ರಾಷ್ಟ್ರೀಯ ಶಿಕ್ಷಣ ನೀತಿ: ಕಸ್ತೂರಿ ರಂಗನ್ ಸಮಿತಿ ರಚನೆ
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನ್ನು ರೂಪಿಸಲು ಬಾಹ್ಯಾಕಾಶ ವಿಜ್ಞಾನಿ ಕೆ ಕಸ್ತೂರಿರಂಗನ್ ನೇತೃತ್ವದ ಹೊಸ ಒಂಬತ್ತು-ಸದಸ್ಯರ ಸಮಿತಿಯನ್ನು ಮಾನವ ಸಂಪನ್ಮೂಲ ಸಚಿವಾಲಯ ರಚಿಸಿದೆ. ಸಮಿತಿಯ ಇತರ ಸದಸ್ಯರು ವ್ಯಾಪಕ ಹಿನ್ನೆಲೆಗಳಿಂದ ಆಯ್ದ ತಜ್ಞರು ಮತ್ತು ಶಿಕ್ಷಣ ತಜ್ಞರಾಗಿರಲ್ಲಿದ್ದಾರೆ.
ಕೇರಳದ ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಶೇ.100% ಸಾಕ್ಷರತೆಯನ್ನು ಸಾಧಿಸಲು ಅಪಾರ ಶ್ರಮವಹಿಸಿದ್ದ ಮಾಜಿ ಐಎಎಸ್ ಅಧಿಕಾರಿ ಕೆ.ಜೆ ಅಲ್ಪೊನ್ಸೊ ಕಣಮಥನಂ ಅವರು ಈ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.
ರಾಮ್ ಶಂಕರ್ ಕುರೆಲ್ ಸಮಿತಿಯ ಮತ್ತೊಬ್ಬ ಸದಸ್ಯರು. ಇವರು ಕೃಷಿ ವಿಜ್ಞಾನ ಮತ್ತು ನಿರ್ವಹಣೆಯ ಕ್ಷೇತ್ರದಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಕುರೆಲ್ ಅವರು ಮಧ್ಯಪ್ರದೇಶದ ಮೊವ್ ನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಸೋಶಿಯಲ್ ಸೈನ್ಸ್ ನ ವೈಸ್ ಚಾನ್ಸಲರ್.
ಕರ್ನಾಟಕ ರಾಜ್ಯ ಇನ್ನೋವೇಷನ್ ಕೌನ್ಸಿಲ್ನ ಮಾಜಿ ಸದಸ್ಯ ಕಾರ್ಯದರ್ಶಿ M.K. ಶ್ರೀಧರ್, ಭಾಷಾ ಸಂವಹನದಲ್ಲಿ ಪರಿಣಿತರಾದ ಟಿ.ವಿ ಕಟ್ಟಿಮಣಿ, ಗುವಾಹಾಟಿ ವಿಶ್ವವಿದ್ಯಾನಿಲಯದ ಪರ್ಷಿಯನ್ ಪ್ರಾಧ್ಯಾಪಕ ಡಾ. ಮಝಾರ್ ಆಸಿಫ್, ಉತ್ತರ ಪ್ರದೇಶದ ಮಾಜಿ ಶಿಕ್ಷಣ ನಿರ್ದೇಶಕ ಕೃಷನ್ ಮೋಹನ್ ತ್ರಿಪಾಠಿ, ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಗಣಿತಜ್ಞ ಮಂಜುಲ್ ಭಾರ್ಗವ ಮತ್ತು ಮುಂಬೈನ ಎಸ್ಎನ್ಡಿಟಿ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ವಸುಧ ಕಾಮತ್ ಸಮಿತಿಯ ಇತರೆ ಸದಸ್ಯರು.
ಹಿನ್ನಲೆ:
2015ರಲ್ಲಿ, ನರೇಂದ್ರ ಮೋದಿ ಸರಕಾರ ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಟಿ.ಎಸ್.ಆರ್. ಸುಬ್ರಹ್ಮಣ್ಯನ್ ನೇತೃತ್ವದಲ್ಲಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಲು ರಚಿಸಿತ್ತು. ಈ ಸಮಿತಿಯು ತನ್ನ ವರದಿಯನ್ನು ಮೇ 2016 ರಲ್ಲಿ ಸಲ್ಲಿಸಿದೆ. ಸಮಿತಿಯು ತನ್ನ ವರದಿಯನ್ನು 90 ಶಿಫಾರಸ್ಸುಗಳೊಂದಿಗೆ ಎರಡು ಸಂಪುಟಗಳಲ್ಲಿ ಪ್ರಸ್ತುತಪಡಿಸಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಇತರೆ ಹಿಂದಿನ ಸಮಿತಿಗಳು:
ಉನ್ನತ ಶಿಕ್ಷಣದ ಬಗ್ಗೆ ರಾಧಾಕೃಷ್ಣನ್ ಕಮೀಷನ್ (1948-49); ಮಾಧ್ಯಮಿಕ ಶಿಕ್ಷಣದ ಬಗ್ಗೆ ಮುದಲಿಯಾರ್ ಕಮಿಷನ್ (1952) ಮತ್ತು ಕೊಥಾರಿ ಆಯೋಗ (1964-66). ಕೊಥಾರಿ ಆಯೋಗವು ಎಲ್ಲ ಹಂತಗಳಲ್ಲಿ ಮತ್ತು ಎಲ್ಲ ವಿಷಯಗಳಲ್ಲಿ ಶಿಕ್ಷಣದ ಅಭಿವೃದ್ಧಿಯ ಬಗ್ಗೆ ಸಲಹೆ ನೀಡವು ಜವಾಬ್ದಾರಿಯನ್ನು ಹೊಂದಿತ್ತು. ಕೊಥಾರಿ ಆಯೋಗದ ವರದಿಯನ್ನು 1968 ರ ಶಿಕ್ಷಣ ನೀತಿಯನ್ನು ರೂಪಿಸಲು ಬಳಸಲಾಗಿದೆ.
ರೇಸ್ ಅಕ್ರಾಸ್ ಅಮೆರಿಕ ಭಾರತದ ಇಬ್ಬರಿಂದ ವಿನೂತನ ದಾಖಲೆ
ವಿಶ್ವದ ಅತ್ಯಂತ ಕಠಿಣ ಸ್ಪರ್ಧೆ ಎನಿಸಿರುವ ರೇಸ್ ಅಕ್ರಾಸ್ ಅಮೆರಿಕ ಸಕ್ಲಿಂಗ್ (ಆರ್‌ಎಎಎಂ) ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಭಾರತದ ಶ್ರೀನಿವಾಸ್ ಗೋಕುಲನಾಥ್ ಮತ್ತು ಅಮಿತ್ ಸಮರ್ಥ್ ವಿನೂತನ ದಾಖಲೆ ಬರೆದಿದ್ದಾರೆ.
- 4900 ಕಿಲೋಮೀಟರ್ಸ್ ದೂರದ ಸ್ಪರ್ಧೆಯನ್ನು ಲೆಫ್ಟಿನೆಂಟ್ ಕರ್ನಲ್ ಶ್ರೀನಿವಾಸ್ ಗೋಕುಲನಾಥ್ ಮತ್ತು ಅಮಿತ್ ಸಮರ್ಥ್ ಅವರು ಪೂರ್ಣಗೊಳಿಸಿದ್ದಾರೆ. ಅದರೊಂದಿಗೆ ಮೊದಲ ಬಾರಿ ಈ ಸಾಧನೆ ಮಾಡಿದ ಭಾರತದ ಸ್ಪರ್ಧಿಗಳೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- 11 ದಿನಗಳು, 18 ಗಂಟೆಗಳು ಮತ್ತು 45 ನಿಮಿಷಗಳವರೆಗೆ ನಡೆದ ಸ್ಪರ್ಧೆಯಲ್ಲಿ ಭಾರತದ ಸೈಕ್ಲಿಸ್ಟ್‌ಗಳು ಭಾಗವಹಿಸಿದ್ದರು. ಅದರಲ್ಲಿ ಕ್ರಿಸ್ಟೋಫರ್ ಸ್ಟಾರರ್ಸ್ ಪ್ರಥಮ ಸ್ಥಾನ ಗಳಿಸಿದರು.
- ಶ್ರೀನಿವಾಸ್ ಅವರು ಮಹಾರಾಷ್ಟ್ರದ ನಾಸಿಕ್ ನಗರದವರು. ಅವರು ಸಹ್ಯಾದ್ರಿ ತಂಡವನ್ನು ಪ್ರತಿನಿಧಿಸುತ್ತಾರೆ. ಅಮೆರಿಕದ ರೇಸ್‌ನಲ್ಲಿ ಅವರು 4–ಮೆನ್ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಶ್ರೀನಿವಾಸ್ ಎಂಟು ದಿನಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿದರು. ಅವರು ಪ್ರತಿದಿನವೂ ಹತ್ತು ಗಂಟೆಗಳ ಕಾಲ ಸೈಕ್ಲಿಂಗ್ ಮಾಡಿ ಗುರಿ ತಲುಪಿದರು.
- ಶ್ರೀನಿವಾಸ್ ಅವರು ವೃತ್ತಿಯಿಂದ ವೈದ್ಯರಾಗಿದ್ದಾರೆ. ಏರೋಸ್ಪೆಸ್ ಮೆಡಿಸಿನ್‌ನಲ್ಲಿ ಅವರು ಪರಿಣತರು. ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಕಳೆದ ವರ್ಷವೂ ರೇಸ್‌ನಲ್ಲಿ ಭಾಗವಹಿಸಿದ್ದರು. ಆದರೆ ಆಗ ಮೂರು ಸಾವಿರ ಕಿಲೋಮೀಟರ್ಸ್‌ಗಳಷ್ಟು ಮಾತ್ರ ಕ್ರಮಿಸಿದ್ದರು.
- ನಾಗಪುರದ ಅಮಿತ್ ಅವರು ಇದೇ ಮೊದಲ ಬಾರಿಗೆ ಈ ರೇಸ್‌ನಲ್ಲಿ ಸ್ಪರ್ಧಿಸಿದ್ದರು. ಅವರು ಈ ಹಿಂದೆ ಟ್ರಯಥ್ಲಾನ್‌ನಲ್ಲಿ ಐರನ್‌ಮ್ಯಾನ್ ಆಗಿದ್ದರು. ಮ್ಯಾರಾಥಾನ್‌ನಲ್ಲಿಯೂ ಸ್ಪರ್ಧಿಸಿದ್ದರು.
ಲೋಧ ಸಮಿತಿಯ ಸುಧಾರಣೆಗಳ ಮೇಲ್ವಿಚಾರಣೆ ಮಾಡಲು ಬಿಸಿಸಿಐ ನಿಂದ ಸಮಿತಿ
ಲೋಧ ಸಮಿತಿಯ ಕೆಲವು ವಿವಾದ್ಮತಕ ಶಿಫಾರಸ್ಸನ್ನು ಪರಿಶೀಲಿಸುವ ಸಲುವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಏಳು ಜನ ಸದಸ್ಯರ ಸಮಿತಿಯನ್ನು ರಚಿಸಿದೆ.
ರಾಜೀವ್ ಶುಕ್ಲಾ ಅವರ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿ ರಚನೆಯಾಗಿದೆ. ಸಮಿತಿಯ ಇತರ ಸದಸ್ಯರು ಮಾಜಿ ನಾಯಕ ಸೌರವ್ ಗಂಗೂಲಿ, ಟಿ.ಸಿ. ಮ್ಯಾಥ್ಯೂ (ಕೇರಳ ಕ್ರಿಕೆಟ್), ನಬಾ ಭಟ್ಟಾಚಾರ್ಜಿ (ಈಶಾನ್ಯ ಪ್ರತಿನಿಧಿ), ಜೇ ಷಾ (ಗುಜರಾತ್ ಕ್ರಿಕೆಟ್ ಅಸೋಸಿಯೇಷನ್), ಬಿಸಿಸಿಐ ಖಜಾಂಚಿ ಅನಿರುದ್ ಚೌಧರಿ ಮತ್ತು ಬಿಸಿಸಿಐ ನಟನಾ ಕಾರ್ಯದರ್ಶಿ ಅಮಿತಾಭ್ ಚೌಧರಿ.
ಲೋಧಾ ಸಮಿತಿಯು 70-ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮತ್ತು ಕ್ರಿಕೆಟಿಗ ಆಡಳಿತದಲ್ಲಿ ಈಗಾಗಲೇ ಒಂಬತ್ತು ವರ್ಷಗಳ ಪೂರ್ಣಗೊಂಡಿರುವವರನ್ನು ಅನರ್ಹಗೊಳಿಸುವುದು ಶಿಫಾರಸ್ಸಿನಲ್ಲಿ ಒಂದಾಗಿದೆ. ಈ ಶಿಫಾರಸ್ಸನ್ನು ರಾಜ್ಯ ಕ್ರಿಕೆಟ್ ಘಟಕಗಳು ವಿರೋಧಿಸುತ್ತಿವೆ. ಜುಲೈ 10 ರೊಳಗೆ ಬಿಸಿಸಿಐ ಸಮಿತಿ ತನ್ನ ಲಿಖಿತ ವರದಿಯನ್ನು ಸಲ್ಲಿಸುವಂತೆ ಕೇಳಿದೆ.
ವಿಶ್ವದ ಮೊದಲ ಎಟಿಎಂ ಗೆ 50 ವರ್ಷದ ಸಂಭ್ರಮ
ವಿಶ್ವದ ಮೊದಲ ಎಟಿಎಂ (ಸ್ವಯಂಚಾಲಿತ ಟೆಲ್ಲರ್ ಯಂತ್ರ) ತನ್ನ 50ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಕಳೆದ ಐದು ದಶಕಗಳಲ್ಲಿ, ಎಟಿಎಂ ಯಂತ್ರಗಳು ಜನರು ಹಣವನ್ನು ಪಡೆಯುವ ಮತ್ತು ಬಳಸುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿವೆ.
- ಎಟಿಎಂ ಯಂತ್ರಗಳು ಸ್ಕಾಟಿಷ್ ಸಂಶೋಧಕ ಶೆಫರ್ಡ್-ಬ್ಯಾರನ್ನ ಕನಸಿನ ಕೂಸು.
- ಉತ್ತರ ಲಂಡನ್ನ ಎನ್ಫೀಲ್ಡ್ನಲ್ಲಿನ ಬಾರ್ಕ್ಲೇಸ್ ಬ್ಯಾಂಕ್ನಿಂದ ಮೊದಲ ಎಟಿಎಂ ಜೂನ್ 27, 1967 ರಂದು ಪ್ರಾರಂಭವಾಯಿತು.
- ಇಂಗ್ಲಿಷ್ ನಟ ರೆಗ್ ವಾರ್ನೆಯವರು ಎಟಿಎಂ ಯಂತ್ರದಿಂದ ಹಣವನ್ನು ಪಡೆದ ಮೊದಲ ವ್ಯಕ್ತಿ.
- ಪ್ರಸ್ತುತ, ಪ್ರಪಂಚದಾದ್ಯಂತ 3 ದಶಲಕ್ಷ ನಗದು ಯಂತ್ರಗಳು ಇವೆ. UK ಯಲ್ಲಿ ಸುಮಾರು 70,000 ನಗದು ಯಂತ್ರಗಳು ಇವೆ.
- ನಾರ್ವೆಯ ಸ್ವಾಲ್ಬಾರ್ಡ್ನ ಲೋಂಗೈರ್ಬೈನ್ನಲ್ಲಿ ವಿಶ್ವದ ಅತ್ಯಂತ ಉತ್ತರ ಭಾಗದ ಎಟಿಎಂ ಯಂತ್ರವಿದೆ. ದಕ್ಷಿಣ ಧ್ರುವದ ಮೆಕ್ಮುರ್ಡೋ ನಿಲ್ದಾಣದಲ್ಲಿ ವಿಶ್ವದ ದಕ್ಷಿಣ ಭಾಗದ ಎಟಿಎಂ ಇದೆ.
- 50 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ, ಬಾರ್ಕ್ಲೇಸ್ ಬ್ಯಾಂಕ್ ತನ್ನ ಎನ್ಫೀಲ್ಡ್ ಶಾಖೆಯಲ್ಲಿನ ಎಟಿಎಂ ಅನ್ನು ಚಿನ್ನದ ಎಟಿಎಂ ಆಗಿ ಮಾರ್ಪಡಿಸಿದೆ.
ಭಾರತ-ಪಾಕಿಸ್ತಾನಕ್ಕೆ SCO ಸದಸ್ಯತ್ವ
ಭಾರತ ಮತ್ತು ಪಾಕಿಸ್ತಾನ ಶಾಂಘೈ ಸಹಕಾರ ಸಂಘಟನೆಗೆ (ಎಸ್‌ಸಿಒ) ಸದಸ್ಯ ರಾಷ್ಟ್ರಗಳಾಗಿ ಸೇರ್ಪಡೆಗೊಂಡಿವೆ. ಭಾರತ ಮತ್ತು ಪಾಕಿಸ್ತಾನದ ಬಾವುಟಗಳನ್ನು ಹಾರಿಸುವ ಮೂಲಕ ಈ ರಾಷ್ಟ್ರಗಳ ಸದಸ್ಯತ್ವವನ್ನು ಅಧಿಕೃತವಾಗಿ ಘೋಷಿಸಲಾಯಿತು. ಚೀನಾಕ್ಕೆ ಭಾರತದ ರಾಯಭಾರಿಯಾಗಿರುವ ವಿಜಯ್ ಗೋಖಲೆ ಮತ್ತು ಅವರ ಪಾಕಿಸ್ತಾನ ಸಹವರ್ತಿ ಮಸೂದ್ ಖಾಲಿದ್ ಜಂಟಿಯಾಗಿ ಡ್ರಮ್ ಬಾರಿಸುವ ಮೂಲಕ, ಸಂಸ್ಥೆಯಲ್ಲಿ ತಾವು ಸದಸ್ಯತ್ವ ಪಡೆದಿರುವುದನ್ನು ಸಾರಿದರು.
- ಜೂನ್ 8–9ರಂದು ಖಜಕಿಸ್ತಾನದ ರಾಜಧಾನಿ ಅಸ್ತಾನಾದಲ್ಲಿ ನಡೆದ ಶೃಂಗಸಭೆಯಲ್ಲಿ ಉಭಯ ದೇಶಗಳೂ ಎಸ್‌ಸಿಒ ಸದಸ್ಯತ್ವಕ್ಕೆ ಔಪಚಾರಿಕ ಒಪ್ಪಿಗೆ ಸೂಚಿಸಿದ್ದವು.
SCO:
ಶಾಂಘೈ ಸಹಕಾರ ಸಂಸ್ಥೆ (SCO) ಯುರೇಷಿಯಾದ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಸಂಘಟನೆಯಾಗಿದ್ದು, 15 ಜೂನ್ 2001 ರಂದು ಚೀನಾದ ಶಾಂಘೈನಲ್ಲಿ, ಚೀನಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಮುಖಂಡರಿಂದ ರಚಿಸಲ್ಪಟ್ಟಿತು. ಶಾಂಘೈ ಸಹಕಾರ ಸಂಸ್ಥೆ ಚಾರ್ಟರ್ಗೆ ಜೂನ್ 2002 ರಲ್ಲಿ ಸಹಿ ಹಾಕಲಾಗಿದ್ದು, 19 ಸೆಪ್ಟೆಂಬರ್ 2003ರಂದು ಜಾರಿಗೆ ಬಂದಿದೆ. ಭಾರತ ಮತ್ತು ಪಾಕಿಸ್ತಾನ ಕಝಾಕಿಸ್ತಾನದ ಅಸ್ತಾನಾದಲ್ಲಿ 9 ಜೂನ್ 2017 ರಂದು ಪೂರ್ಣ ಸದಸ್ಯರಾಗಿ SCO ಗೆ ಸೇರಿಕೊಂಡಿವೆ.
ಒಡಿಶಾದಲ್ಲಿ ದೇಶದಲ್ಲೆ ಮೊದಲ ಬಾರಿಗೆ ಜಾನುವಾರುಗಳ ರಕ್ತ ನಿಧಿ ಸ್ಥಾಪನೆಗೆ ಸಜ್ಜು
ದೇಶದಲ್ಲಿ ಮೊದಲ ಬಾರಿಗೆ ಜಾನುವಾರುಗಳಿಗೆ ರಕ್ತ ಬ್ಯಾಂಕ್ ತೆರೆಯಲು ಒಡಿಶಾ ಸಜ್ಜಾಗಿದೆ. ಪ್ರಸ್ತಾವನೆಯು ರಾಷ್ಟ್ರೀಯ ಕೃಷಿ ಅಭಿವೃದ್ಧಿ ಕಾರ್ಯಕ್ರಮ (ಎನ್ಎಡಿಪಿ) ಯಿಂದ ಮೆಚ್ಚುಗೆ ಪಡೆದಿದ್ದು, ರಾಜ್ಯ ಸರ್ಕಾರದಿಂದ ಅನುಮೋದನೆಗೆ ಸಲ್ಲಿಸಲಾಗಿದೆ.
- ಒಡಿಶಾ ಕೃಷಿ ವಿಶ್ವವಿದ್ಯಾಲಯ ಮತ್ತು ತಂತ್ರಜ್ಞಾನ (OUAT)ದ ಆವರಣದಲ್ಲಿ ಜಾನುವಾರುಗಳ ರಕ್ತ ಬ್ಯಾಂಕ್ ಅನ್ನು ಅಂದಾಜು ರೂ. 3.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.
- ಘಟಕ ವೆಚ್ಚದ 60% ನಷ್ಟು ಹಣವನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ ಮತ್ತು ಉಳಿದ 40% ಒಡಿಶಾ ರಾಜ್ಯ ಸರ್ಕಾರದಿಂದ ಹಣವನ್ನು ನೀಡಲಾಗುತ್ತದೆ.
- ಈ ಉಪಕ್ರಮದ ಅಡಿಯಲ್ಲಿ, ರಕ್ತವನ್ನು ರೈತರ ಸ್ವಯಂಪ್ರೇರಣೆಯಿಂದ ಸಂಗ್ರಹಿಸಲಾಗುವುದು.
- ಕರುವಿನ ಜನನ ಸಮಯದಲ್ಲಿ ಮತ್ತು ಇತರ ಕಾಯಿಲೆಗಳ ಸಂದರ್ಭದಲ್ಲಿ ಜಾನುವಾರು ಸಾವುಗಳನ್ನು ತಡೆಗಟ್ಟುವಲ್ಲಿ ರಕ್ತ ಬ್ಯಾಂಕ್ ಸಹಾಯ ಮಾಡಲಿದೆ. ಸಾಕುಪ್ರಾಣಿಗಳ ಜೀವನವನ್ನು ಉಳಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಲಿದೆ.
ಮತದಾರರ ನೋಂದಣಿಗೆ ಫೇಸ್ ಬುಕ್ ಜೊತೆ ಚುನಾವಣಾ ಆಯೋಗ ಒಪ್ಪಂದ
ಚುನಾವಣಾ ಆಯೋಗವು ಮತದಾರರ ಪಟ್ಟಿಗೆ ಅರ್ಹ ಭಾರತೀಯ ಮತದಾರರನ್ನು ನೋಂದಾಯಿಸಲು ನೆನಪಿಸುವ ಉದ್ದೇಶದಿಂದ ರಾಷ್ಟ್ರವ್ಯಾಪಿ ಮತದಾರ ನೋಂದಣಿ ಜ್ಞಾಪನವನ್ನು ಪ್ರಾರಂಭಿಸಲು ಫೇಸ್ಬುಕ್ನೊಂದಿಗೆ ಕೈ ಜೋಡಿಸಿದೆ.
- ಉಪಕ್ರಮದ ಒಂದು ಭಾಗವಾಗಿ, ಮತದಾರರಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಎಲ್ಲ ಅರ್ಹ ಭಾರತೀಯರಿಗೆ ನೆನಪಿಸಲು ಫೇಸ್ಬುಕ್ ‘ರಿಜಿಸ್ಟರ್ ನೌ’ ಗುಂಡಿಯನ್ನು ಸಕ್ರಿಯಗೊಳಿಸಲಿದೆ.
- ಜುಲೈ 1 ರಿಂದ ನಾಲ್ಕು ದಿನಗಳವರೆಗೆ ಜ್ಞಾಪನೆ ಲಭ್ಯವಿರಲಿದೆ. ಬಳಕೆದಾರರು ಬಟನ್ ಅನ್ನು ಕ್ಲಿಕ್ ಮಾಡಿದಾಗ, ಅವರನ್ನು ರಾಷ್ಟ್ರೀಯ ಮತದಾರರ ಸೇವೆ ಪೋರ್ಟಲ್ಗೆ ಮರುನಿರ್ದೇಶಿಸಲಾಗುತ್ತದೆ. ಅಲ್ಲಿ ಅವರು ಮತದಾರರಾಗಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು.
- ಜ್ಞಾಪನೆ 13 ಭಾಷೆಗಳಲ್ಲಿ ಲಭ್ಯವಿರುತ್ತದೆ – ಇಂಗ್ಲೀಷ್, ಹಿಂದಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಪಂಜಾಬಿ, ಬೆಂಗಾಲಿ, ಉರ್ದು, ಅಸ್ಸಾಮಿ, ಮರಾಠಿ ಮತ್ತು ಓರಿಯಾ.
- ಈ ಅಭಿಯಾನದಲ್ಲಿ ಫೇಸ್ಬುಕ್ ಮೂಲಕ 180 ದಶಲಕ್ಷ ಭಾರತೀಯರನ್ನು ತಲುಪಲು ಚುನಾವಣಾ ಆಯೋಗ ಗುರಿ ಇಟ್ಟುಕೊಂಡಿದೆ.
ಜಿಸ್ಯಾಟ್-17 ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದ ಇಸ್ರೋ
ದೂರಸಂಪರ್ಕ ಉಪಗ್ರಹ ಜಿಸ್ಯಾಟ್–17 ಅನ್ನು ಫ್ರೆಂಚ್ ಗಾಯಾನದ ಕೌರೌ ಉಪಗ್ರಹ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಉಪಗ್ರಹವನ್ನು ಏರಿಯಾನ್–5 ವಿಎ–238 ಉಡಾವಣಾ ವಾಹಕದ ಮೂಲಕ ಕಕ್ಷೆಗೆ ಸೇರಿಸಲಾಯಿತು.
- ಇಸ್ರೋದಿಂದ ಈಗಾಗಲೇ ಕಕ್ಷೆ ಸೇರಿರುವ 17 ದೂರಸಂಪರ್ಕ ಉಪಗ್ರಹಗಳ ಜತೆ ಇದು ಕಾರ್ಯನಿರ್ವಹಿಸಲಿದೆ’.
- ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಇಸ್ರೋದಿಂದ ಉಡಾವಣೆಗೊಂಡ ಮೂರನೇ ಉಪಗ್ರಹ ಇದಾಗಿದೆ. ಇದಕ್ಕೂ ಮುನ್ನ ಜಿಎಸ್‌ಎಲ್‌ವಿ ಎಂಕೆ–3 ಹಾಗೂ ಪಿಎಸ್‌ಎಲ್‌ವಿ ಸಿ–38 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು.
- ಜಿಸ್ಯಾಟ್–17 ಒಟ್ಟು 3,477 ಕೆ.ಜಿ ತೂಕವಿದೆ. ಹವಾಮಾನ ದತ್ತಾಂಶ, ಉಪಗ್ರಹ ಆಧಾರಿತ ಹುಡುಕಾಟದ ಸೇವೆಗೆ ಇದು ಬಳಕೆ ಆಗಲಿದೆ ಎಂದು ಇಸ್ರೊ ಹೇಳಿದೆ.
ಯುನೆಸ್ಕೋ ವಿಶ್ವ ಪುಸ್ತಕ ರಾಜಧಾನಿಯಾಗಿ ಶಾರ್ಜಾ
ಯುನೆಸ್ಕೋ 2019 ರ ವಿಶ್ವ ಪುಸ್ತಕ ರಾಜಧಾನಿಯಾಗಿ ಶಾರ್ಜಾ ನಗರವನ್ನು ಆಯ್ಕೆ ಮಾಡಲಾಗಿದೆ. ಇಡೀ ಜನರಿಗೆ ಪುಸ್ತಕಗಳು ಲಭ್ಯವಾಗಿರುವಂತೆ ಶಾರ್ಜಾದ ಪ್ರಯತ್ನಗಳನ್ನು ಗಮನಿಸಿ ಆಯ್ಕೆ ಮಾಡಲಾಗಿದೆ.
- ಯುನೆಸ್ಕೋ ವಿಶ್ವ ಪುಸ್ತಕ ರಾಜಧಾನಿ ಎಂದು ಹೆಸರಿಸಲ್ಪಟ್ಟ 19 ನೇ ನಗರ ಶಾರ್ಜಾ. ವರ್ಲ್ಡ್ ಬುಕ್ ಕ್ಯಾಪಿಟಲ್ ಎಂದು ಹೆಸರಿಸಲ್ಪಟ್ಟ ಹಿಂದಿನ ನಗರಗಳು: ಮ್ಯಾಡ್ರಿಡ್ (2001), ಅಲೆಕ್ಸಾಂಡ್ರಿಯಾ (2002), ನವ ದೆಹಲಿ (2003), ಆಂಟ್ವೆರ್ಪ್ (2004), ಮಾಂಟ್ರಿಯಲ್ (2005), ಟುರಿನ್ (2006), ಬೊಗೊಟಾ (2007) 2008 ರಲ್ಲಿ, ಬೈರುತ್ (2009), ಲುಜುಬ್ಲಾನಾ (2010), ಬ್ಯೂನಸ್ ಐರಿಸ್ (2011), ಯೆರೆವಾನ್ (2012), ಬ್ಯಾಂಕಾಕ್ (2013), ಪೋರ್ಟ್ ಹಾರ್ಕೋರ್ಟ್ (2014), ಇಂಚೆಯಾನ್ (2015), ರೊಕ್ಲಾ (2016), ಕೊನಾಕ್ರಿ (2017) ಅಥೆನ್ಸ್ (2018).
- ಗಲ್ಫ್ ಸಹಕಾರ ಮಂಡಳಿಯಲ್ಲಿ ಈ ಗೌರವ ಪಡೆದ ಮೊದಲ ನಗರ ಮತ್ತು ಅರಬ್ ದೇಶಗಳು ಹಾಗೂ ಮಧ್ಯಪ್ರಾಚ್ಯದಲ್ಲಿ ಈ ಗೌರವ ಪಡೆದ ಮೂರನೆಯ ನಗರ. ಗಲ್ಫ್ ಸಹಕಾರ ಮಂಡಳಿಯ ಸದಸ್ಯ ರಾಷ್ಟ್ರಗಳೆಂದರೆ ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ. ಈ ಹಿಂದೆ ಶಾರ್ಜಾ ನಗರ ಅರಬ್ ಸಂಸ್ಕೃತಿ ರಾಜಧಾನಿ (1998), ಕ್ಯಾಪಿಟಲ್ ಆಫ್ ಇಸ್ಲಾಮಿಕ್ ಕಲ್ಚರ್ (2014), ಮತ್ತು ಅರಬ್ ಪ್ರವಾಸೋದ್ಯಮದ ರಾಜಧಾನಿ (2015) ಎಂದು ಕರೆಸಿಕೊಂಡಿತ್ತು.
ಅಂಕಿತ್ ಕವತ್ರಾಗೆ “ಕ್ವೀನ್ಸ್ ಯಂಗ್ ಲೀಡರ್” ಪ್ರಶಸ್ತಿ
ಹಸಿವು ವಿರೋಧಿ ಕಾರ್ಯಕರ್ತ ಅಂಕಿತ್ ಕವಾತ್ರ ಅವರಿಗೆ ಕ್ವೀನ್ ಯಂಗ್ ಲೀಡರ್-2017 ಪ್ರಶಸ್ತಿಯನ್ನು ಕ್ವೀನ್ ಎಲಿಜಬೆತ್ II ರವರು ಬಕಿಂಗ್ಹ್ಯಾಮ್ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನ ಮಾಡಿದರು.
ಕ್ವೀನ್ಸ್ ಯಂಗ್ ಲೀಡರ್ಸ್ ಅವಾರ್ಡ್ ಭಾರತದಲ್ಲಿ ಹಸಿವು ಮತ್ತು ಅಪೌಷ್ಠಿಕತೆಯನ್ನು ಪರಿಹರಿಸುವ ಅಸಾಧಾರಣ ಕೆಲಸವನ್ನು ಗುರುತಿಸುತ್ತದೆ.
ಅಂಕಿತ್ ಕವಾತ್ರ ಅವರು ಫೀಡಿಂಗ್ ಇಂಡಿಯಾ ಸಂಸ್ಥೆಯ ಸ್ಥಾಪಕರು. ಈ ಸಂಸ್ಥೆ ಭಾರತದಲ್ಲಿ ಹಸಿವು ಮತ್ತು ಆಹಾರವನ್ನು ಹಾಳುಮಾಡುವುದನ್ನು ನಿರ್ಮೂಲನ ಮಾಡುವ ಕಾರ್ಯದಲ್ಲಿ ನಿರತವಾಗಿದೆ. 2014 ರಲ್ಲಿ ದೇಶದ 43 ನಗರಗಳಲ್ಲಿ ಸ್ಥಾಪಿತವಾದ ಈ ಸಂಸ್ಥೆ 4,500 ಸ್ವಯಂಸೇವಕರ ಸಹಾಯದಿಂದ ಪ್ರತಿ ದಿನ 8 ದಶಲಕ್ಷ ಊಟಗಳನ್ನು ಪೂರೈಸುತ್ತಿದೆ.
ಪ್ರಶಸ್ತಿಯ ಬಗ್ಗೆ:
ರಾಣಿ ಎಲಿಜಬೆತ್ ಜೂಬಿಲಿ ಟ್ರಸ್ಟ್, ರಾಯಲ್ ಕಾಮನ್ವೆಲ್ತ್ ಸೊಸೈಟಿ ಮತ್ತು ಕಾಮಿಕ್ ರಿಲೀಫ್ ಈ ಪ್ರಶಸ್ತಿಯನ್ನು ಸ್ಥಾಪಿಸಿವೆ. ರಾಣಿ ಎಲಿಜಬೆತ್ ಸಿಂಹಾಸನ ಅಲಂಕರಿಸಿ 60 ವರ್ಷಗಳು ಆದ ಕಾರಣ ಮತ್ತು ಕಾಮನ್ವೆಲ್ತ್ ರಾಷ್ಟ್ರಗಳಿಗೆ ಆರು ದಶಕಗಳ ಸೇವೆ ಸಲ್ಲಿಸಿದರ ಗೌರವಾರ್ಥವಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
- ಅಂತಾರಾಷ್ಟ್ರೀಯ ಆರ್ಥಿಕ ಸಂಘಟನೆಯ ಅಧ್ಯಕ್ಷರಾಗಿ ಕೌಶಿಕ್ ಬಸು: ಕೌಶಿಕ್ ಬಸು ಅಂತಾರಾಷ್ಟ್ರೀಯ ಆರ್ಥಿಕ ಸಂಘಟನೆಯ (ಐಇಎ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬಸು ಅವರು ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿಗೆ ಸೇವೆ ಸಲ್ಲಿಸಲಿದ್ದಾರೆ. ಕೌಶಿಕ್ ಬಸು ಅವರು 2009 ರಿಂದ 2012 ರವರೆಗೆ ಭಾರತದ ಪ್ರಮುಖ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಅವರು 2012 ರಿಂದ 2016 ರವರೆಗೂ ವಿಶ್ವ ಬ್ಯಾಂಕ್ನಲ್ಲಿ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ್ದಾರೆ.
very good information collected. it is one of the good knowledge source in kannada .please continue.
hey yamunappa,yes they are doing very good job, i appreciate their work. all the very best to team.
ಕನ್ನಡದಲ್ಲಿ ಕೊರತೆ ಎನಂದರೆ ವಿಷಯಗಳು ಮತ್ತು ಪ್ರಚಲಿತ ವಿಷಯಗಳು ಬೇಗನೆ ಅಪಲೋಡ್ ಮಾಡದೇ ಇರುವುದು ಆದ್ದರಿಂದ ಕರುನಾಡು ಎಕ್ಸಮ್ ರವರು ಯಾವಾಗಲು ಒಂದು ತಿಂಗಳ ಹಿಂದೆನೆ ಇರುತ್ತಾರೆ ಆದರೆ ಈಗಿನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಗಳು 15ದಿನದ ಹಿಂದೆ ಇರುವ ಪ್ರಚಲಿತ ಘಟನೆಗಳನ್ನು ತೆಗೆದುಕೋಳ್ಳುತ್ತಾರೆ ಇದರಿಂದ ನಿಮ್ಮನ್ನು ನಂಬಿದರೆ ಪ್ರಚಲಿತ ಘಟನೆಗಳು ಕೈ ತಪ್ಪಿ ಹೋಗುತ್ತವೆ. ಆದ್ದರಿಂದ G.K Today English ರವರು ಬಹಳ ಒಳ್ಳೆ ರೀತಿಯಿಂದ ಪ್ರಚಲಿತ ಪ್ರಶ್ನೆಗಳು ಬರುತ್ತವೆ . ಆದರೆ ಇಂಗ್ಲೀಷ್ ನಲ್ಲಿರುವುದರಿಂದ ಕನ್ನಡ ಮಾದ್ಯಮ ಅಭ್ಯರ್ಥಿಗಳಿಗೆ ಬಹಳ ತೊಂದರೆ ಯಾಗುತ್ತಿದೆ. ಆದ್ದರಿಂದ ಇನ್ನು ಮುಂದಾದರು ಆ ದಿನದ ಪ್ರಚಲಿತ ವಿಷಯಗಳು ಆಥವಾ 2ದಿನಗಳ ಅಂತರದಲ್ಲಿ ಅಪ್ ಲೋಡ್ ಮಾಡಿದರೆ ಉತ್ತಮ ಎಂದು ನನ್ನ ಅನಿಸಿಕೆ.
ಕರುನಾಡುಎಕ್ಷಾಮ್ಸ ನಮ್ಮತಂಹ ಗ್ರಾಮೀಣ ವಿದ್ಯಾಥಿ್ಗಳಿಗೆ ಅನುಕೂಲ ವಾಗಿದೆ. ಈ ಕಾಲದಲ್ಲಿ ಪ್ರತಿಯೂಂದುಕ್ಕು ಫೀ ಕೇಳತ್ತಾರೆ ಆದರೆ ಎಷ್ಟ ಬಡ ವಿದ್ಯಾಥಿ್ಗಳಿಗೆ ಆಥಿ್ಕಅನುಕೂಲ ಇಲ್ಲಾ ಆದ್ದರಿಂದ ಇಂತಹ ಕರುನಾಡುಎಕ್ಷಾಮ್ಸ ಗ್ರೇಟ್ ಮತ್ತು ಇದರಿಂದ ಸಹಾಯವಾಗಿದೆ.ಅದೆಷ್ಟು ಸ್ಪದಾ್ಥಿ್ಗಳು ನಿಮಗೆ ನಾವು ಯಾವಗಲೂ ಚಿರರುಣಿ………….ಸರ್
Yaa ur saying Exactly right Sir…..Atleast two days ge omme updates madta idre thumba andre tumba use agutthe..yakandre upload madodu 1 month late adre swalpa kasta agutte adke 2 days ge omm eupdate madbeku anta heltiro nimma abhipraya sariyagide…Thank u brother
Comment
Dear sir,
I am regular watcher of karunaduexam website sir, please updated last 1 and half month current affairs as soon as possible sir
regards
sunil
Karunadu exams good and very good online exams good conducts
ಹೌದು ಸರ ಪ್ರಚಲಿತ ಘಟನೆಗಳನ್ನು ಬೇಗ ಅಪಲೋಡ ಮಾಡಿ
Comment
nice