ಚೀನಾದ ಓನ್ ಬೆಲ್ಟ್ ಓನ್ ರೋಡ್ ಶೃಂಗಸಭೆಗೆ ಭಾರತ ಗೈರು

ಚೀನಾ ಆಯೋಜಿಸುತ್ತಿರುವ ಓನ್ ಬೆಲ್ಟ್ ಓನ್ ರೋಡ್ ಶೃಂಗಸಭೆಯಲ್ಲಿ ಭಾಗವಹಿಸದಿರಲು ಭಾರತ ನಿರ್ಧರಿಸಿದೆ. ಬದಲಿಗೆ ತನ್ನದೇ ಆದ ವ್ಯಾಪಾರ ಮಾರ್ಗಗಳ ಜಾಲವನ್ನು ನಿರ್ಮಿಸುವ ಯೋಜನೆಯನ್ನು ಭಾರತ ಹೊಂದಿದೆ. ಓನ್ ಬೆಲ್ಟ್ ಓನ್ ರೋಡ್ ಯೋಜನೆ ಚೀನಾದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಏಷ್ಯಾ, ಆಫ್ರಿಕಾ, ಮಧ್ಯಪೂರ್ವ ಮತ್ತು ಐರೋಪ್ ಭಾಗಗಳ ನಡುವೆ ಸಂಪರ್ಕವನ್ನು ಉತ್ತೇಜಿಸುವ ಮತ್ತು ವ್ಯಾಪಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ 2013 ರಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಿದರು.

                               ಶೃಂಗಸಭೆಯಲ್ಲಿ ಸುಮಾರು 65 ರಾಷ್ಟ್ರಗಳು ಭಾಗವಹಿಸಲಿವೆ. ಆದಾಗ್ಯೂ ಕೇವಲ 20 ರಾಷ್ಟ್ರಗಳ ಮುಖ್ಯಸ್ಥರು ಮಾತ್ರ ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅಮೆರಿಕ ಮತ್ತು ಜಪಾನ್ ಕೊನೆಯ ನಿಮಿಷದಲ್ಲಿ ಪ್ರತಿನಿಧಿಗಳನ್ನು ಕಳುಹಿಸಲು ನಿರ್ಧರಿಸಿವೆ. ಆದರೆ ಭಾರತ ಯಾವುದೇ ಪ್ರತಿನಿಧಿಗಳನ್ನು ಕಳುಹಿಸುತ್ತಿಲ್ಲ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ)ನಿಂದ ಭಾರತದ ಸಾರ್ವಭೌಮತ್ವಕ್ಕೆ ದಕ್ಕೆ ಬರಲಿದೆ ಎಂದು ಭಾರತ ಧೃಡವಾಗಿ ಪ್ರತಿಪಾದಿಸುತ್ತಿರುವುದರಿಂದ ಶೃಂಗಸಭೆಯನ್ನು ದಿಕ್ಕರಿಸಿದೆ.

                       ರಷ್ಯಾ, ದಕ್ಷಿಣ ಕೊರಿಯಾ, ಫ್ರಾನ್ಸ್, ಜರ್ಮನಿ ಮತ್ತು ಯುಕೆ ಮುಂತಾದ ರಾಷ್ಟ್ರಗಳು ತಮ್ಮ ಸಚಿವರು ಅಥವಾ ಅಧಿಕೃತ ನಿಯೋಗವನ್ನು ಶೃಂಗಸಭೆಗೆ ಕಳುಹಿಸಲಿವೆ. ಭಾರತದ ನೆರೆಹೊರೆಯವರೆಯ ರಾಷ್ಟ್ರಗಳಿಗೆ ಸಂಬಂಧಪಟ್ಟಂತೆ, ಪಾಕಿಸ್ತಾನವು ನಾಲ್ಕು ಮುಖ್ಯಮಂತ್ರಿಗಳು ಮತ್ತು ಐದು ಫೆಡರಲ್ ಮಂತ್ರಿಗಳನ್ನೊಳಗೊಂಡ ದೊಡ್ಡ ನಿಯೋಗವನ್ನು ಕಳುಹಿಸಲಿದೆ. ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಮಾಲ್ಡೀವ್ಸ್ ಮುಂತಾದ ರಾಷ್ಟ್ರಗಳ ಉನ್ನತ ಅಧಿಕಾರಿಗಳನ್ನು ಒಳಗೊಂಡ ನಿಯೋಗ ಭಾಗವಹಿಸಲಿದೆ. ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧವಿಲ್ಲದ ಕಾರಣ ಭೂತಾನ್ ಭಾಗವಹಿಸುತ್ತಿಲ್ಲ.

ಭಾರತದ ಅಭಿಪ್ರಾಯ:

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) 3000 ಕಿ.ಮೀ. ಉದ್ದದ ಯೋಜನೆಯಾಗಿದ್ದು, ಪಾಕಿಸ್ತಾನದ ಗ್ವಾಡಾರ್ ಬಂದರು ಮತ್ತು ಚೀನಾದ ಕ್ಸಿನ್ಜಿಯಾಂಗ್ ಪ್ರದೇಶದೊಂದಿಗೆ ಜಲ ಸಂಪರ್ಕವನ್ನು ಕಲ್ಪಿಸುತ್ತದೆ. ಸಿಪಿಇಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ಮೂಲಕ ಹಾದುಹೋಗುತ್ತದೆ. ಈ ವಿವಾದಿತ ಪ್ರದೇಶದಲ್ಲಿ ಚೀನಾದ ಉಪಸ್ಥಿತಿಯು ಭಾರತದ ಸಾರ್ವಭೌಮತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಗ್ವಾಡಾರ್ ಬಂದರು ಮೂಲಕ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ನೌಕಾಪಡೆಯನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಈಗಾಗಲೇ, ಚೀನಾವು ಹಿಂದೂ ಮಹಾಸಾಗರದ ಹಾರ್ನ್ ಆಫ್ ಆಫ್ರಿಕಾದಲ್ಲಿ ಜಿಬೌಟಿಯಲ್ಲಿ ತನ್ನ ನೌಕಾಪಡೆಗಳನ್ನು ನಿಯೋಜಿಸಲು ಯೋಜಿಸಿದೆ.

ವಿಶ್ವಬ್ಯಾಂಕ್ ವಿದ್ಯುತ್ ಲಭ್ಯತೆ ಪಟ್ಟಿ: ಭಾರತಕ್ಕೆ 26ನೇ ಸ್ಥಾನ

ವಿಶ್ವಬ್ಯಾಂಕಿನ ವಿದ್ಯುತ್ ಲಭ್ಯತೆ ಪಟ್ಟಿಯಲ್ಲಿ 73 ಸ್ಥಾನಗಳ ಏರಿಕೆ ಕಂಡಿರುವ ಭಾರತ 26ನೇ ಸ್ಥಾನವನ್ನು ಪಡೆದುಕೊಂಡಿದೆ. 2014ರಲ್ಲಿ ಭಾರತ 99ನೇ ಸ್ಥಾನವನ್ನು ಪಡೆದುಕೊಂಡಿತ್ತು. ವಿದ್ಯುತ್ ಕೊರತೆಯಿರುವ 18,452 ಗ್ರಾಮಗಳಲ್ಲಿ 13,000ಕ್ಕಿಂತಲೂ ಹೆಚ್ಚಿನ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯವನ್ನು ಒದಗಿಸಲಾಗಿದೆ. ಹೊಸ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಯು ವಿದ್ಯುತ್ ಮೂಲಸೌಲಭ್ಯ ಇರುವ ಪ್ರದೇಶಗಳಲ್ಲಿ 24 ಗಂಟೆಗಳ ಒಳಗೆ ಸಂಪರ್ಕವನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ವಿದ್ಯುತ್ ಮೂಲಸೌಕರ್ಯವಿಲ್ಲದ ಪ್ರದೇಶಗಳಲ್ಲಿ, ವಿದ್ಯುತ್ ಸಂಪರ್ಕವನ್ನು ವಾರದೊಳಗೆ ನೀಡಲಾಗುತ್ತದೆ. ಸರ್ಕಾರದ ಗ್ರಾಮೀಣ ವಿದ್ಯುದೀಕರಣ ಕಾರ್ಯಕ್ರಮವು ಪ್ರಗತಿಯಲ್ಲಿದ್ದು, ಉದ್ದೇಶಿತ 1,000 ದಿನಗಳಲ್ಲಿ ಪೂರ್ಣಗೊಳ್ಳುವ ಹಾದಿಯಲ್ಲಿದೆ.

ಹಿನ್ನಲೆ:

2022 ರೊಳಗೆ ದೇಶಾದ್ಯಂತ ಪ್ರತಿ ಗ್ರಾಮೀಣ ಕುಟುಂಬಕ್ಕೆ 24 × 7 ನಿರಂತರ ವಿದ್ಯುತ್ ಸರಬರಾಜು ಒದಗಿಸುವ ಉದ್ದೇಶದಿಂದ ದೀನ್ದಯಾಲ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (ಡಿಡಿಯುಜಿಜೆವೈ) ಅನ್ನು ಆರಂಭಿಸಲಾಗಿದೆ. ಇದು ವಿದ್ಯುತ್ ನಷ್ಟವನ್ನು ತಡೆಯಲು ಉಪ-ಪ್ರಸರಣ ಮತ್ತು ವಿತರಣಾ ಜಾಲವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಇದರಡಿ ಗ್ರಾಮೀಣ ಮನೆಗಳಿಗೆ ಮತ್ತು ಕೃಷಿ ಉದ್ದೇಶಕ್ಕಾಗಿ ಪ್ರತ್ಯೇಕ ಫೀಡರ್ ಅಳವಡಿಸಲಾಗುವುದು. ಇತ್ತೀಚೆಗೆ ಕೇಂದ್ರ ಇಂಧನ ಸಚಿವಾಲಯ ರಾಷ್ಟ್ರದ ಎಲ್ಲಾ ಆರು ಲಕ್ಷ ಗ್ರಾಮಗಳ ನೈಜ-ಸಮಯದ ಮಾಹಿತಿಯನ್ನು ಒದಗಿಸಲು GARV-II ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಗ್ರಾಮೀಣ ವಿದ್ಯುದೀಕರಣ ಕಾರ್ಯಕ್ರಮದ ಅನುಷ್ಠಾನದಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಅಪ್ಲಿಕೇಶನ್ ಅನ್ನು ರೂಪಿಸಲಾಗಿದೆ.

ಉನ್ನತ ತಂತ್ರಜ್ಞಾನದ ಉಡುಪುಗಳನ್ನು ಭಾರತಕ್ಕೆ ಮಾರಾಟ ಮಾಡಲಿರುವ ಅಮೆರಿಕ

ಅಮೆರಿಕ $75 ಮಿಲಿಯನ್ ಮೌಲ್ಯದ “ಹೈಟೆಕ್ ಜಾಯಿಂಟ್ ಸರ್ವೀಸ್ ಲೈಟ್ವೈಟ್ ಇಂಟಿಗ್ರೇಟೆಡ್ ಸೂಟ್ ಟೆಕ್ನಾಲಜಿ (ಜೆಎಸ್ಲಿಸ್ಟ್)” ರಕ್ಷಣಾತ್ಮಕ ಉಡುಪುಗಳನ್ನು ಭಾರತಕ್ಕೆ ಮಾರಾಟ ಮಾಡಲಿದೆ. ಇದೇ ಮೊದಲ ಬಾರಿಗೆ, ಯುಎಸ್ ಕಾಂಗ್ರೆಸ್ಗೆ CBRN (ರಾಸಾಯನಿಕ, ಜೈವಿಕ, ವಿಕಿರಣ ಮತ್ತು ಪರಮಾಣು) ಬೆಂಬಲ ಸಲಕರಣೆ, ಜಾಯಿಂಟ್ ಸರ್ವೀಸ್ ಲೈಟ್ವೈಟ್ ಇಂಟಿಗ್ರೇಟೆಡ್ ಸೂಟ್ ಟೆಕ್ನಾಲಜಿ (ಜೆಎಸ್ಲಿಸ್ಟ್) ರಕ್ಷಣಾತ್ಮಕ ಉಡುಪುಗಳನ್ನು ಮಾರಾಟ ಮಾಡಲು ಪೆಂಟಗನ್ ಸೂಚಿಸಿದೆ. ಸಂಪೂರ್ಣ ಪ್ಯಾಕೇಜ್ 38,034 M50 ಸಾಮಾನ್ಯ ಮುಖವಾಡಗಳು, 38,034 ಸೂಟ್ಗಳು, ಪ್ಯಾಂಟ್ಗಳು, ಕೈಗವಸುಗಳು, ಬೂಟುಗಳು ಮತ್ತು ಎನ್ಬಿಸಿ ಚೀಲಗಳನ್ನು ಒಳಗೊಂಡಿದೆ.

ವೈಶಿಷ್ಠತೆ:

ಜಾಯಿಂಟ್ ಸರ್ವೀಸ್ ಲೈಟ್‌ವೇಟ್ ಇಂಟಿಗ್ರೇಟೆಡ್ ಸೂಟ್ ಟೆಕ್ನಾಲಜಿ ಬಳಸಿ ತಯಾರಾಗಿರುವ ಈ ಉಡುಪುಗಳು, ವಿಕಿರಣ ಹಾಗೂ ಪರಮಾಣು ದಾಳಿಗಳನ್ನೂ ತಡೆಯುವ ಸಾಮರ್ಥ್ಯ ಹೊಂದಿವೆ.

ಭಾರತ-ಯುಎಸ್ ರಕ್ಷಣಾ ಸಂಬಂಧ:

ಭಾರತ-ಅಮೆರಿಕ ನಡುವಿನ ರಕ್ಷಣಾ ಪಾಲುದಾರಿಕೆಯು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, ಉಭಯ ದೇಶಗಳ ನಡುವೆ ರಕ್ಷಣಾ ಕ್ಷೇತ್ರದಲ್ಲಿ $ 10 ಬಿಲಿಯನ್ ಗಿಂತಲೂ ಹೆಚ್ಚು ಒಪ್ಪಂದಗಳಿಗೆ ಸಹಿಹಾಕಲಾಗಿದೆ. ಇದು ಡೋನಾಲ್ಡ್ ಟ್ರಂಪ್ ಆಡಳಿತವು ಅನುಮೋದಿಸಿದ ಮೊದಲ ಪ್ರಮುಖ ವಿದೇಶಿ ರಕ್ಷಣಾ ಮಾರಾಟವಾಗಿದೆ. ಒಬಾಮಾ ಆಡಳಿತವು ಭಾರತವನ್ನು ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರವೆಂದು ನೇಮಿಸಿತ್ತು. ಇದರಿಂದ ರಕ್ಷಣಾತ್ಮಕ ವ್ಯಾಪಾರ ಮತ್ತು ತಂತ್ರಜ್ಞಾನಗಳ ಹಂಚಿಕೆಗೆ ಸಂಬಂಧಿಸಿದಂತೆ USನ ಇತರ ಪ್ರಮುಖ ಮೈತ್ರಿಕೂಟಗಳೊಂದಿಗೆ ಭಾರತ ಸಮಾನ ಸ್ಥಾನವನ್ನು ಪಡೆದುಕೊಂಡತಾಗಿದೆ. ಜೂನ್ 2015 ರಲ್ಲಿ, ಭಾರತ ಮತ್ತು ಯುಎಸ್ ಡಿಫೆನ್ಸ್ ಫ್ರೇಂವರ್ಕ್ ಒಪ್ಪಂದವನ್ನು ಮುಂದಿನ 10 ವರ್ಷಗಳ ಅವಧಿಗೆ ನವೀಕರಿಸಿವೆ. ಈ ಒಪ್ಪಂದ ಎರಡೂ ರಾಷ್ಟ್ರಗಳ ಸಶಸ್ತ್ರ ಪಡೆಗಳ ನಡುವಿನ ನಿರಂತರ ವಿನಿಮಯ ಮತ್ತು ಸಾಮರ್ಥ್ಯಗಳನ್ನುಬಲಪಡಿಸುತ್ತದೆ.

One Thought to “ಪ್ರಚಲಿತ ವಿದ್ಯಮಾನಗಳು-ಮೇ,20,2017”

Leave a Comment

This site uses Akismet to reduce spam. Learn how your comment data is processed.