ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಏಪ್ರಿಲ್,16,17,2017

Question 1

1. 2017 ಟೈಮ್ ನಿಯತಕಾಲಿಕೆಯ ಓದುಗರ ಸಮೀಕ್ಷೆಯಂತೆ “ಅತಿ ಪ್ರಭಾವಶಾಲಿ ವ್ಯಕ್ತಿ” ಪ್ರಶಸ್ತಿಯನ್ನು ಯಾರು ಪಡೆದುಕೊಂಡಿದ್ದಾರೆ?

A
ಲೆನಿ ರೊಬ್ರೆಡೋ
B
ರೋಡ್ರಿಗೋ ಡಟರ್ಟೆ
C
ನರೇಂದ್ರ ಮೋದಿ
D
ಜಸ್ಟಿನ್ ಟ್ರುಡೆವ್
Question 1 Explanation: 

(ವಿವರಣೆ:- ಫಿಲಿಪೈನ್ಸ್ ದೇಶದ ಅಧ್ಯಕ್ಷ ರೋಡ್ರಿಗೊ ಡಟರ್ಟೆ ರವರು 2017 ಟೈಮ್ ನಿಯತಕಾಲಿಕೆಯ ಓದುಗರ ಸಮೀಕ್ಷೆಯಂತೆ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. TIME ನ ಸಂಪಾದಕರು ಆಯ್ಕೆಮಾಡಿದ ಅಧಿಕೃತ ಟೈಮ್ 100 ಪಟ್ಟಿಯನ್ನು ಏಪ್ರಿಲ್ 20, 2017 ರಂದು ಘೋಷಿಸಲಾಯಿತು.)

Question 2

2. ರಾಜ್ಯಗಳ ಉನ್ನತ ಶಿಕ್ಷಣ ಯೋಜನೆಗಳಿಗೆ ಏಕಕಾಲದಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ, ಕೇಂದ್ರ ಸರ್ಕಾರವು RUSA ಪೋರ್ಟಲ್ ಅನ್ನು ಪ್ರಾರಂಭಿಸಿದೆ. 'RUSA' ಎಂದರೇನು?

A
ರಾಷ್ಟ್ರೀಯ ಉಚ್ಚಾತರ್ ಶಿಕ್ಷಾ ಅಭಿಯಾನ್
B
ರಾಷ್ಟ್ರೀಯ ಉತ್ತಮ್ ಶಿಕ್ಷಾ ಅಭಿಯಾನ್
C
ರಾಷ್ಟ್ರೀಯ ಉನ್ಮುಖ್ತ್ ಶಿಕ್ಷಾ ಅಭಿಯಾನ
D
ರಾಷ್ಟ್ರೀಯ ಉನ್ನಾಶೀಲ್ ಶಿಕ್ಷಾ ಅಭಿಯಾನ್
Question 2 Explanation: 

(ವಿವರಣೆ:- ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ರವರು ಹೊಸದಿಲ್ಲಿಯಲ್ಲಿ "ರಾಷ್ಟ್ರೀಯ ಉಚ್ಛಾತರ್ ಶಿಷ್ಯ ಅಭಿಯಾನ" ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಉದ್ಘಾಟಿಸಿದರು. ಉನ್ನತ ಶಿಕ್ಷಣದ ಯೋಜನೆಗಳು, ನಿರ್ಧಾರಗಳು ಮತ್ತು ರಾಜ್ಯಗಳ ಸಂಪನ್ಮೂಲಗಳ ಕುರಿತಾದ ಮಾಹಿತಿಗಾಗಿ ಪೋರ್ಟಲ್ ಏಕ ಗವಾಕ್ಷಿ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ RUSA ಯ ಮೊಬೈಲ್ ಅಪ್ಲಿಕೇಶನ್ ಅಡಿಯಲ್ಲಿನ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ದೊರೆಯುವಂತೆ ಮಾಡಿದೆ.)

Question 3

3. ರಾಜ್ಯದಲ್ಲಿ ತೃತೀಯ ಲಿಂಗಿಗಳನ್ನು ಮತದಾರರಾಗಿ ನೋಂದಾಯಿಸಲು ವಿಶೇಷ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಮೊದಲ ಭಾರತೀಯ ರಾಜ್ಯ ಯಾವುದು?

A
ಕೇರಳ
B
ಮಹಾರಾಷ್ಟ್ರ
C
ಕರ್ನಾಟಕ
D
ಒಡಿಶಾ
Question 3 Explanation: 

(ವಿವರಣೆ:- ರಾಜ್ಯದಲ್ಲಿ ತೃತೀಯಲಿಂಗಿಗಳನ್ನು ಮತದಾರರಾಗಿ ನೋಂದಾಯಿಸಿಕೊಳ್ಳುವುದಕ್ಕೆ ಮಹಾರಾಷ್ಟ್ರ ರಾಜ್ಯ ಸರ್ಕಾರ ವಿಶೇಷ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಮೊದಲ ಭಾರತೀಯ ರಾಜ್ಯವಾಗಿದೆ. ಚುನಾವಣಾ ಆಯೋಗದ ರಾಜ್ಯ ಶಾಖೆ ಏಪ್ರಿಲ್ 15 ರಂದು ಚಾಲನೆ ನೀಡಲಾಗಿದೆ, ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ ಮಹಾರಾಷ್ಟ್ರವು 10 ಲಕ್ಷ ತೃತೀಯ ಲಿಂಗಿಗಳನ್ನು ಹೊಂದಿದ್ದು, ಸದ್ಯ 1,700 ಮಂದಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ.)

Question 4

4. ಯಾವ ರಾಜ್ಯ ಸರ್ಕಾರ ಇತ್ತೀಚೆಗೆ 'ನಿರುದ್ಯೋಗ ಭತ್ಯೆ ಯೋಜನೆಯನ್ನು' ಪ್ರಾರಂಭಿಸಿದೆ?

A
ಆಂಧ್ರ ಪ್ರದೇಶ
B
ಮಧ್ಯ ಪ್ರದೇಶ
C
ಹಿಮಾಚಲ ಪ್ರದೇಶ
D
ಉತ್ತರ ಪ್ರದೇಶ
Question 4 Explanation: 

(ವಿವರಣೆ:-ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಇತ್ತೀಚೆಗೆ ಹಿಮಾಚಲ ಪ್ರದೇಶದ 70 ನೇ ರಾಜ್ಯೋತ್ಸವ ದಿನದಲ್ಲಿ ರಾಜ್ಯ ಮಟ್ಟದಲ್ಲಿ 'ನಿರುದ್ಯೋಗ ಭತ್ಯೆ ಯೋಜನೆಯನ್ನು' ಪ್ರಾರಂಭಿಸಿದ್ದಾರೆ. ಯೋಜನೆಯ ಪ್ರಕಾರ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ರೂ 1,500 ನೀಡಲಾಗುವುದು ಎಂದು ತಿಳಿಸಿದೆ.)

Question 5

5. ವಾಸ್ತುಶಿಲ್ಪ ವಿದ್ಯಾರ್ಥಿಗಳಿಗಾಗಿ ಯಾವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು 'ವಾಸ್ತು ಶಾಸ್ತ್ರ' ತರಗತಿಗಳನ್ನು ಪ್ರಾರಂಭಿಸಿದೆ?

A
ಐಐಟಿ ಖರಗ್ ಪುರ
B
ಐಐಟಿ ಬಾಂಬೆ
C
ಐಐಟಿ ಮದ್ರಾಸ್
D
ಐಐಟಿ ಇಂದೋರ್
Question 5 Explanation: 

(ವಿವರಣೆ:-ಭಾರತದ ಹಳೆಯ ಮತ್ತು ಅತಿದೊಡ್ಡ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ, ಐಐಟಿ ಖರಗ್ ಪುರ 2017-18 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ವಾಸ್ತುಶಿಲ್ಪ ವಿದ್ಯಾರ್ಥಿಗಳಿಗಾಗಿ "ವಾಸ್ತು ಶಾಸ್ತ್ರ" ತರಗತಿಗಳನ್ನು ಪ್ರಾರಂಭಿಸಿದೆ. ಪದವಿಪೂರ್ವ ವಿದ್ಯಾರ್ಥಿಗಳಿಗೆ ಮೂಲ ವಿನ್ಯಾಸ ಮತ್ತು ವಾಸ್ತುಶಿಲ್ಪದ ಇತಿಹಾಸದ ಕೋರ್ಸುಗಳನ್ನು ಪ್ರಾರಂಭಿಸಿದೆ. ಅಲ್ಲದೆ ಸ್ನಾತಕೋತ್ತರ ಮಟ್ಟದಲ್ಲಿ ಸಾಮಾಜಿಕ ತತ್ವಗಳ ಪರಿಕಲ್ಪನೆಗಳು, ಪವಿತ್ರ ಬಲಿಪೀಠಗಳು ಮತ್ತು ವಿನ್ಯಾಸದ ಸಂಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ.)

Question 6

6. 6 ನೇ ಆವೃತ್ತಿಯ ಎಂ.ಎಸ್. ಸ್ವಾಮಿನಾಥನ್ ಪ್ರಶಸ್ತಿಯನ್ನು ಯಾರಿಗೆ ನೀಡಿದೆ?

A
ಸಿ. ಪಾರ್ಥಸಾರಥಿ
B
ಎಂ.ವೈ. ಸಕ್ಸೇನಾ
C
ಎಂ.ವಿ.ಆರ್. ಪ್ರಸಾದ್
D
ಆರ್.ಆರ್. ಹಾಂಚಿನಲ್
Question 6 Explanation: 

(ವಿವರಣೆ:-ಡಾ. ರಾಯಪ್ಪ ರಾಮಪ್ಪ ಹಂಚಿನಲ್ ರವರಿಗೆ 6 ನೇ ಆವೃತ್ತಿಯ ಪ್ರತಿಷ್ಠಿತ ಎಂ.ಎಸ್. ಸ್ವಾಮಿನಾಥನ್ ಪ್ರಶಸ್ತಿ ನೀಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಡಾ ಹಾಂಚಿನಲ್ ರವರಿಗೆ ಸ್ವಾಮಿನಾಥನ್ ಪ್ರಶಸ್ತಿ ಲಭಿಸಿದೆ. ಉಷ್ಣ ಮತ್ತು ಶುಷ್ಕ ಪರಿಸರ ಪ್ರದೇಶಗಳಲ್ಲಿ ಬೆಳೆ ಸುಧಾರಣೆ, ಬೀಜ ಉತ್ಪಾದನಾ ತಂತ್ರಜ್ಞಾನ ಮತ್ತು ಸಸ್ಯ ಪ್ರಭೇದಗಳಲ್ಲಿ ಬೌದ್ಧಿಕ ರಕ್ಷಣೆ ಕ್ಷೇತ್ರದಲ್ಲಿ ಗಣನೀಯ ಸೇವೆ ನೀಡಿದ್ದಾರೆ. ಅವರು ಸಸ್ಯ ವೈವಿಧ್ಯತೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ, ನವದೆಹಲಿಯ ಅಧ್ಯಕ್ಷರಾಗಿದ್ದಾರೆ.)

Question 7

7. ಬಾರ್ಮರ್ ಸಂಸ್ಕರಣಾಗಾರಕ್ಕಾಗಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ (HPCL) ನೊಂದಿಗೆ ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ಒಪ್ಪಂದಕ್ಕೆ ಸಹಿ ಹಾಕಿದೆ?

A
ಉತ್ತರ ಪ್ರದೇಶ
B
ಮಧ್ಯಪ್ರದೇಶ
C
ರಾಜಸ್ಥಾನ
D
ಗುಜರಾತ್
Question 7 Explanation: 

(ವಿವರಣೆ:-ರಾಜಸ್ಥಾನ ರಾಜ್ಯ ಸರ್ಕಾರ ಇತ್ತೀಚೆಗೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನೊಂದಿಗೆ ರೂ 43,129 ಕೋಟಿ ಗಾತ್ರದ ಬಾರ್ಮರ್ ಸಂಸ್ಕರಣಾಗಾರ ಒಪ್ಪಂದಕ್ಕೆ ಸಹಿ ಹಾಕಿದೆ. BS-6 ಸ್ಟ್ಯಾಂಡರ್ಡ್ ಇಂಧನವನ್ನು ಉತ್ಪಾದಿಸುವ ದೇಶದ ಮೊದಲ ಸಂಸ್ಕರಣಾಗಾರ ಇದಾಗಿದೆ. ಯೋಜನೆಯಲ್ಲಿ 26% ಪಾಲನ್ನು ರಾಜ್ಯ ಸರಕಾರ ಹೊಂದಿರುತ್ತದೆ, ಉಳಿದುದನ್ನು HPCL ಭರಿಸಲಿದೆ. ಯೋಜನೆಗಾಗಿ 4800 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ನೀಡಿದೆ. ಯೋಜನೆಯು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ)

Question 8

8. ಡಾ. ಪಡುರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿ-2017 ಯಾರು ಪ್ರದಾನ ಮಾಡಲಾಗಿದೆ?

A
ಎ.ವಿ.ನರಸಿಂಹ ಮೂರ್ತಿ
B
ಎನ್ ಜಯರಾಮ್
C
ಬಿ ಕೆ ಚಂದ್ರಶೇಖರ್
D
ಪಿ ಶ್ರೀಪತಿ ತಾಂಟ್ರಿ
Question 8 Explanation: 

(ವಿವರಣೆ:-ಪ್ರಸಿದ್ಧ ಇತಿಹಾಸಕಾರ ಮತ್ತು ಪುರಾತತ್ವಶಾಸ್ತ್ರಜ್ಞ ಪ್ರೊಫೆಸರ್ ಎ.ವಿ ನರಸಿಂಹ ಮೂರ್ತಿ, ರವರಿಗೆ ಪ್ರತಿಷ್ಠಿತ ಡಾ. ಪಡುರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿಯನ್ನು ಭಾರತೀಯ ಪುರಾತತ್ವ ಶಾಸ್ತ್ರ ಮತ್ತು ಪ್ರಾಚೀನ ಇತಿಹಾಸಕ್ಕೆ ನೀಡಿದ ಕೊಡುಗೆಗಾಗಿ ನೀಡಿದ್ದಾರೆ. ಉಡುಪಿ ಮೂಲದ ಡಾ. ಪಡುರು ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್ 2010 ರಲ್ಲಿ ಇತಿಹಾಸ, ಪುರಾತತ್ತ್ವ ಶಾಸ್ತ್ರ, ಸಮಾಜಶಾಸ್ತ್ರ ಮತ್ತು ಇತರ ಸಾಮಾಜಿಕ ವಿಜ್ಞಾನ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ ಪ್ರಶಸ್ತಿಯನ್ನು ಸ್ಥಾಪಿಸಿದೆ.)

Question 9

9. ಗ್ಲೋಬಲ್ ಎಕ್ಸಿಬಿಷನ್ ಸರ್ವೀಸಸ್ ನ 3 ನೇ ಆವೃತ್ತಿ ಯ(GES - 2017) ಆತಿಥ್ಯ ವಹಿಸಿರುವ ದೇಶ ಯಾವುದು?

A
ಚೀನಾ
B
ಜಪಾನ್
C
ದಕ್ಷಿಣ ಕೊರಿಯಾ
D
ಭಾರತ
Question 9 Explanation: 

(ವಿವರಣೆ:-ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಏಪ್ರಿಲ್ 17, 2017 ರಂದು ಸರ್ವಿಸಸ್ ಗ್ಲೋಬಲ್ ಎಕ್ಸಿಬಿಷನ್ (ಜಿಇಎಸ್-2017) ನ 3 ನೇ ಆವೃತ್ತಿ ಉದ್ಘಾಟಿಸಿದ್ದಾರೆ. GES-2017ನಲ್ಲಿ ಭಾರತ ತನ್ನ ಸೇವೆಗಳ ವಲಯಗಳಲ್ಲಿ ರಫ್ತುನ್ನು ಹೆಚ್ಚಿಸಲು ತನ್ನ ಸಾಮರ್ಥ್ಯವನ್ನು ಅಭಿವ್ಯಕ್ತಗೊಳಿಸಿದೆ. ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ ಮತ್ತು ಆತಿಥ್ಯ, ಲಾಜಿಸ್ಟಿಕ್ಸ್, ಶಿಕ್ಷಣ ಮತ್ತು ಹಣಕಾಸು ಸೇವೆಗಳನ್ನು ಒಳಗೊಂಡಂತೆ ಒಟ್ಟು 20 ಸೇವಾ ವಲಯಗಳ ಬಗ್ಗೆ ಗಮನಹರಿಸಲಿದೆ. )

Question 10

10. ಪಂಚಾಯಿತಿಗಳ ಚುನಾಯಿತ ಮಹಿಳಾ ಪ್ರತಿನಿಧಿಗಳ ರಾಷ್ಟ್ರವ್ಯಾಪಿ ತರಬೇತಿ ಕಾರ್ಯಕ್ರಮವನ್ನು ಯಾವ ರಾಷ್ಟ್ರೀಯ ಸಚಿವಾಲಯವು ಪ್ರಾರಂಭಿಸಿದೆ?

A
ಗೃಹ ಸಚಿವಾಲಯ
B
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
C
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
D
ಬುಡಕಟ್ಟು ವ್ಯವಹಾರಗಳ ಸಚಿವಾಲಯ
Question 10 Explanation: 

(ವಿವರಣೆ:-ಪಂಚಾಯತ್ ರಾಜ್ ಸಚಿವಾಲಯದ ಸಹಯೋಗದೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪಂಚಾಯಿತಿಗಳ ಚುನಾಯಿತ ಮಹಿಳಾ ಪ್ರತಿನಿಧಿಗಳ (EWRs) ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ರಾಷ್ಟ್ರವ್ಯಾಪಿ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.)

There are 10 questions to complete.

[button link=”http://www.karunaduexams.com/wp-content/uploads/2017/06/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಏಪ್ರಿಲ್16172017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಏಪ್ರಿಲ್,16,17,2017”

  1. Please Upload quick per month QUiz Objective type

  2. sir pls Jun month current events upload madi

  3. Madam/Sir ….

    Please june and july month current events upload madi

Leave a Comment

This site uses Akismet to reduce spam. Learn how your comment data is processed.