ಶಾಲೆಗಳಲ್ಲಿ ಬೆಂಗಾಳಿ ಕಡ್ಡಾಯಗೊಳಿಸಿದ ಪಶ್ಚಿಮ ಬಂಗಾಳ ಸರ್ಕಾರ

ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಖಾಸಗಿ ಶಾಲೆಗಳು, ಇಂಗ್ಲಿಷ್ ಮಾಧ್ಯಮ ಶಾಲೆಗಳು ಸೇರಿದಂತೆ ಎಲ್ಲಾ ಶಾಲೆಗಳಲ್ಲಿ ಬಂಗಾಳಿ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಇದಾದ ನಂತರ, ಪಶ್ಚಿಮ ಬಂಗಾಳದ ಸೆಕೆಂಡರಿ ಶಿಕ್ಷಣ ಮಂಡಳಿಗಳನ್ನು ಹೊರತುಪಡಿಸಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಸೇರಿದಂತೆ ಎಲ್ಲಾ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಬಂಗಾಳಿಯನ್ನು ಐಚ್ಛಿಕ ವಿಷಯವಾಗಿ ಬೋಧಿಸುವುದು ಕಡ್ಡಾಯ. ಆದ್ದರಿಂದ ವಿದ್ಯಾರ್ಥಿಗಳು ಬಂಗಾಳಿಯನ್ನು ಎರಡನೆಯ ಅಥವಾ ಮೂರನೇ ಭಾಷೆಯಾಗಿ ಅಧ್ಯಯನ ಮಾಡಬಹುದು.

            ಪ್ರಸ್ತುತ, ಶಾಲೆಗಳಲ್ಲಿ ಬಂಗಾಳಿ ಬೋಧನೆ ಕಡ್ಡಾಯವಲ್ಲ. ಬಂಗಾಳಿ, ಇಂಗ್ಲಿಷ್ ಮತ್ತು ಹಿಂದಿ ಅಲ್ಲದೇ, ವಿದ್ಯಾರ್ಥಿಗಳು ಉರ್ದು, ಗುರುಮುಖಿ, ನೇಪಾಳಿ ಮತ್ತು ಓಲ್-ಚಿಕಿ ಇತರ ಭಾಷೆಗಳನ್ನು ವಿದ್ಯಾರ್ಥಿಗಳು ಬೋಧನ ಮಾಧ್ಯಮವಾಗಿ ಆಯ್ಕೆ ಮಾಡಬಹುದಾಗಿದೆ.

ಹಿನ್ನಲೆ:

ಕೇರಳ ಸರ್ಕಾರ ಇತ್ತೀಚೆಗೆ ಎಪ್ರಿಲ್ನಲ್ಲಿ ಕೇರಳದ ಎಲ್ಲ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ ಬೋಧನೆ ಮಾಡುವ ಆದೇಶದ ಹೊರಡಿಸಿದ ಬೆನ್ನಲ್ಲೆ ಪಶ್ಚಿಮ ಬಂಗಾಳ ಸರ್ಕಾರ  ಶಾಲೆಗಳಲ್ಲಿ ಬೆಂಗಾಲಿ ಬೋಧನೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಎಡಪಂಥೀಯ ಸರ್ಕಾರವು 1984ರಲ್ಲಿ ಪಶ್ಚಿಮ ಬಂಗಾಳದ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಬೋಧನೆಯನ್ನು ರದ್ದುಗೊಳಿಸಿತು. ಆದರೆ ಇಂಗ್ಲಿಷ್ ಬೋಧನೆಯನ್ನು 1992ರಲ್ಲಿ ಐದನೇ ತರಗತಿ, 1998 ರಲ್ಲಿ ಮೂರನೇ ತರಗತಿ ಮತ್ತು ಮತ್ತೆ 2003 ರಲ್ಲಿ ಒಂದನೇ ತರಗತಿ ಇಂದ ಎಲ್ಲಾ ತರಗತಿಗಳಲ್ಲಿ ಪುನಃ ಪರಿಚಯಿಸಲಾಯಿತು.

ಭಾರತ ಮತ್ತು ಪ್ಯಾಲೇಸ್ತಾನ್ ನಡುವೆ ಐದು ಒಪ್ಪಂದಕ್ಕೆ ಸಹಿ

ಭಾರತ ಮತ್ತು ಪ್ಯಾಲೇಸ್ತಾನ್ ನಡುವೆ ಐದು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಭಾರತಕ್ಕೆ 4 ದಿನಗಳ ಕಾಲ ಭೇಟಿ ನೀಡಿರುವ ಪ್ಯಾಲೇಸ್ತಾನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಮತ್ತು ಪ್ರಧಾನಿ ಮೋದಿ ಅವರ ನಡುವೆ ಮಾತುಕತೆ ಬಳಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು.  ಇದು ಭಾರತಕ್ಕೆ ಅಬ್ಬಾಸ್ ಅವರ ಐದನೇ ಭೇಟಿ. ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾ ವಿನಾಯತಿ, ಕೃಷಿ ಸಹಕಾರ, ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಸಹಕಾರ, ಆರೋಗ್ಯ ಕ್ಷೇತ್ರ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಹಕಾರ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಇತರೆ ಪ್ರಮುಖಾಂಶಗಳು:

  • ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ ನಡುವೆ ಮಾತುಕತೆಗಳನ್ನು ಮುಂದುವರೆಸುವಂತೆ ಭಾರತವು ಕರೆ ನೀಡಿದೆ. ಇಸ್ರೇಲ್ನೊಂದಿಗೆ ಶಾಂತಿಯುತವಾಗಿ ಸಹಕರಿಸು ಮೂಲಕ ಸಾರ್ವಭೌಮ, ಸ್ವತಂತ್ರ ಕಾರ್ಯಸಾಧ್ಯವಾದ ಪ್ಯಾಲೆಸ್ಟೈನ್ ಅನ್ನು ನಿರ್ಮಿಸುವುದು ಭಾರತ ಆಶಯವಾಗಿದೆ.
  • ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತಪ್ಯಾಲೇಸ್ತಾನಿನ ಬೆಂಬಲಕ್ಕೆ ನಿಂತಿರುವುದಕ್ಕೆ ಪ್ಯಾಲೇಸ್ತಾನ್ ಅಭಿನಂದಿಸಿದೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಪ್ರಕ್ರಿಯೆಯಲ್ಲಿ ಭಾರತ ಪ್ರಮುಖ ಪಾತ್ರವಹಿಸಲಿದೆ ಎಂದು ಪ್ಯಾಲೆಸ್ಟೈನ್ ಭರವಸೆ ವ್ಯಕ್ತಪಡಿಸಿದೆ. ಮಾತುಕತೆ ವೇಳೆ ಪ್ಯಾಲೆಸ್ತಾನಿನ ಅಧ್ಯಕ್ಷರು ಎಲ್ಲಾ ಸ್ವರೂಪಗಳ ಭಯೋತ್ಪಾದನೆಯನ್ನು ಖಂಡಿಸಿದರಲ್ಲದೆ, ಭಯೋತ್ಪಾದನೆಯನ್ನು ಎದುರಿಸಲು ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಪ್ರಯತ್ನಗಳಿಗೆ ಕರೆ ನೀಡಿದರು.

ಭಾರತ-ಪ್ಯಾಲೇಸ್ತಾನ್ ಸಂಬಂಧ:

ಭಾರತ ಮತ್ತು ಪ್ಯಾಲೆಸ್ಟೈನ್ ದೀರ್ಘಕಾಲದ ಸ್ನೇಹವನ್ನು ಹೊಂದಿವೆ. 1947 ರಲ್ಲಿ, ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾರತ ಪ್ಯಾಲೇಸ್ತಾನ್ ವಿಭಜನೆಯ ವಿರುದ್ಧ ತನ್ನ ಮತವನ್ನು ಚಲಾಯಿಸಿತು. 1974 ರಲ್ಲಿ, PLOವನ್ನು ಪ್ಯಾಲೆಸ್ತಾನ್ ಜನರ ಏಕೈಕ ಮತ್ತು ಕಾನೂನುಬದ್ಧ ಪ್ರತಿನಿಧಿಯಾಗಿ ಗುರುತಿಸಿದ ಮೊದಲ ನಾನ್-ಅರಬ್ ರಾಷ್ಟ್ರ ಭಾರತ. 2012 ರಲ್ಲಿ, ಭಾರತವು ಪ್ಯಾಲೇಸ್ತಾನ್ಗೆ “ನಾನ್ ಮೆಂಬರ್” ಸ್ಥಾನಮಾನ ದೊರೆಕಿಸಲು ಪ್ರಮುಖ ಪಾತ್ರವಾಹಿಸಿತ್ತು. ಕಾರಣವಾಯಿತು. 2014 ರಲ್ಲಿ, ಯುಎನ್ ಮಾನವ ಹಕ್ಕು ಮಂಡಳಿಯಲ್ಲಿ ಭಾರತವು ಪ್ಯಾಲೆಸ್ಟೈನ್ ಪರವಾಗಿ ಮತ ಚಲಾಯಿಸಿದೆ. 2015ರಲ್ಲಿ ವಿಶ್ವಸಂಸ್ಥೆಯಲ್ಲಿ ಇತರೆ ಸದಸ್ಯ ರಾಷ್ಟ್ರಗಳ ಧ್ವಜಗಳಂತೆ ಪ್ಯಾಲೇಸ್ತಾನ್ ಧ್ವಜವನ್ನು ಅಳವಡಿಸಲು ಭಾರತ ಬೆಂಬಲಿಸಿದೆ.

10 ಪರಮಾಣು ರಿಯಾಕ್ಟರ್ ಗಳ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ದೇಶೀಯವಾಗಿ ಪರಮಾಣು ವಿದ್ಯುತ್‌ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟ ಸ್ಥಳೀಯವಾಗಿ 10 ಪ್ರೆಶರೈಸ್ಡ್ ಹೆವಿ ವಾಟರ್ ಪರಮಾಣು ರಿಯಾಕ್ಟರ್‌ಗಳ ಸ್ಥಾಪನೆಗೆ ಒಪ್ಪಿಗೆ ನೀಡಿದೆ. 10 ರಿಯಾಕ್ಟರ್‌ಗಳು ತಲಾ 700 ಮೆಗಾ ವಾಟ್‌ ವಿದ್ಯುತ್ ಉತ್ಪಾದನೆ ಮಾಡಲಿವೆ. ಆ ಮೂಲಕ ಒಟ್ಟು 7,000 ಮೆಗಾ ವಾಟ್‌ ವಿದ್ಯುತ್‌ ಉತ್ಪಾನೆ ಸೇರ್ಪಡೆಗೊಳ್ಳಲಿದ್ದು, ದೇಶದ ಪರಮಾಣು ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯವಾಗಿ ಏರಿಕೆಯಾಗಲಿದೆ.

  • ಭಾರತವು ಪ್ರಸ್ತುತ 6,780 ಮೆ.ವಾ. ಪರಮಾಣು ವಿದ್ಯುತ್ ಉತ್ಪಾದನೆ ಸಾಮರ್ಥ್ಯದ 22 ಘಟಕಗಳನ್ನು ಸ್ಥಾಪಿಸಿದೆ. ಹೊಸದಾಗಿ 6,700 ಮೆಗಾವಾಟ್ ಅಣು ವಿದ್ಯುತ್ ಉತ್ಪಾದನೆ 2021-22ರೊಳಗೆ ಸೇರ್ಪಡೆಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
  • ಪ್ರಸ್ತುತ ನಿರ್ಮಾಣ ಹಂತದ ಯೋಜನೆಗಳು ರಾಜಸ್ಥಾನ, ಗುಜರಾತ್ ಮತ್ತು ತಮಿಳುನಾಡಿನಲ್ಲಿವೆ. ಹೊಸ 10 ರಿಯಾಕ್ಟರ್‌ಗಳನ್ನು ರಾಜಸ್ತಾನದ ಮಣಿ ಬನ್ಸ್ವಾರಾ, ಮಧ್ಯ ಪ್ರದೇಶದ ಚಟ್ಕ, ಕರ್ನಾಟಕದ ಕೈಗಾ ಮತ್ತು ಹರಿಯಾಣದ ಗೋರಖ್‌ಪುರದಲ್ಲಿ ನಿರ್ಮಿಸಲಾಗುವುದು.
  • ಈ ಯೋಜನೆಯು ಭಾರತೀಯ ಪರಮಾಣು ಉದ್ಯಮವನ್ನು ಪರಿವರ್ತಿಸಲು ಸಹಾಯ ಮಾಡುತ್ತದೆ ಹಾಗೂ ನೇರ ಮತ್ತು ಪರೋಕ್ಷವಾಗಿ 33,400 ಕ್ಕಿಂತ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸರ್ಕಾರ ಹೇಳಿದೆ.

ಹೆವಿ ವಾಟರ್ ಪ್ರೆಶರೈಸ್ಡ್ ರಿಯಾಕ್ಟರ್ (PHWR):

ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್ ಗಳಲ್ಲಿ ನೈಸರ್ಗಿಕ ಯುರೇನಿಯಂ ಅನ್ನು ಇಂಧನವಾಗಿ ಮತ್ತು ಹೆವಿ ವಾಟರ್ ಅನ್ನು ಮಾಡರೇಟರ್ ಹಾಗೂ ಕೂಲೆಂಟ್ ಆಗಿ ಬಳಸಲಾಗುತ್ತದೆ. ಭಾರತದ ಮೊದಲ PHWR ಯನ್ನು ಅಟಾಮಿಕ್ ಎನರ್ಜಿ ಕೆನಡಾ ಲಿಮಿಟೆಡ್ (AECL) ತಾಂತ್ರಿಕ ಸಹಕಾರದಲ್ಲಿ ರಾಜಸ್ತಾನದ ರಾವತ್ಭತದಲ್ಲಿ ನಿರ್ಮಿಸಲಾಯಿತು. ಆದಾಗ್ಯೂ, 1974 ರಲ್ಲಿ ಪೋಖ್ರಾನ್ನಲ್ಲಿ ಭಾರತದ ಮೊದಲ ಪರಮಾಣು ಪ್ರಯೋಗದ ನಂತರ ಕೆನಡಾ ತನ್ನ ಬೆಂಬಲವನ್ನು ತಕ್ಷಣವೇ ಹಿಂತೆಗೆದುಕೊಂಡಿತು. ಮಹಾರಾಷ್ಟ್ರದ ತಾರಾಪುರದಲ್ಲಿ ಭಾರತದ ಮೊದಲ ಅಣು ಸ್ಥಾವರವನ್ನು ನಿರ್ಮಿಸಲಾಯಿತು. ಪ್ರಸ್ತುತ ರಾವತ್ಭಟ, ಕೈಗಾ, ಕಾಕ್ರಪಾರ್, ಕಲ್ಪಪ್ಪಮ್ ಮತ್ತು ನರೋರಾಗಳಲ್ಲಿ PHWR ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇತ್ತೀಚಿಗೆ, ಭಾರತದ ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್ ಲಿಮಿಟೆಡ್ (NPCIL) 220 MWe ಅಥವಾ 540 MWe ಸಾಮರ್ಥ್ಯದ ಒತ್ತಡದ ಹೆವಿ ವಾಟರ್ ರಿಯಾಕ್ಟರ್ ಗಳನ್ನು ಇತರ ರಾಷ್ಟ್ರಗಳಿಗೆ ಮಾರಾಟ ಮಾಡಲು ಸಿದ್ಧವಾಗಿದೆ ಎಂದು ಘೋಷಿಸಿದೆ.

ಜಿಎಸ್‌ಟಿ ಪರಿಷತ್ ನಿಂದ ಜಿಎಸ್‌ಟಿ ದರ ನಿಗದಿ

ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ನೇತೃತ್ವದ ಜಿಎಸ್‌ಟಿ ಪರಿಷತ್‌ ತೆರಿಗೆ ದರವನ್ನು ಅಂತಿಮಗೊಳಿಸಿದೆ ಮತ್ತು ಜಿಎಸ್‌ಟಿ ಪರಿಷತ್‌ ಆಡಳಿತಕ್ಕೆ ಪೂರಕವಾದ ಏಳು ನಿಯಮಗಳನ್ನ ಅನುಮೋದಿಸಿದ್ದು, ಜುಲೈ 1 ರಿಂದ ಜಾರಿಗೆ ಬರಲಿದೆ. ಜಿಎಸ್‌ಟಿಯ ಉಳಿದ ಎರಡು ನಿಯಮಗಳಾದ ಟ್ರಾನ್ಸಿಷನ್ ಮತ್ತು ರಿಟರ್ನ್ ಕಾನೂನು ಸಮಿತಿಯ ಪರಿಶೀಲನೆಯಲ್ಲಿವೆ. ಒಟ್ಟಾರೆಯಾಗಿ, ಪರಿಷತ್ 1211 ಸರಕುಗಳ ದರಗಳನ್ನು ನಿಗದಿಪಡಿಸಿದೆ. ಮುಂಬರುವ ದಿನಗಳಲ್ಲಿ ಕೆಲವು ಇತರ ಸರಕುಗಳ ಮತ್ತು ಸೇವೆಗಳ ದರಗಳನ್ನು ನಿರ್ಧರಿಸಲಿದೆ.

ಪ್ರಮುಖಾಂಶಗಳು:

  • 1211 ಸರಕುಗಳ ಪೈಕಿ ಶೇ. 81% ರಷ್ಟು ಸರಕುಗಳು ಶೇ. 18% ಅಥವಾ ಅದಕ್ಕಿಂತ ಕಡಿಮೆ ತೆರಿಗೆಗೆ ಒಳಪಡಲಿವೆ. ಉಳಿದ ಶೇ.19% ರಷ್ಟು ಸರಕುಗಳಿಗೆ 28% ಗರಿಷ್ಠ ತೆರಿಗೆ ದರ ಅನ್ವಯವಾಗಲಿದೆ.
  • ಸಕ್ಕರೆ, ಚಹಾ, ಖಾದ್ಯ ಮತ್ತು ಖಾದ್ಯ ತೈಲಗಳಂತಹ ಗೃಹೋಪಯೋಗಿ ವಸ್ತುಗಳು ಶೇ.5% ತೆರಿಗೆಯನ್ನು ಆಕರ್ಷಿಸಲಿವೆ. ಧಾನ್ಯಗಳು ಮತ್ತು ಹಾಲಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.
  • ಮನುಫ್ಯಾಕ್ಚರ್ಡ್ ಸರಕುಗಳಿಗೆ ಶೇ 18% ಸುಂಕವನ್ನು ವಿಧಿಸಲಾಗುವುದು.
  • ಐಷಾರಾಮಿ ಕಾರುಗಳು ಶೇ.28% ಜಿಎಸ್‌ಟಿ ಜೊತೆಗೆ ಶೇ.15% ಸೆಸ್ ವಿಧಿಸಲಾಗುವುದು. ಸಣ್ಣ ಪೆಟ್ರೋಲ್ ಕಾರುಗಳು ಶೇ.28% ಜಿಎಸ್‌ಟಿ ಮತ್ತು ಶೇ.1% ಸೆಸ್ ಮತ್ತು ಡೀಸೆಲ್ ಕಾರುಗಳನ್ನು 28% ಮತ್ತು 3% ಸೆಸ್ ಗೆ ಒಳಪಡಲಿವೆ.
  • ತಂಪು ಪಾನೀಯಗಳು ಶೇ.28% ತೆರಿಗೆ ವ್ಯಾಪ್ತಿಗೆ ಬರಲಿವೆ.

ಮಹತ್ವ:

  • ಜಿಎಸ್‌ಟಿ ಕೌನ್ಸಿಲ್ 1211 ಸರಕುಗಳ ಯಾವುದೇ ಸರಕಿನ ಒಟ್ಟಾರೆ ತೆರಿಗೆಯನ್ನು ಹೆಚ್ಚಿಸಿಲ್ಲ. ಆದರೆ ಅನೇಕ ವಸ್ತುಗಳ ಮೇಲೆ ತೆರಿಗೆ ಕಡಿಮೆಯಾಗಿದೆ. ಉದಾಹರಣೆಗೆ ಸಾಬೂನಿಗೆ ಶೇ.22-24% ನಷ್ಟು ತೆರಿಗೆ ವಿಧಿಸಲ್ಪಡುತ್ತಿದ್ದು, ಈಗ ಶೇ.18% ನಷ್ಟು ತೆರಿಗೆಯನ್ನು ವಿಧಿಸಲಾಗುವುದು.
  • ಐಷಾರಾಮಿ ವಸ್ತುಗಳ ಮೇಲೆ ಶೇ.28% ಕ್ಕಿಂತಲೂ ವಿಧಿಸಲಾಗುವು ಹೆಚ್ಚು ತೆರಿಗೆಯನ್ನು ಸೆಸ್ ಎಂದು ಪರಿಗಣಿಸಲಾಗುತ್ತದೆ. ಈ ಸೆಸ್ ಅನ್ನು ಆದಾಯ ನಷ್ಟವನ್ನು ಅನುಭವಿಸುವ ರಾಜ್ಯಗಳಿಗೆ ಪರಿಹಾರಗಳನ್ನು ನೀಡಲು ಬಳಸಲಾಗುತ್ತದೆ.
  • ಆಹಾರ ಪದಾರ್ಥಗಳು ಅಗ್ಗವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಕೇಶತೈಲ, ಟೂತ್ಪೇಸ್ಟ್ ಮತ್ತು ಸಾಬೂನಿನಂತಹ ದಿನನಿತ್ಯದ ಬಳಕೆಯ ವಸ್ತುಗಳು ಶೇ.28% ರ ಬದಲು ಶೇ.18% ತೆರಿಗೆ ವ್ಯಾಪ್ತಿಯಲ್ಲಿ ಇಡಲಾಗಿದೆ.
  • ಕಲ್ಲಿದ್ದಲಿನ ಮೇಲೆ ತೆರಿಗೆ ದರ ಶೇ.11% ರಿಂದ ಶೇ.5% ಕ್ಕೆ ಇಳಿದಿರುವ ಕಾರಣ ಇಂಧನ ಉತ್ಪಾದನೆಯ ವೆಚ್ಚವು ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಯಮುನಾ ನದಿ ತೀರದಲ್ಲಿ ಮಲ ವಿಸರ್ಜನೆ ಹಾಗೂ ತ್ಯಾಜ್ಯ ವಿಲೇವಾರಿಗೆ ತಡೆ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮುಖ್ಯಸ್ಥ ನ್ಯಾಯಮೂರ್ತಿ ಸ್ವತಂತರ್ ಕುಮಾರ್ ಅವರ ನೇತೃತ್ವದ ಪೀಠವು ಯಮುನಾದ ತೀರದಲ್ಲಿ ಬಯಲು ಮಲವಿಸರ್ಜನೆ ಮತ್ತು ತ್ಯಾಜ್ಯ ವಿಲೇವಾರಿ ಮಾಡುವುದನ್ನು ನಿಷೇಧಿಸಿದೆ. ಆದೇಶವನ್ನು ಉಲ್ಲಂಘಿಸಿದ ಜನರಿಗೆ ರೂ. 5,000 ನಷ್ಟು ಪರಿಸರ ಪರಿಹಾರವನ್ನಾಗಿ ವಿಧಿಸಲಾಗುವುದು. ಇದಲ್ಲದೆ, ನದಿ ಶುದ್ಧೀಕರಣ ಕಾರ್ಯಗಳನ್ನು ನೋಡಿಕೊಳ್ಳಲು ದೆಹಲಿ ಜಲ ಮಂಡಳಿಯ ಸಿಇಒ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಮತ್ತು ನಿಗದಿತ ಅವಧಿಯಲ್ಲಿ ವರದಿಗಳನ್ನು ಸಲ್ಲಿಸುವಂತೆ ಆದೇಶಿಸಿದೆ.

            ಅಲ್ಲದೇ ಮಾಲಿನ್ಯಕಾರಕ ಕೈಗಾರಿಕೆಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ದೆಹಲಿ ಸರ್ಕಾರ ಮತ್ತು ಪುರಸಭೆ ಸಂಸ್ಥೆಗಳಿಗೆ ನ್ಯಾಯಾಲಯ ಆದೇಶಿಸಿದೆ. ಕೈಗಾರಿಕೆಗಳು ಈ ನದಿ ಮಾಲಿನ್ಯಕ್ಕೆ ಪ್ರಮುಖ ಮೂಲವಾಗಿವೆ.

ಹಿನ್ನಲೆ:

ಮೇ 1 ರಂದು NGTಯು ಯುಮುನಾ ನದಿಗೆ ಬಿಡುಗಡೆಯಾಗುವ ಮೊದಲು ಕೊಳಚೆಯನ್ನು ಸಂಸ್ಕರಿಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಕೊಳಚೆನೀರಿನ ಸಂಸ್ಕರಣಾ ಘಟಕಗಳ(STP) ತಪಾಸಣೆಗೆ ಆದೇಶಿಸಿತ್ತು. ಯಮುನಾ ತಲುಪುವ ಸುಮಾರು 67% ತ್ಯಾಜ್ಯನೀರನ್ನು ‘ಮೈಲಿ ಸೆ ನಿರ್ಮಲ್ ಯಮುನಾ ರಿವೈಟಲೈಸೇಶನ್ ಪ್ರಾಜೆಕ್ಟ್ 2017’ ಹಂತದ ಹಂತದಲ್ಲಿ ಸ್ಥಾಪಿಸಲಾಗುವ STP ಗಳ ಅಡಿಯಲ್ಲಿ ಸಂಸ್ಕರಿಸಬೇಕು. ತ್ಯಾಜ್ಯನೀರನ್ನು ಸಂಸ್ಕರಿಸುವ ಯೋಜನೆಯಡಿ ಒಟ್ಟು 14 STP ಘಟಕಗಳಲ್ಲಿ ಏಳು STP ಘಟಕಗಳನ್ನು ದೆಹಲಿ ಜಲ್ ಮಂಡಳಿ ತನ್ನದೇ ಆದ ಹಣದಿಂದ ನಿರ್ಮಿಸಲಿದೆ.

            ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಯಮುನಾ ಆಕ್ಷನ್ ಪ್ಲಾನ್ (ವೈಎಪಿ) -I ಮತ್ತು ವೈಎಪಿ -II ಯೋಜನೆಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. 2019ರೊಳಗೆ ಪೂರ್ಣಗೊಳ್ಳಬೇಕಾದ YAP-III ಯೋಜನೆಗಳನ್ನು ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿಯ (JICA) ಆರ್ಥಿಕ ಸಹಾಯದಿಂದ ದೆಹಲಿಯಲ್ಲಿ ಪರಿಚಯಿಸಲಾಗಿದೆ. ಯೋಜನೆಯು ಒಳಚರಂಡಿ / ಡ್ರೈನ್ಸ್, ಚರಂಡಿ ಸಂಸ್ಕರಣಾ ಘಟಕಗಳು, ಕಡಿಮೆ-ವೆಚ್ಚದ ನೈರ್ಮಲೀಕರಣ ಮತ್ತು ಸಮುದಾಯದ ಶೌಚಾಲಯ ಸಂಕೀರ್ಣಗಳು, ವಿದ್ಯುತ್ ಮತ್ತು ಸುಧಾರಿತ ಮರದ ಶವಸಂಸ್ಕಾರವನ್ನು ಒಳಗೊಂಡಿದೆ.

ಗಂಗಾ ನದಿಯಲ್ಲಿ ಹೂಳೆತ್ತಲು ಮಾಧವ ಚಿತಾಲೆ ಸಮಿತಿ ಶಿಫಾರಸ್ಸು

ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರ್ವಸತಿ ಸಚಿವಾಲಯ ಕಳೆದ ವರ್ಷ ಗಂಗಾ ನದಿಯಲ್ಲಿ ಹೂಳು ತೆಗೆಯಲು ರೂಪುರೇಷೆಗಳನ್ನು ತಯಾರಿಸಲು ಸಮಿತಿಯನ್ನು ರಚಿಸಿತ್ತು. ನಾಲ್ಕು ಸದಸ್ಯರ ಸಮಿತಿಗೆ “ರಾಷ್ಟ್ರೀಯ ಗಂಗಾ ನದಿ ಬೇಸಿನ್ ಅಥಾರಿಟಿ ತಜ್ಞ ಸದಸ್ಯ” ಮಾಧವ್ ಚಿಟಲೆ ನೇತೃತ್ವವನ್ನು ವಹಿಸಿದ್ದರು. ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರ್ವಸತಿ ಸಚಿವಾಲಯದ ಕಾರ್ಯದರ್ಶಿ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಕಾರ್ಯದರ್ಶಿ ಮತ್ತು ಪುಣೆಯ ಕೇಂದ್ರ ಜಲ ಮತ್ತು ಇಂಧನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಮುಖೇಶ್ ಸಿನ್ಹಾ ರವರು ಸಮಿತಿಯ ಸದಸ್ಯರುಗಳು.

ಶಿಫಾರಸ್ಸುಗಳು:

  • ಪ್ರವಾಹ ದಿಕ್ಕನ್ನು ಅಧ್ಯಯನ ನಡೆಸಲು ಸಂಸ್ಥೆಯನ್ನು ಸ್ಥಾಪಿಸುವುದು.
  • ಗಂಗಾ ನದಿಯಲ್ಲಿ ಹೂಳು ತೆಗೆಯಲು ಸಂಬಂಧಿಸಿದಂತೆ ಮರಳು ನೋಂದಣೆ ರಚಿಸುವುದು. ಹೂಳು ತೆಗೆಯುವ ಚಟುವಟಿಕೆಗಳ ಮಾರ್ಗದರ್ಶನ ಮಾಡಲು ಮತ್ತು ಸೆಡಿಮೆಂಟ್ ಬಜೆಟ್ ತಯಾರಿಸಲು ತಾಂತ್ರಿಕ ಸಂಸ್ಥೆ ಅನ್ನು ಸ್ಥಾಪಿಸುವುದು.
  • ಸವೆತ ಮತ್ತು ಹೂಳು ತುಂಬುವುದು ಬಹಳ ಸಂಕೀರ್ಣ ವಿದ್ಯಮಾನವಾಗಿದೆ ಎಂದು ಸಮಿತಿಯು ಗಮನಿಸಿದೆ ಮತ್ತು ಆದ್ದರಿಂದ ಹೂಳು ನಿರ್ವಹಣೆ ಮತ್ತು ನಿಯಂತ್ರಣ ಸಮಸ್ಯೆಗಳು ಪ್ರಾದೇಶಿಕವಾಗಿ-ನಿರ್ದಿಷ್ಟವಾಗಿರುತ್ತವೆ. ಹಾಗಾಗಿ, ಹೂಳೆತ್ತುವಾಗ ವಿಶಾಲ ತತ್ವಗಳ ಸೂತ್ರಗಳನ್ನು ರೂಪಿಸಲು ಸಮಿತಿಯು ಸೂಚಿಸಿದೆ. ನಿರ್ಲಕ್ಷ್ಯದಲ್ಲಿ ಪರಿಸರಕ್ಕೆ ದಕ್ಕೆ ಆಗಲಿದೆ.
  • ಸಮಿತಿಯು ಉತ್ತಮ ಕೃಷಿ ಪದ್ದತಿಗಳನ್ನು, ನದಿಯ ದಡದ ಸವೆತ ತಡೆಯುವ ಕೆಲಸಗಳನ್ನು ಮತ್ತು ನದಿಯ ಉದ್ದಕ್ಕೂ ಇರುವ ಕೆರೆಗಳಲ್ಲಿ ಹೂಳು ಎತ್ತಿ ಪುನಃಶ್ಚೇತನಕ್ಕೆ ಶಿಫಾರಸು ಮಾಡಿದೆ. ಕೆರೆಗಳಲ್ಲಿ ಹೂಳು ಎತ್ತುವುದರಿಂದ ಅವುಗಳ ಸಂಗ್ರಹ ಸಾಮರ್ಥ್ಯಗಳನ್ನು ಹೆಚ್ಚಾಗಲಿದೆ.

Leave a Comment

This site uses Akismet to reduce spam. Learn how your comment data is processed.