ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜೂನ್,4,5,6,2017

Question 1

1. ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಿರೊಸ್ಲಾವ್ ಲಜ್ಕಾಕ್ ಅವರು ಯಾವ ದೇಶದವರು?

A
ಸ್ಲೋವಾಕಿಯಾ
B
ಕೀನ್ಯಾ
C
ನೈಜೀರಿಯಾ
D
ಜಿಂಬಾಬ್ವೆ
Question 1 Explanation: 
ಸ್ಲೋವಾಕಿಯಾ

ಸ್ಲೋವಾಕಿಯಾದ ವಿದೇಶಾಂಗ ಮಂತ್ರಿ ಮಿರೊಸ್ಲಾವ್ ಲಜ್ಕಾಕ್ ಮುಂಬರುವ 72 ನೇ ಅಧಿವೇಶನಕ್ಕಾಗಿ ನ್ಯೂಯಾರ್ಕ್ನ ಯುಎನ್ ಪ್ರಧಾನ ಕಚೇರಿಯಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ (ಯುಎನ್ಜಿಎ) ಹೊಸ ಅಧ್ಯಕ್ಷರಾಗಿ ಚುನಾಯಿಸಲಾಗಿದೆ.

Question 2

2. ಈ ಕೆಳಗಿನ ಯಾರು ಐರ್ಲೆಂಡ್ ನ ನೂತನ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ?

A
ಲಿಯೋ ವರಾಡ್ಕರ್
B
ಬ್ರಿಯಾನ್ ಕೊವೆನ್
C
ಮ್ಯಾರಿ ಮ್ಯಾಕ್ಲೆ
D
ಸ್ಟೀಫನ್ ಜೋಸೆಫ್
Question 2 Explanation: 
ಲಿಯೋ ವರಾಡ್ಕರ್

ಫೈನ್ ಗೇಲ್ ಪಾರ್ಟಿಯ ಮುಖಂಡ ಲಿಯೋ ವರಾದ್ಕರ್ ಅವರು ತಮ್ಮ ಪ್ರತಿಸ್ಪರ್ಧಿ ಸೈಮನ್ ಕವೆನಿ ಅವರನ್ನು ಶೇ.60% ಮತಗಳಿಂದ ಸೋಲಿಸಿ ಐರ್ಲೆಂಡ್ನ ನೂತನ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ವರಾದ್ಕರ್ ಅವರು ಮೊದಲ ಸಲಿಂಗಕಾಮಿ ಪ್ರಧಾನಿ ಮತ್ತು ದೇಶದ ಅತ್ಯಂತ ಕಿರಿಯ ನಾಯಕರಾಗಿದ್ದಾರೆ.

Question 3

3. 2017 ಜಾಗತಿಕ ಬಹು-ಆಯಾಮದ ಬಡತನ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
43
B
37
C
53
D
65
Question 3 Explanation: 
ಆಕ್ಸ್ಫರ್ಡ್ ಪಾವರ್ಟಿ & ಹ್ಯೂಮನ್ ಡೆವಲಪ್ಮೆಂಟ್

ಇನಿಶಿಯೇಟಿವ್ನ (OPHI) ವರದಿಯ ಪ್ರಕಾರ 2017 ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ (ಎಂಪಿಐ)ದಲ್ಲಿ 103 ದೇಶಗಳ ಪೈಕಿ ಭಾರತ 37 ನೇ ಸ್ಥಾನವನ್ನು ಪಡೆದುಕೊಂಡಿದೆ. OPHI ಪ್ರೊಫೆಸರ್ ಸಬೀನ ಅಲ್ಕೀರ್ ನೇತೃತ್ವದ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಆರ್ಥಿಕ ಸಂಶೋಧನಾ ಕೇಂದ್ರವಾಗಿದೆ.

Question 4

4. ಭಾರತೀಯ ಷೇರು ವಿನಿಮಯ ಮಂಡಳಿ (ಸೆಬಿ) ಸಾಂಸ್ಥಿಕ ಆಡಳಿತದ ಮೇಲೆ ಯಾವ ಸಮಿತಿಯನ್ನು ರಚಿಸಿದೆ?

A
ಮಧು ಭಂಡಾರ್ಕರ್ ಸಮಿತಿ
B
ಉದಯ್ ಕೊಟಕ್ ಸಮಿತಿ
C
ಉಷಾ ಕಿರಣ್ ಸಮಿತಿ
D
ಸಕೇತ್ ಸುಂದರ್ ಸಮಿತಿ
Question 4 Explanation: 
ಉದಯ್ ಕೋಟಕ್ ಸಮಿತಿ

ಪಟ್ಟಿಮಾಡಿದ ಕಂಪೆನಿಗಳ ಕಾರ್ಪೊರೇಟ್ ಆಡಳಿತದ ಗುಣಮಟ್ಟವನ್ನು ಸುಧಾರಿಸಲು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಕೋಟಾಕ್ ಮಹೀಂದ್ರಾ ಬ್ಯಾಂಕಿನ ಮುಖ್ಯಸ್ಥ ಉದಯ ಕೊಟಕ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ. ಸಮಿತಿಯು ತನ್ನ ವರದಿಯನ್ನು 4 ತಿಂಗಳೊಳಗೆ ಸಲ್ಲಿಸಲಿದೆ. ಸ್ವತಂತ್ರ ನಿರ್ದೇಶಕರ ಆತ್ಮವಿಶ್ವಾಸ ಮತ್ತು ಕಂಪೆನಿಯ ಕಾರ್ಯಾಚರಣೆಯಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆ ಮತ್ತು ಸಂಬಂಧಿತ ಪಕ್ಷದ ವಹಿವಾಟುಗಳಿಗೆ ಸಂಬಂಧಿಸಿದ ರಕ್ಷಣೋಪಾಯಗಳನ್ನು ಮತ್ತು ಅಭಿವ್ಯಕ್ತಿಗಳನ್ನು ಸುಧಾರಿಸುವ ಕ್ರಮಗಳನ್ನು ಸಮಿತಿಯು ಶಿಫಾರಸು ಮಾಡುತ್ತದೆ.

Question 5

5. 90 ನೇ ಸ್ಕ್ರಿಪ್ಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಗೆದ್ದ ಭಾರತೀಯ-ಅಮೆರಿಕನ್ ವಿದ್ಯಾರ್ಥಿ ಯಾರು?

A
ಅನನ್ಯ ವಿನಯ್
B
ಕಿಶೋರ್ ಸಿಂಗ್
C
ಅರ್ಪಿತಾ ಚಂದ್ರ
D
ಮಧು ಗುಪ್ತಾ
Question 5 Explanation: 
ಅನನ್ಯ ವಿನಯ್

ಕ್ಯಾಲಿಫೋರ್ನಿಯಾದ 6 ನೇ ತರಗತಿಯ ಅನನ್ಯ ವಿನಯ್ (12), 2017ರ ಜೂನ್ 1 ರಂದು ಮೇರಿಲ್ಯಾಂಡ್ನ ನ್ಯಾಷನಲ್ ಹಾರ್ಬರ್ನಲ್ಲಿರುವ ಗೇಲಾರ್ಡ್ ನ್ಯಾಶನಲ್ ರೆಸಾರ್ಟ್ & ಕನ್ವೆನ್ಷನ್ ಸೆಂಟರ್ನ 90ನೇ ಸ್ಕ್ರಿಪ್ಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ "ಮಾರ್ಕೊಯ್ನ್ (Marocain)" ಅನ್ನು ಯಶಸ್ವಿಯಾಗಿ ಸ್ಪಷ್ಟವಾಗಿ ಬರೆಯುವ ಮೂಲಕ ಗೆದ್ದಿದ್ದಾರೆ.

Question 6

6. ಯಾವ ಸಿನಿಮಾ 52ನೇ ಕಾರ್ಲೋವಿ ವಾರಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ?

A
ಫಾಲ್ಲಿಂಗ್
B
ರಲಾಂಗ್ ರೋಡ್
C
ಕೇಕ್ ಮೇಕರ್
D
ಖಿಬುಲಾ
Question 6 Explanation: 
ರಲಾಂಗ್ ರೋಡ್

ನೇಪಾಳಿ-ಹಿಂದಿ ಚಲನಚಿತ್ರ ರಲಾಂಗ್ ರೋಡ್ ಜೂನ್ 30 ರಿಂದ ಜುಲೈ 8 ರವರೆಗೆ ನಡೆಯಲಿರುವ ಝೆಕ್ ರಿಪಬ್ಲಿಕ್ನ ಕಾರ್ಲೋವಿ ವಾರಿನಲ್ಲಿರುವ 52ನೇ ಕಾರ್ಲೋವಿ ವಾರಿ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. 13 ವರ್ಷಗಳ ಬಳಿಕ ಭಾರತೀಯ ಚಲನಚಿತ್ರ ಈ ಚಲನಚಿತ್ರೋತ್ಸವದಲ್ಲಿ ಇತರ ಅಂತರರಾಷ್ಟ್ರೀಯ ಚಲನಚಿತ್ರಗಳೊಂದಿಗೆ ಸ್ಪರ್ಧಿಸಲಿದೆ. ಹಿಮಾಲಯನ್ ಗ್ರಾಮಾಂತರದಲ್ಲಿ ವಾಸಿಸುವ ನಾಲ್ಕು ಜನರ ಕಥೆಗಳನ್ನು ರಲಾಂಗ್ ರೋಡ್ ಹೇಳುತ್ತದೆ. ಈ ಚಲನಚಿತ್ರವನ್ನು ಕರ್ಮ ಟಕಪಾ ನಿರ್ದೇಶಿಸಿದ್ದಾರೆ ಮತ್ತು ಹ್ಯೂಮನ್ಟ್ರೈಲ್ ಪಿಕ್ಚರ್ಸ್ ನಿರ್ಮಿಸಿದ್ದಾರೆ.

Question 7

7. ಐಟಿಟಿಎಫ್ (ITTF) ಅಂಪೈರ್ ಮತ್ತು ರೆಫರೀಸ್ ಕಮೀಟಿ (ಯುಆರ್ಸಿ) ಸದಸ್ಯರಾಗಿ ನೇಮಕಗೊಂಡ ಮೊದಲ ಭಾರತೀಯ ಯಾರು?

A
ಗಣೇಶನ್ ನೀಲಕಂಠನ ಅಯ್ಯರ್
B
ಎಸ್ ಶ್ರೀಧರ್
C
ರಕ್ಷೀತ್ ಕೋಟ
D
ಸುರೇಂದ್ರ ನಾಯಕ್
Question 7 Explanation: 
ಗಣೇಶನ್ ನೀಲಕಂಠ ಅಯ್ಯರ್

ಗಣೇಶನ್ ನೀಲಕಂಠ ಅಯ್ಯರ್ ಐಟಿಟಿಎಫ್ ಅಂಪೈರ್ಗಳು ಮತ್ತು ರೆಫರೀಸ್ ಸಮಿತಿಯ (ಯುಆರ್ಸಿ) ಸದಸ್ಯರಾಗಿ ನೇಮಕಗೊಂಡ ಮೊದಲ ಭಾರತೀಯ ಎನಿಸಿದ್ದಾರೆ. ಇವರ ಅಧಿಕಾರವಧಿ ಎರಡು ವರ್ಷಗಳವರೆಗೆ ಇರಲಿದೆ ಮತ್ತು ವಿಸ್ತರಿಸಲಾಗುವುದು. ಭಾರತದಲ್ಲಿನ ಇಂಟರ್ನ್ಯಾಷನಲ್ ಟೇಬಲ್ ಟೆನ್ನಿಸ್ ಫೆಡರೇಶನ್ (ಐಟಿಟಿಎಫ್)ನ ಏಕೈಕ ನಿಯೋಜಿತ ಮ್ಯಾನೇಜರ್ ಅಯ್ಯರ್. ಇದಲ್ಲದೆ, ಗಣೇಶನ್ ಏಷ್ಯನ್ ಕಾಂಟಿನೆಂಟ್ನಿಂದ ತಾಂತ್ರಿಕ ಕಮಿಷನರ್ ಆಗಿ ಐಟಿಟಿಎಫ್ಗೆ ಶಿಫಾರಸು ಗೊಂಡಿದ್ದಾರೆ ಮತ್ತು ಅವರ ಅವಧಿಯು ನಾಲ್ಕು ವರ್ಷಗಳ ಕಾಲ ಇರಲಿದೆ. ಅವರು ದಕ್ಷಿಣ ಏಷ್ಯಾದ ಫೆಡರೇಶನ್ ತಾಂತ್ರಿಕ ಸಮಿತಿಯ ಅಧ್ಯಕ್ಷರಾಗಿದ್ದಾರೆ ಮತ್ತು ಕಾಮನ್ವೆಲ್ತ್ ಟೇಬಲ್ ಟೆನ್ನಿಸ್ ಫೆಡರೇಷನ್ (CTTF) ನ ತಾಂತ್ರಿಕ ಸಮಿತಿಯ ಸದಸ್ಯರಾಗಿದ್ದಾರೆ.

Question 8

8. ಗುಮ್ತಿ ವನ್ಯಜೀವಿ ಧಾಮವು ಯಾವ ರಾಜ್ಯದಲ್ಲಿದೆ?

A
ಅಸ್ಸಾಂ
B
ತ್ರಿಪುರ
C
ರಾಜಸ್ತಾನ
D
ಕೇರಳ
Question 8 Explanation: 
ತ್ರಿಪುರ
Question 9

9. 2017 ವಿಶ್ವ ಪರಿಸರ ದಿನದ ಧ್ಯೇಯ ವಾಕ್ಯ _________?

A
Green Economy: Does it include you?
B
Raise Your Voice Not The Sea Level
C
Connecting People to Nature
D
Think.Eat.Save
Question 9 Explanation: 
Connecting People to Nature

ಅರಣ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪರಿಸರ ಸಂರಕ್ಷಣೆಯ ವಿಶಾಲವಾದ ಸಮಸ್ಯೆಗಳಿಗೆ ಸ್ಪಂದಿಸಲು ಜೂನ್ 5 ರಂದು ಪ್ರತಿವರ್ಷ ವಿಶ್ವ ಪರಿಸರ ದಿನ (WED) ಅನ್ನು ಆಚರಿಸಲಾಗುತ್ತದೆ. 2017 ಥೀಮ್ 'ಕನೆಕ್ಟಿಂಗ್ ಪೀಪಲ್ ಟು ನೇಚರ್' ಆಗಿದೆ.

Question 10

10. ಈ ಮುಂದಿನ ಯಾರು ಥೈಲ್ಯಾಂಡ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ 2017 ರ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು?

A
ಸಾಯಿ ಪ್ರಣೀತ್
B
ಮಿಲನ್
C
ಜೋನಾಥನ್ ಕ್ರಿಸ್ಟಿ
D
ಕಿಡಿಂಬಿ ಶ್ರೀಕಾಂತ್
Question 10 Explanation: 
ಸಾಯಿ ಪ್ರಣೀತ್

ಭಾರತದಿಂದ ಭಮಿದಿಪತಿ ಸಾಯಿ ಪ್ರಣೀತ್ ಥೈಲ್ಯಾಂಡ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ನಲ್ಲಿ ಇಂಡೋನೇಷ್ಯಾ ತಂಡದ ಜೊನಾಟಾನ್ ಕ್ರಿಸ್ಟಿ ಅವರನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಇದು ಸಾಯಿ ಪ್ರಣೀತ್ನ ಮೊದಲ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಪ್ರಶಸ್ತಿ.

There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜೂನ್4562017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.