ನಾಲ್ಕು ಬಾರಿ “ಮೌಂಟ್ ಎವರೆಸ್ಟ್” ಏರಿ ದಾಖಲೆ ಬರೆದ ಅಂಶು ಜಮ್ಸೆನ್ಪ
ಅರುಣಾಚಲ ಪ್ರದೇಶದ ಬೊಮ್ಡಿಲಾದ ನಿವಾಸಿ ಅಂಶು ಜಮ್ಸೆನ್ಪ ಅವರು ನಾಲ್ಕು ಬಾರಿ ಮೌಂಟ್ ಎವರೆಸ್ಟ್ ಅನ್ನು ಏರುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿರುವ ಜಮ್ಸೆನ್ಪಾ ಅವರು ಒಂದೇ ಋತುವಿನಲ್ಲಿ ಎರಡು ಬಾರಿ, ಅದರಲ್ಲೂ 10 ದಿನಗಳ ಅಂತರದಲ್ಲಿ ಎರಡು ಬಾರಿ ಎವರೆಸ್ಟ್ ಪರ್ವತವನ್ನು ಈಗಾಗಲೇ ಏರಿದ್ದಾರೆ. ಮೇ 2011 ರಲ್ಲಿ ಅವರು ಎರಡು ಬಾರಿ ಮೌಂಟ್ ಎವರೆಸ್ಟ್ ಏರಿದ್ದರು. ಮೇ 18, 2013 ರಂದು ಅವರು ಮತ್ತೆ ಶಿಖರವನ್ನು ತಲುಪಿದ್ದರು.
ನ್ಯೂಜಿಲೆಂಡ್ನ ಎಡ್ಮಂಡ್ ಹಿಲರಿ ಮತ್ತು ನೇಪಾಳದ ತೆನ್ಜಿಂಗ್ ನೋರ್ಗೆ ಮೌಂಟ್ ಎವರೆಸ್ಟ್ ಏರಿದ ಮೊದಲ ಪರ್ವತಾರೋಹಿಗಳು. ಮೇ 29, 1953 ರಂದು ಈ ಸಾಧನೆಯನ್ನು ಅವರು ಸಾಧಿಸಿದರು. ಇಟಾಲಿಯನ್ ಪರಿಶೋಧಕ ರೇನ್ಹೋಲ್ಡ್ ಮೆಸ್ನರ್ ಎಂಬಾತ 1978 ರಲ್ಲಿ ಆಮ್ಲಜನಕದ ಪೂರೈಕೆ ಇಲ್ಲದೆ ಮೌಂಟ್ ಎವರೆಸ್ಟ್ ಅನ್ನು ಏರಿದ ಮೊದಲ ವ್ಯಕ್ತಿ. ಮೆಸ್ನರ್ ರವರು ಮೌಂಟ್ ಎವರೆಸ್ಟ್ ಸೇರಿದಂತೆ ಸಮುದ್ರ ಮಟ್ಟಕ್ಕಿಂತ 8,000 ಮೀಟರ್ (26,000 ಅಡಿ) ಎತ್ತರವಿರುವ ಹದಿನಾಲ್ಕು ಶಿಖರಗಳು ಏರಿದ ಮೊದಲ ಪರ್ವತಾರೋಹಿ.
ಟಾಟಾ ಗ್ರೂಫ್ ದೇಶದ ಅತ್ಯಂತ ಮೌಲ್ಯಯುತ ಬ್ರಾಂಡ್
ಬ್ರಾಂಡ್ ಫೈನಾನ್ಸ್ ಹೊರತಂದಿರುವ ಭಾರತದ 100 ಅತ್ಯಂತ ಮೌಲ್ಯಯುತ ಬ್ರಾಂಡ್ಗಳನ್ನು 2017 ಪಟ್ಟಿಯಲ್ಲಿ ಟಾಟಾ ಗ್ರೂಫ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಟಾಟಾ ಗ್ರೂಫ್ 13.1 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.. ಬ್ರ್ಯಾಂಡ್ ಫೈನಾನ್ಸ್ ಜಾಗತಿಕ ಬ್ರ್ಯಾಂಡ್ ಮೌಲ್ಯಮಾಪನ ಮತ್ತು ತಂತ್ರ ಸಲಹಾ ಸಂಸ್ಥೆ. ಟಾಟಾ ಗ್ರೂಪ್ನ ಬ್ರಾಂಡ್ ಮೌಲ್ಯವು 2016 ರಲ್ಲಿ 13.7 ಶತಕೋಟಿ ಡಾಲರ್ನಿಂದ ಶೇ 4% ಇಳಿಮುಖವಾಗಿದ್ದರೂ ಸಹ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ವರದಿಯ ಪ್ರಕಾರ, ಭಾರತದ ಅಗ್ರ 100 ಬ್ರ್ಯಾಂಡ್ಗಳ ಒಟ್ಟು ಬ್ರ್ಯಾಂಡ್ ಮೌಲ್ಯವು 2017 ರಲ್ಲಿ 15% ರಷ್ಟು ಏರಿಕೆಯಾಗಿದೆ. 100 ಮೌಲ್ಯಯುತ ಬ್ರಾಂಡ್ಗಳ ಪೈಕಿ ಒಟ್ಟು 68 ಬ್ರಾಂಡ್ಗಳು ಈ ವರ್ಷ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ.
- ದೂರಸಂಪರ್ಕ ಸಂಸ್ಥೆ ಏರ್ಟೆಲ್ ಅಂದಾಜು 7 ಶತಕೋಟಿ ಡಾಲರ್ ಮೌಲ್ಯದ ಮೂಲಕ ಎರಡನೇ ಸ್ಥಾನದಲ್ಲಿದೆ. ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಲ್ಐಸಿ) 6.8 ಶತಕೋಟಿ ಡಾಲರ್ ಮೂಲಕ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
- ಐಟಿ ಸಂಸ್ಥೆ ಇನ್ಫೋಸಿಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರಮವಾಗಿ 6.2 ಶತಕೋಟಿ ಡಾಲರ್ ಮತ್ತು 5.5 ಶತಕೋಟಿ $ ನಷ್ಟು ಮೌಲ್ಯದೊಂದಿಗೆ ಪಟ್ಟಿಯಲ್ಲಿ ನಾಲ್ಕನೇ ಮತ್ತು ಐದನೇ ಸ್ಥಾನವನ್ನು ಪಡೆದುಕೊಂಡಿವೆ.
- ಇಂಡಿಗೋ ಏರ್ಲೈನ್ಸ್ ಈ ಬಾರಿ 62ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷ 95ನೇ ಸ್ಥಾನದಲ್ಲಿತ್ತು.
- ಮೊಬೈಲ್ ತಯಾರಕ ಸಂಸ್ಥೆ ಮೈಕ್ರೋಮ್ಯಾಕ್ಸ್ ತನ್ನ ಬ್ರ್ಯಾಂಡ್ ಮೌಲ್ಯ ಶೇ.39% ಇಳಿಕೆಯಾಗಿದ್ದು, ಪಟ್ಟಿಯಲ್ಲಿ 95 ನೇ ಸ್ಥಾನಕ್ಕೆ ಕುಸಿದಿದೆ.
- ವರದಿಯಲ್ಲಿ ಐಟಿಸಿ ದೇಶದ ಅತ್ಯಂತ ಶಕ್ತಿಶಾಲಿ ಬ್ರಾಂಡ್ ಎಂದು ಹೆಸರಿಸಲಾಗಿದೆ. ಸ್ಟ್ರೆಂತ್ ಇಂಡೆಕ್ಸ್ ಸ್ಕೋರ್ 86 ಮೂಲಕ AAA ರೇಟ್ ಬ್ರಾಂಡ್ ಎನಿಸಿರುವ ಭಾರತದ ಏಕೈಕ ಬ್ರಾಂಡ್ ಐಟಿಸಿ.
30 ವರ್ಷಗಳ ನಂತರ ಭಾರತೀಯ ಸೇನೆಗೆ ಹೊವಿಟ್ಜರ್ ಗನ್
ಬೊಫೋರ್ಸ್ ಹೊವಿಟ್ಜರ್ ಬಂದೂಕುಗಳನ್ನು ಖರೀದಿಸಿದ 30 ವರ್ಷಗಳ ನಂತರ ಭಾರತ ಮೊದಲ ಬಾರಿಗೆ ಎಂ777 ಫಿರಂಗಿ ಬಂದೂಕು (ಆರ್ಟಿಲರಿ ಗನ್) ಗಳನ್ನು BAE ಸಿಸ್ಟಂನಿಂದ ಆಮದು ಮಾಡಿಕೊಂಡಿದೆ. ಬೋಫೋರ್ಸ್ ಬಂದೂಕುಗಳನ್ನು 1980ರ ದಶಕದ ಉತ್ತರಾರ್ಧದಲ್ಲಿ ಸೇರ್ಪಡೆಗೊಳಿಸಲಾಯಿತು, ಅದರ ನಂತರ ಸೇನೆಗೆ ಯಾವುದೇ ಆಧುನಿಕ ಫಿರಂಗಿ ಗನ್ಗಳನ್ನು ಸೇರ್ಪಡೆಗೊಳಿಸಿಲ್ಲ. ಇದೀಗ ಎರಡು ಎಂ777 ಗನ್ಗಳು ಹೊಸದಿಲ್ಲಿಗೆ ಆಗಮಿಸಿದ್ದು ರಾಜಸ್ಥಾನದ ಪೋಖ್ರಾನ್ ಫೀಲ್ಡ್ ಫೈರಿಂಗ್ ಶ್ರೇಣಿಯಲ್ಲಿ ಪರೀಕ್ಷಿಸಲಾಗುವುದು. ಭಾರತೀಯ ಸೇನೆಯು 2020 ರ ವೇಳೆಗೆ 3,503 ಗನ್ಗಳೊಂದಿಗೆ 169 ರೆಜಿಮೆಂಟ್ಗಳನ್ನು ಸಜ್ಜುಗೊಳಿಸಲು ಯೋಜಿಸಿದೆ.
- ಅಮೆರಿಕದಿಂದ ಎಂ777 ಫಿರಂಗಿ ಗನ್ಗಳನ್ನು ಖರೀದಿಸುವ ಪ್ರಕ್ರಿಯೆಗೆ 2010ರಲ್ಲಿ ಚಾಲನೆ ನೀಡಲಾಯಿತು. ಕಳೆದ ವರ್ಷ ನವೆಂಬರ್ ನಲ್ಲಿ 145 ಎಂ777 ಗನ್ಗಳನ್ನು ಖರೀದಿಸುವ ರೂ 2900 ಕೋಟಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
- 155ಎಂಎಂ/39 ಕ್ಯಾಲಿಬರ್ ಹೊವಿಟ್ಜರ್ ಗಳು ಸೇನೆಯ ಕಾರ್ಯಾಚರಣೆ ಸಾಮರ್ಥ್ಯವನ್ನು ಹೆಚ್ಚಸಲಿವೆ.
- 7ಕೀ.ಮೀ ದೂರದ ವರೆಗೆ ನಿಖರ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಹೋವಿಟ್ಜರ್ ಗಳು ರಾಕೆಟ್ ಲಾಂಚರ್ನ ನೆರವಿನೊಂದಿಗೆ ಮತ್ತು ಹಗುರ ಮದ್ದುಗುಂಡುಗಳನ್ನು ಬಳಸಿ 30 ಕಿ.ಮೀ. ದೂರದ ವರೆಗೂ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಎಂ 777ನಲ್ಲಿ ಡಿಜಿಟಲ್ ಫೈರ್ ಕಂಟ್ರೋಲ್ ಸಿಸ್ಟಮ್ ಅನ್ನು ಬಳಕೆ ಮಾಡಲಾಗುತ್ತದೆಯಾದ್ದರಿಂದ ತ್ವರಿತಗತಿಯಲ್ಲಿ ಗುಂಡು ಹಾರಿಸಲು ಸಾಧ್ಯವಿದೆ. ಒಂದು ನಿಮಿಷಕ್ಕೆ 5 ಸುತ್ತು ಗುಂಡು ಹಾರಿಸುವ ಸಾಮರ್ಥ್ಯ ಹೊಂದಿರುವ ಎಂ 777 ಹೊವಿಟ್ಜರ್ ಗನ್ ನಿರ್ವಹಣೆಗೆ 8 ಮಂದಿ ಸಿಬ್ಬಂದಿ ಅಗತ್ಯವಿದೆ. ಹೊವಿಟ್ಜರ್ ಗನ್ ಅನ್ನು 2008ರಲ್ಲಿ ಅಮೆರಿಕ ಆಫ್ಘಾನಿಸ್ಥಾನದ ಮೇಲಿನ ಯುದ್ಧದಲ್ಲಿ ಬಳಕೆ ಮಾಡಿಕೊಂಡಿತ್ತು.
- ಚಿನೂಕ್ ನಂತಹ ಹೆವಿ-ಲಿಫ್ಟ್ ಹೆಲಿಕಾಪ್ಟರ್ಗಳನ್ನು ಕೂಡಾ ಬಳಸಿ ಗನ್ಗಳನ್ನು ಸಾಗಿಸಬಹುದಾಗಿದೆ. ಯು.ಎಸ್.ನಿಂದ ಚಿನೂಕ್ ಪಡೆಯಲು ಭಾರತವು ಒಪ್ಪಂದಕ್ಕೆ ಸಹಿ ಹಾಕಿದೆ. C130J ಸೂಪರ್ ಹರ್ಕ್ಯುಲಸ್, ಸಹ M777 ಬಂದೂಕುಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. M777 ಬಂದೂಕುಗಳು ಈಗಾಗಲೇ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಸೇವೆಯಲ್ಲಿವೆ.
- 25 ಹೋವಿಟ್ಜರ್ ಗನ್ ಗಳನ್ನು ಆಮದು ಮಾಡಿಕೊಂಡು ನಂತರ 120 ಹೋವಿಟ್ಜರ್ ಗಳನ್ನು ಇಲ್ಲೇ ಜೋಡಣಾ ಪ್ರಕ್ರಿಯೆ ಮಾಡಲಾಗುತ್ತದೆ, ಇದಕ್ಕಾಗಿ ಮಹೀಂದ್ರಾ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಎಂ.ಎಸ್.ಸ್ವಾಮಿನಾಥನ್ ಅವರ ಪುಸ್ತಕ ಸರಣಿ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ
ಪ್ರಖ್ಯಾತ ಕೃಷಿ ವಿಜ್ಞಾನಿ ಡಾ.ಎಂ.ಎಸ್ ಬರೆದಿರುವ ಎರಡು ಪುಸ್ತಕಗಳ ಸರಣಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು. M.S. Swaminathan: The Quest for a world without hunger ಸರಣಿ ಪುಸ್ತಕದ ಶೀರ್ಷಿಕೆ.
ಎಂ.ಎಸ್.ಸ್ವಾಮಿನಾಥನ್:
ಡಾ. ಎಮ್ ಎಸ್. ಸ್ವಾಮಿನಾಥನ್ ಅವರು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎನಿಸಿದ್ದಾರೆ. ಭಾರತದಲ್ಲಿ ಹೆಚ್ಚಿನ ಇಳುವರಿಯ ವಿವಿಧ ತಳಿಯ ಗೋಧಿಗಳನ್ನು ಪರಿಚಯಿಸುವ ಮೂಲಕ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಚೆನ್ನೈನ ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್, ಸಂಸ್ಥಾಪಕ ಮತ್ತು ಅಧ್ಯಕ್ಷರು ಸಹ ಆಗಿದ್ದಾರೆ. ಭಾರತೀಯ ಸರ್ಕಾರವು ಸ್ವಾಮಿನಾಥನ್ ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣದಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅಲ್ಲದೇ ವಿಶ್ವದಾದ್ಯಂತ ಹಲವಾರು ಪ್ರಶಸ್ತಿಗಳು ಮತ್ತು ಪದಕಗಳನ್ನು ಅವರು ಸ್ವೀಕರಿಸಿದ್ದಾರೆ ಅವರಿಗೆ ಲಭಿಸಿವೆ. ಸಮುದಾಯ ನಾಯಕತ್ವಕ್ಕಾಗಿ ಮ್ಯಾಗ್ಸೆಸೆ ಪ್ರಶಸ್ತಿ, ಫ್ರಾನ್ಸ್ನ ಆರ್ಡ್ರೆ ಡು ಮೆರಿಟೆ ಅಗ್ರಿಕಲ್ ಮತ್ತು ಫಿಲಿಪೈನ್ಸ್ನ ಗೋಲ್ಡನ್ ಹಾರ್ಟ್ ಅಧ್ಯಕ್ಷೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವಲ್ಲದೇ, ಚಾರ್ಲ್ಸ್ ಡಾರ್ವಿನ್ ಇಂಟರ್ನ್ಯಾಷನಲ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ ಮೆಡಲ್, ವೋಲ್ವೋ ಎನ್ವಿರಾನ್ಮೆಂಟ್ ಪ್ರೈಜ್, ಯುನೆಸ್ಕೋ ಗಾಂಧಿ ಚಿನ್ನದ ಪದಕ, ಫ್ರಾಂಕ್ಲಿನ್ ಡೆಲಾನೊ ರೂಸ್ವೆಲ್ಟ್ ಫೋರ್ ಫ್ರೀಡಮ್ಸ್ ಮೆಡಲ್ ಮತ್ತು ಇಂದಿರಾ ಗಾಂಧಿ ಶಾಂತಿ, ನಿಶಸ್ತ್ರೀಕರಣ ಮತ್ತು ಅಭಿವೃದ್ಧಿ ಪ್ರಶಸ್ತಿ ಹಾಗೂ 1987 ರಲ್ಲಿ, ಅವರು ವಿಶ್ವ ಆಹಾರ ಪ್ರಶಸ್ತಿಯನ್ನು ಪಡೆದಿದ್ದಾರೆ. ವಿಶ್ವ ಆಹಾರ ಪ್ರಶಸ್ತಿಯನ್ನು ಕೃಷಿ ಕ್ಷೇತ್ರದ ನೊಬೆಲ್ ಎಂದೇ ಪರಿಗಣಿಸಲಾಗಿದೆ.
ಎಂ.ಎಸ್. ಸ್ವಾಮಿನಾಥನ್ ಅವರು ಬರೆದಿರುವ ಇತರೆ ಪುಸ್ತಕಗಳು: An Evergreen Revolution (2006), I Predict: A Century of Hope Towards an Era of Harmony with Nature and Freedom from Hunger (1999), Gender Dimensions in Biodiversity Management (1998), Implementing the Benefit Sharing Provisions of the Convention on Biological Diversity: Challenges and opportunities (1997), Agrobiodiversity and Farmers’ Rights (1996), Sustainable Agriculture: Towards Food Security Farmers’ Rights and Plant Genetic Resources: A dialogue (1995), Wheat Revolution: a Dialogue (1993).
ಸಮಗ್ರ ರಕ್ಷಣಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಪಿ.ಎಸ್.ಪ್ರಧಾನ್ ನೇಮಕ
ಏರ್ ಮಾರ್ಷಲ್ ಪಿಎನ್ ಪ್ರಧಾನ್ ಅವರು ಸಮಗ್ರ ರಕ್ಷಣಾ ಸಿಬ್ಬಂದಿ (ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ (ಕಾರ್ಯಾಚರಣೆ)) ಉಪ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಸಮಗ್ರ ರಕ್ಷಣಾ ಸಿಬ್ಬಂದಿ:
ಭಾರತ ರಕ್ಷಣಾ ನಿರ್ವಹಣೆಯನ್ನು ಪರಿಶೀಲಿಸುವ ಸಲುವಾಗಿ 2001ರಲ್ಲಿ ಕಾರ್ಗಿಲ್ ಯುದ್ಧದ ನಂತರ ಸಮಗ್ರ ರಕ್ಷಣಾ ಸಿಬ್ಬಂದಿಯನ್ನು ರಚಿಸಲಾಯಿತು. ಸಶಸ್ತ್ರ ಪಡೆಗಳ ನಡುವೆ ಉನ್ನತ ಮಟ್ಟದ ಸಹಕಾರ ಸಾಧಿಸುವ ಸಲುವಾಗಿ ಐಡಿಎಸ್ ಅನ್ನು ಸ್ಥಾಪಿಸಲಾಗಿದೆ.
ಪಿ.ಎನ್.ಪ್ರಧಾನ್:
1981 ರಲ್ಲಿ ಪಿಎನ್ ಪ್ರಧಾನ್ ಭಾರತೀಯ ಏರ್ ಫೋರ್ಸ್ನಲ್ಲಿ ಪೈಲಟ್ ಆಗಿ ನೇಮಕಗೊಂಡರು. ಪ್ರಧಾನ್ ಅವರು ನಾಲ್ಕು ಕಮಾಂಡ್ ಹುದ್ದೆಗಳಾದ ಅಸಿಸ್ಟೆಂಟ್ ಚೀಫ್ ಆಫ್ ಏರ್ ಸ್ಟಾಫ್ (ಸಾರಿಗೆ ಮತ್ತು ಹೆಲಿಕಾಪ್ಟರ್ಗಳು) ಅಸಿಸ್ಟೆಂಟ್ ಚೀಫ್ ಆಫ್ ಏರ್ ಸ್ಟಾಫ್ (ಪರ್ಸನಲ್ ಏರ್ಮೆನ್ ಮತ್ತು ಸಿವಿಲಿಯನ್ಸ್) ಮತ್ತು ದಕ್ಷಿಣ ಏರ್ ಕಮಾಂಡ್ನಲ್ಲಿ ಹಿರಿಯ ವಾಯು ಸಿಬ್ಬಂದಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಧಾನ್ ಅವರು ಎಬ್ರಾಯರ್-135, ಬಿಬಿಜೆ ಮತ್ತು ಸಿ-130 ನೌಕೆಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆ ಮತ್ತು ಕಾರ್ಯಾಚರಣೆಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ವಿಶೇಷ ಸೇವೆಯನ್ನು ಗುರುತಿಸಿ, ಅವರಿಗೆ 2014 ರಲ್ಲಿ “ಅತಿ ವಿಶಿಷ್ಠ ಸೇವಾ ಪದಕ”ವನ್ನು ನೀಡಲಾಗಿದೆ.
ಭಾರತದ ವಿದ್ಯಾರ್ಥಿಗೆ ಇಂಟೆಲ್ ಇಂಟರ್ನ್ಯಾಷನಲ್ ಸೈನ್ಸ್ ಆವಾರ್ಡ್
ಪ್ರೌಢಶಾಲಾ ಮಟ್ಟದ ಅತೀ ದೊಡ್ಡ ಅಂತಾರಾಷ್ಟ್ರೀಯ ವಿಜ್ಞಾನ ಸ್ಪರ್ಧೆ ಹಾಗೂ ಎಂಜಿನಿಯರಿಂಗ್ ಸಮಾವೇಶದಲ್ಲಿ ಬೆಂಗಳೂರಿನ ಸಾಹಿತಿ ಪಿಂಗಳಿ ಹಾಗೂ ಉಡುಪಿಯ ಚೈತನ್ಯ ಹಾಗೂ ಗೀವ್ ಜಾರ್ಜ್ ಪ್ರಶಸ್ತಿ ಪಡೆದಿದ್ದಾರೆ.ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ‘ಕೆರೆಗಳ ನಿಗಾ ವ್ಯವಸ್ಥೆ’ ಅಭಿವೃದ್ಧಿಪಡಿಸಿದಕ್ಕಾಗಿ ‘ಪರಿಸರ ವಿಜ್ಞಾನ ವಿಭಾಗ’ದಲ್ಲಿ ಬೆಂಗಳೂರಿನ ಇನ್ವೆಂಚರ್ ಅಕಾಡೆಮಿಯ ವಿದ್ಯಾರ್ಥಿನಿ ಈ ಪ್ರಶಸ್ತಿ ಪಡೆದಿದ್ದಾರೆ.
- ‘ಸ್ಮಾರ್ಟ್ಫೋನ್ ಆಧರಿತ, ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್ ಸಿಸ್ಟಮ್’ ಕಂಡುಹಿಡಿದ ಉಡುಪಿಯ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ನ ಚೈತನ್ಯ ಹಾಗೂ ಗ್ರೀವ್ ಜಾರ್ಜ್ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
- ಪರಿಸರ ಎಂಜಿನಿಯರಿಂಗ್ ವಿಭಾಗದಲ್ಲಿ ಜೈವಿಕ ವಿದಳನ ಕಂಡುಹಿಡಿದ ಜೆಮ್ಶೆಡ್ಪುರದ 12ನೇ ತರಗತಿ ವಿದ್ಯಾರ್ಥಿ ಪ್ರಶಾಂತ್ ರಂಗನಾಥನ್ ಪ್ರಶಸ್ತಿ ಪಡೆದಿದ್ದಾರೆ. ‘ನೈಸರ್ಗಿಕ ಬ್ಯಾಕ್ಟೀರಿಯಾವನ್ನು ಬಳಸಿಕೊಂಡು ಕ್ಲೋರಿಪಿರಿಫೊಸ್ನ ಜೈವಿಕ ವಿಘಟನೆ’ ಎಂಬ ಶೀರ್ಷಿಕೆಯ ಯೋಜನೆಯು ರೈತರಿಗೆ ಹಾನಿಕಾರಕ ಕೀಟನಾಶಕಗಳನ್ನು ಜೈವಿಕವಾಗಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.
Ok