ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜೂನ್, 20,21,22,2017

Question 1

1. ಸರಕು ಮತ್ತು ಸೇವಾ ತೆರಿಗೆಯನ್ನು ಉತ್ತೇಜಿಸಲು ಈ ಕೆಳಗಿನ ಯಾರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ?

A
ಸಚಿನ್ ತೆಂಡುಲ್ಕರ್
B
ಅಮಿತಾಬ್ ಬಚ್ಚನ್
C
ಅಮೀರ್ ಖಾನ್
D
ಅಕ್ಷಯ್ ಕುಮಾರ್
Question 1 Explanation: 

ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಅಂಡ್ ಕಸ್ಟಮ್ಸ್ (ಸಿಬಿಇಸಿ) ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರನ್ನು ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ಟಿ) ಹೊಸ ಬ್ರ್ಯಾಂಡ್ ರಾಯಭಾರಿಯಾಗಿ ನೇಮಿಸಿದೆ. 40 ಸೆಕೆಂಡುಗಳ ವೀಡಿಯೊ "ಜಿಎಸ್ಟಿ - ಒಂದು ಏಕೀಕೃತ ರಾಷ್ಟ್ರೀಯ ಮಾರುಕಟ್ಟೆ ರಚಿಸಲು ಒಂದು ಉಪಕ್ರಮ"ವನ್ನು ಈಗಾಗಲೇ ಚಿತ್ರೀಕರಿಸಲಾಗಿದೆ ಮತ್ತು ಹಣಕಾಸು ಸಚಿವಾಲಯದಿಂದ ಪ್ರಸಾರ ಮಾಡಲಾಗುತ್ತಿದೆ.

Question 2

2. ಇಂಟರ್ನ್ಯಾಶನಲ್ ಕೋರ್ಟ್ ಆಫ್ ಜಸ್ಟಿಸ್ (ಐಸಿಜೆ) ನಲ್ಲಿ ನ್ಯಾಯಾಧೀಶರಾಗಿ ಮತ್ತೊಂದು ಅವಧಿಗೆ ಈ ಕೆಳಗಿನ ಯಾರನ್ನು ಭಾರತ ಮರು ನಾಮನಿರ್ದೇಶನ ಮಾಡಿದೆ?

A
ಕುಶ್ವಂತ್ ಸಿನ್ಹಾ
B
ಸೋಮಶೇಖರ್ ನಾಯಕ್
C
ದಲ್ವೀರ್ ಭಂಡಾರಿ
D
ಮಹೇಂದ್ರ ಸಿಂಗ್ ಕೊಠಾರಿ
Question 2 Explanation: 
ದಲ್ವೀರ್ ಭಂಡಾರಿ

ನ್ಯಾಯಮೂರ್ತಿ ದಲ್ವೀರ್ ಭಂಡಾರಿಯನ್ನು ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ (ಐಸಿಜೆ) ನಲ್ಲಿ ನ್ಯಾಯಾಧೀಶರಾಗಿ ಇನ್ನೊಂದು ಅವಧಿಗೆ ಮರು ನಾಮನಿರ್ದೇಶನ ಮಾಡಲಾಗಿದೆ. ಅವರ ಪ್ರಸ್ತುತ ಅವಧಿ ಫೆಬ್ರವರಿ 2018ರ ತನಕ ಇರಲಿದೆ. ನವೆಂಬರ್ನಲ್ಲಿ ಚುನಾವಣೆಗಳು ನಡೆಯಲಿದ್ದು ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೆ ಅವರು 9 ವರ್ಷಗಳ ಕಾಲ ಸೇವೆ ಸಲ್ಲಿಸಲಿದ್ದಾರೆ.

Question 3

3. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಪ್ಲಾಸ್ಮಾ ಭೌತಶಾಸ್ತ್ರಜ್ಞ ಪಿ.ಕೆ. ಕವ್ ಅವರು ಇತ್ತೀಚೆಗೆ ನಿಧನರಾದರು. ಅವರು ಯಾವ ದೇಶಕ್ಕೆ ಸಂಬಂಧಿಸಿದ್ದಾರೆ?

A
ಭಾರತ
B
ಪಾಕಿಸ್ತಾನ
C
ಚೀನಾ
D
ರಷ್ಯಾ
Question 3 Explanation: 
ಭಾರತ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಪ್ಲಾಸ್ಮಾ ಭೌತವಿಜ್ಞಾನಿ ಮತ್ತು ಭಾರತದಲ್ಲಿ ಥರ್ಮೋ-ನ್ಯೂಕ್ಲಿಯರ್ ಸಮ್ಮಿಳನ ಪ್ರವರ್ತಕ ಪ್ರೊ. ಪ್ರೆಧಮಾನ್ ಕೃಷ್ಣ ಕವ್ (69) ಅವರು 2017ರ ಜೂನ್ 18 ರಂದು ಗುಜರಾತ್ನ ಗಾಂಧಿನಗರದಲ್ಲಿ ನಿಧನ ಹೊಂದಿದರು. ಅವರು ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಮಾ ರಿಸರ್ಚ್ (ಐಪಿಆರ್) ಸಂಸ್ಥಾಪಕ ನಿರ್ದೇಶಕರಾಗಿದ್ದರು. ಥರ್ಮೋನ್ಯೂಕ್ಲಿಯರ್ ಸಮ್ಮಿಳನ ಮೂಲಕ ಶಕ್ತಿಯನ್ನು ಉತ್ಪಾದಿಸುವ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 1985ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಥರ್ಮೋನ್ಯೂಕ್ಲಿಯರ್ ಸಮ್ಮಿಳನಕ್ಕೆ ಅನ್ವಯವಾಗುವ ವಿಶೇಷ ಮಹತ್ವ ಹೊಂದಿರುವ ಪ್ಲಾಸ್ಮಾಗಳಲ್ಲಿನ ರೇಖಾತ್ಮಕವಲ್ಲದ ಸಾಮೂಹಿಕ ವಿದ್ಯಮಾನಗಳ ಭೌತಶಾಸ್ತ್ರಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಗಾಗಿ ಅಂತಾರಾಷ್ಟ್ರೀಯವಾಗಿ ಹೆಸರುವಾಸಿಯಾಗಿದ್ದರು.

Question 4

4. ಚೊಚ್ಚಲ ಪ್ರಧಾನ ಮಂತ್ರಿ ಯೋಗ ಪ್ರಶಸ್ತಿ ಈ ಕೆಳಗಿನ ಯಾವ ಸಂಸ್ಥೆಗೆ ಲಭಿಸಿದೆ?

A

ರಾಮಮಣಿ ಅಯ್ಯಂಗಾರ್ ಮೆಮೋರಿಯಲ್ ಯೋಗ ಇನ್ಸ್ಟಿಟ್ಯೂಟ್ (ರಿಮಿವೈ), ಪುಣೆ

B

ಮೊರಾರ್ಜಿ ದೇಸಾಯಿ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಯೋಗ, ನವದೆಹ

C

ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆ (Swysa), ಬೆಂಗಳೂರು

D

ಲಕ್ಷ್ಮಿಬಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಿಸಿಕಲ್ ಎಜ್ಯುಕೇಷನ್ (ಎಲ್ ಎನ್ಐಪಿಇ), ಗ್ವಾಲಿಯರ್

Question 4 Explanation: 

ರಾಮಮಣಿ ಅಯ್ಯಂಗಾರ್ ಮೆಮೋರಿಯಲ್ ಯೋಗ ಇನ್ಸ್ಟಿಟ್ಯೂಟ್ (ರಿಮಿವೈ), ಪುಣೆ

ಯೋಗದ ಉತ್ತೇಜನ ಮತ್ತು ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆ ನೀಡಿರುವ ರಾಮಮಣಿ ಅಯ್ಯಂಗಾರ್ ಮೆಮೋರಿಯಲ್ ಯೋಗ ಇನ್ಸ್ಟಿಟ್ಯೂಟ್ (ರಿಮಿವೈ)ಗೆ ಚೊಚ್ಚಲ ಪ್ರಧಾನ ಮಂತ್ರಿ ಯೋಗ ಪ್ರಶಸ್ತಿ ಲಭಿಸಿದೆ. ನಾಲ್ಕು ದಶಕಗಳ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರಸಿದ್ದಿ ಹೊಂದಲು ಸಂಸ್ಥೆ ಕೆಲಸ ಮಾಡಿದೆ. ಇದಲ್ಲದೆ ಯೋಗದ ಬಗ್ಗೆ ಅನೇಕ ಪುಸ್ತಕಗಳನ್ನು ಪ್ರಕಟಿಸಿದೆ ಮತ್ತು ಇವುಗಳನ್ನು ಬಹು ಭಾಷೆಗಳಿಗೆ ಭಾಷಾಂತರಿಸಲಾಗಿದೆ.

Question 5

5. 2017 ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯ ವಾಕ್ಯ _________?

A
ಆರೋಗ್ಯಕ್ಕಾಗಿ ಯೋಗ
B
ಶಾಂತಿಗಾಗಿ ಯೋಗ
C
ಆರೋಗ್ಯಕರ ಜೀವನಕ್ಕಾಗಿ ಯೋಗ
D
ಆರೋಗ್ಯಕರ ಮನಸ್ಸಿಗೆ ಯೋಗ
Question 5 Explanation: 
ಆರೋಗ್ಯಕ್ಕಾಗಿ ಯೋಗ ಮನಸ್ಸು ಮತ್ತು ದೇಹದ ನಡುವಿನ ಸಮತೋಲನವನ್ನು ಸಾಧಿಸಲು ಸಮಗ್ರವಾದ ರೀತಿಯಲ್ಲಿ ಯೋಗವು ಕೊಡುಗೆ ನೀಡಲಿದೆ ಎಂಬ ಅಂಶವನ್ನು ಪ್ರತಿಬಿಂಬಿಸಲು ಅಂತಾರಾಷ್ಟ್ರೀಯ ಯೋಗ ದಿನ (ಐವೈಡಿ)ವನ್ನು ಜೂನ್ 21ರಂದು ಪ್ರತಿವರ್ಷ ಆಚರಿಸಲಾಗುತ್ತದೆ. ಈ ವರ್ಷದ ವಿಶ್ವಸಂಸ್ಥೆಯ (ಯುಎನ್) ಥೀಮ್ "ಆರೋಗ್ಯಕ್ಕಾಗಿ ಯೋಗ" ಆಗಿದೆ. ಯೋಗವು ಪ್ರಾಚೀನ ಭಾರತೀಯ ಅಭ್ಯಾಸವಾಗಿದ್ದು, ಅನೇಕ ರೋಗಗಳು ಮತ್ತು ಆರೋಗ್ಯ ಅಸ್ವಸ್ಥತೆಗಳನ್ನು ಗುಣಪಡಿಸಲು ಇದು ತುಂಬಾ ಉಪಯುಕ್ತವಾಗಿದೆ.

Question 6

6. ಭಾರತದ ಮೊದಲ ದೇಶೀಯವಾಗಿ ನಿರ್ಮಿಸಿದ ತೇಲುವ ಬಂದರನ್ನು (FDN -2) ಯಾವ ಶಿಪ್ ಯಾರ್ಡ್ ನಲ್ಲಿ ಪ್ರಾರಂಭಿಸಿಲಾಯಿತು?

A
ಕಟ್ಟುಪಲ್ಲಿ ಶಿಪ್ಯಾರ್ಡ್
B
ವಿಶಾಖಪಟ್ಟಣ ಶಿಪ್ಯಾರ್ಡ್
C
ಕೊಚ್ಚಿ ಶಿಪ್ಯಾರ್ಡ್
D
ಮುಂಬೈ ಶಿಪ್ಯಾರ್ಡ್
Question 6 Explanation: 
ಕಟ್ಟುಪಲ್ಲಿ ಶಿಪ್ಯಾರ್ಡ್

ಭಾರತೀಯ ನೌಕಾಪಡೆಗೆ ಭಾರತದ ಮೊದಲ ಸ್ಥಳೀಯವಾಗಿ ನಿರ್ಮಿಸಲಾದ ತೇಲುವ ಬಂದರನ್ನು (ಎಫ್ಡಿಎನ್ -2) ತಮಿಳುನಾಡಿನ ಚೆನ್ನೈ ಸಮೀಪದ ಕಟ್ಟುಪಲ್ಲಿಯ ಎಲ್ & ಟಿ ಶಿಪ್ ಬಿಲ್ಡಿಂಗ್ ಯಾರ್ಡ್ನಲ್ಲಿ ಪ್ರಾರಂಭಿಸಲಾಗುದೆ. ಫ್ಲೋಟಿಂಗ್ ಡಾಕ್ 185 ಮೀಟರ್ ಉದ್ದ ಮತ್ತು 40 ಮೀಟರ್ ಅಗಲವಾಗಿದೆ ಮತ್ತು 8,000 ಟನ್ ಸ್ಥಳಾವಕಾಶದವರೆಗೆ ನೌಕಾ ಹಡಗುಗಳು ಮತ್ತು ಜಲಾಂತರ್ಗಾಮಿಗಳು (ವಿಮಾನವಾಹಕ ನೌಕೆಗಳು ಮತ್ತು ಟ್ಯಾಂಕರ್ಗಳನ್ನು ಹೊರತುಪಡಿಸಿ) ಸೇರಿದಂತೆ ಎಲ್ಲಾ ರೀತಿಯ ಹಡಗುಗಳ ಡಾಕಿಂಗ್ ಅನ್ನು ಮಾಡುವ ಸಾಮರ್ಥ್ಯ ಹೊಂದಿದೆ.

Question 7

7. ಯಾವ ರಾಜ್ಯ ಸರ್ಕಾರ ನರ್ಸರಿಯಿಂದ ಪಿಎಚ್ಡಿ ವರೆಗೆ ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಬಾಲಕಿಯರಿಗೆ ಉಚಿತ ಶಿಕ್ಷಣವನ್ನು ಘೋಷಿಸಿದೆ?

A
ಪಂಜಾಬ್
B
ಜಾರ್ಖಂಡ್
C
ಹರಿಯಾಣ
D
ಉತ್ತರ ಪ್ರದೇಶ
Question 7 Explanation: 
ಪಂಜಾಬ್

ಪಂಜಾಬ್ ಸರ್ಕಾರ ಇತ್ತೀಚೆಗೆ ಮಹಿಳಾ ಸಬಲೀಕರಣಕ್ಕಾಗಿ ನರ್ಸರಿ ಯಿಂದ ಪಿಎಚ್ಡಿ ವರೆಗೆ ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಬಾಲಕಿಯರಿಗೆ ಉಚಿತ ಶಿಕ್ಷಣವನ್ನು ಘೋಷಿಸಿದೆ. ಇಂಗ್ಲಿಷ್ ಅನ್ನು ಉತ್ತೇಜಿಸಲು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಜುಲೈ 2017 ರಿಂದ ಪೈಲಟ್ ಯೋಜನೆಯನ್ನು ಪ್ರಾರಂಭಿಸಲಿದೆ. ಇದರ ಜೊತೆಗೆ, 13,000 ಪ್ರಾಥಮಿಕ ಶಾಲೆಗಳು ಮತ್ತು ಎಲ್ಲಾ 48 ಸರ್ಕಾರಿ ಕಾಲೇಜುಗಳಿಗೆ ಉಚಿತ Wi-Fi ಸೇವೆಯು ಸಹ ಜಾರಿಗೆ ಬರಲಿದೆ.

Question 8

8. ಜಪಾನ್ ಪರಿಸರ ಸಚಿವಾಲಯ ಪ್ರಶಸ್ತಿ-2017 ಯಾವ ಭಾರತೀಯ ಕೃಷಿ ಸೂಕ್ಷ್ಮ ಜೀವವಿಜ್ಞಾನಿಗೆ ನೀಡಲಾಗಿದೆ?

A
ರಮೇಶ್ ಕಲಗಟಗಿ
B
ಶ್ರೀಹರಿ ಚಂದ್ರಘಟ್ಗಿ
C
ಪ್ರಮೋದ್ ನಾಯಕ್
D
ಭಾನು ಪ್ರಕಾಶ್
Question 8 Explanation: 
ಶ್ರೀಹರಿ ಚಂದ್ರಘಟ್ಗಿ

ಭಾರತೀಯ ಕೃಷಿ ಸೂಕ್ಷ್ಮ ಜೀವವಿಜ್ಞಾನಿ ಹಾಗೂ ಇಕೋ ಸೈಕಲ್ ಕಾರ್ಪೊರೇಷನ್ನ ಅಧ್ಯಕ್ಷ ಮತ್ತು CEO,ಡಾ. ಶ್ರೀಹರಿ ಚಂದ್ರಘಟ್ಗಿ ರವರಿಗೆ ಜಪಾನ್ ಪರಿಸರ ಸಚಿವಾಲಯ ಪ್ರಶಸ್ತಿ-2017 ನೀಡಿ ಗೌರವಿಸಲಾಗಿದೆ. ಪರಿಸರ ಸಮಸ್ಯೆಗಳನ್ನು ಪರಿಹರಿಸಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಕಾರಣ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇದರೊಂದಿಗೆ, ಈ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲ ವಿದೇಶೀಯ ಎನಿಸಿದ್ದಾರೆ. ಜಪಾನ್ ಪರಿಸರ ಸಚಿವಾಲಯ, ಜಪಾನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಎನ್ವಿರಾನ್ಮೆಂಟಲ್ ಸ್ಟಡೀಸ್ (ಎನ್ಐಎಸ್), ಜಪಾನ್ ಮತ್ತು ನಿಕ್ಕನ್ ಕೊಗ್ಯೋಯೋ ಶಿನ್ಬುನ್ ಇಲಾಖೆಯಿಂದ ಜಂಟಿಯಾಗಿ ಪರಿಸರ ವಲಯದಲ್ಲಿ ನೀಡಲಾಗುವ ಅತ್ಯುನ್ನತ ಗೌರವ ಇದಾಗಿದೆ.

Question 9

9. ಮೆರ್ಸರ್ನ 2017 ಕಾಸ್ಟ್ ಆಫ್ ಲಿವಿಂಗ್ ಸರ್ವೆ ಪ್ರಕಾರ, ವಲಸಿಗರಿಗೆ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಯಾವ ನಗರವು ಅಗ್ರಸ್ಥಾನ ಪಡೆದಿದೆ?

A
ಲುವಾಂಡ
B
ನ್ಯೂಯಾರ್ಕ್
C
ಸಿಂಗಪುರ್
D
ಟೊಕಿಯೊ
Question 9 Explanation: 
ಲುವಾಂಡ

ಮೆರ್ಸರ್ನ 23ನೇ ವಾರ್ಷಿಕ ಕಾಸ್ಟ್ ಆಫ್ ಲಿವಿಂಗ್ ಸರ್ವೆ ಪ್ರಕಾರ, ಅಂಗೋಲದ ರಾಜಧಾನಿ ಲುವಾಂಡಾ ವಲಸಿಗರಿಗೆ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಹಾಂಗ್ ಕಾಂಗ್ 2 ನೇ ಸ್ಥಾನವನ್ನು ಪಡೆದಿದ್ದು, ಟೋಕಿಯೋ, ಜುರಿಚ್, ಸಿಂಗಪೂರ್, ಸಿಯೋಲ್ ಮತ್ತು ಜಿನೀವಾ ನಂತರ ಸ್ಥಾನದಲ್ಲಿವೆ. ಭಾರತದಲ್ಲಿ ಮುಂಬೈ ಅತಿ ಹೆಚ್ಚು ದುಬಾರಿ ನಗರವಾಗಿದೆ. ಮುಂಬೈ 57ನೇ ಸ್ಥಾನದಲ್ಲಿದೆ. ನವದೆಹಲಿ (99), ಚೆನ್ನೈ (135), ಬೆಂಗಳೂರು (166) ಮತ್ತು ಕೊಲ್ಕತ್ತಾ (184) ಸ್ಥಾನಗಳಲ್ಲಿವೆ.

Question 10

10. ಹೊಸದಾಗಿ ರಚಿಸಲಾದ ವಿಶ್ವಸಂಸ್ಥೆಯ ಭಯೋತ್ಪಾದನಾ ವಿರೋಧಿ ಕೇಂದ್ರದ (UNCTO) ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?

A
ಸ್ಟೀಫನ್ ಹಾರ್ಟ್
B
ವ್ಲಾಡಿಮಿರ್ ವೋರೊನ್ಕೋವ್
C
ಜೋಸೆಫ್ ಗುಡ್ವಿಲ್
D
ಡೇವಿಡ್ ಬ್ರೂಸ್
Question 10 Explanation: 
ವ್ಲಾಡಿಮಿರ್ ವೋರೊನ್ಕೋವ್

ರಷ್ಯಾದ ರಾಯಭಾರಿ ವ್ಲಾಡಿಮಿರ್ ಇವನೊವಿಚ್ ವೊರೊನ್ಕೊವ್ ಅವರನ್ನು ಹೊಸದಾಗಿ ರಚಿಸಿರುವ ವಿಶ್ವಸಂಸ್ಥೆಯ ಭಯೋತ್ಪಾದನಾ ವಿರೋಧಿ ಕೇಂದ್ರದ (ಯುಎನ್ಟಿಟಿಒ) ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜೂನ್2021222017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.