ವಿಶ್ವದ ಮೊದಲ ಹೈಬ್ರಿಡ್ “ಏರೋಬೋಟ್” ಆನಾವರಣ
ಇಂಡೋ-ರಷ್ಯಾದ ಜಂಟಿ ಉದ್ಯಮ ಸಂಸ್ಥೆ ಅಭಿವೃದ್ದಿಪಡಿಸಿರುವ ವಿಶ್ವದ ಮೊದಲ ಹೈಬ್ರಿಡ್ ‘ಏರೋಬೋಟ್’ ಅನ್ನು ರಷ್ಯಾದಲ್ಲಿ ಆಯೋಜಿಸಲಾಗಿದ್ದ ಸ್ಕೋಲ್ಕ್ವೊವೊ ಫೌಂಡೇಶನ್ ಸ್ಟಾರ್ಟ್ ಆಪ್ ಪ್ರದರ್ಶನದಲ್ಲಿ ಆನಾವರಣಗೊಳಿಸಲಾಯಿತು.
ಪ್ರಮುಖಾಂಶಗಳು:
ಈ ಏರೋಬಾಟ್ ಭೂಮಿ, ನೀರು, ಹಿಮ ಮತ್ತು ಮರಳಿನ ಮೇಲೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಕಷ್ಟಕರವಾದ ಭೂಪ್ರದೇಶಗಳಲ್ಲಿ ಉದಾಹರಣೆಗೆ ಪ್ರವಾಹ ಅಥವಾ ಜವುಗು ಪ್ರದೇಶಗಳಲ್ಲಿ ಆಳವಿಲ್ಲದ ನೀರಿನ ಕಾರಣದಿಂದಾಗಿ ಸಾಮಾನ್ಯ ದೋಣಿಗಳು ಹಾದು ಹೋಗದಂತಹ ಪ್ರದೇಶಗಳಲ್ಲಿ ಇದು ಚಲಿಸಲಿದೆ. ಏರೋಬಬೋಟಿನಲ್ಲಿ 10 ಪ್ರಯಾಣಿಕರು ಮತ್ತು ಒಬ್ಬ ಸಿಬ್ಬಂದಿಗಾಗಿ ಒಂದು ಕೋಣೆ ಇರಲಿದೆ .
ಏರೋಬೋಟ್ ಅನ್ನು IIAAT ಹೋಲ್ಡಿಂಗ್ ವಿನ್ಯಾಸಗೊಳಿಸಿದೆ. IIAAT ಹೋಲ್ಡಿಂಗ್ ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಏರೋಸ್ಪೇಸ್ ಟೆಕ್ನಾಲಜೀಸ್ ಮತ್ತು ಭಾರತದ ಸಂಸ್ಥೆ ಮಿಲೇನಿಯಮ್ ಏರೋಡೈನಾಮಿಕ್ಸ್ ನಡುವಿನ ಜಂಟಿ ಉದ್ಯಮವಾಗಿದೆ.
ಹೋವರ್ಕ್ರಾಫ್ಟ್ಗಳಿಗೆ (Hovercraft) ಹೋಲಿಸಿದಾಗ ಏರೋಬೋಟ್ಗಳು ಹೆಚ್ಚು ದೃಢವಾಗಿದ್ದು, ವೇಗವಾಗಿ ಚಲಿಸಬಲ್ಲವಾಗಿವೆ. ಏರೋಬೋಟ್ಗಳು ನೀರಿನ ಮೇಲೆ ಸುಮಾರು 150 kmph ಅಥವಾ ಹೆಚ್ಚಿನ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿವೆ. ಆದರೆ ಹೋವರ್ಕ್ರಾಫ್ಟ್ಗಳು ಸುಮಾರು 45-50 ಕಿ.ಮೀ. ಅಥವಾ ಸ್ವಲ್ಪ ಹೆಚ್ಚು ವೇಗದಲ್ಲಿ ಚಲಿಸುತ್ತವೆ.
ಹೋವರ್ಕ್ರಾಫ್ಟ್ಗಳಿಗೆ ಹೋಲಿಸಿದರೆ ಏರೋಬೋಟ್ಗಳ ನಿರ್ವಹಣೆ ಸುಲಭವಾಗಿದ್ದು, ಇಂಧನ ದಕ್ಷತೆ ಹೆಚ್ಚು. ಏರೋಬೋಟ್ಸ್ “ಹೈಬ್ರಿಡ್” ಇಂಜಿನ್ ಪೆಟ್ರೋಲ್ ಅಥವಾ ವಿದ್ಯುಚ್ಛಕ್ತಿಯನ್ನು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ, ಹೀಗಾಗಿ ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಇಂಧನ ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಭಾರತದಲ್ಲಿ, ಈ ಏರೋಬೋಟುಗಳು ವಿಕೋಪ ನಿರ್ವಹಣೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೆರವಾಗಲಿದೆ. ವಿಶೇಷವಾಗಿ ಮಾನ್ಸೂನ್ ಸಮಯದಲ್ಲಿ ನೂರಾರು ಜೀವಗಳನ್ನು ಉಳಿಸಲು ಸಹಾಯವಾಗಲಿದೆ.
ಹೋಶಿಯಾರ್ ಸಿಂಗ್ ಅವರು ಹಕ್ಕುಸ್ವಾಮ್ಯದ ರಿಜಿಸ್ಟ್ರಾರ್ ಆಗಿ ನೇಮಕ
ಭಾರತೀಯ ಟೆಲಿಕಾಂ ಸೇವೆಯ 1994 ಬ್ಯಾಚ್ ಅಧಿಕಾರಿಯಾಗಿದ್ದ ಹೋಶಿಯಾರ್ ಸಿಂಗ್ ಅವರನ್ನು ಹಕ್ಕುಸ್ವಾಮ್ಯದ ರಿಜಿಸ್ಟ್ರಾರ್ ಆಗಿ ಮುಂದಿನ ಐದು ವರ್ಷಗಳ ಕಾಲ ನೇಮಕ ಮಾಡಿ ತರಬೇತಿ ಇಲಾಖೆ (DoPT) ಆದೇಶದಂತೆ ಹೊರಡಿಸಿದೆ.
ಹಕ್ಕುಸ್ವಾಮ್ಯ ಕಚೇರಿಯು ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸಂಸ್ಥೆಯು ರಿಜಿಸ್ಟ್ರಾರ್ ಆಫ್ ಕಾಪಿರೈಟ್ಸ್ನ ನಿಯಂತ್ರಣದಲ್ಲಿದೆ. ಸಂಗೀತ ಮತ್ತು ಚಲನಚಿತ್ರೋದ್ಯಮ ಸೇರಿದಂತೆ ಇತರೆ ಹಿತಾಸಕ್ತಿಗಳನ್ನು ಕಾಪಾಡುವುದು ಸಂಸ್ಥೆಯ ಉದ್ದೇಶವಾಗಿದೆ.
ಹಕ್ಕುಸ್ವಾಮ್ಯ ಕಾಯಿದೆ ಸೆಕ್ಷನ್ 9ರ ಅಡಿಯಲ್ಲಿ ಹಕ್ಕುಸ್ವಾಮ್ಯ ಕಚೇರಿಯನ್ನು ಸ್ಥಾಪಿಸಲಾಗಿದೆ. ಹಕ್ಕುಸ್ವಾಮ್ಯ ರಿಜಿಸ್ಟಾರ್ ರವರನ್ನು ಕೇಂದ್ರ ಸರಕಾರ ನೇಮಕ ಮಾಡುತ್ತದೆ. ಕೇಂದ್ರ ಸರ್ಕಾರದ ಅಧಿವೀಕ್ಷಣೆ ಮತ್ತು ನಿರ್ದೇಶನಗಳ ಅಡಿಯಲ್ಲಿ ಹಕ್ಕುಸ್ವಾಮ್ಯ ರಿಜಿಸ್ಟಾರ್ ಕಾರ್ಯನಿರ್ವಹಿಸುತ್ತಾರೆ.
ಶ್ರೀಲಂಕಾಕ್ಕೆ $318 ಮಿಲಿಯನ್ ಸಾಲ ನೀಡುವ ಒಪ್ಪಂದಕ್ಕೆ ಭಾರತ ಸಹಿ
ಶ್ರೀಲಂಕಾದಲ್ಲಿ ರೈಲ್ವೆ ವಲಯವನ್ನು ಅಭಿವೃದ್ಧಿಪಡಿಸಲು 318 ಮಿಲಿಯನ್ ಯುಎಸ್ ಡಾಲರ್ ಒದಗಿಸಲು ಭಾರತ ಶ್ರೀಲಂಕಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಶ್ರೀಲಂಕಾದ ಹಣಕಾಸು ಮತ್ತು ಮಾಸ್ ಮಾಧ್ಯಮದ ಸಚಿವಾಲಯ ಮತ್ತು ಭಾರತದ ರಫ್ತು ಆಮದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರ ನಡುವೆ ಕೊಲಂಬೊದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಹಿನ್ನಲೆ:
2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶ್ರೀಲಂಕಾಕ್ಕೆ ಭೇಟ ನೀಡಿದ ಸಮಯದಲ್ಲಿ ಶ್ರೀಲಂಕಾದ ರೈಲ್ವೆ ವಲಯ ಅಭಿವೃದ್ಧಿಗಾಗಿ 318 ಮಿಲಿಯನ್ ಡಾಲರ್ ಸಾಲವನ್ನು ಘೋಷಿಸಿದ್ದರು. ಪ್ರಧಾನಿ ಮೋದಿಯವರ ಭೇಟಿಯು 1987ರಿಂದ ಭಾರತದ ಪ್ರಧಾನಮಂತ್ರಿಯೊಬ್ಬರು ಶ್ರೀಲಂಕಾಕ್ಕೆ ನೀಡಿದ ಮೊದಲ ಸ್ವತಂತ್ರ ದ್ವಿಪಕ್ಷೀಯ ಭೇಟಿಯಾಗಿದೆ.
ಹಿಂದೂ ಮಹಾಸಾಗರ ರಾಷ್ಟ್ರದಲ್ಲಿ ಚೀನೀ ಉಪಸ್ಥಿತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಈ ನಿರ್ಣಯವನ್ನು ಕೈಗೊಂಡಿದೆ. ಶ್ರೀಲಂಕಾದಲ್ಲಿ ಮುಖ್ಯವಾಗಿ ಬಂದರುಗಳಲ್ಲಿ ಚೀನಾ ಹೂಡಿಕೆಗಳನ್ನು ಮಾಡಿದೆ. ಇದು ಚೀನಾದ “ಬೆಲ್ಟ್ ಮತ್ತು ರೋಡ್” ಉಪಕ್ರಮದ ಭಾಗವಾಗಿದೆ ಎಂದು ಚೀನಾ ಹೇಳುತ್ತಿದ್ದರೂ, ಹಿಂದೂ ಮಹಾಸಾಗರ ಮೂಲಕ ಯುರೋಪ್ ಮತ್ತು ಆಫ್ರಿಕಾಗಳೊಂದಿಗೆ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿದೆ.
ಪ್ರಸ್ತುತ, ಶ್ರೀಲಂಕಾಕ್ಕೆ ಭಾರತೀಯ ಅಭಿವೃದ್ಧಿ ನೆರವು ಪ್ರಾಥಮಿಕವಾಗಿ ಮೂಲಸೌಕರ್ಯ, ಜೀವನೋಪಾಯ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಮತ್ತು ಸಾಮರ್ಥ್ಯ ಅಭಿವೃದ್ದಿಗಳಿಗೆ ಬಳಕೆಯಾಗುತ್ತಿದೆ. ಭಾರತವು ಸುಮಾರು 40 ವರ್ಷಗಳಿಂದ ಶ್ರೀಲಂಕಾಕ್ಕೆ ಪ್ರಮುಖ ಅಭಿವೃದ್ಧಿ ಪಾಲುದಾರನಾಗಿ ಮುಂದುವರೆದಿದೆ. ಇಲ್ಲಿಯವರೆಗೆ ಭಾರತ ಶ್ರೀಲಂಕಾದಲ್ಲಿ ರೈಲ್ವೆ ವಲಯವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ನಾಲ್ಕು ಬಾರಿ ನೆರವು ನೀಡಿದ್ದು, ಅದರ ಮೊತ್ತ 966 ದಶಲಕ್ಷ ಡಾಲರ್ ಆಗಿದೆ. ದಕ್ಷಿಣ ಮತ್ತು ಉತ್ತರ ರೈಲ್ವೆ ಮಾರ್ಗಗಳನ್ನು ಸುಧಾರಿಸಲು ಶ್ರೀಲಂಕಾವು ಈ ಸೌಕರ್ಯಗಳನ್ನು ಬಳಸಿಕೊಳ್ಳುತ್ತಿದೆ.
ಜಾಗತಿಕ ತಂಬಾಕು ನಿಯಂತ್ರಣಕ್ಕೆ WHO ಡೈರಕ್ಟರ್ ಜನರಲ್ ವಿಶೇಷ ಗುರುತಿಸುವಿಕೆ ಪ್ರಶಸ್ತಿ
ಜಾಗತಿಕ ತಂಬಾಕು ನಿಯಂತ್ರಣಕ್ಕಾಗಿ WHO ಡೈರೆಕ್ಟರ್ ಜನರಲ್ ವಿಶೇಷ ಗುರುತಿಸುವಿಕೆ ಪ್ರಶಸ್ತಿಯನ್ನು ಕೇಂದ್ರ ಮತ್ತು ಆರೋಗ್ಯ ಕಲ್ಯಾಣ ಸಚಿವ ಜೆ ಪಿ ನಡ್ಡ ಅವರಿಗೆ ನೀಡಲಾಗಿದೆ. ‘WHO ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕರಾದ ಡಾ. ಪೂನಂ ಖೇತಾಪಾಲ್ ಸಿಂಗ್ ಅವರು ಈ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.
ಭಾರತದ ವಸ್ತುಸ್ಥಿತಿ:
- ಭಾರತದಲ್ಲಿ 27 ಕೋಟಿ ಜನರು ತಂಬಾಕನ್ನು ಬಳಸುತ್ತಿದ್ದು, ವಿಶ್ವದ ಎರಡನೇ ಅತಿದೊಡ್ಡ ತಂಬಾಕು ಸೇವಿಸುವ ದೇಶವಾಗಿದೆ.
- ದೇಶದಲ್ಲಿ ತಂಬಾಕು ಸೇವನೆ ಕಡಿಮೆಗೊಳಿಸಲು ಸರಕಾರ ವಿವಿಧ ಕ್ರಮಗಳನ್ನು ಆರಂಭಿಸಿದೆ. ತಂಬಾಕು ಮುಕ್ತಿಗೆ ಟೋಲ್-ಫ್ರೀ ನ್ಯಾಷನಲ್ ಟಾಬಾಕೊ ಕ್ವಿಟ್ ಲೈನ್, mCessation ಸೇವೆಗಳನ್ನು, ತಂಬಾಕು ಉತ್ಪನ್ನಗಳ ಮೇಲೆ ಎರಡೂ ಕಡೆಗಳಲ್ಲಿ 85% ನಷ್ಟು ಆರೋಗ್ಯ ಎಚ್ಚರಿಕೆಗಳನ್ನು ಹೊಂದಿರುವ ಚಿತ್ರಗಳು, ಎರಡನೆಯ ಸುತ್ತಿನ ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ (GATS), ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ವಿಸ್ತರಣೆಗಾಗಿ 12ನೇ ಪಂಚವಾರ್ಷಿಕ ಯೋಜನೆಯಡಿ ಹೂಡಿಕೆ ಹೆಚ್ಚಳ ಕ್ರಮ 2015ರ ಜಾಗತಿಕ ತಂಬಾಕು ನಿಯಂತ್ರಣ ವರದಿಯಲ್ಲಿ WHO ನಿಂದ ಅತ್ಯುತ್ತಮ ಅಭ್ಯಾಸ ಎಂದು ಗುರುತಿಸಲ್ಪಟ್ಟಿದೆ. ಈ ಮೇಲಿನ ಕ್ರಮಗಳನ್ನು ಹೊರತುಪಡಿಸಿ ಆರೋಗ್ಯ ಸಚಿವಾಲಯವು ಹೊಗೆರಹಿತ ತಂಬಾಕು ಉತ್ಪನ್ನಗಳ ನಿಷೇಧ ಮತ್ತು ತಂಬಾಕು ಮುಕ್ತ ಚಲನಚಿತ್ರ ಮತ್ತು ದೂರದರ್ಶನ ನೀತಿಯನ್ನು ಬಲಪಡಿಸುವತ್ತ ಶ್ರಮವಹಿಸುತ್ತಿದೆ.
- ಸರಕಾರ, NGOಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳಿಂದ ತೆಗೆದುಕೊಳ್ಳಲಾದ ವಿವಿಧ ಕ್ರಮಗಳ ಪರಿಣಾಮವಾಗಿ, ದೇಶದಲ್ಲಿ ತಂಬಾಕು ಬಳಕೆದಾರರ ಪ್ರಮಾಣ 81 ಲಕ್ಷಗಳಷ್ಟು ಕಡಿಮೆಯಾಗಿದೆ ಮತ್ತು ಯುವಕರಲ್ಲಿ ತಂಬಾಕು ಸೇವನ ಕೂಡಾ ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ. ವಯಸ್ಕರಲ್ಲಿ (15-17 ವರ್ಷಗಳು) ಶೇ. 54%ರಷ್ಟು ಮತ್ತು 18-24 ವರ್ಷ ವಯಸ್ಸಿನವರಲ್ಲಿ ಶೇ. 28% ನಷ್ಟು ತಂಬಾಕು ಬಳಕೆ ಕಡಿಮೆಯಾಗಿದೆ.
ಸೌರಮಂಡಲದ ಅತ್ಯಂತ ಬಿಸಿ ಗ್ರಹKELT-9b
ಸೌರಮಂಡಲದಲ್ಲೇ ಅತ್ಯಂತ ಬಿಸಿ ಗ್ರಹವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು, ಈ ಉಪಗ್ರಹಕ್ಕೆ ಕೆಇಎಲ್‍ಟಿ-9ಬಿ ಎಂದು ಹೆಸರಿಡಲಾಗಿದೆ. ಈ ಗ್ರಹ ಸೌರಮಂಡಲದಲ್ಲಿರುವ ಬಹುತೇಕ ಎಲ್ಲ ನಕ್ಷತ್ರಗಳಿಗಿಂತಲೂ ಹೆಚ್ಚು ಉಷ್ಣತೆಯನ್ನು ಹೊಂದಿದೆ. ಈ ಕುರಿತ ಅಧ್ಯಯನ ವರದಿ ನೇಚರ್ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.
ಪ್ರಮುಖಾಂಶಗಳು:
- ಈ ಗ್ರಹವು KELT-9 ಎನ್ನುವ ದೈತ್ಯ ನಕ್ಷತ್ರವನ್ನು ಒಂದೂವರೆ ದಿನದಲ್ಲಿ ಸುತ್ತುತ್ತಿದೆ.
- ಗ್ರಹದ ದಿನದ ಉಷ್ಣತೆಯು 4,326 ಡಿಗ್ರಿ ಸೆಲ್ಷಿಯಸ್ ಆಗಿದೆ ಮತ್ತು ಇದು ಸೂರ್ಯನಗಿಂತ 926 ಡಿಗ್ರಿ ಸೆಲ್ಸಿಯಸ್ ತಂಪಾಗಿರುತ್ತದೆ.
- ಈ ಗ್ರಹವು ಭೂಮಿಯಿಂದ 650 ಬೆಳಕಿನ ವರ್ಷಗಳ ದೂರವಿದ್ದು, ಧೂಮಕೇತುವಿನಂತೆ ಒಂದು ಬೃಹತ್, ಗಾಢವಾದ ಅನಿಲ ಬಾಲದಂತೆ ಹೋಲುತ್ತದೆ.
- ಇದರ ನಕ್ಷತ್ರ KELT-9 ನಿಂದ ಗ್ರಹವು ಅನುಭವಿಸಿದ ನೇರಳಾತೀತ ವಿಕಿರಣವು ತುಂಬಾ ತೀವ್ರವಾಗಿದ್ದು, ಗ್ರಹವು ಆವಿಯಾಗುತ್ತಿರುವ ಅನಿಲ ಬಾಲವನ್ನು ಉತ್ಪತ್ತಿ ಮಾಡುತ್ತದೆ.
- ಗುರುಗ್ರಹದಂತೆಯೇ ಇರುವ ಈ ಗ್ರಹವು ಗುರುಗ್ರಹಕ್ಕಿಂತ8 ಪಟ್ಟು ಹೆಚ್ಚು ದೊಡ್ಡದಾಗಿದೆ. ಆದರೆ ಗುರುಗ್ರಹಕ್ಕಿಂತ ಅರ್ಧದಷ್ಟು ಸಾಂದ್ರತೆಯನ್ನು ಹೊಂದಿದೆ.
- ಇದರ ಆತಿಥೇಯ ನಕ್ಷತ್ರದ ತೀವ್ರ ವಿಕಿರಣತೆ ಕಾರಣದಿಂದಾಗಿ ಗ್ರಹದ ವಾತಾವರಣವು ಬಲೂನಿನಂತೆ ಉಬ್ಬಿಕೊಂಡಿದೆ. ಸಮೂಹವನ್ನು ಪರಿಗಣಿಸಿ ಇದನ್ನು ಗ್ರಹ ಎಂದು ವರ್ಗೀಕರಿಸಲಾಗಿದೆ ಆದರೆ ಅದರ ವಾತಾವರಣವು ಯಾವುದೇ ಪರಿಚಿತ ಗ್ರಹಕ್ಕೆ ಹೋಲುತಿಲ್ಲ.
ಎಕ್ಸೋಪ್ಲಾನೆಟ್: ಎಕ್ಸೋಪ್ಲಾನೆಟ್ ಎಂದರೆ ಸೂರ್ಯನ ಕಕ್ಷೆಯಲ್ಲಿಲ್ಲದ ಗ್ರಹ ಎಂದರ್ಥ. ಬದಲಾಗಿ, ಇದು ಸ್ಟೆಲ್ಲರ್ ರೆಮನಂಟ್, ಬ್ರೌನ್ ದ್ವಾರ್ಫ್ ಎನ್ನುವ ಎಂಬ ಮತ್ತೊಂದು ನಕ್ಷತ್ರಕ್ಕೆ ಸುತ್ತುತ್ತಿದೆ.
Comment
When ll u add june month current affairs
Send me Any Other Questions
Upload june month current affairs