ಗಡಿ ಭದ್ರತೆಗೆ ಲೇಸರ್ ಗೋಡೆ ತಂತ್ರಜ್ಞಾನ ಬಳಸಲು ಬಿಎಸ್ಎಫ್ ನಿರ್ಧಾರ

ಜಮ್ಮು ಮತ್ತು ಕಾಶ್ಮೀರದಲ್ಲಿ 198 ಕಿ.ಮೀ ಉದ್ದದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತೆ ಕಾಪಾಡಿಕೊಳ್ಳಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಗಡಿ ಭದ್ರತಾ ಪಡೆ ನಿರ್ಧರಿಸಿದಿ. ಹೊಸ ತಂತ್ರಜ್ಞಾನದಲ್ಲಿ ನುಸುಳುಕೋರರನ್ನು ಸುಲಭವಾಗಿ ಪತ್ತೆಹಚ್ಚಿ, ಶೀಘ್ರವಾಗಿ ಮಾಹಿತಿಯನ್ನು ರವಾನೆ ಮಾಡುವ ಸಾಮರ್ಥ್ಯವನ್ನು ಈ ತಂತ್ರಜ್ಞಾನ ಹೊಂದಿರಲಿದೆ. ದೆಹಲಿ ಮೂಲದ ರಕ್ಷಣಾ ಐಒಟಿ CRON ಸಿಸ್ಟಮ್ಸ್ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದೆ. ಕವಚ್ (KVX) ಸರಣಿ ಲೇಸರ್ ಗೋಡೆಗಳೆಂದು ಕರೆಯಲಾಗುವ ಹೊಸ ತಂತ್ರಜ್ಞಾನವನ್ನು ಸ್ವದೇಶಿಯವಾಗಿ ನಿರ್ಮಿಸಲಾಗಿದ್ದು ಮತ್ತು ಅಸ್ತಿತ್ವದಲ್ಲಿರುವ ಲೇಸರ್ ಗೋಡೆಗಳಿಗಿಂತ ಹೆಚ್ಚು ಎತ್ತರವಾಗಿದೆ.

                               ಪ್ರಸ್ತುತ ಕವಾಚ್ ಗೋಡೆಗಳ ತಂತ್ರಜ್ಞಾನವನ್ನು ಬಿಎಸ್ಎಫ್ ಜಮ್ಮು ಮತ್ತು ಕಾಶ್ಮೀರದ ಸಾಂಬ ಸೆಕ್ಟರ್ ಗಡಿಯುದ್ದಕ್ಕೂ ಪ್ರಾಯೋಗಿಕವಾಗಿ ಪರೀಕ್ಷಿಸುತ್ತಿದೆ.

ವಿಶೇಷತೆ:

ಕವಾಚ್ ಗೋಡೆಗಳು ನೇರಳಾತೀತ ಕಿರಣಗಳ ಆಧಾರಿತ ಒಳನುಸುಳುವಿಕೆಯನ್ನು ಪತ್ತೆಹಚ್ಚವು ವಿಧಾನವಾಗಿರುವುದರಿಂದ ಅಗೋಚರವಾಗಿರುತ್ತವೆ.  ಪಾರದರ್ಶಕ ನೀರು ಮತ್ತು ಗಾಜಿನಲ್ಲೂ ಸಹ ಇವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲವು. ಕವಚ್ ಗೋಡೆಗಳು ಸಂಕೀರ್ಣ, ಗೂಢಲಿಪೀಕರಿಸಿದ ತಂತ್ರಜ್ಞಾನಗಳನ್ನು ಬಳಸುವ ಎಲ್ಲಾ-ಭೂಪ್ರದೇಶದ ಹವಾಮಾನ-ನಿರೋಧಕ ವ್ಯವಸ್ಥೆಗಳಾಗಿದ್ದು, ಒಳನುಸುಳುವಿಕೆ ಪ್ರಯತ್ನಗಳ ಬಗ್ಗೆ ಹತ್ತಿರದ ಸ್ಥಳಗಳಿಗೆ ತಕ್ಷಣ ಎಚ್ಚರಿಸುವುದು. ಈ ಸಾಧನಗಳು ಪರಸ್ಪರ ಸಂವಹನ ಮಾಡಲು CRONET, ಎನ್ಕ್ರಿಪ್ಟ್ ಮಾಡಲಾದ ನೆಟ್ವರ್ಕ್ ಅನ್ನು ಬಳಸುತ್ತವೆ. ಅಂತಹ ಐದು KVx- ಸರಣಿ ಗೋಡೆಗಳು ಒಂದು ಕಿಲೋಮೀಟರ್-ಉದ್ದದ ವಿಸ್ತಾರ ಪ್ರದೇಶವನ್ನು ಕಾಯುವ ಸಾಮರ್ಥ್ಯವನ್ನು ಹೊಂದಿವೆ

ಹಿನ್ನಲೆ:

ಭಾರತ ಮತ್ತು ಪಾಕಿಸ್ತಾನ 3000 ಕಿ.ಮೀ ಉದ್ದದ ಗಡಿ ಭಾಗವನ್ನು ಹೊಂದಿವೆ. ಈ ಪೈಕಿ 198 ಕಿ.ಮೀ ಅಂತಾರಾಷ್ಟ್ರೀಯ ಗಡಿ ಹಾಗೂ 740 ಕಿ.ಮೀ ಗಡಿ ನಿಯಂತ್ರಣ ರೇಖೆ (LoC) ಜಮ್ಮು ಮತ್ತು ಕಾಶ್ಮೀರದಲ್ಲಿದೆ. 13 ನದಿಗಳು ಹೊಂದಿರುವ ಈ ಗಡಿ ಭಾಗದ ಮುಖಾಂತರ ಪಾಕಿಸ್ತಾನದಿಂದ ಉಗ್ರರ ನುಸುಳುವಿಕೆಯನ್ನು ತಡೆಯುವುದು ಗಡಿ ಭದ್ರತಾ ಪಡೆಗೆ ಸವಾಲಾಗಿದೆ. ಬಿಎಸ್ಎಫ್ ವಿದ್ಯುತ್ ಬೇಲಿಯಂತಹ ಹಲವಾರು ತಂತ್ರಜ್ಞಾನಗಳನ್ನು ಮತ್ತು ಲೇಸರ್ ನಂತಹ ಇತರ ತಂತ್ರಜ್ಞಾನಗಳನ್ನು ಮೂಲಕ ಒಳನುಗ್ಗುವಿಕೆಗಳನ್ನು ಪತ್ತೆಹಚ್ಚಲಾಗುತ್ತಿದೆ.

ನ್ಯೂಮೋನಿಯಾಗೆ ಹೊಸ ನ್ಯುಮೋಕೊಕಲ್ ಕಂಜುಗೇಟ್ ಲಸಿಕೆಗೆ ಚಾಲನೆ

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಲಾಲ್ ಬಹದ್ದೂರ್ ಶಾಸ್ತ್ರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡಾ ಅವರು ನ್ಯೂಮೋನಿಯಾ ಕಾಯಿಲೆಗೆ ಹೊಸ ನ್ಯುಮೋಕೊಕಲ್ ಕಂಜುಗೇಟ್ ಲಸಿಕೆ (Pneumococcal Conjugate Vaccine), ಪಿಸಿವಿ ಗೆ ಚಾಲನೆ ನೀಡಿದರು. ಈ ಲಸಿಕೆ ಸರ್ಕಾರದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ದ ಒಂದು ಭಾಗವಾಗಿ. ಇನ್ನು ಮುಂದೆ ಲಸಿಕೆಯನ್ನು ದಿನನಿತ್ಯದ ರೋಗನಿರೋಧಕ ಕಾರ್ಯಕ್ರಮದಡಿಯಲ್ಲಿ ಬಳಸಲಾಗುವುದು. ಈ ಲಸಿಕೆ ನ್ಯುಮೋನಿಯಾವನ್ನು ನಿಯಂತ್ರಿಸುವಲ್ಲಿ ಮತ್ತು ಮಗುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ. ಭಾರತದಲ್ಲಿ ಪ್ರತಿ ವರ್ಷವೂ 1 ಲಕ್ಷಕ್ಕಿಂತ ಹೆಚ್ಚು ಮಕ್ಕಳು ನ್ಯುಮೋನಿಯಾದಿಂದ ಸಾವನ್ನಪ್ಪುತ್ತಿದ್ದಾರೆ.

                               ನ್ಯೂಮೋನಿಯವನ್ನು ಉಂಟು ಮಾಡುವ 13 ವಿಧದ ನ್ಯೂಮೋಕೊಕಲ್ ಬ್ಯಾಕ್ಟೀರಿಯಾಗಳ ವಿರುದ್ದ ಈ ಲಸಿಕೆ ರಕ್ಷಣೆ ನೀಡಲಿದೆ. ಆರೋಗ್ಯ ಸಚಿವಾಲಯವು ಲಸಿಕೆಯನ್ನು ಪ್ರಾರಂಭಿಸಿದ ಹನ್ನೆರಡನೆಯ ಕಾಯಿಲೆಯಾಗಿದೆ. ನ್ಯುಮೊಕಾಕಲ್ ಕಾಂಜುಗೇಟ್ ಲಸಿಕೆ ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ ಮತ್ತು ನ್ಯುಮೋನಿಯ, ಕಿವಿ ಸೋಂಕುಗಳು, ಸೈನಸ್ ಸೋಂಕುಗಳು ಮತ್ತು ಮೆನಿಂಜೈಟಿಸ್ನಂತಹ ರೋಗಗಳ ವಿರುದ್ಧ ರಕ್ಷಿಸುತ್ತದೆ. 2000 ದಲ್ಲಿ PCV ಅನ್ನು ಮೊದಲು ಪರಿಚಯಿಸಲಾಯಿತು.

ನ್ಯೂಮೋನಿಯಾ:

ಶ್ವಾಸಕೋಶದ ವಾಯುನಾಳಗಳ ಉರಿಯೂತದಿಂದಾಗಿ ನ್ಯುಮೋನಿಯಾ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಸೋಂಕಿನಿಂದ ಉಂಟಾಗುತ್ತದೆ. ನ್ಯೂಮೋನಿಯಾ ಪ್ರಪಂಚದಾದ್ಯಂತ ಐದು ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಲ್ಲಿ ಸಾವಿಗೆ ಪ್ರಮುಖ ಕಾರಣವಾಗಿದೆ. ಇದು ಬ್ಯಾಕ್ಟೀರಿಯಾ, ವೈರಸ್ಗಳು ಅಥವಾ ಶಿಲೀಂಧ್ರಗಳಿಂದ ಉಂಟಾಗಬಹುದು. ನ್ಯುಮೋನಿಯಾವನ್ನು ಉಂಟುಮಾಡುವ ಅತ್ಯಂತ ಸಾಮಾನ್ಯವಾದ ಬ್ಯಾಕ್ಟೀರಿಯ ಪ್ರಕಾರವೆಂದರೆ ಸ್ಟ್ರೆಪ್ಟೋಕಾಕಸ್ ನ್ಯುಮೋನಿಯಾ. ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ, ಮತ್ತು ಆಯಾಸ ರೋಗದ ಲಕ್ಷಣಗಳು.

ಜಿಪಿ 3 ರೇಸ್ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದ ಅರ್ಜುನ್ ಮೈನಿ

ಕರ್ನಾಟಕದ ಯುವ ಮೋಟಾರು ಕಾರು ಸಾಹಸಿ ಜೆಂಜರ್‌ ಮೋಟರ್‌ ಸ್ಪೋರ್ಟ್ಸ್‌ ತಂಡದ ಅರ್ಜುನ್‌ ಮೈನಿ ಬಾರ್ಸಿಲೋನಾದಲ್ಲಿ ನಡೆದ ಗ್ರ್ಯಾನ್‌ ಪ್ರಿ–3 ಸೀರಿಸ್‌ನ ಎರಡನೇ ರೇಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಚಾಲಕ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

                                ಅರ್ಜುನ್ ಮೈನಿ ‘ಡ್ರೈವರ್ಸ್‌ ಚಾಂಪಿ ಯನ್‌ಷಿಪ್‌ನಲ್ಲಿ ಮೂರನೇ ಸ್ಥಾನ ಪಡೆದರು. ಬೊಕ್ಕೊಲಾಕ್ಕಿ ಎರಡನೇ ಸ್ಥಾನ ಪಡೆದರೆ, ಅಲೆಸ್ಸಿಯೊ ಲೊರಾಂಡಿ ಮೂರನೇಯವರಾಗಿ ಗುರಿ ಮುಟ್ಟಿದರು.

Leave a Comment

This site uses Akismet to reduce spam. Learn how your comment data is processed.