ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜೂನ್,23,24,2017

Question 1

1. ಸಂಚಾರ ಉಲ್ಲಂಘನೆಯನ್ನು ನಿಯಂತ್ರಿಸಲು ರೋಬೋಟ್ ಅನ್ನು ಬಳಸಿದ ಭಾರತದ ಮೊದಲ ನಗರ ಯಾವುದು?

A
ಇಂಧೋರ್
B
ನವ ದೆಹಲಿ
C
ಕೊಚ್ಚಿ
D
ಮುಂಬೈ
Question 1 Explanation: 
ಇಂಧೋರ್

ನಿರಂತರವಾಗಿ ಬೆಳೆಯುತ್ತಿರುವ ಮತ್ತು ಅಶಿಸ್ತಿನ ಸಂಚಾರ ನಿಯಂತ್ರಿಸಲು ಇಂಧೋರ್ ನಲ್ಲಿ ಪ್ರಾಯೋಗಿಕವಾಗಿ ರೋಬೋಟ್ ಅನ್ನು ಬಳಸಲಾಗುತ್ತಿದೆ. ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ಅಲ್ಲಿನ ಟ್ರಾಫಿಕ್ ಪೋಲಿಸ್ ಲೋಹೀಯ ರೋಬೋಟ್ನ್ನು ನಿಧಾನಗತಿಯ ಟ್ರಾಫಿಕ್ ಅನ್ನು ನಿಯಂತ್ರಿಸಲು ಬಳಸಿದ್ದಾರೆ. ಈ ಟ್ರಾಫಿಕ್ ನಿಯಂತ್ರಕ ರೋಬೋಟ್ ಅನ್ನು ನಗರದ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಪಕರಾದ ರಾಹುಲ್ ತಿವಾರಿ ಮತ್ತು ಅನಿರುದ್ ಶರ್ಮಾ ವಿನ್ಯಾಸಗೊಳಿಸಿದ್ದಾರೆ.

Question 2

2. ಲಂಡನ್ ನಲ್ಲಿ ನಡೆದ 7ನೇ ಏಷ್ಯನ್ ಪ್ರಶಸ್ತಿ ಸಮಾರಂಭದಲ್ಲಿ "ಇಂಡಿಯನ್ ಸೊಸೈಟಿ ಎಂಟರ್ಪ್ರೆನರ್ ಆಫ್ ದಿ ಇಯರ್" ಪ್ರಶಸ್ತಿಯನ್ನು ಪಡೆದ ಭಾರತೀಯ ವ್ಯಕ್ತಿ ಯಾರು?

A
ನಿಶಾ ದತ್ತ್
B
ಅಶ್ವಿನಿ ಕುಮಾರ್
C
ರಾಮ್ ಚರಣ್ ಸಿಂಗ್
D
ಪ್ರಿಯಾಂಕ ಗರ್ಗ್
Question 2 Explanation: 
ನಿಶಾ ದತ್ತ್

ಇಂಟೆಲ್ಕ್ಯಾಪ್ ಸಿಇಒ ನಿಶಾ ದತ್ ಅವರಿಗೆ ಲಂಡನ್ ನಲ್ಲಿ ನಡೆದ ಏಳನೇ ಏಷಿಯನ್ ಪ್ರಶಸ್ತಿ ಸಮಾರಂಭದಲ್ಲಿ "ಸೋಶಿಯಲ್ ಎಂಟರ್ಪ್ರೆನಿಯರ್ ಆಫ್ ದಿ ಇಯರ್" ಪ್ರಶಸ್ತಿಯನ್ನು ನೀಡಿ ಗೌರವಿಸಿಲಾಗಿದೆ. ಇದರೊಂದಿಗೆ, ಈ ಪ್ರಶಸ್ತಿಯನ್ನು ಪಡೆದಿರುವ ಮೊದಲ ಭಾರತೀಯ ಮಹಿಳಾ ನಾಯಕಿ ದತ್.

Question 3

3. “2017 ಕಾರ್ನೆಗೀ ಮೆಡಲ್ ಆಫ್ ಫಿಲಾನ್ ಥ್ರೊಪಿ (Carnegie Medal of Philanthropy)”ಗೆ ಭಾರತದ ಯಾರು ಭಾಜನರಾಗಿದ್ದಾರೆ?

A
ಸಚಿನ್ ತೆಂಡುಲ್ಕರ್
B
ಅಜೀಂ ಪ್ರೇಮ್ ಜೀ
C
ಕಲ್ಯಾಣ್ ಸತ್ಯಾರ್ಥಿ
D
ಅಕ್ಷಯ್ ಕುಮಾರ್
Question 3 Explanation: 
ಅಜೀಂ ಪ್ರೇಮ್ ಜೀ

ಭಾರತದ ಸಾರ್ವಜನಿಕ ಶಾಲಾ ವ್ಯವಸ್ಥೆಯನ್ನು ಸುಧಾರಿಸುವ ತನ್ನ ಪ್ರಯತ್ನಗಳಿಗಾಗಿ ವಿಪ್ರೋ ಚೇರ್ಮನ್ ಅಜೀಮ್ ಪ್ರೇಮ್ಜಿ ಅವರಿಗೆ “2017 ಕಾರ್ನೆಗೀ ಮೆಡಲ್ ಆಫ್ ಫಿಲಾನ್ ಥ್ರೊಪಿ” ನೀಡಿ ಗೌರವಿಸಲಾಗಿದೆ.

Question 4

4. ಡೀಸೆಲ್ ಅನ್ನು ಮನೆಗೆ ತಲುಪಿಸುವ ವ್ಯವಸ್ಥೆ ಭಾರತದ ಯಾವ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಜಾರಿಗೆ ಬಂದಿದೆ?

A
ಗುವಾಹಟಿ
B
ಬೆಂಗಳೂರು
C
ಚೆನ್ನೈ
D
ಕೊಚ್ಚಿ
Question 4 Explanation: 
ಬೆಂಗಳೂರು

ಬೆಂಗಳೂರಿನಲ್ಲಿ ಹಾಲು ಮತ್ತು ವೃತ್ತಪತ್ರಿಕೆಗಳಂತೆಯೇ ಮನೆಗಳಿಗೆ ಡಿಸೇಲ್ ತಲುಪಿಸುವ ವ್ಯವಸ್ಥೆ ದೇಶದಲ್ಲೆ ಮೊದಲ ಬಾರಿಗೆ ಜಾರಿಗೆ ಬಂದಿದೆ. ಮೈಪೆಟ್ರೊಂಪ್ಂಪ್ ಎಂಬ ಸಂಸ್ಥೆ ಈ ವಿನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದೆ. 950 ಲೀಟರ್ ಸಾಮರ್ಥ್ಯದ ಮೂರು ವಿತರಣಾ ವಾಹನಗಳೊಂದಿಗೆ ಡಿಸೇಲ್ ಅನ್ನು ಸರಬರಾಜು ಮಾಡಲಾಗುವುದು. ಫೋನ್ ಕರೆ ಮೂಲಕ ಅಥವಾ ಉಚಿತ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಆನ್ಲೈನ್ನಲ್ಲಿ ಆರ್ಡರ್ ಮಾಡಬಹುದು.

Question 5

5. ಯಾವ ದಿನದಂದು 2017 ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನವನ್ನು ಆಚರಿಸಲಾಗುತ್ತದೆ?

A
ಜೂನ್ 22
B
ಜೂನ್ 23
C
ಜೂನ್ 24
D
ಜೂನ್ 25
Question 5 Explanation: 
ಜೂನ್ 23

ಸಾರ್ವಜನಿಕ ಸೇವಕರ ಕೆಲಸವನ್ನು ಗುರುತಿಸಲು ಮತ್ತು ಯುವಜನರನ್ನು ಸಾರ್ವಜನಿಕ ಸೇವೆಗೆ ಸೇರುವುದನ್ನು ಪ್ರೋತ್ಸಾಹಿಸಲು ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನವನ್ನು ಪ್ರತಿವರ್ಷ ಜೂನ್ 23 ರಂದು ಆಚರಿಸಲಾಗುತ್ತದೆ.

Question 6

6. “2017 ಕ್ವೀನ್ಸ್ ಯಂಗ್ ಲೀಡರ್ಸ್ ಪ್ರಶಸ್ತಿ”ಯನ್ನು ಪಡೆದ ಭಾರತದ ಹಸಿವು ವಿರೋಧಿ ಕಾರ್ಯಕರ್ತ ಯಾರು?

A
ಸುರೇಶ್ ಬನ್ಸಲ್
B
ಗುರುಪ್ರೀತ್ ಸಿಂಗ್
C
ರಾಜೀವ್ ಶುಕ್ಲಾ
D
ಅಂಕಿತ್ ಕವಾತ್ರ
Question 6 Explanation: 
ಅಂಕಿತ್ ಕವಾತ್ರ

ಭಾರತದ ಹಸಿವು ವಿರೋಧಿ ಕಾರ್ಯಕರ್ತ ಅಂಕಿತ್ ಕವಾತ್ರ ಅವರಿಗೆ “2017 ಕ್ವೀನ್ಸ್ ಯಂಗ್ ಲೀಡರ್ಸ್ ಪ್ರಶಸ್ತಿ” ಲಭಿಸಿದೆ. ಕವಾತ್ರ ಅವರು ಫೀಡಿಂಗ್ ಇಂಡಿಯಾ ಸ್ಥಾಪಕರಾಗಿದ್ದು, ಈ ಸಂಸ್ಥೆಯ ಮೂಲಕ ಹಸಿವು, ಅಪೌಷ್ಟಿಕತೆ ಮತ್ತು ಆಹಾರದ ವ್ಯರ್ಥದ ಸಮಸ್ಯೆಗಳನ್ನು ಪರಿಹರಿಸುವ ಕಡೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ರೆಸ್ಟಾರೆಂಟ್, ಕ್ಯಾಂಟೀನ್, ಮನೆಗಳು, ಕಾರ್ಪೊರೇಟ್ಗಳು ಇತ್ಯಾದಿಗಳಿಂದ ಉಳಿದ ಆಹಾರವನ್ನು ಸಂಗ್ರಹಿಸಿ ಬಡ ಜನರಿಗೆ ನೀಡುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ.

Question 7

7. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ನೂತನ ಉಪಾಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

A
ಇಮ್ರಾನ್ ಖವಾಜ
B
ಎನ್ ಶ್ರೀನಿವಾಸನ್
C
ರಣಬೀರ್ ಸಿಂಗ್
D
ಡೇವಿಡ್ ಮ್ಯಾಥ್ಯು
Question 7 Explanation: 
ಇಮ್ರಾನ್ ಖವಾಜ

ಕ್ರಿಕೆಟ್ ಮಂಡಳಿಯ (ಐಸಿಸಿ) ನೂತನ ಉಪಾಧ್ಯಕ್ಷರಾಗಿ ಐಸಿಸಿ ಸದಸ್ಯರಾಗಿರುವ ಸಿಂಗಪುರ್ನ ಅಸೋಸಿಯೇಟ್ಸ್ ಕೌಂಟಿಗಳ ಮುಖ್ಯಸ್ಥ ಇಮ್ರಾನ್ ಖವಾಜಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಐಸಿಸಿ ಮುಖ್ಯಸ್ಥ ಶಶಾಂಕ್ ಮನೋಹರ್ ಅವರ ಅನುಪಸ್ಥಿತಿಯಲ್ಲಿ ಐಸಿಸಿ ಸಭೆಗಳ ಅಧ್ಯಕ್ಷತೆಯನ್ನು ಅವರು ವಹಿಸಿಕೊಳ್ಳಲಿದ್ದಾರೆ. ಖವಾಜಾ ಒಬ್ಬ ಹಿರಿಯ ವಕೀಲರಾಗಿದ್ದು, ಹಲವಾರು ವರ್ಷಗಳಿಂದ ಐಸಿಸಿ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೂನ್ 22, 2017 ರಂದು ಸಂವಿಧಾನಾತ್ಮಕ ಬದಲಾವಣೆಯ ನಂತರ ಐಸಿಸಿ ಮಂಡಳಿಗೆ ಉಪಾಧ್ಯಕ್ಷರ ಹುದ್ದೆಯನ್ನು ಇತ್ತೀಚೆಗೆ ರಚಿಸಲಾಗಿದೆ.

Question 8

8. 2017ರಲ್ಲಿ ಪ್ರತಿಷ್ಠಿತ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿ ಭಾರತದ ಯಾವ ರಾಜ್ಯ ಸರ್ಕಾರಕ್ಕೆ ಲಭಿಸಿದೆ?

A
ಆಂಧ್ರ ಪ್ರದೇಶ
B
ತೆಲಂಗಣ
C
ಪಶ್ಚಿಮ ಬಂಗಾಳ
D
ತಮಿಳುನಾಡು
Question 8 Explanation: 
ಪಶ್ಚಿಮ ಬಂಗಾಳ

ಬಾಲ್ಯ ವಿವಾಹವನ್ನು ತಡೆಯಲು ಮತ್ತು ರಾಜ್ಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಪಶ್ಚಿಮ ಬಂಗಾಳ ಸರ್ಕಾರ ಜಾರಿಗೆ ತಂದಿರುವ “ಕನ್ಯಾಶ್ರೀ ಪ್ರಕಲ್ಪಾ” ಯೋಜನೆಗೆ ಪ್ರತಿಷ್ಠಿತ ವಿಶ್ವಸಂಸ್ಥೆ ಪಬ್ಲಿಕ್ ಸರ್ವಿಸ್ ಅವಾರ್ಡ್ 2017 ಲಭಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು 'ಕನ್ಯಾಶ್ರೀ ಪ್ರಕಲ್ಪಾ' ಉಪಕ್ರಮಕ್ಕಾಗಿ ತನ್ನ ಸರ್ಕಾರದ ಪರವಾಗಿ ನೆದರ್ಲೆಂಡ್ಸ್ನ ಹೇಗ್ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು.

Question 9

9. “ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೇನ್ಮೆಂಟ್ (WWE)” ನಲ್ಲಿ ಸ್ಪರ್ಧಿಸಲಿರುವ ಭಾರತದ ಮೊದಲ ಮಹಿಳಾ ಕುಸ್ತಿಪಟು ಯಾರು?

A
ಕವಿತಾ ದೇವಿ
B
ಪಿಂಕಿ ರಾಣಿ
C
ಸಾಕ್ಷಿ ಮಲ್ಲಿಕ್
D
ಗೀತಾ ಪೊಗಟ್
Question 9 Explanation: 
ಕವಿತಾ ದೇವಿ

ಭಾರತದ ಮಾಜಿ ಪವರ್ ಲಿಫ್ಟರ್ ಮತ್ತು ದಕ್ಷಿಣ ಏಷ್ಯಾ ಗೇಮ್ಸ್ ಚಿನ್ನದ ಪದಕ ವಿಜೇತೆ ಕವಿತಾ ದೇವಿ ರವರು ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್ (WWE) ಸ್ಪರ್ಧೆಯಲ್ಲಿ ಸ್ಪರ್ಧಿಸಲಿರುವ ಮೊದಲ ಭಾರತೀಯ ಮಹಿಳೆ ಆಗಿದ್ದಾರೆ. ಜುಲೈ 2017 ರಿಂದ ಮೊದಲ ಬಾರಿಗೆ ಮೇ ಯಂಗ್ ಕ್ಲಾಸಿಕ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಫ್ಲೋರಿಡಾದ ಒರ್ಲ್ಯಾಂಡೊದಲ್ಲಿ ಫುಲ್ ಸೈಲ್ ಲೈವ್ನಲ್ಲಿ ಜುಲೈ 13 -14 ರಂದು ನಡೆಯಲಿದೆ.

Question 10

10. ನಾಸಾ ಇತ್ತೀಚೆಗೆ ಪ್ರಪಂಚದ ಅತಿ ಚಿಕ್ಕ ಉಪಗ್ರಹ "ಕಲಾಮತ್" ಅನ್ನು ಯಶಸ್ವಿಯಾಗಿ ಉಡಾಯಿಸಿದೆ. ಈ ಉಪಗ್ರಹವನ್ನು ಅಭಿವೃದ್ದಿಪಡಿಸಿರುವ ಭಾರತದ ಬಾಲಕನನ್ನು ಗುರುತಿಸಿ?

A
ರಮಣ್ ಗೋಗುಲ್
B
ಪ್ರದೀಪ್ ಶೇಖರ್
C
ಕಿಶನ್ ಮಜ್ನು
D
ರಿಫತ್ ಶಾರೂಖ್
Question 10 Explanation: 
ರಿಫತ್ ಶಾರೂಕ್

2017 ಜೂನ್ 23 ರಂದು ನಾಸಾದ ವಾಲೋಪ್ಸ್ ಐಲೆಂಡ್ನ ನಿಂದ ವಿಶ್ವದ ಅತಿದೊಡ್ಡ ಮತ್ತು ಹಗುರವಾದ ಉಪಗ್ರಹ "ಕಲಾಂಸ್ಯಾಟ್" ಅನ್ನು ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಯಶಸ್ವಿಯಾಗಿ ಉಡಾಯಿಸಿತು. ಈ ಉಪಗ್ರಹಕ್ಕೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್ ಅವರ ಸ್ಮರಣಾರ್ಥ ಅವರ ಹೆಸರನ್ನು ಇಡಲಾಗಿದೆ. ತಮಿಳುನಾಡು ವಿದ್ಯಾರ್ಥಿ ರಿಫತ್ ಶಾರೂಕ್ ಅವರೊಂದಿಗೆ ಆರು ಮಂದಿ ತಂಡ ಈ ಉಪಗ್ರಹವನ್ನು ವಿನ್ಯಾಸಗೊಳಿಸಿದ್ದಾರೆ. ಸಣ್ಣ ಉಪಗ್ರಹವು ಸುಮಾರು 64 ಗ್ರಾಂ ತೂಕವಿದೆ ಮತ್ತು ಇದರ ರಚನೆಯು ಸಂಪೂರ್ಣವಾಗಿ ಬಲವರ್ಧಿತ ಕಾರ್ಬನ್ ಫೈಬರ್ ಪಾಲಿಮರ್ನಿಂದ 3D-ಮುದ್ರಿತವಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜೂನ್23242017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.