ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜೂನ್,15,16,2017

Question 1

1. ವಿಶ್ವದ ಅತಿದೊಡ್ಡ ಆಹಾರ ಮೇಳ "ANUGA 2017" ರಲ್ಲಿ ಸಹ-ಪಾಲುದಾರ ದೇಶ ಯಾವುದು?

A
ಸ್ಪೇನ್
B
ಭಾರತ
C
ಪಾಕಿಸ್ತಾನ
D
ಇಸ್ರೇಲ್
Question 1 Explanation: 
ಭಾರತ

ಪ್ರಪಂಚದ ಅತಿದೊಡ್ಡ ಮತ್ತು ಅತ್ಯಂತ ಪ್ರಮುಖ ಆಹಾರ ಮತ್ತು ಪಾನೀಯ ಉದ್ಯಮ ಮೇಳ "ಅನುಗಾ 2017” ಅಕ್ಟೋಬರ್ 7, 2017 ರಂದು ಜರ್ಮನಿಯ ಕಲೋನ್ನಲ್ಲಿ ನಡೆಯಲಿದೆ. ANUGA ನ ಸಂಕ್ಷಿಪ್ತ ರೂಪವು ಆಲ್ಜೀಮೈನ್ ನಹರುಂಗ್ಸ್- ಉಂಡ್ ಜೆನಸ್ಮಿಟ್ಟೆಲ್-ಔಸ್ಟೆಲ್ಲಂಗ್ 2017 ರಲ್ಲಿ ಭಾರತ ಈ ಮೇಳದ ಸಹ-ಪಾಲುದಾರ ರಾಷ್ಟ್ರವಾಗಿದೆ. ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಆಹಾರ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Question 2

2. ಅತಿಸಾರದಿಂದ ಮಕ್ಕಳ ಸಾವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು IDCF ಕಾರ್ಯಕ್ರಮವನ್ನು ಪ್ರಾರಂಭಿಸಿದೆ. "IDCF" ಎಂದರೆ _________?

A
Intensified Diarrhea Control Fortnight
B
Intensive Diarrhea Control Fortnight
C
Intensified Diarrhea Control Framework
D
Intense Diarrhea Control Fortnight
Question 2 Explanation: 
Intensified Diarrhea Control Fortnight

ಅತಿಸಾರದಿಂದಾಗಿ ಮಕ್ಕಳ ಸಾವನ್ನು ಕಡಿಮೆ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯ ದೇಶದಾದ್ಯಂತ Intensified Diarrhea Control Fortnight (ಐಡಿಸಿಎಫ್) ಯನ್ನು ಪ್ರಾರಂಭಿಸಿದೆ. ಈ ಉಪಕ್ರಮದ ಮೂಲಕ, ಸಚಿವಾಲಯ ಆರೋಗ್ಯ ಸಿಬ್ಬಂದಿ, ರಾಜ್ಯ ಸರ್ಕಾರಗಳು ಮತ್ತು ಇತರ ಪಾಲುದಾರರನ್ನು ರೋಗವನ್ನು ನಿಯಂತ್ರಿಸುವಲ್ಲಿ ಸಜ್ಜುಗೊಳಿಸಲಿದೆ. ಐಡಿಸಿಎಫ್ನ ಅಭಿಯಾನದ ಅವಧಿಯಲ್ಲಿ ನೈರ್ಮಲ್ಯ ಮತ್ತು ORS ಮತ್ತು ಹಾಗೂ ಥೆರಪಿಗಳ ಪ್ರಚಾರ ಮತ್ತು ಜಾಗೃತಿ ಅಭಿಯಾನವನ್ನು ರಾಜ್ಯ, ಜಿಲ್ಲೆ ಮತ್ತು ಗ್ರಾಮ ಮಟ್ಟದಲ್ಲಿ ನಡೆಸಲಾಗುತ್ತದೆ. ಶುದ್ದ ಕುಡಿಯುವ ನೀರು, ನೈರ್ಮಲ್ಯ, ಸ್ತನ್ಯಪಾನ ಮತ್ತು ಸರಿಯಾದ ಪೌಷ್ಟಿಕತೆಯಿಂದ ಅತಿಸಾರ ತಡೆಗಟ್ಟಬಹುದು.

Question 3

3. ಸಮುದ್ರ ಕಾನೂನಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ನ್ಯಾಯಾಧಿಕರಣಕ್ಕೆ ನ್ಯಾಯಾಧೀಶೆಯಾಗಿ ನೇಮಕಗೊಂಡ ಭಾರತದ ಪ್ರಥಮ ಮಹಿಳೆ ಯಾರು?

A
ಅನಿತಾ ದೇಸಾಯಿ
B
ನೀರೂ ಚಡ್ಡ
C
ಪವಿತ್ರ ನಿರಂಜನ್
D
ಪ್ರಮೀಳ ರಂಗನಾಥನ್
Question 3 Explanation: 
ನೀರೂ ಚಡ್ಡ

ಡಾ. ನೀರೂ ಚಡ್ಡ ರವರು ಅಂತಾರಾಷ್ಟ್ರೀಯ ನ್ಯಾಯಾಧಿಕರಣಕ್ಕೆ ನ್ಯಾಯಾಧೀಶೆಯಾಗಿ ನೇಮಕಗೊಂಡ ಭಾರತದ ಪ್ರಥಮ ಮಹಿಳೆ ಎನಿಸಿದ್ದಾರೆ. 2017 ರಿಂದ 2026 ರವರೆಗೆ ಒಂಬತ್ತು ವರ್ಷ ಅವಧಿಯವರೆಗೆ ಇವರು ಅಧಿಕಾರ ನಡೆಸಲಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್ಜಿಎ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ವಿಜಯ ಲಕ್ಷ್ಮಿ ಪಂಡಿತ್ ನಂತರ, ಡಾ.ಚಡ್ಡ ಅವರು ವಿಶ್ವಸಂಸ್ಥೆಯಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

Question 4

4. ಗುಣಮಟ್ಟದ ಶಿಕ್ಷಣಕ್ಕಾಗಿ ಬ್ರಿಟಿಷ್ ಕೌನ್ಸಿಲ್ ನೊಂದಿಗೆ ಯಾವ ರಾಜ್ಯ ಸರ್ಕಾರವು ಇತ್ತೀಚೆಗೆ ಒಡಂಬಡಿಕೆ ಒಪ್ಪಂದಕ್ಕೆ ಸಹಿ ಹಾಕಿದೆ?

A
ಸಿಕ್ಕಿಂ
B
ಅರುಣಾಚಲ ಪ್ರದೇಶ
C
ಮಣಿಪುರ
D
ಹಿಮಾಚಲ ಪ್ರದೇಶ
Question 4 Explanation: 
ಸಿಕ್ಕಿಂ

ಸಿಕ್ಕಿಂ ಸರ್ಕಾರವು ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಬ್ರಿಟಿಷ್ ಕೌನ್ಸಿಲ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

Question 5

5. “Yug Purush, Bharat Ratna, Atal Ji” ಪುಸ್ತಕದ ಲೇಖಕರು __________?

A
ರಮೇಶ್ ಪೊಕ್ರಿಯಾಲ್
B
ಅಭಿಷೇಕ್ ಚಂದ್ರ
C
ಸುಶೀಲ್ ಮೋದಿ
D
ಸುರೇಶ್ ಪ್ರಭು
Question 5 Explanation: 
ರಮೇಶ್ ಪೊಕ್ರಿಯಾಲ್

"ಯುಗ್ ಪುರುಷ್, ಭಾರತ್ ರತ್ನ, ಅಟಲ್ ಜಿ" ಎಂಬ ಶೀರ್ಷಿಕೆಯ ಪುಸ್ತಕ ಭಾರತದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಸಾಮಾಜಿಕ ಮತ್ತು ರಾಜಕೀಯ ಜೀವನವನ್ನು ಆಧರಿಸಿದೆ. ಬಿಜೆಪಿ ಸಂಸದ ಮತ್ತು ಮಾಜಿ ಉತ್ತರಾಖಂಡ್ ಮುಖ್ಯಮಂತ್ರಿ ರಮೇಶ್ ಪೊಖ್ರಿಯಾಲ್ 'ನಿಶಾಂಕ್' ಈ ಪುಸ್ತಕವನ್ನು ಬರೆದಿದ್ದಾರೆ.

Question 6

6. ಆನ್ಲೈನ್ ಜಾನುವಾರು ಮಾರಾಟಕ್ಕಾಗಿ “ಪಶು ಬಜಾರ್ ವೆಬ್ಸೈಟ್” ಅನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?

A
ತೆಲಂಗಣ
B
ಆಂಧ್ರ ಪ್ರದೇಶ
C
ತಮಿಳುನಾಡು
D
ಗುಜರಾತ್
Question 6 Explanation: 
ತೆಲಂಗಣ

ಆನ್ಲೈನ್ ನಲ್ಲಿ ಜಾನುವಾರು ಮಾರಾಟಕ್ಕಾಗಿ ತೆಲಂಗಣ ಸರ್ಕಾರ “ಪಶು ಬಜಾರ್ ವೆಬ್ಸೈಟ್” ಅನ್ನು ಪ್ರಾರಂಭಿಸಿದೆ. ಜಾನುವಾರುಗಳ ಆನ್ಲೈನ್ ಮಾರಾಟ ಅಥವಾ ಕೊಂಡುಕೊಳ್ಳುವಿಕೆಯು ಪಶುಬಜಾರ್ ತೆಲಂಗಣ.ಜಿಓವಿ.ಇನ್. ಮೂಲಕ ಮಾಡಬಹುದು. ಇದರಿಂದ ಜಾನುವಾರುಗಳನ್ನು ಸಂತೆಗೆ ತರುವುದು ತಪ್ಪಲಿದೆ ಮತ್ತು ಸಾರಿಗೆ ವೆಚ್ಚ ಸಹ ಉಳಿಸಬಹುದುದಾಗಿದೆ.

Question 7

7. ವಿಶ್ವದ ಅತಿ ದೊಡ್ಡ ಸಂಸ್ಕರಣಾಗಾರ ಮತ್ತು ಪೆಟ್ರೋಕೆಮಿಕಲ್ ಸಂಕೀರ್ಣವನ್ನು ಭಾರತದ ಯಾವ ರಾಜ್ಯದಲ್ಲಿ ಸ್ಥಾಪಿಸಲಾಗುವುದು?

A
ಮಧ್ಯ ಪ್ರದೇಶ
B
ಮಹಾರಾಷ್ಟ್ರ
C
ಜಾರ್ಖಂಡ್
D
ಅಸ್ಸಾಂ
Question 7 Explanation: 
ಮಹಾರಾಷ್ಟ್ರ

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (ಎಚ್ಪಿಎಲ್ಎಲ್) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಜಂಟಿಯಾಗಿ ವಿಶ್ವದ ದೊಡ್ಡ ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಅನ್ನು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ 40 ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಿವೆ. ಹೊಸ ಕಾಂಪ್ಲೆಕ್ಸ್ನಲ್ಲಿ ಐಓಸಿ ಶೇ.50% ಪಾಲನ್ನು ಹೊಂದಿದೆ ಮತ್ತು ಎಚ್ಪಿಎಲ್ಎಲ್ ಮತ್ತು ಬಿಪಿಎಲ್ಎಲ್ ಶೇ.25% ಪಾಲನ್ನು ಹೊಂದಿರಲಿವೆ.

Question 8

8. ಇನ್ಫರ್ಮೇಷನ್ ಸೊಸೈಟಿ (WSIS) ಫೋರಮ್-2017ನ ವಿಶ್ವ ಶೃಂಗಸಭೆಯನ್ನು ಯಾವ ನಗರದಲ್ಲಿ ಆಯೋಜಿಸಲಾಗಿತ್ತು?

A
ಜಿನೆವಾ
B
ನ್ಯೂಯಾರ್ಕ್
C
ಬರ್ಲಿನ್
D
ಮಾಸ್ಕೋ
Question 8 Explanation: 
ಜಿನೆವಾ
Question 9

9. “ಯುನೈಟೆಡ್ ನೇಷನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕೌನ್ಸಿಲ್ (ECOSOC)” ನ ಪ್ರಧಾನ ಕಛೇರಿ ಎಲ್ಲಿದೆ?

A
ನ್ಯೂಯಾರ್ಕ್
B
ಮ್ಯಾಂಡ್ರಿಡ್
C
ಲಂಡನ್
D
ವಾಷಿಂಗಟನ್
Question 9 Explanation: 
ನ್ಯೂಯಾರ್ಕ್

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC) ಯು ವಿಶ್ವಸಂಸ್ಥೆಯ ಆರು ಮುಖ್ಯ ಅಂಗಗಳಲ್ಲಿ ಒಂದಾಗಿದೆ. ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳನ್ನು ಸಹಕರಿಸುವುದಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಣಯಿಸಲಾದ ಅಭಿವೃದ್ಧಿಯ ಗುರಿಗಳನ್ನು ಅನುಷ್ಠಾನಗೊಳಿಸುತ್ತದೆ. ಇತ್ತೀಚೆಗೆ ಭಾರತವು 3 ವರ್ಷಗಳ ಅವಧಿಗೆ ECOSOC ಗೆ ಪುನಃ ಚುನಾಯಿಸಲ್ಪಟ್ಟಿದೆ. ಭಾರತವು 183 ಮತಗಳನ್ನು ಪಡೆದಿದೆ, ಏಷ್ಯಾ ಪೆಸಿಫಿಕ್ ವಿಭಾಗದಲ್ಲಿ ಜಪಾನ್ ನಂತರ ಅತಿ ಹೆಚ್ಚು ಮತ ಪಡೆದ ಎರಡನೇ ರಾಷ್ಟ್ರ ಭಾರತ. ECOSOCಗೆ ನೇಮಕಗೊಂಡ ಇತರೆ ರಾಷ್ಟ್ರಗಳೆಂದರೆ ಬೆಲಾರಸ್, ಈಕ್ವೆಡಾರ್, ಎಲ್ ಸಾಲ್ವಡಾರ್, ಫ್ರಾನ್ಸ್, ಜರ್ಮನಿ, ಘಾನಾ, ಭಾರತ, ಐರ್ಲ್ಯಾಂಡ್, ಜಪಾನ್, ಮಲಾವಿ, ಮೆಕ್ಸಿಕೊ, ಮೊರಾಕೊ, ಫಿಲಿಪೈನ್ಸ್, ಸ್ಪೇನ್, ಸುಡಾನ್, ಟೋಗೊ, ಟರ್ಕಿ ಮತ್ತು ಉರುಗ್ವೆ. ECOSOC ನ ಪ್ರಧಾನ ಕಾರ್ಯಾಲಯವು ನ್ಯೂಯಾರ್ಕ್ನಲ್ಲಿದೆ.

Question 10

10. ಯುರೋಪಿಯನ್ ಯೂನಿಯನ್ (ಇಯು) ಗೆ ಭಾರತದ ರಾಯಭಾರಿಯಾಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?

A
ಸುರೇಂದ್ರನಾಥ್ ಚಟರ್ಜಿ
B
ಮಹೇಶ್ ಗುಪ್ತಾ
C
ಗಾಯತ್ರಿ ಇಸ್ಸಾರ್ ಕುಮಾರ್
D
ರಾಜೀವ್ ಶುಕ್ಲಾ
Question 10 Explanation: 
ಗಾಯತ್ರಿ ಇಸ್ಸಾರ್ ಕುಮಾರ್

ಅಧ್ಯಕ್ಷೀಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು 1986 ಬ್ಯಾಚ್ ಐಎಫ್ಎಸ್ ಅಧಿಕಾರಿ ಗೈತ್ರಿ ಇಸ್ಸಾರ್ ಕುಮಾರ್ ಬೆಲ್ಜಿಯಂ ಮತ್ತು ಐರೋಪ್ಯ ಒಕ್ಕೂಟ (ಇಯು)ಕ್ಕೆ ಭಾರತದ ಹೊಸ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ. ಇದಲ್ಲದೆ, ರೀನಾತ್ ಸಂಧು ಮತ್ತು ಅಜಿತ್ ವಿನಾಯಕ್ ಗುಪ್ಟೆರನ್ನು ಇಟಲಿ ಮತ್ತು ಡೆನ್ಮಾರ್ಕ್ಗೆ ಭಾರತದ ಹೊಸ ರಾಯಭಾರಿಯಾಗಿ ನೇಮಿಸಲಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜೂನ್15162017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜೂನ್,15,16,2017”

Leave a Comment

This site uses Akismet to reduce spam. Learn how your comment data is processed.