ಪ್ರಸ್ತುತ ಕೆ.ಎ.ಎಸ್ ಪರೀಕ್ಷೆ ಪೇಪರ್-2 ಸಂಬಂಧಿಸಿದಂತೆ ಪ್ರಶ್ನೋತ್ತರಗಳು ಕೆ.ಎ.ಎಸ್ (KAS)  ಪರೀಕ್ಷೆಗೆ  ಸಹಾಯವಾಗಲಿದೆ.

ಕೆ.ಎ.ಎಸ್ (KAS) ಪ್ರಶ್ನೋತ್ತರಗಳು7

Question 1

1. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಗಮನಿಸಿ:

ಅ) ಈ ಸಂಸ್ಥೆಯನ್ನು ಅರಣ್ಯ (ಸಂರಕ್ಷಣೆ) ಕಾಯಿದೆ 1980ರಡಿ ಸ್ಥಾಪಿಸಲಾಗಿದೆ

ಆ) ಇದೊಂದು ಶಾಸನಬದ್ದ ಸಂಸ್ಥೆಯಾಗಿದ್ದು, ಜಲ ಮತ್ತು ವಾಯು ಮಾಲಿನ್ಯ ತಡೆ ಕಾಯಿದೆಗಳ ಅನುಷ್ಠಾನಗೊಳಿಸುವ ಹೊಣೆಯನ್ನು ಹೊಂದಿದೆ.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪು
Question 1 Explanation: 
ಹೇಳಿಕೆ ಎರಡು ಮಾತ್ರ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಕೇಂದ್ರ ಸರ್ಕಾರ ಜಲ (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯಿದೆ-1974ರಡಿ ಸ್ಥಾಪಿಸಲಾಗಿದೆ. ಇದೊಂದು ಶಾಸನಬದ್ದ ಸಂಸ್ಥೆಯಾಗಿದ್ದು, ಜಲ ಮತ್ತು ವಾಯು ಮಾಲಿನ್ಯ ತಡೆ ಕಾಯಿದೆಗಳ ಅನುಷ್ಠಾನಗೊಳಿಸುವ ಹೊಣೆಯನ್ನು ಹೊಂದಿದೆ.

Question 2

2. ಸಮಗ್ರ ಪರಿಸರ ಮಾಲಿನ್ಯ ಸೂಚ್ಯಂಕ (CEPI) ಪ್ರಕಾರ ಈ ಕೆಳಗಿನ ಯಾವ ಕೈಗಾರಿಕೆ ಸಮೂಹಗಳು ರಾಜ್ಯದ ಕಠೋರ ಮಾಲಿನ್ಯ ಪ್ರದೇಶಗಳೆಂದು ಗುರುತಿಸಲ್ಪಟ್ಟಿವೆ?

A
ರಾಯಚೂರು ಮತ್ತು ಬೀದರ್ ಕೈಗಾರಿಕಾ ಪ್ರದೇಶ
B
ಬೈಕಂಪಾಡಿ ಮತ್ತು ಭದ್ರಾವತಿ ಕೈಗಾರಿಕಾ ಪ್ರದೇಶ
C
ಪೀಣ್ಯ ಮತ್ತು ಭದ್ರಾವತಿ ಕೈಗಾರಿಕಾ ಪ್ರದೇಶ
D
ರಾಯಚೂರು ಮತ್ತು ಪೀಣ್ಯ ಕೈಗಾರಿಕಾ ಪ್ರದೇಶ
Question 2 Explanation: 
ಬೈಕಂಪಾಡಿ ಮತ್ತು ಭದ್ರಾವತಿ ಕೈಗಾರಿಕಾ ಪ್ರದೇಶ

ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ ಹಾಗೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕೈಗಾರಿಕಾ ಪ್ರದೇಶ ಸಿಇಪಿಐ ಸೂಚ್ಯಂಕದಡಿ ರಾಜ್ಯದ ಅತಿ ಹೆಚ್ಚು ಮಾಲಿನ್ಯ ಕೈಗಾರಿಕ ಪ್ರದೇಶಗಳೆಂದು ಗುರುತಿಸಲಾಗಿದೆ.

Question 3

3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) 50 ಹೆಕ್ಟೇರ್ ಒಳಗಡೆ ಇರುವ ಮೈನಿಂಗ್ ಪ್ರದೇಶವನ್ನು “ಬಿ” ಕ್ಯಾಟಗರಿ, 50ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶವನ್ನು “ಎ” ಕ್ಯಾಟಗರಿ ಮೈನಿಂಗ್ ಪ್ರದೇಶ ಎನ್ನಲಾಗುತ್ತದೆ.

II) ಬಿ ಕ್ಯಾಟಗರಿ ಮೈನಿಂಗ್ ಗಳಿಗೆ ಪರಿಸರ ವಿಮೋಚನಾ ಪತ್ರವನ್ನು ರಾಜ್ಯ ಮಟ್ಟದ ಪರಿಸರ ಆಘಾತ ಅಧ್ಯಯನ ಸಮಿತಿ ನೀಡುತ್ತದೆ.

III) ಎ ಕ್ಯಾಟಗರಿ ಮೈನಿಂಗ್ ಗಳಿಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ನೀಡುತ್ತದೆ

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
I & II
B
II & III
C
I & III
D
I, II & III
Question 3 Explanation: 
I, II & III

ಮೇಲಿನ ಮೂರು ಹೇಳಿಕೆಗಳು ಸರಿಯಾಗಿವೆ.

Question 4

4. ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಬೀಡು ಸ್ಪಾಂಜ್ ಕಬ್ಬಿಣದ ಉದ್ದಿಮೆಗಳು ಕಾರ್ಯಾಚರಣೆಯಲ್ಲಿವೆ?

A
ಚಿತ್ರದುರ್ಗ
B
ಬಳ್ಳಾರಿ
C
ಧಾರಾವಾಡ
D
ತುಮಕೂರು
Question 4 Explanation: 
ಬಳ್ಳಾರಿ

ರಾಜ್ಯದಲ್ಲಿ 37 ಬೀಡು ಸ್ಪಾಂಜ್ ಕಬ್ಬಿಣದ ಉದ್ದಿಮೆಗಳು ಕಾರ್ಯಾಚರಣೆಯಲ್ಲಿವೆ. ಇವುಗಳಲ್ಲಿ ಬಳ್ಳಾರಿ (27), ಕೊಪ್ಪಳ (8), ಧಾರಾವಾಡ, ತುಮಕೂರು ಮತ್ತು ಚಿತ್ರದುರ್ಗದಲ್ಲಿ ತಲಾ ಒಂದು ಇವೆ.

Question 5

5. ಈ ಕೆಳಕಂಡ ಮಲಿನಕಾರಗಳನ್ನು ಗಮನಿಸಿ:

I) ತೇಲಾಡುವ ಕಣಗಳು

II) ಗಂಧಕದ ಡೈ ಆಕ್ಸೈಡ್

III) ಸಾರಜನಕದ ಡೈ ಆಕ್ಸೈಡ್

IV) ಇಂಗಾಲದ ಡೈ ಆಕ್ಸೈಡ್

ರಾಷ್ಟ್ರೀಯ ವಾಯುಗುಣಮಟ್ಟ ಪರಿವೇಷ್ಠ ಕಾರ್ಯಕ್ರಮದಡಿ ಮೇಲಿನ ಯಾವ ಮಲಿನಕಾರಕಗಳನ್ನು ಮಾಪನ ಮಾಡಲಾಗುತ್ತಿದೆ?

A
I & II
B
II & III
C
I, II & III
D
I, II, III & IV
Question 5 Explanation: 
I, II & III

ರಾಷ್ಟ್ರೀಯ ವಾಯುಗುಣಮಟ್ಟ ಪರಿವೇಷ್ಠ ಕಾರ್ಯಕ್ರಮದಡಿ ತೇಲಾಡುವ ಕಣಗಳು, ಗಂಧಕದ ಡೈ ಆಕ್ಸೈಡ್ ಮತ್ತು ಸಾರಜನಕದ ಡೈ ಆಕ್ಸೈಡ್ ಅನ್ನು ಮಾಪಕ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಡಿ ಬೆಂಗಳೂರಿನಲ್ಲಿ 15 ಕೇಂದ್ರಗಳನ್ನು ತೆರೆಯಲಾಗಿದೆ.

Question 6

6. ಯಾವ ವರ್ಷದಲ್ಲಿ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರಕ್ಕೆ ಸರ್ಕಾರವು ಕಾನೂನಾತ್ಮಕ ಅಧಿನಿಯಮ ಹಾಗೂ ನಿಯಮಗಳನ್ನು ಜಾರಿಗೊಳಿಸಿದೆ?

A
2014
B
2015
C
2016
D
2017
Question 6 Explanation: 
2015
Question 7

7. ಕರ್ನಾಟಕ ಜೀವ ವೈವಿದ್ಯ ಮಂಡಳಿ ಸ್ಥಾಪನೆಗೊಂಡ ವರ್ಷ ________?

A
1.08.2003
B
5.10. 2004
C
10.05.2005
D
03.08. 2003
Question 7 Explanation: 
1.08.2003

Question 8

8. ರಾಜ್ಯದ ನಿವ್ವಳ ನೀರಾವರಿ ಕ್ಷೇತ್ರದಲ್ಲಿ ಎಲ್ಲಾ ನೀರಾವರಿ ಮೂಲಗಳ ಪೈಕಿ ಕೆಳಗಿನ ಯಾವುದರ ಪಾಲು ಅತಿ ಹೆಚ್ಚಿದೆ?

A
ಕೊಳವೆ ಬಾವಿ
B
ಕಾಲುವೆಗಳು
C
ತೋಡಿದ ಬಾವಿಗಳು
D
ಏತ ನೀರಾವರಿ
Question 8 Explanation: 
ಕೊಳವೆ ಬಾವಿ

ರಾಜ್ಯದ ನಿವ್ವಳ ನೀರಾವರಿ ಕ್ಷೇತ್ರದಲ್ಲಿ ಎಲ್ಲಾ ನೀರಾವರಿ ಮೂಲಗಳ ಪೈಕಿ ಕೊಳವೆ ಬಾವಿ ನೀರಾವರಿ ಕ್ಷೇತ್ರದ ಪಾಲು ಶೇ 37% ರಷ್ಟಿದೆ ಅತ್ಯಧಿಕವಾಗಿದೆ. ಎರಡನೇ ಸ್ಥಾನದಲ್ಲಿ ನೀರಾವರಿ ಕ್ಷೇತ್ರ (ಶೇ 32.8) ಮತ್ತು ತೋಡಿದ ಬಾವಿಗಳ ಪಾಲು ಶೇ 10.56 ಇದೆ.

Question 9

9. ___________ ಹೆಕ್ಟೆರ್ ವರೆಗಿನ ಕೃಷಿ ಅಚ್ಚುಕಟ್ಟು ಪ್ರದೇಶ ಇರುವ ನೀರಾವರಿ ಕಾಮಗಾರಿಗಳ ಪ್ರದೇಶವನ್ನು ಸಣ್ಣ ನೀರಾವರಿ ಪ್ರದೇಶವೆಂದು ವಿಂಗಡಿಸಲಾಗಿದೆ?

A
2000
B
1500
C
3000
D
4000
Question 9 Explanation: 
2000

2000 ಹೆಕ್ಟೆರ್ ವರೆಗಿನ ಕೃಷಿ ಅಚ್ಚುಕಟ್ಟು ಪ್ರದೇಶ ಇರುವ ನೀರಾವರಿ ಕಾಮಗಾರಿಗಳ ಪ್ರದೇಶವನ್ನು ಸಣ್ಣ ನೀರಾವರಿ ಪ್ರದೇಶವೆಂದು ವಿಂಗಡಿಸಲಾಗಿದೆ

There are 9 questions to complete.

[button link=”http://www.karunaduexams.com/wp-content/uploads/2017/07/ಕೆ.ಎ.ಎಸ್-KAS-ಪ್ರಶ್ನೋತ್ತರಗಳು7.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

10 Thoughts to “ಕೆ.ಎ.ಎಸ್ (KAS) ಪ್ರಶ್ನೋತ್ತರಗಳು7”

  1. vVenkatesh S

    Thank u very Mutch sir.it is very usefull.plese sum more questions sir

  2. shreelakshmi

    Thank u sir.

  3. SANTHOSH KUMAR P

    Whoever you are, you are helping us to read and become more knowledgeable one. If we go through and get a good post in future, we definitely dont forget your help also we would like to give a better service to the system as well as to the society (I preference for poor). As you are doing now.

  4. Dharmaraj r

    Very use full information

  5. Karuna

    Its more useful to us.really i m very when i read bcs i m getting more knowledge this hepls to get job

  6. ಮೋಹನ್. ಎಂ.ಎಸ್.

    ಸಾರ್ ನಮಸ್ಕಾರ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ,ಪರಶ್ನೋತರ,ಪ್ರಚಲಿತ ಘಟನೆಗಳು ಹಾಗೇ ನೀವು ನೀಡುತ್ತಿರುವ ಎಲ್ಲಾ ಮಾಹಿತಿಗಳು ಉಪಯುಕ್ತವಾಗಿವೆ, ಕರುನಾಡು ಎಗಸಾಮ್ಸನ ಅಭಿಮಾನಿ ನಾನು ಸದಾ ಹೊಸ ಹೊಸ ಮಾಹಿತಿಗಾಗಿ ಕಾಯೂತಿರುವೆ

  7. Adarsh v

    Thank u very Mutch sir.it is very usefull.plese sum more questions sir

  8. Parashuram b

    Thank you sir update more online exams please sir

  9. Ishwar

    Superb sir we are very thank full to you we want more practice papers for KAS

  10. Vijaykumar

    Sir This is Most Important App

Leave a Comment

This site uses Akismet to reduce spam. Learn how your comment data is processed.