ಪ್ರಸ್ತುತ ಕೆ.ಎ.ಎಸ್ ಪರೀಕ್ಷೆ ಪೇಪರ್-2 ಸಂಬಂಧಿಸಿದಂತೆ ಪ್ರಶ್ನೋತ್ತರಗಳು ಕೆ.ಎ.ಎಸ್ (KAS)  ಪರೀಕ್ಷೆಗೆ  ಸಹಾಯವಾಗಲಿದೆ.

ಕೆ.ಎ.ಎಸ್ (KAS) ಪ್ರಶ್ನೋತ್ತರಗಳು5

Question 1

1. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ ಯಾಂತ್ರೀಕರಣ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಸಹಾಯ ಧನದ ಗರಿಷ್ಠ ಮಿತಿ ಎಷ್ಟು?

A
ರೂ 25,000
B
ರೂ 50,000
C
ರೂ 75,000
D
ರೂ 1,00,000
Question 1 Explanation: 
ರೂ 1,00,000

ರಾಜ್ಯ ಸರ್ಕಾರದ ಅನುದಾನ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಸಮನ್ವಯಗೊಳಿಸಿ ಕೃಷಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನ ಒದಗಿಸಲಾಗುತ್ತಿದೆ. ಇದರಲ್ಲಿ ಸಾಮಾನ್ಯ ರೈತರಿಗೆ ಶೇ 50%ರಷ್ಟು ಹಾಗೂ ಎಸ್.ಸಿ/ಎಸ್.ಟಿ ರೈತರಿಗೆ ಶೇ 90% ರಿಯಾಯತಿಯನ್ನು ಗರಿಷ್ಠ ಮಿತಿ ರೂ 1.00 ಲಕ್ಷದ ವರೆಗೆ ಸಹಾಯಧನವನ್ನು ಒದಗಿಸಲಾಗುತ್ತದೆ.

Question 2

2. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

ಅ) ಪರಂಪರಾಗತ ಕೃಷಿ ವಿಕಾಸ ಯೋಜನೆಯನ್ನು ರಾಜ್ಯದಲ್ಲಿ 2015-16ನೇ ಸಾಲಿನಿಂದ ಅಳವಡಿಸಲಾಗುತ್ತಿದೆ

ಆ) ಸಾವಯವ ಕೃಷಿ ಮೂಲಕ ಸುರಕ್ಷಿತ ಆಹಾರ ಉತ್ಪಾದನೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 2 Explanation: 
ಎರಡು ಹೇಳಿಕೆ ಸರಿ
Question 3

3. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಗಮನಿಸಿ:

I) ಈ ಯೋಜನೆಯನ್ನು ರಾಜ್ಯದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹೆಸರಿನಡಿ ಅನುಷ್ಠಾನಗೊಳಿಸಲಾಗುತ್ತಿದೆ.

II) ಈ ಯೋಜನೆಯು ಬೆಳೆ ಸಾಲ ಪಡೆದ ರೈತರಿಗೆ ಕಡ್ಡಾಯ ಹಾಗೂ ಸಾಲ ಪಡೆಯದ ರೈತರಿಗೆ ಐಚ್ಚಿಕವಾಗಿದೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
I ಮಾತ್ರ
B
II ಮಾತ್ರ
C
I & II ಸರಿ
D
I & II ತಪ್ಪು
Question 3 Explanation: 

I & II ಸರಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು 2016-17ನೇ ಸಾಲಿನಿಂದ ರಾಜ್ಯದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹೆಸರಿನಡಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯು ಬೆಳೆ ಸಾಲ ಪಡೆದ ರೈತರಿಗೆ ಕಡ್ಡಾಯ ಹಾಗೂ ಸಾಲ ಪಡೆಯದ ರೈತರಿಗೆ ಐಚ್ಚಿಕವಾಗಿದೆ.

Question 4

4. ಈ ಕೆಳಗಿನ ಯೋಜನೆಗಳನ್ನು ಗಮನಿಸಿ:

I) ರಾಷ್ಟ್ರೀಯ ಕೃಷಿ ವಿಮಾ ಯೋಜನೆ

II) ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ

III) ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆ

ಮೇಲಿನ ಯಾವ ಯೋಜನೆಗಳನ್ನು ಹಿಂಪಡೆದು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ?

A
I & II
B
II & III
C
I & III
D
I, II & III
Question 4 Explanation: 
I & III

ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಮತ್ತು ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಹಿಂಪಡೆದು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.

Question 5

5. ರಾಜ್ಯ ಸರ್ಕಾರ ಜಾರಿಗೆ ತಂದಿರುವ “ಭೂ ಚೇತನ” ಯೋಜನೆಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಗಮನಿಸಿ:

I) ಮಳೆಯಾಶ್ರಿತ ಪ್ರಮುಖ ಬೆಳಗಳ ಇಳುವರಿಯನ್ನು ಶೇ 20% ಹೆಚ್ಚಿಸುವುದು ಯೋಜನೆಯ ಉದ್ದೇಶ

II) ಈ ಯೋಜನೆಯನ್ನು 20091-10 ರಲ್ಲಿ ಪ್ರಾರಂಭಿಸಿದ್ದು, ಎರಡನೇ ಹಂತದಲ್ಲಿ 2013-14 ರಿಂದ 2016-17ರವರೆಗೆ ವಿಸ್ತರಿಸಲಾಗಿದೆ

III) ಬೆಂಗಳೂರು, ಧಾರಾವಾಡ, ರಾಯಚೂರು ಕೃಷಿ ವಿಶ್ವವಿದ್ಯಾಲಯಗಳು ಮತ್ತು ಇಕ್ರಿಸ್ಯಾಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
I & II
B
I & III
C
II & III
D
I, II & III
Question 5 Explanation: 
I, II & III
Question 6

6. ಈ ಕೆಳಗಿನ ಯಾವ ವರ್ಷದಿಂದ “ಭೂಸಮೃದ್ದಿ ಕಾರ್ಯಕ್ರಮ”ವನ್ನು ಜಾರಿಗೊಳಿಸಲಾಗಿದೆ?

A
2009-10
B
2012-13
C
2013-14
D
2014-15
Question 6 Explanation: 
2013-14

ಭೂಸಮೃದ್ದಿ ಕಾರ್ಯಕ್ರಮ ಯೋಜನೆಯನ್ನು 2013-14ನೇ ಸಾಲಿನಿಂದ ಆರಂಭಿಸಲಾಗಿದೆ. ಈ ಯೋಜನೆಯನ್ನು 2013-14ನೇ ಸಾಲಿನಿಂದ 2016-17ನೇ ಸಾಲಿನವರೆಗೆ ನಾಲ್ಕು ವರ್ಷಕ್ಕೆ ಪ್ರಾಯೋಗಿಕವಾಗಿ ರಾಜ್ಯದ ನಾಲ್ಕು ಕಂದಾಯ ಭಾಗಗಳಲ್ಲಿ ಪ್ರತಿ ವಿಭಾಗಕ್ಕೆ ಒಂದು ಜಿಲ್ಲೆಯಂತೆ ತುಮಕೂರು, ರಾಯಚೂರು, ಚಿಕ್ಕಮಗಳೂರು ಮತ್ತು ಬಿಜಾಪುರ ಜಿಲ್ಲೆಗಳ ಪ್ರಾರಂಭಿಸಲಾಗಿದೆ. 2015-16ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ಬೀದರ್, ಧಾರಾವಾಡ, ಉಡುಪಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ.

Question 7

7. “ಕೃಷಿ ಭಾಗ್ಯ” ಯೋಜನೆಯ ಮುಖ್ಯ ಉದ್ದೇಶವೆಂದರೆ _______?

A
ಮಳೆಯಾಶ್ರಿತ ರೈತ ಸಮುದಾಯದ ಸುಧಾರಿತ ಜೀವನೋಪಾಯ ಉತ್ತಮಪಡಿಸುವುದು
B
ಮಹಿಳಾ ರೈತರಿಗೆ ಆರ್ಥಿಕ ನೆರವು ನೀಡುವುದು
C
ಪರಿಶಿಷ್ಠ ಜಾತಿ/ಪಂಗಡದವರಿಗೆ ಸಬ್ಸಿಡಿ ದರದಲ್ಲಿ ಬೀಜ, ಗೊಬ್ಬರ ವಿತರಿಸುವುದು
D
ಕೃಷಿಯಲ್ಲಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸುವುದು
Question 7 Explanation: 

ಮಳೆಯಾಶ್ರಿತ ರೈತ ಸಮುದಾಯದ ಸುಧಾರಿತ ಜೀವನೋಪಾಯ ಉತ್ತಮಪಡಿಸುವುದು ಮಳೆಯಾಶ್ರಿತ ರೈತ ಸಮುದಾಯದ ಸುಧಾರಿತ ಜೀವನೋಪಾಯ ಉತ್ತಮಪಡಿಸಲು ಕೃಷಿ ಭಾಗ್ಯ ಯೋಜನೆಯನ್ನು 2014-15ನೇ ಸಾಲಿನಿಂದ ರಾಜ್ಯ 25 ಜಿಲ್ಲೆಗಳ 131 ತಾಲ್ಲೂಲುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

Question 8

8. ಈ ಕೆಳಗಿನ ಯಾವ ಹಂತದಲ್ಲಿ “ಸಾವಯವ ಭಾಗ್ಯ” ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ?

A
ಗ್ರಾಮ ಪಂಚಾಯತಿ ಮಟ್ಟ
B
ಹೋಬಳಿ ಮಟ್ಟ
C
ತಾಲ್ಲೂಕು ಮಟ್ಟ
D
ಜಿಲ್ಲಾ ಮಟ್ಟ
Question 8 Explanation: 

ಹೋಬಳಿ ಮಟ್ಟ ಸಾವಯವ ಭಾಗ್ಯ” ಯೋಜನೆಯನ್ನು 2013-14ನೇ ಸಾಲಿನಿಂದ ಹೋಬಳಿ ಮಟ್ಟಕ್ಕೆ ವಿಸ್ತರಿಸಿ ಅನುಷ್ಟಾನಗೊಳಿಸಲಾಗುತ್ತಿದೆ. ಈ ಹಿಂದೆ ಇದ್ದ ಸಾವಯವ ಗ್ರಾಮ/ಸ್ಥಳ ಯೋಜನೆಯನ್ನು ಪರಿಷ್ಕರಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

Question 9

9. ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದ ಅನುಷ್ಠಾನದ ಮೂಲಕ ರಾಜ್ಯದಲ್ಲಿ ಈ ಕೆಳಗಿನ ಯಾವ ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ?

I) ಭತ್ತ

II) ದ್ವಿದಳ ಧಾನ್ಯಗಳು

III) ಒರಟು ಧಾನ್ಯಗಳು

IV) ಕಬ್ಬು

ಸರಿಯಾದ ಉತ್ತರವನ್ನು ಈ ಕೆಳಗೆ ನೀಡಿರುವ ಕೋಡ್ ಮೂಲಕ ಗುರುತಿಸಿ?

A
I & II
B
I, II & III
C
I, II & IV
D
I, II, III & IV
Question 9 Explanation: 
I, II, III & IV
Question 10

10. ಕರ್ನಾಟಕ ರಾಜ್ಯ “ಕೃಷಿ ಮಾರಾಟ ನೀತಿ”ಯನ್ನು ಜಾರಿಗೆ ತಂದ ವರ್ಷ ____________?

A
2012
B
2013
C
2014
D
2015
Question 10 Explanation: 
2013

ಕರ್ನಾಟಕ ರಾಜ್ಯದಲ್ಲಿ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯನ್ನು ಸುಧಾರಣೆಗೊಳಿಸುವ ಸಲುವಾಗಿ ರಾಜ್ಯ ಸರ್ಕಾರ ಕೃಷಿ ಮಾರಾಟ ನೀತಿಯನ್ನು 4-09-2013ರಂದು ಜಾರಿಗೆ ತಂದಿದೆ.

There are 10 questions to complete.

[button link=”http://www.karunaduexams.com/wp-content/uploads/2017/06/ಕೆ.ಎ.ಎಸ್-KAS-ಪ್ರಶ್ನೋತ್ತರಗಳು4.pdf“]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

19 Thoughts to “ಕೆ.ಎ.ಎಸ್ (KAS) ಪ್ರಶ್ನೋತ್ತರಗಳು5”

  1. Basavaraja Giri Hanchinal

    Very very usefull sr .continue the same spirit…..

  2. Amitkumar

    Useful questions… Thank-you

  3. SIR PLEASE GIVE US KARNATAKA ECONOMIC SURVEY IMPORTANT POINTS

  4. Last I c v

    Hartley thankful to you

  5. Madhu c v

    Thank you

  6. Lokigowda

    tq tq good q&a

  7. Gdpatil

    Tq. Keep on sending

  8. Babusab

    Continue sir useful one

  9. sowmya

    Can anyone tell me ,where I will get Kristi n agriculture related study materials in Kannada version..

  10. Sudha

    Very good valuable questions

  11. Mallu Nayak

    Nice sir

  12. Ashok katre

    Score is 80%,,thank you karunadu,,,,

  13. Shashikala

    It is very use full sir

  14. Naveen

    Sir answer plz

  15. Arpitha

    It is good but plz give the answer

  16. Janu N

    Very helpful in Future

Leave a Comment

This site uses Akismet to reduce spam. Learn how your comment data is processed.