ಚೀನಾಬ್ ನದಿಯ ಮೇಲೆ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ

ವಿಶ್ವದ ಅತಿ ಎತ್ತರದ ರೈಲು ಸೇತುವೆ ಚೀನಾಬ್ ನದಿಯ ಮೇಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಾಪನೆಗೊಳ್ಳಲಿದೆ. ಐಫೆಲ್ ಟವರ್ ಗಿಂತಲೂ 35ಮೀ ಎತ್ತರವಿರಲಿರುವ ಈ ಸೇತುವೆ ಜಮ್ಮು ಮತ್ತು ಕಾಶ್ಮೀರದ ರೆಯಾಸಿ ಜಿಲ್ಲೆಯ ಬಕ್ಕಲ್‌ ಮತ್ತು ಕೌರಿ ನಡುವೆ ಪ್ರಗತಿ ಹಂತ­ದಲ್ಲಿದೆ.

  • 1,315 ಮೀಟರ್‌ ಉದ್ದದ ಈ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಈ ಸೇತುವೆ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ ಎನಿಸಿಕೊಳ್ಳಲಿದೆ.
  • ರೈಲ್ವೆ ಸಚಿವಾ­ಲಯ ಕೈಗೆತ್ತಿಕೊಂಡಿರುವ ಜಮ್ಮು–ಉಧಂ­ಪುರ್‌– ಶ್ರೀನಗರ–ಬಾರಾಮುಲ್ಲ ನಡುವಿನ ಈ ಬೃಹತ್‌ ಯೋಜ­ನೆಯ ಒಟ್ಟು ಮೊತ್ತ ರೂ 512 ಕೋಟಿ. ಈ ಸೇತುವೆ ರೈಲ್ವೆ ಸಂಚಾರಕ್ಕೆ ಮಾತ್ರವಲ್ಲದೆ ವಾಹನಗಳ ದ್ವಿಮುಖ ಸಂಚಾರಕ್ಕೆ 14 ಮೀಟರ್‌ ಜಾಗ ಹಾಗೂ ನಡು­ವಿನ ಭಾಗದಲ್ಲಿ 1.2 ಮೀಟರ್‌ ಅಗಲದ ಹೂವಿನ ಹಾದಿ­ಯನ್ನು ಒಳಗೊಳ್ಳಲಿದೆ.
  • ಈ ಸೇತುವೆಯ ಜೀವಿತಾವಧಿ 120 ವರ್ಷ.

ಸೇತುವೆಯ ವಿನ್ಯಾಸ:

  • ಚೀನಾಬ್‌ ಸೇತುವೆ ಉಕ್ಕಿನ ಬೃಹತ್‌ ಕಮಾನುಗಳನ್ನೊಳಗೊಂಡಿದ್ದು, ಇದು ಭಾರತ­ದಲ್ಲಿಯೇ ಈ ಮಾದರಿಯ ಮೊದಲ ಸೇತುವೆ.
  • ನಾರ್ವೆ ಮೂಲದ ಫೋರ್ಸ್‌ ಟೆಕ್ನಾಲಜಿ ಲ್ಯಾಬೊರೇಟರಿಯು ಗಾಳಿಯ ವೇಗವನ್ನು ಅರಿತುಕೊಳ್ಳಲು ಹಲವು ಪರೀಕ್ಷೆಗಳನ್ನು ನಡೆಸಿದೆ. ಗಂಟೆಗೆ ಸುಮಾರು 260 ಕಿ.ಮಿ. ವೇಗ ಬೀಸುವ ಗಾಳಿಯನ್ನು ತಡೆದುಕೊಳ್ಳುವಂತೆ ಸೇತುವೆ ವಿನ್ಯಾಸ ಮಾಡಲಾಗಿದೆ.
  • 17 ಅಂಕಣಗಳು ಮತ್ತು ಚೆನಾಬ್‌ ನದಿಯನ್ನು ಸಂಪೂರ್ಣ ಕ್ರಮಿಸುವ 469 ಮೀಟರ್‌ ಉದ್ದದ ಮುಖ್ಯ ಕಮಾನನ್ನು ಸೇತುವೆ ಒಳಗೊಂಡಿದೆ. ಸೇತುವೆಗೆ 130 ಮೀ ಉದ್ದ ಮತ್ತು 100 ಮೀ ಎತ್ತರದ ಕಂಬಗಳು ಆಧಾರವಾಗಿರಲಿದ್ದು, ಎರಡೂ ತುದಿಗಳಿಗೆ ಕೇಬಲ್‌ಗಳ ಬಲದ ಆಧಾರ ನೀಡಲಾಗಿದೆ.
  • ಸೇತುವೆಯ ರಕ್ಷಣೆಗೆ ವೈಮಾನಿಕ ಭದ್ರತೆ ನೀಡಲಾಗುವುದು. ಗಂಭೀರ ಸನ್ನಿವೇಶಗಳು ಉಂಟಾ­ದಲ್ಲಿ ಪ್ರಯಾಣಿಕರನ್ನು ರಕ್ಷಿಸಲು ಆನ್‌­ಲೈನ್‌  ನಿರ್ವಹಣೆ, ಎಚ್ಚರಿಕೆ ನೀಡುವ ವ್ಯವಸ್ಥೆ­ಗಳನ್ನು ಅಳವಡಿಸಲಾಗುವುದು.

ಆಂಧ್ರಪ್ರದೇಶದ ಬಂಗನಾಪಲ್ಲಿ ಮಾವಿಗೆ GI ಟ್ಯಾಗ್

ಆಂಧ್ರಪ್ರದೇಶದ ಪ್ರಸಿದ್ಧ ಬಂಗನಾಪಲ್ಲಿ ಮಾವಿಗೆ ಚೆನ್ನೈನ ರಿಜಿಸ್ಟ್ರಾರ್ ಆಫ್ ಜಿಯಾಗ್ರಫಿಕಲ್ ಇಂಡಿಕೇಷನ್ ರಿಜಿಸ್ಟ್ರಿ ಜಿಐ ಟ್ಯಾಗ್ ನೀಡಿದೆ. ಹಾಗಾಗಿ ಇನ್ನು ಮುಂದೆ ಆಂಧ್ರಪ್ರದೇಶ ಸರ್ಕಾರಕ್ಕೆ ಬಂಗನಾಪಲ್ಲಿ ಮಾವಿನಹಣ್ಣುಗಳ ಜಿಐ ಟ್ಯಾಗ್ನ ನೋಂದಾಯಿತ ಓಡೆತನ ದೊರೆತಂತಾಗಿದೆ.

Geographical Identification Tag:

GI ಟ್ಯಾಗ್ ಯಾವುದೇ ಉತ್ಪನ್ನದ ನಿರ್ದಿಷ್ಟ ಪ್ರದೇಶವನ್ನು ಸೂಚಿಸುತ್ತದೆ.. ಉತ್ಪನ್ನಗಳ ಭೌಗೋಳಿಕ ಸೂಚನೆಗಳು ಕೈಗಾರಿಕಾ ಆಸ್ತಿಯ ಒಂದು ಅಂಶವೆಂದು ವ್ಯಾಖ್ಯಾನಿಸಲಾಗಿದೆ, ಇದು ಭೌಗೋಳಿಕ ಸೂಚನೆಯನ್ನು ಒಂದು ದೇಶ ಅಥವಾ ಅದರ ಉತ್ಪನ್ನದ ಮೂಲ ಅಥವಾ ಸ್ಥಳವೆಂದು ಕರೆಯಲ್ಪಡುವ ಒಂದು ಸ್ಥಳವನ್ನು ಉಲ್ಲೇಖಿಸುತ್ತದೆ. ವಿಶಿಷ್ಟವಾಗಿ, ಇಂತಹ ಹೆಸರು ಗುಣಮಟ್ಟ ಮತ್ತು ವಿಶಿಷ್ಟತೆಯ ಭರವಸೆ ನೀಡುತ್ತದೆ.

ಬಂಗನಾಪಲ್ಲಿ ಮಾವು:

ಬಂಗನಾಪಲ್ಲಿ ಮಾವಿನ ಹಣ್ಣುಗಳು ಸಿಹಿಗೆ ಹೆಸರುವಾಸಿಯಾಗಿದೆ ಮತ್ತು “ಹಣ್ಣುಗಳ ರಾಜ” ಎಂದು ಪ್ರಸಿದ್ದವಾಗಿವೆ. ಬಂಗನಾಪಲ್ಲಿ ಮಾವಿನ ಹಣ್ಣುಗಳು ಶೀತಲ ಶೇಖರಣೆಯಲ್ಲಿ ಮೂರು ತಿಂಗಳವರೆಗೆ ಗುಣಮಟ್ಟ ಹಾಳಾಗದಂತೆ ಶೇಖರಿಡಿಸಬಹುದಾಗಿದೆ. ಈ ಮಾವುಗಳನ್ನು 100 ವರ್ಷಗಳಿಂದ ಆಂಧ್ರಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಕರ್ನೂಲ್ ಜಿಲ್ಲೆ ಈ ತಳಿಯ ಮೂಲವೆನ್ನಲಾಗಿದೆ.. ಖಮ್ಮಂ, ಮಹಾಬೂಬ್ನಗರ, ರಂಗರೆಡ್ಡಿ, ತೆಲಂಗಾಣದಲ್ಲಿ ಮೆಡಾಕ್ ಮತ್ತು ಅದಿಲಾಬಾದ್ ಜಿಲ್ಲೆಗಳಲ್ಲೂ ಹೇರಳವಾಗಿ ಬೆಳೆಯಲಾಗುತ್ತದೆ. ಯು.ಎಸ್ ಮತ್ತು ಯುಕೆ ಮುಂತಾದ ದೇಶಗಳಿಗೆ 5,500 ಟನ್ಗಳಷ್ಟು ಬಂಗಾನಪ್ಪಲ್ಲಿ ಮಾವಿನ ಹಣ್ಣುಗಳನ್ನು ಭಾರತ ರಫ್ತುಮಾಡಿದೆ.

ವಿಜಯವಾಡ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾನಮಾನ

ವಿಜಯವಾಡ ವಿಮಾನ ನಿಲ್ದಾಣಕ್ಕೆ ಕೇಂದ್ರ ಸಚಿವ ಸಂಪುಟ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾನಮಾನ ನೀಡಿದೆ. 2014ರ ಆಂಧ್ರಪ್ರದೇಶದ ಪುನರ್ ರಚನೆ ಕಾಯಿದೆ ಪ್ರಕಾರ ಈ ಅನುಮೋದನೆಯನ್ನು ನೀಡಲಾಗಿದೆ. ಪ್ರಯಾಣಿಕರ ಸಂಚಾರ ದಟ್ಟಣೆಯಲ್ಲಿ ವಿಮಾನನಿಲ್ದಾಣವು ಗಮನಾರ್ಹ ಬೆಳವಣಿಗೆಯನ್ನು ಕಂಡಿರುವುದರಿಂದ ಮತ್ತು ವಿಮಾನಯಾನ ಸಂಸ್ಥೆಗಳ ಹಾಗೂ ಆಂಧ್ರಪ್ರದೇಶ ಸರಕಾರದ ಬೇಡಿಕೆಯನ್ನು ಪೂರೈಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವಿಮಾನ ನಿಲ್ದಾಣವು ಪ್ರಸ್ತುತ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಒಳಗಾಗುತ್ತಿದೆ ಮತ್ತು ಅಂತಾರಾಷ್ಟ್ರೀಯ ಕಾರ್ಯಾಚರಣೆಗಳ ಸೌಲಭ್ಯಗಳಲ್ಲಿ ಸುಧಾರಣೆಯಾಗಿದೆ. ಭಾರತೀಯ ವಿಮಾನಯಾನ ಪ್ರಾಧಿಕಾರವು ಉನ್ನತೀಕರಿಸುವ ಕಾರ್ಯಗಳನ್ನು ಕೈಗೊಳ್ಳುತ್ತಿದೆ.

ಮಹತ್ವ:

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮನ್ನಣೆಯಿಂದ ದೇಶಿಯ ಹಾಗೂ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದ್ದು, ಪ್ರವಾಸೋಧ್ಯಮಕ್ಕೆ ವರವಾಗಲಿದೆ. ಅಲ್ಲದೇ ಈ ಭಾಗದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ.

ವಿಜಯವಾಡ:

ವಿಜಯವಾಡ ಒಂದು ಮಹಾನಗರ ಪಾಲಿಕೆ ನಗರವಾಗಿದ್ದು, ಆಂಧ್ರಪ್ರದೇಶದ ಕೃಷ್ಣ ನದಿಯ ದಂಡೆಯ ಮೇಲಿದೆ. ಆಂಧ್ರಪ್ರದೇಶ ರಾಜಧಾನಿ ಪ್ರದೇಶದ ಭಾಗವಾಗಿ ಮತ್ತು ಆಂಧ್ರಪ್ರದೇಶದ ರಾಜಧಾನಿ ವಲಯ ಅಭಿವೃದ್ದಿ ಪ್ರಾಧಿಕಾರದ ಕೇಂದ್ರ ಕಚೇರಿಯನ್ನು ನಗರವು ಹೊಂದಿದೆ. ಈ ನಗರವು ರಾಜ್ಯದ ಪ್ರಮುಖ ವ್ಯಾಪಾರಿ ಮತ್ತು ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿದೆ ಮತ್ತು “ಆಂಧ್ರಪ್ರದೇಶದ ವಾಣಿಜ್ಯ ರಾಜಧಾನಿ” ಎಂದು ಜನಪ್ರಿಯಗೊಂಡಿದೆ.

Leave a Comment

This site uses Akismet to reduce spam. Learn how your comment data is processed.