ಪ್ರಸ್ತುತ ಕೆ.ಎ.ಎಸ್ ಪರೀಕ್ಷೆ ಪೇಪರ್-2 ಸಂಬಂಧಿಸಿದಂತೆ ಪ್ರಶ್ನೋತ್ತರಗಳು ಕೆ.ಎ.ಎಸ್ (KAS)  ಪರೀಕ್ಷೆಗೆ  ಸಹಾಯವಾಗಲಿದೆ.

ಕೆ.ಎ.ಎಸ್ (KAS) ಪ್ರಶ್ನೋತ್ತರಗಳು4

Question 1

1. ಈ ಕೆಳಗಿನ ಯಾವ ಜಿಲ್ಲೆಯಲ್ಲಿ “ಗೋಡಂಬಿ ತಂತ್ರಾಂಶ ಅಭಿವೃದ್ದಿ ಕೇಂದ್ರ” ಸ್ಥಾಪಸಿಲಾಗುತ್ತಿದೆ?

A
ಉಡುಪಿ
B
ಉತ್ತರ ಕನ್ನಡ
C
ಬೆಳಗಾವಿ
D
ಶಿವಮೊಗ್ಗ
Question 1 Explanation: 
ಉತ್ತರ ಕನ್ನಡ

ಉತ್ತರ ಕನ್ನಡ ಜಿಲ್ಲೆಯ ಕುಮುಟಾದಲ್ಲಿ ಗೋಡಂಬಿ ತಂತ್ರಾಂಶ ಅಭಿವೃದ್ದಿ ಕೇಂದ್ರ” ಸ್ಥಾಪಸಿಲಾಗುವುದು.

Question 2

2. 2011 ಜನಗಣತಿ ಪ್ರಕಾರ ಕರ್ನಾಟಕದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ ___ ರಷ್ಟು ಜನಸಂಖ್ಯೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ?

A
ಶೇ 59.78
B
ಶೇ 61.43
C
ಶೇ 65.54%
D
ಶೇ 66.40%
Question 2 Explanation: 
ಶೇ 61.43
Question 3

3. ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I) ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.

II)ಕೇವಲ ರಾಜ್ಯ ಸರ್ಕಾರ ಪ್ರಾಯೋಜಿತ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸುವುದು ನಿಗಮದ ಗುರಿಯಾಗಿದೆ

III) ಈ ನಿಗಮವನ್ನು 20.4.2000 ರಲ್ಲಿ ಸ್ಥಾಪಿಸಲಾಗಿದೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
ಹೇಳಿಕೆ I
B
ಹೇಳಿಕೆ I & II
C
ಹೇಳಿಕೆ III
D
ಮೇಲಿನ ಎಲ್ಲವೂ
Question 3 Explanation: 

ಹೇಳಿಕೆ III ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರಾಯೋಜಿತ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸುವುದು ನಿಗಮದ ಗುರಿಯಾಗಿದೆ. ಈ ನಿಗಮವನ್ನು 20.4.2000 ರಲ್ಲಿ ಸ್ಥಾಪಿಸಲಾಗಿದೆ.

Question 4

4. ದೇವರಾಜ ಅರಸು ವಸತಿ ಯೋಜನೆಯನ್ನು ರಾಜ್ಯ ಸರ್ಕಾರ ಈ ಕೆಳಗಿನ ಯಾರಿಗಾಗಿ ಆರಂಭಿಸಿದೆ?

A
ಕೊಳಗೇರಿ ನಿವಾಸಿಗಳು
B
ಅಸಂಘಟಿತ ವಲಯದ ಕಾರ್ಮಿಕರು
C
ವಿಶೇಷ ವರ್ಗದ ಜನರು
D
ಬುಡಕಟ್ಟು ಜನಾಂಗದವರು
Question 4 Explanation: 

ವಿಶೇಷ ವರ್ಗದ ಜನರು ದೇವರಾಜ ಅರಸು ವಸತಿ ಯೋಜನೆಯನ್ನು ರಾಜ್ಯ ಸರ್ಕಾರ 2014-15ನೇ ಸಾಲಿನಿಂದ ವಿಶೇಷ ವರ್ಗದ ಜನರಿಗಾರಿ ಅನುಷ್ಠಾನಗೊಳಿಸುತ್ತಿದೆ. ವಿಶೇಷ ವರ್ಗದ ಜನರೆಂದರೆ ವಿಕಲ ಚೇತನರು, ಕುಷ್ಠ ರೋಗದಿಂದ ಗುಣಮುಖರಾದವರು, ಲೈಂಗಿಕ ಕಾರ್ಯಕರ್ತೆಯರು, ವಿಧವೆಯರು, ಮಂಗಳ ಮುಖಿ, ದೇವದಾಸಿಯರು, ಅಲೆಮಾರಿ ಜನಾಂಗದವರು ಇತ್ಯಾದಿ

Question 5

5. ಪಶ್ಚಿಮ ಘಟ್ಟಗಳ ಅಭಿವೃದ್ದಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಗಮನಿಸಿ:

ಅ) ಇದು ಕೇಂದ್ರ ಪುರಸ್ಕೃತ ಯೋಜನೆಯಾಗಿದೆ

ಆ) ಈ ಕಾರ್ಯಕ್ರಮವನ್ನು ರಾಜ್ಯದ 11 ಜಿಲ್ಲೆ 40 ತಾಲ್ಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ

ಸರಿಯಾದ ಹೇಳಿಕೆ ಯಾವುದು?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 5 Explanation: 

ಹೇಳಿಕೆ ಎರಡು ಮಾತ್ರ ಪಶ್ಚಿಮ ಘಟ್ಟಗಳ ಅಭಿವೃದ್ದಿ ಕಾರ್ಯಕ್ರಮ ಕೇಂದ್ರ ಪುರಸ್ಕೃತ ಯೋಜನೆಯಾಗಿತ್ತು. ಆದರೆ 2015-16ರಿಂದ ಇದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. ಈ ಕಾರ್ಯಕ್ರಮವನ್ನು ರಾಜ್ಯದ 11 ಜಿಲ್ಲೆ 40 ತಾಲ್ಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ

Question 6

6. ಈ ಕೆಳಗಿನ ಯಾವ ಜಿಲ್ಲೆಗಳಲ್ಲಿ “ಮರುಭೂಮಿ ಅಭಿವೃದ್ದಿ ಯೋಜನೆ”ಯನ್ನು ಜಾರಿಗೊಳಿಸಲಾಗುತ್ತಿದೆ?

A
ವಿಜಯಪುರ, ದಾವಣಗೆರೆ, ಬಾಗಲಕೋಟೆ, ಕೊಪ್ಪಳ
B
ಧಾರಾವಾಡ, ಗದಗ, ಬೆಳಗಾವಿ, ಕಲ್ಬುರ್ಗಿ
C
ಬೀದರ್, ಕುಲ್ಬರ್ಗಿ, ರಾಯಚೂರು, ಬಳ್ಳಾರಿ
D
ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ
Question 6 Explanation: 

ವಿಜಯಪುರ, ದಾವಣಗೆರೆ, ಬಾಗಲಕೋಟೆ, ಕೊಪ್ಪಳ

ರಾಜ್ಯದ ಬರ ಪೀಡಿತ ಪ್ರದೇಶಗಳಾದ ವಿಜಯಪುರ, ದಾವಣಗೆರೆ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರಿನಲ್ಲಿ “ಮರುಭೂಮಿ ಅಭಿವೃದ್ದಿ ಯೋಜನೆ”ಯನ್ನು ಜಾರಿಗೊಳಿಸಲಾಗುತ್ತಿದೆ.

Question 7

7. 2016-17ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯದಲ್ಲಿ ಎಷ್ಟು ಮಾನವ ದಿನಗಳನ್ನು ಸೃಜಿಸಲಾಗಿದೆ?

A
592.95 ಲಕ್ಷ
B
601. 43 ಲಕ್ಷ
C
630, 78 ಲಕ್ಷ
D
498. 11 ಲಕ್ಷ
Question 7 Explanation: 
592.95 ಲಕ್ಷ
Question 8

8.ಈ ಕೆಳಗಿನ ಯಾವ ಸಂಸ್ಥೆಯ ನೆರವಿನೊಂದಿಗೆ ಮೈಸೂರಿನಲ್ಲಿ ಸಾರ್ವಜನಿಕ ಸೈಕಲ್ ಬಳಕೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ?

A
ಭಾರತೀಯ ಸ್ಟೇಟ್ ಬ್ಯಾಂಕ್
B
ವಿಶ್ವ ಬ್ಯಾಂಕ್
C
ನಬಾರ್ಡ್
D
ಏಷ್ಯಾ ಅಭಿವೃದ್ದಿ ಬ್ಯಾಂಕ್
Question 8 Explanation: 

ವಿಶ್ವ ಬ್ಯಾಂಕ್

Question 9

9. ಅಟಲ್ ನಗರ ನವೀಕರಣ ಮತ್ತು ಪುನ್ಚೇತನ ಮಿಷನ್ (ಅಮೃತ್) ಯೋಜನೆಯಡಿ ರಾಜ್ಯದ ಎಷ್ಟು ನಗರ/ಪಟ್ಟಣಗಳನ್ನು ಆಯ್ಕೆ ಮಾಡಲಾಗಿದೆ?

A
15
B
27
C
22
D
34
Question 9 Explanation: 
27
Question 10

10. “ದೀನದಯಾಳ್ ಅಂತ್ಯೋದಯ ಯೋಜನ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ”ಕ್ಕೆ ಕೇಂದ್ರ ಮತ್ತು ರಾಜ್ಯ ಯಾವ ಅನುಪಾತದಲ್ಲಿ ಹಣವನ್ನು ಭರಿಸುತ್ತವೆ?

A
55 : 45
B
60 : 40
C
75 : 25
D
50 : 50
Question 10 Explanation: 

60 : 40

There are 10 questions to complete.

[button link=”http://www.karunaduexams.com/wp-content/uploads/2017/06/ಕೆ.ಎ.ಎಸ್-KAS-ಪ್ರಶ್ನೋತ್ತರಗಳು4-1.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

6 Thoughts to “ಕೆ.ಎ.ಎಸ್ (KAS) ಪ್ರಶ್ನೋತ್ತರಗಳು4”

  1. Tayaraja

    Hair sir what about question no. 2 and 7? Which one is write sir

  2. Lokigowda

    good very thanksful

  3. chitrashekhar

    best app

  4. chitrashekhar

    good app

  5. Sanket

    Super sir I like very much

Leave a Comment

This site uses Akismet to reduce spam. Learn how your comment data is processed.