ಗಾರ್ಡ್ ರಹಿತ ರೈಲು ಸಂಚಾರಕ್ಕೆ EoTT ಸಾಧನ ಅಳವಡಿಸಲಿರುವ ರೈಲ್ವೆ ಇಲಾಖೆ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗಾರ್ಡ್ ಇಲ್ಲದೆ ಸುಮಾರು 1,000 ರೈಲುಗಳನ್ನು ಓಡಿಸಲು ಭಾರತೀಯ ರೈಲುಮಾರ್ಗವು ರೈಲು ದೂರಸಂವಹನ (EoTT) ಸಾಧನಗಳನ್ನು ಅಳವಡಿಸಿಕೊಳ್ಳಲು ಯೋಜಿಸಿದೆ. ಸಿಬ್ಬಂದಿ ಕೆಲಸವನ್ನು ನಿರ್ವಹಿಸುವ ರೀತಿಯಲ್ಲಿ EoTT (End of Train Telemetry) ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. EoTT ವ್ಯವಸ್ಥೆಯು ಎರಡು ಘಟಕಗಳನ್ನು ಒಳಗೊಂಡಿದೆ, ಅವುಗಳೆಂದರೆ ‘ಕ್ಯಾಬ್ ಡಿಸ್ಪ್ಲೇ ಯುನಿಟ್’ (CDU), ಇದನ್ನು ಲೋಕೋಮೋಟಿವ್ ನಲ್ಲಿ ಮತ್ತು ‘ಸೆನ್ಸ್ ಮತ್ತು ಬ್ರೇಕ್ ಯೂನಿಟ್’ (SBU) ಅನ್ನು ರೈಲಿನ ಕೊನೆಯ ಬೋಗಿಯಲ್ಲಿ ಅಳವಡಿಸಲಾಗಿರುತ್ತದೆ. ಈ ಎರಡು ಘಟಕಗಳ ನಡುವೆ ಘಟಕಗಳನ್ನು ಪರಸ್ಪರ ಸಂವಹನ ಸಾಧಿಸಲು ರೇಡಿಯೋ ಟ್ರಾನ್ಸ್ಮಿಟರ್ ಅಳವಡಿಸಲಾಗಿರುತ್ತದೆ. ಟ್ರಾನ್ಸ್ಮಿಟರ್ ಕೊನೆಯ ಬೋಗಿಗೆ ನಿರಂತರವಾಗಿ ಸಿಗ್ನಲ್ ರವಾನಿಸುವ ಮೂಲಕ ರೈಲು ಬೋಗಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೆ ಎಂದು ಖಚಿತಪಡಿಸುತ್ತದೆ. ಭಾರತೀಯ ರೈಲ್ವೆ ಆರಂಭದಲ್ಲಿ 1,000 EoTT ಉಪಕರಣಗಳನ್ನು ಅಳವಡಿಸಲಿದ್ದು, ನಂತರ ಎಲ್ಲಾ ರೈಲುಗಳಲ್ಲಿ ಅಳವಡಿಸಲಾಗುವುದು.. EoTT ಸಾಧನದ ಪ್ರತಿಯೊಂದು ಸೆಟ್ ಸುಮಾರು 10 ಲಕ್ಷ ರೂ ಇರಲಿದೆ.

ಅನುಕೂಲ:

ಲೊಕೊಮೊಟಿವ್ ಡ್ರೈವರ್ ಮತ್ತು ರೈಲಿನ ಕೊನೆಯ ಬೋಗಿಯ ನಡುವೆ ಸಂವಹನವನ್ನು ಸ್ಥಾಪಿಸಲು EoTT ವ್ಯವಸ್ಥೆಯು ಸಹಾಯ ಮಾಡಲಿದೆ. ಆ ಮೂಲಕ ರೈಲು ಸಂಪೂರ್ಣ ಘಟಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಖಚಿತಪಡಿಸುತ್ತದೆ. ರೈಲಿನ ಹಿಂಭಾಗದ ಭಾಗದಿಂದ ಬೋಗಿಗಳನ್ನು ಪ್ರತ್ಯೇಕಿಸುವ ಸಂದರ್ಭದಲ್ಲಿ, ಚಾಲಕನಿಗೆ ನೀಡಲಿದೆ. ಇದರಿಂದ ಚಾಲಕನು ಹಿಂಭಾಗದ ಘಟಕಕ್ಕೆ ಬ್ರೇಕ್ ಹಾಕುವ ಮೂಲಕ ಇದರಿಂದಾಗಿ ರೈಲಿನ ಮುಂಭಾಗದ ಭಾಗ ಮತ್ತು ಹಿಂಭಾಗ ನಡುವೆ ಡಿಕ್ಕಿಯನ್ನು ತಪ್ಪಿಸಬಹುದು.

ದಕ್ಷಿಣ ಕೊರಿಯಾದ ಅಧ್ಯಕ್ಷರಾಗಿ ಮೂನ್ ಜೆ ಇನ್ ಆಯ್ಕೆ

ದಕ್ಷಿಣ ಕೊರಿಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ  ನಾಯಕ  ಮೂನ್‌ ಜೆ ಇನ್‌ ಭರ್ಜರಿ ಜಯಗಳಿಸಿದ್ದಾರೆ. ಚುನಾವಣೆಯಲ್ಲಿ ಮೂನ್ ಅವರಿಗೆ ಶೇ 41.08% ಮತಗಳು ಸಂದಿವೆ. ಭ್ರಷ್ಟಾಚಾರ ಹಗರಣದಲ್ಲಿ ಪದಚ್ಯುತಿಯಾದ ಹಿಂದಿನ ಅಧ್ಯಕ್ಷೆ ಪಾರ್ಕ್‌ ಜಿಯುನ್‌ ಹೈ ಅವರ ಉತ್ತಾರಧಿಕಾರಿಯಾಗಿ ಸೇವೆ ಸಲ್ಲಿಸಲಿದ್ದಾರೆ. 2012ರ ಚುನಾವಣೆಯಲ್ಲಿ ಮೂನ್ ಅವರು ಪಾರ್ಕ್ ಜಿಯುನ್ ವಿರುದ್ದ ಕಡಿಮೆ ಮತಗಳಿಂದ ಪರಾಭವಗೊಂಡಿದ್ದರು. ಪಾರ್ಕ್ ಅವರು ಪದಚ್ಯುತಿಗೊಂಡ ದಕ್ಷಿಣ ಕೊರಿಯಾದ ಮೊದಲ ಅಧ್ಯಕ್ಷರು.

ಮೂನ್ ಜೆ ಇನ್:

ಮೂನ್ ರವರು 1950-53ರ ಕೊರಿಯನ್ ಯುದ್ಧದಲ್ಲಿ ಉತ್ತರ ಕೊರಿಯಾದಿಂದ ಓಡಿಹೋದ ನಿರಾಶ್ರಿತರ ಮಗ. 1975 ರಲ್ಲಿ, ಸರಕಾರ ವಿರೋಧಿ ಪ್ರತಿಭಟನೆ ನಡೆಸಿದಕ್ಕಾಗಿ ಅವರನ್ನು ಜೈಲಿನಲ್ಲಿರಿಸಲಾಯಿತು. ನಂತರ, ಅವರು ಮಾನವ ಹಕ್ಕುಗಳ ವಕೀಲರಾದರು ಮತ್ತು ಬಡ ಕಾರ್ಮಿಕರ ಮತ್ತು ವಿದ್ಯಾರ್ಥಿ ಕಾರ್ಯಕರ್ತರ ಹಕ್ಕುಗಳನ್ನು ಸಮರ್ಥಿಸಿ ಹೋರಾಟದಲ್ಲಿ ತೊಡಗಿಸಿಕೊಂಡರು. 1972 ರಲ್ಲಿ, ಪಾರ್ಕ್ ಚುಂಗ್-ಹೀ ಸರ್ವಾಧಿಕಾರವನ್ನು ಉರುಳಿಸಲು ಮೂನ್ ಪ್ರಜಾಪ್ರಭುತ್ವ ಚಳವಳಿಯ ಭಾಗವಾದರು. ಪಾರ್ಕ್ ಚುಂಗ್-ಹೀ ದಕ್ಷಿಣ ಕೊರಿಯಾವನ್ನು 18 ವರ್ಷಗಳ ಕಾಲ ಆಳಿದರು. ಅವರು ಇತ್ತೀಚೆಗೆ ಅಧ್ಯಕ್ಷೀಯ ಸ್ಥಾನದಿಂದ ಪದಚ್ಯುತಿಗೊಂಡ ಜಿನ್-ಹೈ ಅವರ ತಂದೆಯಾಗಿದ್ದರು.

ಉತ್ತರ ಪ್ರದೇಶ ಸರ್ಕಾರದಿಂದ ಹಸುಗಳಿಗೆ ಅಂಬುಲೆನ್ಸ್ ಸೇವೆ

ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಹಸುಗಳಿಗಾಗಿ ಪ್ರತ್ಯೇಕ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು. ರಾಸುಗಳ ಅಗತ್ಯತೆಯನ್ನು ಈ ಅಂಬುಲೆನ್ಸ್ ಪೂರೈಸಲಿದೆ. “ಗೋವಂಶ ಚಿಕಿತ್ಸೆ ಮೊಬೈಲ್ ವಾಹನ” ಯೋಜನೆಯನ್ನು ವಾರಣಾಸಿ, ಗೋರಖಪುರ, ಮಥುರಾ ಮತ್ತು ಅಲಹಬಾದ್ ನಗರಗಳಲ್ಲಿ ಪ್ರಾರಂಭಿಕ ಹಂತದಲ್ಲಿ ಐದು ಅಂಬುಲೆನ್ಸ್ ವಾಹನಗಳಿಗೆ ಚಾಲನೆ ನೀಡಲಾಗಿದೆ. ಪ್ರತಿಯೊಂದು ಅಂಬುಲೆನ್ಸ್ ಒಬ್ಬ ಪಶು ವೈದ್ಯ ಹಾಗೂ ಸಹಾಯಕರನ್ನು ಒಳಗೊಂಡಿರಲಿದ್ದು, ರೋಗ ಪೀಡಿತ ಅಥವಾ ಗಾಯಗೊಂಡ ರಾಸುಗಳನ್ನು ಗೋಶಾಲೆಗೆ ಸಾಗಿಸುವ ಅಥವಾ ಪಶು ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಗುವುದು.

  • ಇದರ ಜೊತೆಗೆ ಗೋ ಸೇವಾ ಉಚಿತ ಟೋಲ್ ನಂಬರ್ ಗೆ ಸಹ ಚಾಲನೆ ನೀಡಲಾಗಿದೆ. ಆ ಮೂಲಕ ಸಾಮಾನ್ಯ ಜನರು ಗೋಗಳ ರಕ್ಷಣೆಗೆ ಧಾವಿಸಬಹುದು.
  • ಎಂಜಿಎನ್ಆರ್ಇಜಿಎ ಮಝ್ದೂರ್ ಕಲ್ಯಾಣ ಸಂಘಟನೆ ಸಹಭಾಗಿತ್ವದೊಂದಿಗೆ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ.
  • ಮಝ್ದೂರ್ ಕಲ್ಯಾಣ ಸಂಘಟನೆ ಕಾರ್ಮಿಕರ ಹಾಗೂ ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುವವರ ಹಿತಾರಕ್ಷಣೆ ಕಾಯುವ ಕಾಯಕ ಮಾಡುತ್ತಿದೆ. ಈ ಸಂಘಟನೆ ಐದು ರಾಜ್ಯಗಳಲ್ಲಿ ಕಾರ್ಯಪ್ರವೃತ್ತವಾಗಿದೆ.

ಚೂರು ಪಾರು:

  • ಕೋಲ್ಹಾಪುರದಲ್ಲಿ ದೇಶದ ಎರಡನೇ ಅತಿ ದೊಡ್ಡ ಧ್ವಜ ಕಂಬ: ದೇಶದ ಎರಡನೇ ಎತ್ತರದ ಧ್ವಜ ಕಂಬವನ್ನು ಕೊಲ್ಹಾಪುರದಲ್ಲಿ ಉದ್ಘಾಟಿಸಲಾಗಿದೆ. ಕೊಲ್ಹಾಪುರ ಸೌಂದರ್ಯವರ್ಧನೆಯ ಯೋಜನೆಯ ಭಾಗವಾಗಿ ಪೋಲಿಸ್ ತರಬೇತಿ ಅಕಾಡೆಮಿ ತೋಟದಲ್ಲಿ 303 ಅಡಿ ಎತ್ತರದ ಕಂಬವನ್ನು ನಿರ್ಮಿಸಲಾಗಿದೆ. ಈ ಕಂಬ 90 ಮೀಟರ್ ಎತ್ತರ ಮತ್ತು 60 ಮೀಟರ್ ಅಗಲ ಮತ್ತು 24 ಟನ್ ತೂಗುತ್ತದೆ. ರಾಜ್ಯದ ಮಹಾರಾಷ್ಟ್ರ ದಿನ್ ಆಚರಣೆಯ ಅಂಗವಾಗಿ 5400 ಸೆಕೆಂಡು ಅಡಿ ರಾಷ್ಟ್ರೀಯ ಧ್ವಜವನ್ನು ತೆರೆದ ಮೂಲಕ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಧ್ವಜ ಕಂಬವನ್ನು ಉದ್ಘಾಟಿಸಿದರು. ದೇಶದ ಅತಿದೊಡ್ಡ ಧ್ವಜ ಕಂಬವನ್ನು ಇಂಡೋ-ಪಾಕ್ ಅಟಾರಿ ಬಾರ್ಡರ್ನಲ್ಲಿ ಸ್ಥಾಪಿಸಲಾಗಿದೆ ಮತ್ತು 360 ಅಡಿ ಎತ್ತರವಿದೆ.
  • ಅಪಘಾತದಿಂದ ಸಾವು ರಾಜ್ಯಕ್ಕೆ 4ನೇ ಸ್ಥಾನ: ದೇಶದಲ್ಲಿ ಪ್ರತಿವರ್ಷ ನಾಲ್ಕೂವರೆ ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು, ಒಂದೂವರೆ ಲಕ್ಷ ಮಂದಿ  ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಪಘಾತಗಳಿಂದ ಅತಿ ಹೆಚ್ಚು ಮಂದಿ ಬಲಿಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. 2015–16ರಲ್ಲಿ ಉತ್ತರಪ್ರದೇಶದಲ್ಲಿ 18,407 ಮಂದಿ ಅಪಘಾತಗಳಿಂದ ಸಾವನ್ನಪ್ಪಿದ್ದಾರೆ. ಅಂತೆಯೇ ತಮಿಳುನಾಡು (15,642), ಮಹಾರಾಷ್ಟ್ರ (13,685), ಕರ್ನಾಟಕ (10,857) ಹಾಗೂ ರಾಜಸ್ತಾನ (10,510) ರಾಜ್ಯಗಳಲ್ಲೂ ಅಪಘಾತಗಳಿಗೆ ಬಲಿಯಾದವರ ಸಂಖ್ಯೆ ಹೆಚ್ಚಿದೆ ಎಂದು ವರದಿಯಲ್ಲಿದೆ.
  • ಟ್ವಿಟರ್ ಭಾರತದ ನಿರ್ದೇಶಕರಾಗಿ ತರಣ್ ಜೀತ್ ಸಿಂಗ್: ತರಣ್ ಜೀತ್ ಸಿಂಗ್ ಅವರನ್ನು ಟ್ವಿಟರ್ ನ ಭಾರತದ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಸಿಂಗ್ ಅವರು ಟ್ವಿಟರ್ ಭಾರತದ ಜಾಹೀರಾತು ಉಸ್ತುವಾರಿ ನೋಡುಕೊಳ್ಳುತ್ತಿದ್ದರು.

Leave a Comment

This site uses Akismet to reduce spam. Learn how your comment data is processed.