ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜೂನ್,11,12,2017

Question 1

1. ಐಸಿಸಿ ಹಾಲ್ ಆಫ್ ಫ್ರೇಮ್ಗೆ ಸೇರ್ಪಡೆಯಾದ ಶ್ರೀಲಂಕಾದ ಪ್ರಪ್ರಥಮ ಕ್ರಿಕೆಟಿಗ ಯಾರು?

A
ಮುತ್ತಯ್ಯ ಮುರಳೀಧರನ್
B
ಸನಾತ್ ಜಯಸೂರ್ಯ
C
ಕುಮಾರ ಸಂಗಕ್ಕಾರ
D
ಅರ್ಜುನ್ ರಣತುಂಗ
Question 1 Explanation: 
ಮುತ್ತಯ್ಯ ಮುರಳೀಧರನ್

ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಅತ್ಯಂತ ಯಶಸ್ವಿ ಬೌಲರ್ ಮುತ್ತಯ್ಯ ಮುರಳೀಧರನ್ ಅವರನ್ನು ಲಂಡನ್ ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಳಿಸಲಾಗಿದೆ. ಜೂನ್ 8, 2017 ರಂದು ಲಂಡನ್ನ ದಿ ಓವಲ್ನಲ್ಲಿ ನಡೆದ ಇಂಡಿಯನ್ ಮತ್ತು ಶ್ರೀಲಂಕಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಇನ್ನಿಂಗ್ಸ್ ವಿರಾಮದ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು. ಆ ಮೂಲಕ ಈ ಗೌರವ ಪಡೆದ ಶ್ರೀಲಂಕಾದ ಮೊದಲ ಆಟಗಾರ ಮತ್ತು ಒಟ್ಟಾರೆಯಾಗಿ 83 ನೇ ಕ್ರಿಕೆಟಿಗ .

Question 2

2. ಮೊಟ್ಟ ಮೊದಲ ಎಐಎಫ್ಎಫ್ ಮಹಿಳಾ ಆಟಗಾರರಾಗಿ 2016ನೇ ಸಾಲಿಗೆ ಯಾರು ಆಯ್ಕೆಯಾಗಿದ್ದಾರೆ?

A
ಬೆಂಬಮ್ ದೇವಿ
B
ಗಂಗೊಮ್ ಬಲ
C
ಅದಿತಿ ಚೌಹಣ್
D
ಸಸ್ಮಿತ ಮಲ್ಲಿಕ್
Question 2 Explanation: 
ಸಸ್ಮಿತ ಮಲ್ಲಿಕ್

ಮುಂಬೈನಲ್ಲಿ ನಡೆದ ಮೊಟ್ಟ ಮೊದಲ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಪ್ರಶಸ್ತಿ ಸಮಾರಂಭದಲ್ಲಿ 2016ನೇ ಸಾಲಿಗೆ ಎಐಎಫ್ಎಫ್ ವರ್ಷದ ಆಟಗಾರ ಮತ್ತು ಎಐಎಫ್ಎಫ್ ಮಹಿಳಾ ಆಟಗಾರರ ಪ್ರಶಸ್ತಿಯನ್ನು ಕ್ರಮವಾಗಿ ಇಜೆ ಲಲ್ಪೆಖುವಾ ಮತ್ತು ಸಸ್ಮಿತ್ರಾ ಮಲಿಕ್ ಅವರಿಗೆ ನೀಡಲಾಯಿತು. ಭಾರತೀಯ ಮಹಿಳಾ ಫುಟ್ಬಾಲ್ ತಂಡದ ಯಶಸ್ಸು ಮತ್ತು ಬೆಳವಣಿಗೆಗೆ ಅಪಾರ ಕೊಡುಗೆ ನೀಡಿರುವುದಕ್ಕೆ ಮಲಿಕ್ ಪ್ರಶಸ್ತಿಯನ್ನು ಪಡೆದುಕೊಂಡರು.

Question 3

3. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) ಯ ಹೊಸ MD ಮತ್ತು ಸಿಇಒ ಆಗಿ ಯಾರು ನೇಮಕಗೊಂಡಿದ್ದಾರೆ?

A
ವಿಕ್ರಮ್ ಲಿಮಾಯೆ
B
ವೇದಪಾಲ್ ಸಿಂಗ್
C
ರವಿಚಂದ್ರ
D
ಗುರುನಾಥನ್
Question 3 Explanation: 
ವಿಕ್ರಮ್ ಲಿಮಾಯೆ

ವಿಕ್ರಮ್ ಲಿಮಾಯೆ ಅವರು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) ಯ ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆಗಿ ನೇಮಕಗೊಂಡಿದ್ದಾರೆ. ಲಿಮಾಯೆ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯನ್ನು ನಿರ್ವಹಿಸಲು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ಸದಸ್ಯರಾಗಿದ್ದಾರು.

Question 4

4. 2017 ಯುರೋಪಿಯನ್ ಯೂನಿಯನ್ ಸಿನಿಮೋತ್ಸವ (ಇಯುಎಫ್ಎಫ್) ಭಾರತದ ಯಾವ ನಗರದಲ್ಲಿ ಆರಂಭಗೊಂಡಿದೆ?

A
ಬೆಂಗಳೂರು
B
ಗೋವಾ
C
ನವದೆಹಲಿ
D
ಮುಂಬೈ
Question 4 Explanation: 
ನವ ದೆಹಲಿ

ಯುರೋಪಿಯನ್ ಯೂನಿಯನ್ ಸಿನಿಮೋತ್ಸವದ 22ನೇ ಆವೃತ್ತಿ (ಇಎಫ್ಎಫ್ಫ್) ನವದೆಹಲಿಯ ಸಿರಿ ಫೋರ್ಟ್ ಆಡಿಟೋರಿಯಂನಲ್ಲಿ ಆರಂಭಗೊಂಡಿದೆ. ಭಾರತ ಮತ್ತು ಯುರೋಪಿಯನ್ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಸುಧಾರಿಸುವ ಗುರಿಯನ್ನು ಇದು ಹೊಂದಿದೆ. ಚಲನಚಿತ್ರೋತ್ಸವದಲ್ಲಿ ಇಸ್ಟೋನಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಹಂಗೇರಿ, ಗ್ರೀಸ್, ಮತ್ತು ಹಲವಾರು ರಾಷ್ಟ್ರಗಳ ಚಲನಚಿತ್ರಗಳನ್ನು ಪ್ರದರ್ಶಿಸುವುದಿಲ್ಲದೆ, ವಿಭಿನ್ನ ಸಂಸ್ಕೃತಿಗಳ ಮಿಶ್ರಣದ ವಿಭಿನ್ನ ಸಿನೆಮಾ ಶೈಲಿಗಳನ್ನು ತೋರಿಸಲಾಗುವುದು. 22 ಯುರೋಪಿಯನ್ ದೇಶಗಳ 22 ಚಿತ್ರಗಳನ್ನು ಪ್ರದರ್ಶಿಸಲಾಗುವುದು.

Question 5

5. ಫ್ರಾನ್ಸಿನ ಅತ್ಯುನ್ನತ ನಾಗರಿಕ ಪ್ರಶಸ್ತಿ "ಲೆಜಿಯನ್ ಆಫ್ ಆನರ್" ಗೆ ಆಯ್ಕೆಯಾಗಿರುವ ಭಾರತೀಯ ವ್ಯಕ್ತಿ ಯಾರು?

A
ಸೌಮಿತ್ರ ಚಟರ್ಜಿ
B
ನರೇಂದ್ರ ಮೋದಿ
C
ಅಕ್ಷಯ್ ಕುಮಾರ್
D
ಅರುಣ್ ಜೇಟ್ಲಿ
Question 5 Explanation: 
ಸೌಮಿತ್ರ ಚಟರ್ಜಿ

ಸಿನಿಮಾ ಮತ್ತು ರಂಗಭೂಮಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಹಿರಿಯ ಬೆಂಗಾಲಿ ನಟ ಸೌಮಿತ್ರಾ ಚಟರ್ಜಿ ಅವರು ಫ್ರಾನ್ಸಿನ ಅತ್ಯುನ್ನತ ನಾಗರಿಕ ಪ್ರಶಸ್ತಿ "ಲೆಜಿಯನ್ ಆಫ್ ಆನರ್" ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ, ಚಟರ್ಜಿಯವರು ಈ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಬಂಗಾಳಿ ನಟರಾಗಿದ್ದಾರೆ. 1987 ರಲ್ಲಿ ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರಿಗೆ ಈ ಪ್ರಶಸ್ತಿ ಸಂದಿತ್ತು. 'ಅಪುರ್ ಸಂಸಾರ್', 'ಡೆಬಿ', 'ಆರ್ನಿಯರ್ ದಿನ್ ರಾತ್ರಿ', 'ಘಾರೆ ಬೈರೆ' ಮತ್ತು ' ಗಣಶಾಸ್ತ್ರು' ಸಿನಿಮಾಗಳಲ್ಲಿ ಚಟರ್ಜಿ ಅಭಿನಯಿಸಿದ್ದಾರೆ. ಪಂಡಿತ್ ರವಿ ಶಂಕರ್, ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಮತ್ತು ಕಮಲ್ ಹಸನ್ ಮೊದಲಾದವರು ಲೀಜನ್ ಆಫ್ ಹಾನರ್ ಅನ್ನು ಈಗಾಗಲೇ ಸ್ವೀಕರಿಸಿದ್ದಾರೆ. ಚಟರ್ಜಿಗೆ 2012 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ.

Question 6

6. ವೀಡಿಯೊ ಸಂವಾದ ಮೂಲಕ ಗ್ರಾಮೀಣ ಜನರಿಗೆ ಕಾನೂನು ಸೇವೆ ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರ ಯಾವ ಯೋಜನೆ ಪ್ರಾರಂಭಿಸಿದೆ?

A
ಟೆಲಿ ಲಾ
B
ಟೆಲಿ ಲೀಗಲ್ ಏಡ್
C
ಟೆಲಿ ಲಾ ಸೆಂಟರ್
D
ಟೆಲಿ ಲಾಯರ್
Question 6 Explanation: 
vಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ 'ಟೆಲಿ ಲಾ' ವೀಡಿಯೊ ಕಾನ್ಫರೆನ್ಸಿಂಗ್ ಕಾನೂನು ಸೇವೆ ಅನ್ನು ಪ್ರಾರಂಭಿಸಿದೆ. ಟೆಲಿ-ಲಾ ಮೂಲಕ, ಬಡವರಿಗೆ ಕಾನೂನು ನೆರವು ನೀಡುವ ಮೂಲಕ ಬಡವರಿಗೆ ಕಾನೂನು ಸೇವೆ ನೀಡಿ ಸಬಲೀಕರಣಗೊಳಿಸಲು ಸರ್ಕಾರದ ಉದ್ದೇಶ.

Question 7

7. ಈ ಕೆಳಗಿನ ಯಾರು 2017 ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಟೆನ್ನಿಸ್ ಟೂರ್ನಮೆಂಟ್ ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು?

A
ನೊವಾಕ್ ಜೊಕೊವಿಕ್
B
ರಾಫೆಲ್ ನಡಾಲ್
C
ರೋಜರ್ ಫೆಡರರ್
D
ಆಂಡ್ರಿ ಮುರ್ರೆ
Question 7 Explanation: 
ರಾಫೆಲ್ ನಡಾಲ್

ಸ್ಪೇನಿನ ರಾಫೆಲ್ ನಡಾಲ್ 2017 ರ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಟೆನಿಸ್ ಪಂದ್ಯಾವಳಿಯಲ್ಲಿ 6-2, 6-3, 6-1ರಿಂದ ಸ್ವಿಸ್ನ ಸ್ಟಾರ್ ಸ್ಟಾನಿಸ್ಲಾಸ್ ವಾವ್ರಿಂಕಾವನ್ನು ಸೋಲಿಸಿ ಫೈನಲ್ನಲ್ಲಿ ಜಯಗಳಿಸಿದ್ದಾರೆ.

Question 8

8. 2017 ಮುಂಬೈ ಮೇಯರ್ ಕಪ್ ಇಂಟರ್ನ್ಯಾಷನಲ್ ಓಪನ್ ಚೆಸ್ ಟೂರ್ನಮೆಂಟ್ ಗೆದ್ದುಕೊಂಡ “ನ್ಗುಯೆನ್ ಡುಕ್ ಹೊ” ಯಾವ ದೇಶದವರು?

A
ವಿಯೆಟ್ನಾಂ
B
ಚೀನಾ
C
ರಷ್ಯಾ
D
ಅಮೆರಿಕ
Question 8 Explanation: 
ವಿಯೆಟ್ನಾಂ

ವಿಯೆಟ್ನಾಂನ ಗ್ರ್ಯಾಂಡ್ ಮಾಸ್ಟರ್ ನ್ಗುಯೆನ್ ಡುಕ್ ಹೊ ಅವರು 10 ನೇ ಮುಂಬೈ ಮೇಯರ್ ಕಪ್ ಇಂಟರ್ನ್ಯಾಷನಲ್ ಓಪನ್ ಚೆಸ್ ಟೂರ್ನಮೆಂಟ್ ಅನ್ನು ಭಾರತದ ಚೆಸ್ ಆಟಗಾರ ಜಿಎಂ ನೀಲೋಟ್ಪಾಲ್ ದಾಸ್ ಅವರನ್ನು ಅಂತಿಮ ಸುತ್ತಿನಲ್ಲಿ ಸೋಲಿಸಿ 8.5 ಅಂಕಗಳೊಂದಿಗೆ ಜಯಗಳಿಸಿದರು.

Question 9

9. ಯಾವ ದಿನದಂದು “ವಿಶ್ವ ಬಾಲ ಕಾರ್ಮಿಕರ ವಿರೋಧಿ” ದಿನವನ್ನು ಆಚರಿಸಲಾಗುತ್ತದೆ?

A
ಜೂನ್ 10
B
ಜೂನ್ 12
C
ಜೂನ್ 13
D
ಜೂನ್ 14
Question 9 Explanation: 
ಜೂನ್ 12

ಜಗತ್ತಿನಾದ್ಯಂತ ಬಾಲ ಕಾರ್ಮಿಕರ ಪರಿಸ್ಥಿತಿ ಮತ್ತು ಅದನ್ನು ತೊಡೆದುಹಾಕಲು ಬೇಕಾದ ಪ್ರಯತ್ನಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಜೂನ್ 12 ರಂದು ಪ್ರತಿವರ್ಷ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.

Question 10

10. ಈ ಕೆಳಗಿನ ಯಾವ ರಾಜ್ಯದಲ್ಲಿ “ನವಾಬ್ಗಂಜ್ ಪಕ್ಷಿಧಾಮ” ಕಾಣ ಸಿಗುತ್ತದೆ?

A
ಉತ್ತರ ಪ್ರದೇಶ
B
ತೆಲಂಗಣ
C
ಓಡಿಶಾ
D
ಪಶ್ಚಿಮ ಬಂಗಾಳ
Question 10 Explanation: 
ಉತ್ತರ ಪ್ರದೇಶ
There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜೂನ್11122017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.