ಪ್ರಧಾನಿ ನರೇಂದ್ರ ಮೋದಿ ಅವರಿಂದ ಕೊಚ್ಚಿ ಮೆಟ್ರೋ ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಮೊದಲ ಮೆಟ್ರೊ ಲೈನ್ ಆಗಿರುವ ಕೊಚ್ಚಿ ಮೆಟ್ರೊ ಲೈನ್ ಅನ್ನು ಉದ್ಘಾಟಿಸಿದ್ದಾರೆ. DMRC ಈ ಯೋಜನೆಯನ್ನು ವಹಿಸಿಕೊಂಡಿದ್ದು, ನಾಲ್ಕು ವರ್ಷಗಳ ಅವಧಿಯಲ್ಲಿ ನಿರ್ಮಿಸಿ ದಾಖಲೆ ಬರೆದಿದೆ. ಪ್ರಧಾನ ಮಂತ್ರಿ ರವರು ಮೆಟ್ರೋದ 25 ಕಿಮೀ ಉದ್ದದ ಪೈಕಿ ಮೊದಲ ಹಂತವಾದ 13.2 ಕಿ.ಮೀ.ಯನ್ನು ಉದ್ಘಾಟಿಸಿದರು. ಕೊಚ್ಚಿ ಮೆಟ್ರೊ ದೇಶದ ಎಂಟನೆಯ ಅಂತರ ನಗರ ಮೆಟ್ರೋ ರೈಲು ಯೋಜನೆಯಾಗಿದೆ.
- ಕೊಚ್ಚಿ ಮೆಟ್ರೋ ಭಾರತದ ಮೊದಲ ಏಕೀಕೃತ ಮಲ್ಟಿ-ಮೋಡ್ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ.
- ಕೊಚ್ಚಿ ಮೆಟ್ರೋ ತೃತೀಯ ಲಿಂಗಿಗಳಿಗೆ ಉದ್ಯೋಗಗಳನ್ನು ಕಾಯ್ದಿರಿಸಿದ ಮೊದಲ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದೆ. ವಿವಿಧ ವಿಭಾಗಗಳಲ್ಲಿ ಮೆಟ್ರೋ ಇಲ್ಲಿಯವರೆಗೆ 23 ತೃತೀಯ ಲಿಂಗಿಗಳನ್ನು ನೇಮಿಸಿದೆ. ಇದಲ್ಲದೆ, ಕೊಚ್ಚಿ ಮೆಟ್ರೋದಲ್ಲಿನ ಹೆಚ್ಚಿನ ಸಿಬ್ಬಂದಿ ಮಹಿಳೆಯರು. ಕೊಚ್ಚಿ ಮೆಟ್ರೋದಲ್ಲಿ ಸುಮಾರು 1,000 ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ.
- ಮೆಟ್ರೊದ ಮೊದಲ ಹಂತವು 13 ಕಿ.ಮೀ. ವ್ಯಾಪ್ತಿಯಿದ್ದ 11 ನಿಲ್ದಾಣಗಳನ್ನು ಒಳಗೊಂಡಿದೆ. ಕೊಚ್ಚಿ ಮೆಟ್ರೋ ರೈಲು ಓಡಾಟ ಹೆಚ್ಚಿಸಿ, ದೋಷ ನಿವಾರಿಸಲು ಸಂವಹನ ಆಧಾರಿತ ರೈಲು ನಿಯಂತ್ರಣ ತಂತ್ರಜ್ಞಾನವನ್ನು ಬಳಸಿಕೊಂಡಿರುವ ದೇಶದ ಮೊದಲನೆಯದು.
- ಕೊಚ್ಚಿ ಮೆಟ್ರೊದ ಪ್ರತಿಯೊಂದು ನಿಲ್ದಾಣದಲ್ಲಿ ಕಡಲ ಇತಿಹಾಸ, ಪಶ್ಚಿಮ ಘಟ್ಟಗಳು ಮುಂತಾದ ವಿಷಯಗಳನ್ನು ಪ್ರದರ್ಶಿಸಲಾಗಿದೆ. ಸೌರ ಫಲಕಗಳ ಸಹಾಯದಿಂದ ಕೊಚ್ಚಿ ಮೆಟ್ರೋ ಅದರ ವಿದ್ಯುತ್ ಅಗತ್ಯಗಳ ಶೇ.35% ರಷ್ಟನ್ನು ಪೂರೈಸಿಕೊಳ್ಳಲಿದೆ. ಇದರೊಂದಿಗೆ, ಅದರ ವಿದ್ಯುತ್ ಅವಶ್ಯಕತೆಯ ಕಾಲುಭಾಗವನ್ನು ಪೂರೈಸಲು ಸೌರಶಕ್ತಿಯನ್ನು ಬಳಸುವ ದೇಶದ ಮೊದಲ ಮೆಟ್ರೋ ಆಗಿ ಮಾರ್ಪಟ್ಟಿದೆ.
Know India Programme (KIP)ಗೆ ಸುಷ್ಮಾ ಸ್ಮರಾಜ್ ಚಾಲನೆ
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರವರು ಎನ್ಐಆರ್ಐ ಮತ್ತು ಪಿಐಒ ಯುವ ಜನತೆಗೆ “ನೋ ಇಂಡಿಯಾ ಪ್ರೋಗ್ರಾಂ (ಕೆಐಪಿ)” ಚಾಲನೆ ನೀಡಿದರು. ಎನ್ಐಆರ್ಐ ಮತ್ತು ಪಿಐಒ ಯುವ ಜನತೆ ತಮ್ಮ ದೇಶವನ್ನು ಉತ್ತಮವಾಗಿ ಮತ್ತು ಹೆಚ್ಚು ನಿಕಟವಾಗಿ ಅರ್ಥಮಾಡಿಕೊಳ್ಳುವ ಸಲುವಾಗಿ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. “ನೋ ಇಂಡಿಯಾ ಪ್ರೋಗ್ರಾಂ (ಕೆಐಪಿ)” ಗಾಗಿ ವಿದೇಶಾಂಗ ವ್ಯವಹಾರ ಸಚಿವಾಲಯ ಒಂದು ಪೋರ್ಟಲ್ ಅನ್ನು ಸಹ ಪ್ರಾರಂಭಿಸಿದೆ.
ಇದೇ ವೇಳೆ 149 ಹೊಸ ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯುವುದಾಗಿ ಸರಕಾರವು (POPSK) ಘೋಷಿಸಿದೆ. ಇನ್ನು ಹೆಚ್ಚಿನ ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯಲು ಸಚಿವಾಲಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದೆ. ಇದರಿಂದಾಗಿ ಪಾಸ್ಪೋರ್ಟ್ ಪಡೆಯಲು 50 ಕಿ.ಮೀ ಪ್ರಯಾಣಿಸುವುದು ತಪ್ಪಲಿದೆ. POPSK ಗಳು ವಿದೇಶಾಂಗ ಸಚಿವಾಲಯ ಮತ್ತು ಅಂಚೆ ಇಲಾಖೆಯಿಂದ ಜಂಟಿಯಾಗಿ ನಡೆಸಲ್ಪಟ್ಟ ಒಂದು ಉಪಕ್ರಮವಾಗಿದೆ.
ನೋ ಇಂಡಿಯಾ ಪ್ರೋಗ್ರಾಂ:
ನೋ ಇಂಡಿಯಾ ಪ್ರೋಗ್ರಾಂ 18 ರಿಂದ 30 ವರ್ಷ ವಯಸ್ಸಿನ ಭಾರತೀಯ ಮೂಲದ ಜನರಿಗೆ (PIO) ವಿದೇಶಾಂಗ ಸಚಿವಾಲಯದ ಒಂದು ಉಪಕ್ರಮವಾಗಿದೆ. KIP ಮೂರು ವಾರಗಳ ದೃಷ್ಟಿಕೋನ ಕಾರ್ಯಕ್ರಮವಾಗಿದ್ದು, ಭಾರತದಲ್ಲಿನ ಜೀವನದ ವಿಭಿನ್ನ ದೃಷ್ಟಿಕೋನಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಆರ್ಥಿಕ ಮತ್ತು ಶಿಕ್ಷಣದಂಥ ಕ್ಷೇತ್ರಗಳಲ್ಲಿ ದೇಶದ ಪ್ರಗತಿಯನ್ನು ತೋರಿಸುವ ಗುರಿಯನ್ನು ಇದು ಹೊಂದಿದೆ. ವಿದೇಶದಲ್ಲಿ ನೆಲಿಸಿರುವ ಭಾರತ ಮೂಲದ ಯುವ ಜನತೆ ಭಾರತಕ್ಕೆ ಭೇಟಿ ನೀಡಿ ತಮ್ಮ ದೃಷ್ಟಿಕೋನಗಳನ್ನು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಪ್ರಸ್ತುತ ಕಾಲದಲ್ಲಿ ದೇಶದೊಂದಿಗೆ ನಿಕಟ ಸಂಬಂಧ ಹೊಂದಲು ವೇದಿಕೆಯನ್ನು ಒದಗಿಸಲಿದೆ.
ಈ ಯೋಜನೆಯನ್ನು 2004 ರಲ್ಲಿ ಪ್ರಾರಂಭಿಸಲಾಗಿದ್ದು, ಇಲ್ಲಿಯವರೆಗೆ 40 ಆವೃತ್ತಿಗಳನ್ನು ಆಯೋಜಿಸಲಾಗಿದ್ದು ಸುಮಾರು 1,293 ಪಿಐಒ ಯುವಕರು ಪಾಲ್ಗೊಂಡಿದ್ದಾರೆ. 2016ರಲ್ಲಿ ಯೋಜನೆಯನ್ನು ಪರಿಷ್ಕೃತಗೊಳಿಸಿ 21 ರಿಂದ 25 ದಿನಗಳವರೆಗೆ ದಿನಗಳವರೆಗೆ ವಿಸ್ತರಿಸಲಾಯಿತು ಮತ್ತು ಒಂದು ಅಥವಾ ಎರಡು ರಾಜ್ಯಗಳಿಗೆ 10ದಿನ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ.
ರಾಮನಾಥ್ ಕೋವಿಂದ್ ರಾಷ್ಟ್ರಪತಿ ಅಭ್ಯರ್ಥಿ
ಮಾಜಿ ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಅಧಿಕೃತವಾಗಿ ರಾಷ್ಟ್ರಪತಿ ಹುದ್ದೆಗೆ ಎನ್ ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು.
ಕೋವಿಂದ್ ಬಗ್ಗೆ:
- 71 ವರ್ಷ ವಯಸ್ಸಿನ ರಾಮ್ ನಾಥ್ ಕೋವಿಂದ್ ರವರು ಉತ್ತರ ಪ್ರದೇಶದ ಕಾನ್ಪುರ್ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವಿ ಮತ್ತು ಎಲ್.ಎಲ್.ಬಿ ಪದವಿ ಪಡೆದುಕೊಂಡಿದ್ದಾರೆ.
- ಕೋವಿಂದ್ ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ 16 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. 1977 ರಿಂದ 1979ರ ವರೆಗೆ ದೆಹಲಿ ಹೈಕೋರ್ಟ್ನಲ್ಲಿ ವಕೀಲರಾಗಿ 1978 ರಲ್ಲಿ ಸುಪ್ರೀಂ ಕೋರ್ಟ್ನ ಅಡ್ವೊಕೇಟ್-ಆನ್-ರೆಕಾರ್ಡ್ ಆದರು.
- 1980 ರಿಂದ 1993 ರವರೆಗೂ ಅವರು ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರ ಸರ್ಕಾರದ ಸ್ಟಾಂಟಿಂಗ್ ಕೌನ್ಸಿಲ್ ನಲ್ಲಿದ್ದರು.
- 1984 ರಲ್ಲಿ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಕೋವಿಂದ್ ರಾಜಕೀಯಕ್ಕೆ ಪಾದರ್ಪಣೆ ಮಾಡಿದರು.
- ಕೋವಿಂದ್ ರವರು ತಮ್ಮ ಸಂಸತ್ತಿನ ಅಧಿಕಾರಾವಧಿಯಲ್ಲಿ ಹಲವಾರು ಸಂಸದೀಯ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪರಿಶಿಷ್ಟ ಜಾತಿ / ಪಂಗಡಗಳ ಕಲ್ಯಾಣ ಸಮಿತಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಂಸತ್ತಿನ ಸಮಿತಿ ಸೇರಿದಂತೆ ಇತರ ಸಂಸದೀಯ ಸಮಿತಿಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.
- ಕೋವಿಂದ್ ಅವರು ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿ 2002 ರ ಅಕ್ಟೋಬರ್ನಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.
- ಆಗಸ್ಟ್ 8, 2015 ರಂದು ಕೋವಿಂದ್ ಅವರನ್ನು ಬಿಹಾರದ ರಾಜ್ಯಪಾಲರಾಗಿ ನೇಮಿಸಲಾಯಿತು. ಅವರು ಡಾ. ಬಿ.ಆರ್.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯ, ಲಕ್ನೌ ಮತ್ತು ಮ್ಯಾನೇಜ್ಮೆಂಟ್ ಬೋರ್ಡ್ ಆಫ್ ಮ್ಯಾನೇಜ್ಮೆಂಟ್ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
Comment