ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜೂನ್,17,18,19,2017

Question 1

1. ASEAN ಡೆಂಗ್ಯೂ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ಜೂನ್ 12
B
ಜೂನ್ 14
C
ಜೂನ್ 15
D
ಜೂನ್ 16
Question 1 Explanation: 
ಜೂನ್ 15

ಡೆಂಗ್ಯೂ ಕುರಿತು ಜಾಗೃತಿ ಮೂಡಿಸಲು ಮತ್ತು ಖಾಸಗಿ ಮತ್ತು ಸಾರ್ವಜನಿಕ ವಲಯದಿಂದ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಡೆಂಗ್ಯೂ ತಡೆಗಟ್ಟಲು ಮತ್ತು ನಿಯಂತ್ರಿಸಲು ಜೂನ್ 15 ರಂದು ಆಸಿಯಾನ್ ಡೆಂಗ್ಯೂ ದಿನ (ಎಡಿಡಿ)ವನ್ನು ಆಚರಿಸಲಾಗುತ್ತದೆ. 2017 ಥೀಮ್ "ಯುನೈಟೆಡ್ ಫೈಟ್ ಎಗೇನ್ಸ್ಟ್ ಡೆಂಗ್ಯೂ" ಆಗಿದೆ.

Question 2

2. 2017 ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಯಾರಿಗೆ ಲಭಿಸಿದೆ?

A
ಡೇವಿಡ್ ಗ್ರಾಸ್ಮನ್
B
ರಾಯ್ ಜಾಕೊಬ್ಸನ್
C
ಅಮೋಸ್ ಓಝ್
D
ಇಯಾನ್ ಸ್ಯಾಮ್ಸೊಮ್
Question 2 Explanation: 
ಡೇವಿಡ್ ಗ್ರಾಸ್ಮನ್

"ಎ ಹಾರ್ಸ್ ವಾಕ್ಸ್ ಇನ್ಟು ಎ ಬಾರ್" ಕಾದಂಬರಿಗಾಗಿ 2017 ಮ್ಯಾನ್ ಬುಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಇಸ್ರೇಲಿ ಲೇಖಕ ಡೇವಿಡ್ ಗ್ರಾಸ್ಮನ್ ಅವರಿಗೆ ನೀಡಲಾಗಿದೆ. ಗ್ರಾಸ್ಮನ್ ಅವರು ಈ ಪ್ರಶಸ್ತಿಯನ್ನು ಗೆದ್ದ ಇಸ್ರೇಲ್ನ ಮೊದಲ ಲೇಖಕ. ಈ ಕಾದಂಬರಿಯನ್ನು ಜೆಸ್ಸಿಕಾ ಕೊಹೆನ್ ಭಾಷಾಂತರಿಸಿದ್ದು, ಇದನ್ನು ಬ್ರಿಟನ್ ನಲ್ಲಿ ಜೋನಾಥನ್ ಕೇಪ್ ಪ್ರಕಟಿಸಿದ್ದಾರೆ.

Question 3

3. ಈ ಕೆಳಗಿನ ಯಾವ ಐಐಟಿ ಸಂಸ್ಥೆ ಪಿ.ಟಿ ಉಷಾ ರವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದೆ?

A
ಐಐಟಿ ಖರಗಪುರ
B
ಐಐಟಿ ರಾಂಚಿ
C
ಐಐಟಿ ಬಾಂಬೆ
D
ಐಐಟಿ ಕಾನ್ಪುರ
Question 3 Explanation: 
ಐಐಟಿ ಕಾನ್ಪುರ

ಕಾನ್ಪುರ್ ಐಐಟಿ ಸಂಸ್ಥೆ ಪಿ.ಟಿ.ಉಷಾ ಅವರಿಗೆ ಡಾ. ಪಿ.ಟಿ ಉಷಾ ಅವರಿಗೆ ಗೌರವ ಡಾಕ್ಟರೇಟ್ ಪದವಿ "ಡಾಕ್ಟರ್ ಆಫ್ ಸೈನ್ಸ್ (ಡಿಎಸ್ಸಿ)" ನೀಡಿ ಗೌರವಿಸಿದೆ. ಭಾರತೀಯ ಕ್ರೀಡೆ ಮತ್ತು ಮಹಿಳಾ ಸಬಲೀಕರಣಕ್ಕೆ ನೀಡಿದ ಕೊಡುಗೆಗಾಗಿ ಕಾನ್ಪುರದಲ್ಲಿ ನಡೆದ 50ನೇ ಘಟಿಕೋತ್ಸವದಲ್ಲಿ ಪದವಿಯನ್ನು ಪ್ರಧಾನ ಮಾಡಲಾಯಿತು. ಐಐಟಿ ಕಾನ್ಪುರದ ಅತ್ಯುನ್ನತ (ಗೌರವಾರ್ಥ) ಶೈಕ್ಷಣಿಕ ಪದವಿ ಡಿ.ಎಸ್.ಸಿ (ಗೌರವಾನ್ವಿತ ಕಾಸಾ) ಆಗಿದೆ. ಕಣ್ಣೂರು ವಿಶ್ವವಿದ್ಯಾನಿಲಯವು ಉಷಾ ಅವರಿಗೆ 2000 ರಲ್ಲಿ ಡಾಕ್ಟರ್ ಆಫ್ ಲೆಟರ್ಸ್ (ಡಿ. ಲಿಟ್) ಪ್ರಶಸ್ತಿಯನ್ನು ನೀಡಿದೆ.

Question 4

4. 2017 ಜಾಗತಿಕ ಆವಿಷ್ಕಾರ ಸೂಚ್ಯಂಕ (ಜಿಐಐ)ದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
56
B
60
C
54
D
71
Question 4 Explanation: 
60

ಜಾಗತಿಕ ಆವಿಷ್ಕಾರ ಸೂಚ್ಯಂಕ (ಜಿಐಐ) 2017 ರಲ್ಲಿ 130 ದೇಶಗಳಲ್ಲಿ ಭಾರತ 60ನೇ ಸ್ಥಾನದಲ್ಲಿದೆ. 2017 ಸೂಚ್ಯಂಕದಲ್ಲಿ ಭಾರತವು ತೃತೀಯ ಶಿಕ್ಷಣ, ವಿಶ್ವವಿದ್ಯಾನಿಲಯಗಳ ಗುಣಮಟ್ಟ, ಐಸಿಟಿ ಸೇವೆಗಳ ರಫ್ತು ವಲಯಗಳಲ್ಲಿ ಬೆಳವಣಿಗೆಯನ್ನು ಕಂಡಿದೆ . ಭಾರತದ ನೆರೆಯ ರಾಷ್ಟ್ರಗಳಲ್ಲಿ ಶ್ರೀಲಂಕಾವು 90ನೇ ಸ್ಥಾನ, ನೇಪಾಳ 109 ನೇ ಸ್ಥಾನ, ಪಾಕಿಸ್ತಾನ 113 ಮತ್ತು ಬಾಂಗ್ಲಾದೇಶ 114ನೇ ಸ್ಥಾನವನ್ನು ಪಡೆದುಕೊಂಡಿವೆ. ಈ ಪಟ್ಟಿಯಲ್ಲಿ ಸ್ವಿಟ್ಜರ್ಲೆಂಡ್ ಅಗ್ರಸ್ಥಾನದಲ್ಲಿದೆ, ನಂತರ ಸ್ಥಾನದಲ್ಲಿ ಸ್ವೀಡನ್ ಮತ್ತು ನೆದರ್ಲ್ಯಾಂಡ್ಸ್ ಇವೆ. ಸೂಚ್ಯಂಕವನ್ನು ಕಾರ್ನೆಲ್ ವಿಶ್ವವಿದ್ಯಾಲಯ, INSEAD ಮತ್ತು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) ನಿಂದ ಹೊರತರಲಾಗುತ್ತಿದೆ.

Question 5

5. ಈ ಕೆಳಗಿನ ಯಾರಿಗೆ MBE (ಮೆಂಬರ್ ಆಫ್ ದಿ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್) ಗೌರವ ಲಭಿಸಿದೆ?

A
ಅನಿಲ್ ಅಂಬಾನಿ
B
ಮುಖೇಶ್ ಅಂಬಾನಿ
C
ಅನ್ನಾಬೆಲ್ ಮೆಹ್ತಾ
D
ಅಮಿತಾಬ್ ಬಚ್ಚನ್
Question 5 Explanation: 
ಅನ್ನಾಬೆಲ್ ಮೆಹ್ತಾ

ಸಚಿನ್ ತೆಂಡುಲ್ಕರ್ ಅವರ ಅತ್ತೆ ಮತ್ತು ಸಾಮಾಜಿಕ ಕಾರ್ಯಕರ್ತೆ ಅನ್ನಾಬೆಲ್ ಮೆಹ್ತಾ ಅವರಿಗೆ MBE ಗೌರವ ಲಭಿಸಿದೆ. ಮುಂಬೈನಲ್ಲಿ ನೆಲಸಿರುವ ಬಡ ವರ್ಗದ ಜನರಿಗೆ ಮತ್ತು ಅಪ್ನಾಲಯ NGOಗೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಲಂಡನ್ ನ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು. 1917 ರಲ್ಲಿ ಕಿಂಗ್ ಜಾರ್ಜ್ V ಅವರು ಸಮುದಾಯಗಳಿಗೆ ಮೌಲ್ಯಯುತ ಸೇವೆಗಳನ್ನು ನೀಡಿದ ವ್ಯಕ್ತಿಗಳನ್ನು ಗುರುತಿಸಲು ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (ಅನೇಕ ಶ್ರೇಣಿಗಳನ್ನು ಹೊಂದಿದ್ದವು) ಪ್ರಶಸ್ತಿಯನ್ನು ಸ್ಥಾಪಿಸಿದರು.

Question 6

6. 2017 ಇಂಡೋನೇಷಿಯಾ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಮೆಂಟಿನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದವರು ಯಾರು?

A
ಪ್ರಣಯ್ ಕುಮಾರ್
B
ಪಿ ಕಶ್ಯಪ್
C
ಕಿಡಂಬಿ ಶ್ರೀಕಾಂತ್
D
ಚೇತನ್ ಆನಂದ್
Question 6 Explanation: 
ಕಿಡಂಬಿ ಶ್ರೀಕಾಂತ್

ಇಂಡೋನೇಶಿಯಾದ ಓಪನ್ ಸೂಪರ್ ಸಿರೀಸ್ ಪುರುಷರ ಸಿಂಗಲ್ಸ್ ಪಂದ್ಯಾವಳಿಯಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಅವರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಜಕಾರ್ತಾದಲ್ಲಿ ನಡೆದ ಫೈನಲ್ನಲ್ಲಿ 21-11, 21-19 ಅಂತರದಲ್ಲಿ ಜಪಾನ್ನ ಕಜುಮಾಸಾ ಸಕೈ ಅವರನ್ನು ಸೋಲಿಸಿ ಶ್ರೀಕಾಂತ್ ಅವರು ಈ ಪ್ರಶಸ್ತಿಗೆ ಮುತ್ತಿಟ್ಟರು. ಈ ಜಯದೊಂದಿಗೆ, 2014 ಚೀನಾ ಓಪನ್ ಮತ್ತು 2015 ಇಂಡಿಯಾ ಓಪನ್ ಪಂದ್ಯಾವಳಿಯಲ್ಲಿ ಜಯಗಳಿಸಿದ ಶ್ರೀಕಾಂತ್ ಮೂರನೇ ಸೂಪರ್ ಸೀರೀಸ್ ಪ್ರಶಸ್ತಿಯನ್ನು ಗೆದ್ದುಕೊಂಡರು.

Question 7

7. “ಏಷ್ಯಾ ಮೂಲಸೌಕರ್ಯ ಅಭಿವೃದ್ದಿ ಬ್ಯಾಂಕ್ (AIIB)” ಈ ಕೆಳಗಿನ ಯಾವ ರಾಷ್ಟ್ರಗಳಿಗೆ ಸದಸ್ಯತ್ವ ಸ್ಥಾನಮಾನವನ್ನು ಅಂಗೀಕರಿಸಿದೆ?

A
ಅರ್ಜೇಂಟಿನಾ, ಮಡಗಾಸ್ಕರ್ ಮತ್ತು ಟೋಂಗಾ
B
ಉತ್ತರ ಕೊರಿಯಾ, ಟೋಂಗಾ ಮತ್ತು ಮಡಗಾಸ್ಕರ್
C
ಜಪಾನ್, ಉಕ್ರೇನ್ ಮತ್ತು ಅಮೆರಿಕ
D
ಸ್ಪೇನ್, ಉಕ್ರೇನ್ ಮತ್ತು ಟೋಂಗಾ
Question 7 Explanation: 
ಅರ್ಜೇಂಟಿನಾ, ಮಡಗಾಸ್ಕರ್ ಮತ್ತು ಟೋಂಗಾ

“ಏಷ್ಯಾ ಮೂಲಸೌಕರ್ಯ ಅಭಿವೃದ್ದಿ ಬ್ಯಾಂಕ್ (AIIB)” ಇತ್ತೀಚೆಗೆ ದಕ್ಷಿಣ ಕೊರಿಯಾದ ಜೆಜುನಲ್ಲಿ ಜೂನ್ 16, 2017ರಲ್ಲಿ ನಡೆದ ಗವರ್ನರ್ಸ್ ಮಂಡಳಿಯ 2 ನೇ ವಾರ್ಷಿಕ ಸಭೆಯಲ್ಲಿ ಅರ್ಜೆಂಟೀನಾ, ರಿಪಬ್ಲಿಕ್ ಆಫ್ ಮಡಗಾಸ್ಕರ್ ಮತ್ತು ಟೋಂಗಾ ದೇಶಗಳ ಸದಸ್ಯತ್ವವನ್ನು ಅಂಗೀಕರಿಸಿದೆ.

Question 8

8. ಮೊಟ್ಟ ಮೊದಲ ಬ್ರಿಕ್ಸ್ ಗೇಮ್ಸ್ 2017 ಯಾವ ದೇಶದಲ್ಲಿ ಪ್ರಾರಂಭಗೊಂಡಿದೆ?

A
ಭಾರತ
B
ಚೀನಾ
C
ರಷ್ಯಾ
D
ದಕ್ಷಿಣ ಆಫ್ರಿಕಾ
Question 8 Explanation: 
ಚೀನಾ

ಮೊಟ್ಟ ಮೊದಲ ಬ್ರಿಕ್ಸ್ ಗೇಮ್ಸ್ 2017 ಜೂನ್ 17 ರಂದು ಚೀನಾದ ಗುವಾಂಗ್ಝೌ ಬೈಯಿನ್ ಇಂಟರ್ನ್ಯಾಷನಲ್ ಕನ್ವೆನ್ಶನ್ ಸೆಂಟರ್ನಲ್ಲಿ ಪ್ರಾರಂಭವಾಗಿದ್ದು, ಬ್ರೆಜಿಲ್, ಚೀನಾ, ಭಾರತ, ರಷ್ಯಾ ಮತ್ತು ದಕ್ಷಿಣ ಆಫ್ರಿಕಾದ ಸುಮಾರು 300 ಕ್ರೀಡಾಪಟುಗಳು ಪುರುಷರ ಬ್ಯಾಸ್ಕೆಟ್ಬಾಲ್, ಮಹಿಳಾ ವಾಲಿಬಾಲ್ ಮತ್ತು ವುಶು ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ.

Question 9

9. ಇತ್ತೀಚೆಗೆ ನಿಧನರಾದ ಬಾಲ್ಡ್ವಿನ್ ಲಾನ್ಸ್ಡೇಲ್ ಅವರು ಯಾವ ದೇಶದ ಅಧ್ಯಕ್ಷರಾಗಿದ್ದರು?

A
ಜಿಂಬಾಬ್ವೆ
B
ಕೀನ್ಯಾ
C
ವನೌಟು
D
ಉರುಗ್ವೆ
Question 9 Explanation: 
ವನೌಟು

ಪ್ರಸ್ತುತ ವನೌಟುನ ಅಧ್ಯಕ್ಷರಾಗಿದ್ದ ಬಾಲ್ಡ್ವಿನ್ ಜಾಕೋಬ್ಸನ್ ಲಾನ್ಸ್ಡೇಲ್ (67) ಜೂನ್ 17, 2017ರಂದು ಪೋರ್ಟ್ ವೈಲ್, ವನೌಟುದಲ್ಲಿ ನಿಧನ ಹೊಂದಿದ್ದಾರೆ.

Question 10

10. 2017 ವಿಶ್ವ ನಿರಾಶ್ರಿತ ದಿನ (WRD) ಯಾವ ದಿನದಂದು ಆಚರಿಸಲಾಗುತ್ತದೆ?

A
ಜೂನ್ 12
B
ಜೂನ್ 16
C
ಜೂನ್ 20
D
ಜೂನ್ 21
Question 10 Explanation: 
ಜೂನ್ 20

ಶೋಷಣೆ, ಸಂಘರ್ಷ ಮತ್ತು ಹಿಂಸಾಚಾರದ ಬೆದರಿಕೆಯಿಂದ ತಮ್ಮ ತಾಯ್ನಾಡಿನಲ್ಲಿ ಪಲಾಯನ ಮಾಡುವ ಮಹಿಳೆಯರು, ಪುರುಷರು ಮತ್ತು ಮಕ್ಕಳ ಧೈರ್ಯ, ಶಕ್ತಿ ಮತ್ತು ನಿರ್ಣಯವನ್ನು ಗೌರವಿಸಲು ವಿಶ್ವ ನಿರಾಶ್ರಿತರ ದಿನ (WRD) ಜೂನ್ 20 ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ವರ್ಷ ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಯು ಸಿರಿಯನ್ ನಿರಾಶ್ರಿತ ಮೊಜುನ್ ಅಲ್ಮೆಲ್ಹಾನನ್ ಅವರನ್ನು ನೂತನ ಮತ್ತು ಕಿರಿಯ ರಾಯಭಾರಿ ಆಗಿ ಜೂನ್ 20, 2017 ರಂದು ಮಕ್ಕಳ ಶಿಕ್ಷಣವನ್ನು ಉತ್ತೇಜಿಸಲು ನೇಮಿಸಿದೆ.

There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜೂನ್1718192017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.