ಟ ಜಾತಿಗಳನ್ನಾಗಿ ಸೂಚಿಸಲಾಗಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸಂವಿಧಾನದ (ಪರಿಶಿಷ್ಟ ಜಾತಿ) ಆದೇಶ (ತಿದ್ದುಪಡಿ) ಕಾಯಿದೆ, 2017 ಕ್ಕೆ ಅನುಮೋದನೆ ನೀಡಿದ್ದಾರೆ. ಕಳೆದ ಮಾರ್ಚಿನಲ್ಲಿ ಲೋಕಸಭೆ ಮಸೂದೆಗೆ ಅಂಗೀಕಾರ ನೀಡಿತ್ತು. ಆ ನಂತರ ರಾಜ್ಯಸಭೆ ಮಸೂದೆಯನ್ನು ಅಂಗೀಕರಿತ್ತು. ಅದರಂತೆ ಸುಲ್ಗಿರಿ, ಸ್ವಾಲ್ಗಿರಿ ಸಮುದಾಯಗಳನ್ನು ಒಡಿಶಾದ ಪರಿಷ್ಕೃತ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗಳಂತೆ ಸೂಚಿಸಲಾಗಿದೆ.

ಅನುಕೂಲ:

ಸಂವಿಧಾನದ ವಿಧಿ 341ರ ನಿಬಂಧನೆಗಳ ಅಡಿಯಲ್ಲಿ ಸೂಚಿಸಲಾದ ಪರಿಶಿಷ್ಟ ಜಾತಿ ಸಮುದಾಯದವರಿಗೆ ಕೆಲವು ಸೌಲಭ್ಯಗಳು ಮತ್ತು ರಿಯಾಯಿತಿಗಳನ್ನು ಸಂವಿಧಾನವು ಒದಗಿಸುತ್ತದೆ. ಪರಿಶಿಷ್ಟ ಜಾತಿಗಳ ಸ್ಥಾನಮಾನವು ಈ ಸಮುದಾಯಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಪಡೆಯಲು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಸೇರ್ಪಡೆಯಾಗುವುದರ ಜೊತೆಗೆ ಕೆಲವು ಇತರ ಹಣಕಾಸಿನ ಪ್ರಯೋಜನಗಳನ್ನು ಒದಗಿಸುತ್ತದೆ. ಇದರ ಜೊತೆಗೆ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ.

ಮಧ್ಯಪ್ರದೇಶದಲ್ಲಿ ಜನವರಿ-ಡಿಸೆಂಬರ್ ವರೆಗೆ ಆರ್ಥಿಕ ವರ್ಷ

ಮಧ್ಯಪ್ರದೇಶ ಸರ್ಕಾರ ನೂತನ ಆರ್ಥಿಕ ವರ್ಷವನ್ನು ಏ್ರಪಿಲ್-ಮಾರ್ಚ್ ಬದಲಾಗಿ  ಜನವರಿಯಿಂದ ಡಿಸೆಂಬರ್​ಗೆ ಬದಲಾಯಿಸಿದೆ. ಆ ಮೂಲಕ ಆರ್ಥಿಕ ವರ್ಷವನ್ನು ಜನವರಿಯಿಂದ ಡಿಸೆಂಬರ್​ಗೆ ಅಳವಡಿಸಿಕೊಂಡ ಮೊದಲ ರಾಜ್ಯವೆನಿಸಿದೆ. ಮುಂದಿನ ಆರ್ಥಿಕ ವರ್ಷದ ಬಜೆಟ್ ಅನ್ನು ಡಿಸೆಂಬರ್-ಜನವರಿ ಅವಧಿಯಲ್ಲಿ ಮಂಡಿಸಲಾಗುವುದು.

  • ನೂತನ ಆರ್ಥಿಕ ವರ್ಷವನ್ನು ಏ್ರಪಿಲ್-ಮಾರ್ಚ್ ಬದಲಾವಣೆಯಿಂದ ತೆರಿಗೆ ಪರಿಷ್ಕರಣೆ ವರ್ಷ ಸಹ ಬದಲಾಗಬೇಕಿದೆ. ಅಲ್ಲದೇ ಸಂಸ್ಥೆಗಳ ಮಟ್ಟದಲ್ಲೂ ಸಹ ಮೂಲಭೂತ ಸೌಕರ್ಯಗಳ ಬದಲಾವಣೆ ಆಗಬೇಕಿದೆ.

ಹಿನ್ನಲೆ:

ಕಳೆದ ತಿಂಗಳು 23ರಂದು ನವದೆಹಲಿಯಲ್ಲಿ ನಡೆದಿದ್ದ ನೀತಿ ಆಯೋಗದ ಸಭೆಯಲ್ಲಿ ದೇಶದ ಎಲ್ಲ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಹಣಕಾಸು ವರ್ಷವನ್ನು ಜನವರಿಯಿಂದಲೇ ಪ್ರಾರಂಭಿಸುವ ಕುರಿತು ಪ್ರಸ್ತಾಪಿಸಿದ್ದರು. ಅದರ ಸಾಧ್ಯತೆ ಕುರಿತು ರ್ಚಚಿಸಿ ಅನುಷ್ಠಾನಕ್ಕೆ ತರುವಂತೆ ಸೂಚಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ, ಮುಂದಿನ ಡಿಸೆಂಬರ್​ನಲ್ಲಿ ಬಜೆಟ್ ಮಂಡಿಸಿ 2018ರ ಜನವರಿಯಿಂದ ನೂತನ ಹಣಕಾಸು ವರ್ಷ ಆರಂಭಿಸಲು ನಿರ್ಧರಿಸಿದೆ. ಹಣಕಾಸು ವರ್ಷದ ಬದಲಾವಣೆ ಸಾಧ್ಯತೆ ಬಗ್ಗೆ ಈಗಾಗಲೇ ಉನ್ನತಮಟ್ಟದ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಜಾಗತಿಕ ಮಟ್ಟದಲ್ಲಿ ಬಹುತೇಕ ರಾಷ್ಟ್ರಗಳು ಜನವರಿಯಿಂದ ಡಿಸೆಂಬರ್ ವರೆಗೆ ಆರ್ಥಿಕ ವರ್ಷ ನಿಗದಿಗೊಳಿಸಿವೆ.

Leave a Comment

This site uses Akismet to reduce spam. Learn how your comment data is processed.