ವಿಶ್ವಸಂಸ್ಥೆಯ ನ್ಯಾಯಸಂಸ್ಥೆಗೆ (ILTO) ಭಾರತದ ನೀರೂ ಛಡ್ಡಾ ಆಯ್ಕೆ
ಸಾಗರ ಸಂಬಂಧಿ ವಿವಾದಗಳ ವಿಚಾರಣೆ ನಡೆಸುವ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಮಂಡಳಿಗೆ ಕಾನೂನಿನ ತಜ್ಞೆ ನೀರೂ ಛಡ್ಡಾ ಅವರು ಆಯ್ಕೆಯಾಗಿದ್ದಾರೆ. ಈ ಚುನಾವಣೆಯೊಂದಿಗೆ, ಸಮುದ್ರದ ಕಾನೂನು ವಿವಾದಗಳಿಗೆ ಸಂಬಂಧಿಸಿದ ಉನ್ನತ ನ್ಯಾಯಾಲದ ನಿರ್ಣಾಯಕ ಚುನಾವಣೆ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ ಹಾಗೂ ಈ ನ್ಯಾಯಮಂಡಳಿಗೆ ನ್ಯಾಯಾಧೀಶರಾಗಿ ನೇಮಕಗೊಂಡ ಮೊದಲ ಭಾರತೀಯ ಮಹಿಳೆ ನೀರೂ ಪಾತ್ರರಾಗಿದ್ದಾರೆ
ಐಟಿಎಲ್ಒಎಸ್ 21 ಸ್ವತಂತ್ರ ಸದಸ್ಯರನ್ನು ಒಳಗೊಂಡಿದೆ. ಸಮುದ್ರ ಕಾನೂನಿನ ಕ್ಷೇತ್ರದಲ್ಲಿ ಅಗತ್ಯವಾದ ಜ್ಞಾನವನ್ನು ಹೊಂದಿರುವವರನ್ನು ಸದಸ್ಯ ಸ್ಥಾನಕ್ಕೆ ಆಯ್ಕೆಮಾಡಲಾಗುತ್ತದೆ.
ವಿಶ್ವಸಂಸ್ಥೆಯ ಸಾಮಾನ್ಯ ಮಂಡಳಿಗೆ ಲಕ್ಷ್ಮಿ ಪಂಡಿತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ ವಿಶ್ವಸಂಸ್ಥೆಯಲ್ಲಿ ಉನ್ನತ ಸ್ಥಾನ ಪಡೆದಿರುವ ಎರಡನೇ ಭಾರತೀಯ ಮಹಿಳೆ ನೀರೂ ಎಂಬುದು ಸಹ ಗಮನಾರ್ಹ.
ನೀರೂ ಛಡ್ಡಾ:
ನೀರೂ ಛಡ್ಡಾ ದೆಹಲಿ ವಿಶ್ವವಿದ್ಯಾನಿಲಯ ಮತ್ತು ಮಿಚಿಗನ್ ವಿಶ್ವವಿದ್ಯಾನಿಲಯದಿಂದ ಕಾನೂನಿನ ವಿಷಯದಲ್ಲಿ ಪಿಎಚ್ಡಿ ಸೇರಿದಂತೆ ಕಾನೂನು ಪದವಿಗಳನ್ನು ಪಡೆದಿದ್ದಾರೆ. ವಿದೇಶಾಂಗ ಸಚಿವಾಲಯದ ಮುಖ್ಯ ಸಲಹೆಗಾರರಾಗಿ ನೇಮಕಗೊಂಡ ಮೊದಲ ಮಹಿಳೆ ಸಹ ಆಗಿದ್ದಾರೆ. ಸಚಿವಾಲಯದಲ್ಲಿ ಕಾನೂನು ಮತ್ತು ಒಪ್ಪಂದಗಳ ವಿಭಾಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ವಿವಿಧ ಒಕ್ಕೂಟಗಳು ಮತ್ತು ಸಭೆಗಳಲ್ಲಿ ನೀರೂ ಛಡ್ಡಾ ಅವರು ಭಾರತೀಯ ಸರ್ಕಾರವನ್ನು ಪ್ರತಿನಿಧಿಸಿದ್ದಾರೆ. ಯುನೈಟೆಡ್ ನೇಷನ್ಸ್, ಆಲ್ಕೊ (ಏಷ್ಯನ್-ಆಫ್ರಿಕನ್ ಲೀಗಲ್ ಕನ್ಸಲ್ಟೇಟಿವ್ ಆರ್ಗನೈಸೇಶನ್), UNIDROIT (ಯೂನಿಫಿಕೇಶನ್ ಆಫ್ ಪ್ರೈವೇಟ್ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್), UNCITRAL (ಇಂಟರ್ನ್ಯಾಷನಲ್ ಟ್ರೇಡ್ ಲಾ ಯುಎನ್ ಆಯೋಗ), ದಿ ಹೇಗ್ ಕಾನ್ಫರೆನ್ಸ್, ಬಿಮ್ಸ್ಟೆಕ್ ನಲ್ಲಿ ಮಾನವೀಯ ಕಾನೂನು, ಅಂತಾರಾಷ್ಟ್ರೀಯ ವ್ಯಾಪಾರ, ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ಅಂತಾರಾಷ್ಟ್ರೀಯ ಕ್ರಿಮಿನಲ್ ಕಾನೂನಿನಂತಹ ವಿವಿಧ ವಿಷಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ITLO:
ITLOವನ್ನು 1996ರಲ್ಲಿ ಸ್ಥಾಪನೆ ಮಾಡಲಾಗಿದ್ದು, ವಿಶ್ವಸಂಸ್ಥೆಯ ವ್ಯಾಪ್ತಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಅಂತರಸರ್ಕಾರಿ ಸಂಸ್ಥೆಯಾಗಿದೆ. ITLO ಅಂತಾರಾಷ್ಟ್ರೀಯ ಜಲ ಸಂಪನ್ಮೂಲಗಳ ಮೇಲೆ ಕಾನೂನು ನಿಯಂತ್ರಿಸುತ್ತದೆ ಮತ್ತು ವಿಶ್ವಸಂಸ್ಥೆಯ ಸಮುದ್ರ ಕಾನೂನು ಸಮಾವೇಶದ (UNCLOS) ಅಡಿಯಲ್ಲಿ ವಿವಾದಗಳನ್ನು ಬಗೆಹರಿಸುವ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದು ಜರ್ಮನಿಯ ಹ್ಯಾಂಬರ್ಗ್ನಲ್ಲಿದೆ.
ಮೂಲಸೌಕರ್ಯ ಮತ್ತು ದ್ವಿಪಕ್ಷೀಯ ವ್ಯಾಪಾರ ವೃದ್ದಿಗೆ ಭಾರತ-ದಕ್ಷಿಣ ಕೊರಿಯಾ ಒಪ್ಪಂದ
ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ 10 ಬಿಲಿಯನ್ ಡಾಲರ್ ನೆರವು ಒಪ್ಪಂದಕ್ಕೆ ಭಾರತ ಮತ್ತು ದಕ್ಷಿಣ ಕೊರಿಯಾ ಸಹಿ ಮಾಡಿವೆ. ಇದರಲ್ಲಿ $ 9 ಶತಕೋಟಿ ರಿಯಾಯಿತಿ ಮತ್ತು $1 ಬಿಲಿಯನ್ ಅಧಿಕೃತ ಅಭಿವೃದ್ಧಿ ಸಹಾಯ (ಒಡಿಎ) ಒಳಗೊಂಡಿದೆ. ಈ ನಿಧಿಯ ಭಾಗವನ್ನು ಭಾರತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಈ ಒಪ್ಪಂದದ ಮೂಲಕ, ದಕ್ಷಿಣ ಕೊರಿಯಾವು ಭಾರತಕ್ಕೆ ಒಡಿಎ ಕೊಡುಗೆ ನೀಡಿದ G-7 ರಾಷ್ಟ್ರಗಳಲ್ಲಿ ಮೊದಲನೆಯದು.
ಹಣಕಾಸು ಮಂತ್ರಿ ಅರುಣ್ ಜೇಟ್ಲಿ ರವರು ನಾಲ್ಕು ದಿನಗಳ ಭಾರತ-ಕೊರಿಯಾದ ಆರ್ಥಿಕ ಡೈಲಾಗ್ ನಲ್ಲಿ ಪಾಲ್ಗೊಳ್ಳಲು ದಕ್ಷಿಣ ಕೊರಿಯಾಕ್ಕೆ ಅಧಿಕೃತ ಭೇಟಿ ನೀಡಿದ ವೇಳೆ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ದಕ್ಷಿಣ ಕೊರಿಯಾವು ತನ್ನ ಆರ್ಥಿಕ ಪಾಲುದಾರಿಕೆಯನ್ನು ವಿತರಿಸಲು ಶ್ರಮಿಸುತ್ತಿದೆ ಮತ್ತು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ದೇಶವಾಗಿರುವ ಭಾರತವು ತನ್ನ ಆರ್ಥಿಕ ಪಾಲುದಾರಿಕೆಯನ್ನು ವೈವಿಧ್ಯಗೊಳಿಸಲು ಕೊರಿಯಾಕ್ಕೆ ಅಪಾರ ಅವಕಾಶಗಳನ್ನು ನೀಡುತ್ತಿದೆ. ಭಾರತದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಸಮರ್ಪಕವಾಗಿ ಗುರುತಿಸಿ ನಿಧಿಯನ್ನು ಸೂಕ್ತವಾಗಿ ಬಳಸಿಕೊಳ್ಳಲು ಹಿರಿಯ ಅಧಿಕಾರಗಳ ಮಟ್ಟದಲ್ಲಿ ಯಾಂತ್ರಿಕ ವ್ಯವಸ್ಥೆಯನ್ನು ಸ್ಥಾಪಿಸಲು ಎರಡೂ ದೇಶಗಳು ನಿರ್ಧರಿಸಿವೆ.
ಪ್ರಸಿದ್ದ ಲೇಖಕ ಯೆಶೆ ದೋರ್ಜಿ ತೊಂಗ್ಜಿಗೆ 2017-ಭೂಪೇನ್ ಹಜಾರಿಕಾ ರಾಷ್ಟ್ರೀಯ ಪ್ರಶಸ್ತಿ
ಪ್ರಸಿದ್ಧ ಲೇಖಕ ಯೆಶೆ ದೋರ್ಜಿ ತೊಂಗ್ಷಿಗೆ 2017 ಭೂಪೇನ್ ಹಜಾರಿಕಾ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಯನ್ನು 2012 ರಿಂದ ನೀಡಲಾಗುತ್ತಿದ್ದು, ಇದು ಐದನೇಯದು. ಮಹಾರಾಷ್ಟ್ರ ಮೂಲದ ಸರ್ಹಾದ್ ಸಂಘಟನೆ ಈ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ಗೌರವಿಸಲು ನೀಡಲಾಗುತ್ತದೆ. ಪ್ರಶಸ್ತಿ 51,000 ರೂಪಾಯಿ, ಒಂದು ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ
ಯೆಶೆ ದೋರ್ಜಿ ತೊಂಗ್ಜಿ ಬಗ್ಗೆ:
ಯೆಶೆ ದೋರ್ಜೀ ತೋಂಗ್ಶಿ ಅವರು ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯವರಾಗಿದ್ದಾರೆ. ಅವರು ಗುವಾಹಾಟಿಯ ಕಾಟನ್ ಕಾಲೇಜ್ನಿಂದ ಪದವಿ ಮತ್ತು ಗುವಾಹಾಟಿ ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಪಡೆದಿದ್ದಾರೆ. ಶೆರ್ಡುಕ್ಪೆನ್ ಅವರ ಮಾತೃಭಾಷೆಯಾಗಿದ್ದರೂ ಸಹ, ಯೆಶೆ ದೋರ್ಜೀ ಅವರು ಅಸ್ಸಾಮಿಯಲ್ಲಿ ತಮ್ಮ ಕೃತಿಗಳನ್ನು ಬರೆಯಲು ಪ್ರಾರಂಭಿಸಿದರು. ಅಸ್ಸಾಮಿ ಭಾಷೆಯ ಮೇಲೆ ಅತ್ಯುತ್ತಮ ಹಿಡಿತವನ್ನು ಹೊಂದಿದ್ದಾರೆ. ಇಲ್ಲಿಯವರೆಗೆ, ಅವರು ಸುಮಾರು ಒಂದು ಡಜನ್ ಕಾದಂಬರಿಗಳು ಮತ್ತು ಹಲವಾರು ಸಣ್ಣ ಕಥೆಗಳು ಮತ್ತು ನಾಟಕಗಳನ್ನು ಬರೆದಿದ್ದಾರೆ. ಅವರ ಪ್ರಸಿದ್ಧ ಕಾದಂಬರಿ “ಮೌನಾ ಒನ್ಥ್ ಮುಖರ್ ಹೃದ್ವಾರ (ಮೌನ ತುಟಿಗಳು, ಮಣಗಿಸುವ ಹೃದಯಗಳು)”ಗೆ 2005 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಯೆಶೆ ದೋರ್ಜಿ ಅವರು 1977 ರಲ್ಲಿ ಅರುಣಾಚಲ ಪ್ರದೇಶ ನಾಗರಿಕ ಸೇವೆಗೆ ಆಯ್ಕೆಯಾದರು ಮತ್ತು 1992 ರಲ್ಲಿ ಐಎಎಸ್ಗೆ ಬಡ್ತಿ ಹೊಂದಿದರು. ಅರುಣಾಚಲ ಪ್ರದೇಶ ಸಾಹಿತ್ಯ ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ಸಹ ಆಗಿದ್ದಾರೆ.
ಚೀನಾದಿಂದ ಪ್ರಪ್ರಥಮ ಎಕ್ಸ್ ರೇ ಬಾಹ್ಯಕಾಶ ದೂರದರ್ಶಕ ಉಡಾವಣೆ
ಕಪ್ಪು ರಂಧ್ರಗಳು, ಪಲ್ಸರ್ಗಳು ಮತ್ತು ಗಾಮಾ-ಕಿರಣ ಸ್ಫೋಟಗಳನ್ನು ಅಧ್ಯಯನ ಮಾಡಲು ಚೀನಾ ತನ್ನ ಮೊದಲ ಎಕ್ಸ್-ರೇ ಬಾಹ್ಯಾಕಾಶ ದೂರದರ್ಶಕವನ್ನು ಪ್ರಾರಂಭಿಸಿದೆ. ಚೀನಾದ ಲಾಂಗ್ ಮಾರ್ಚ್-4 ಬಿ ರಾಕೆಟ್ ಬಳಸಿ 2.5 ಟನ್ ತೂಕದ ದೂರದರ್ಶಕವನ್ನು ಬಾಹ್ಯಕಾಶಕ್ಕೆ ಕಳುಹಿಸಲಾಯಿತು. ಈ ದೂರದರ್ಶಕವನ್ನು ಜಿಯುಕ್ವಾನ್ ಸ್ಯಾಟಲೈಟ್ ಲಾಂಚ್ ಸೆಂಟರ್ನಿಂದ ಉಡಾಯಿಸಲಾಯಿತು.
ಇತ್ತೀಚಿನ ವರ್ಷಗಳಲ್ಲಿ ವಿಶ್ವದ ಗಮನ ಸೆಳೆಯಲು ಚೀನಾ ಬಹು-ಶತಕೋಟಿ-ಡಾಲರ್ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಆರಂಭಿಸಿದೆ. ಕಳೆದ ಏಪ್ರಿಲ್ ನಲ್ಲಿ ಚೀನಾ ತನ್ನ ಮೊದಲ ಸರಕು ಬಾಹ್ಯಾಕಾಶ ನೌಕೆಯನ್ನು ಕಳುಹಿಸಿಕೊಟ್ಟು, ಪರಿಭ್ರಮಿಸುವ ಬಾಹ್ಯಾಕಾಶ ಪ್ರಯೋಗಾಲಯದೊಂದಿಗೆ ಅದನ್ನು ಯಶಸ್ವಿಯಾಗಿ ಸೇರ್ಪಡೆಗೊಳಿಸಿತ್ತು. 2022ರ ಹೊತ್ತಿಗೆ ತನ್ನದೇ ಆದ ಮಾನವ ಸಹಿತ ಬಾಹ್ಯಾಕಾಶ ನಿಲ್ದಾಣವನ್ನು ಹೊಂದುವ ಗುರಿಯನ್ನು ಚೀನಾ ಹೊಂದಿದ್ದು, ಉಡಾವಣೆಯನ್ನು ಪ್ರಮುಖ ಬೆಳವಣಿಗೆ ಎಂದು ಪ್ರಶಂಸಿಸಲಾಗಿತ್ತು.
ವೈಶಿಷ್ಠತೆ:
ಇನ್ಸೈಟ್ ಹೆಸರಿನ ಹಾರ್ಡ್ ಎಕ್ಸ್-ರೇ ಮಾಡ್ಯುಲೇಷನ್ ಟೆಲಿಸ್ಕೋಪ್ (HXMT), ಚೀನಾದ ವಿಜ್ಞಾನಿಗಳು ಕಾಂತೀಯ ಕ್ಷೇತ್ರಗಳನ್ನು ಮತ್ತು ಪಲ್ಸರ್ಗಳ ಒಳಾಂಗಣವನ್ನು ವೀಕ್ಷಿಸಲು ಮತ್ತು ಕಪ್ಪು ರಂಧ್ರಗಳ ವಿಕಾಸವನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ದೂರದರ್ಶಕವು ವಿಜ್ಞಾನಿಗಳಿಗೆ ಗುರುತ್ವ ತರಂಗಗಳಿಗೆ ಅನುಗುಣವಾಗಿ ಗಾಮಾ-ಕಿರಣ ಸ್ಫೋಟಗಳನ್ನು ಹುಡುಕಲು ಸಹಾಯ ಮಾಡುತ್ತದೆ ಮತ್ತು ಬಾಹ್ಯಾಕಾಶ ಸಂಚರಣೆಗೆ ಪಲ್ಸರ್ಗಳನ್ನು ಹೇಗೆ ಬಳಸಬಹುದು ಎಂಬುದನ್ನು ಅಧ್ಯಯನ ಮಾಡಲು ಸಹಾಯ ಮಾಡಲಿದೆ.
Very good and use full
Thanks sir
sir pls daily apdets kodi navu nimma website nambiddivi tumba chanagi barutte ella news….swalpa dinaddu dina news kotre chanai anisutte…. sir try madi plsssssssssss
its very useful to competitors