ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜುಲೈ,10,11,12,2017

Question 1

1. ಈ ಕೆಳಗಿನ ಯಾರು 2017 ಸೌತ್ ಆಸ್ಟ್ರೇಲಿಯನ್ ಓಪನ್ ಸ್ಕ್ವ್ಯಾಷ್ ಪಂದ್ಯಾವಳಿಯಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು?

A
ಸೌರವ್ ಘೋಷಲ್
B
ಹರಿಂದರ್ ಪಾಲ್ ಸಂಧು
C
ರೈಸ್ ಡೌಲಿಂಗ್
D
ಪೀಟರ್ ಮರೊ
Question 1 Explanation: 
ಹರಿಂದರ್ ಪಾಲ್ ಸಂಧು

ಆಸ್ಟ್ರೇಲಿಯದ ಅಡಿಲೇಡ್ನಲ್ಲಿ ನಡೆದ ಸೌತ್ ಆಸ್ಟ್ರೇಲಿಯನ್ ಓಪನ್ ಸ್ಕ್ವ್ಯಾಷ್ ಪಂದ್ಯಾವಳಿಯಲ್ಲಿ ಭಾರತದಿಂದ ಹರೀಂದರ್ ಪಾಲ್ ಸಂಧು ರವರು 11-8, 12-10, 11-4ರಲ್ಲಿ ರೈಸ್ ಡೌಲಿಂಗ್ ಅವರನ್ನು ಸೋಲಿಸಿ ಸೌತ್ ಆಸ್ಟ್ರೇಲಿಯ ಓಪನ್ ಸ್ಕ್ವಾಷ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

Question 2

2. ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ನ ನೂತನ ಚುನಾಯಿತ ಅಧ್ಯಕ್ಷರು ಯಾರು?

A
ಸಂದೀಪ್ ಕುಲಕರ್ಣಿ
B
ರಾಜೀವ್ ಶುಕ್ಲಾ
C
ರಣಿಂದರ್ ಸಿಂಗ್
D
ಅಶೋಕ್ ಭಾಟಿಯ
Question 2 Explanation: 
ರಣಿಂದರ್ ಸಿಂಗ್

ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾದ (ಎನ್ಆರ್ಎಐ) ಅಧ್ಯಕ್ಷರಾಗಿ ರಣಿಂದರ್ ಸಿಂಗ್ ರವರು ನಾಲ್ಕು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ. ಸಕ್ರಿಯ ಚಳವಳಿಗಾರನಾಗಿದ್ದಾನೆ. ರಣಿಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿ ಅಮರಂದರ್ ಸಿಂಗ್ ಅವರ ಪುತ್ರ.

Question 3

3. ಈ ಕೆಳಗಿನ ಯಾವ ಸಂಸ್ಥೆ 2015-16ರಲ್ಲಿ 'ಅತ್ಯುತ್ತಮ ಸಾಧನೆ ಸಮಗ್ರ ಉಕ್ಕು ಸ್ಥಾವರ'ಕ್ಕಾಗಿ ಪ್ರಧಾನಿ ಮಂತ್ರಿ ಟ್ರೋಫಿಯನ್ನು ಗೆದ್ದಿದೆ?

A
ಟಾಟಾ ಸ್ಟೀಲ್ ಲಿಮಿಟೆಡ್
B
ಬಿಲಾಯ್ ಸ್ಟೀಲ್ ಘಟಕ
C
ರಾಷ್ಟ್ರೀಯ ಇಶ್ಪತ್ ನಿಗಮ ಲಿಮಿಟೆಡ್
D
ರೂರ್ಕೆಲಾ ಸ್ಟೀಲ್
Question 3 Explanation: 
ಟಾಟಾ ಸ್ಟೀಲ್ ಲಿಮಿಟೆಡ್
Question 4

4. 2017 ಸಾರ್ಕ್ ಕಾನೂನು ಸಚಿವರ (ಆಂತರಿಕ / ಗೃಹ ವ್ಯವಹಾರ) ಸಭೆ ಯಾವ ದೇಶದಲ್ಲಿ ನಡೆಯಲಿದೆ?

A
ಶ್ರೀಲಂಕಾ
B
ಬಾಂಗ್ಲದೇಶ
C
ಪಾಕಿಸ್ತಾನ
D
ಭಾರತ
Question 4 Explanation: 
ಶ್ರೀಲಂಕಾ

2017 ಸಾರ್ಕ್ ಕಾನೂನು ಸಚಿವರ ಸಭೆ ಜುಲೈ 11, 2017 ರಂದು ಶ್ರೀಲಂಕಾದ ಕೊಲಂಬೊದಲ್ಲಿ ಪ್ರಾರಂಭವಾಗಿದೆ. ವೀಸಾ ಉದಾರೀಕರಣ ಹಾಗೂ ಭಯೋತ್ಪಾದನೆಯನ್ನು ನಿಭಾಯಿಸುವ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು.

Question 5

5. 2017 ರ ವಿಶ್ವ ಜನಸಂಖ್ಯಾ ದಿನದ ಧ್ಯೇಯ ವಾಕ್ಯ ________?

A
Be counted: say what you need
B
Investing in teenage girls
C
Family Planning- Empowering People, Developing Nation
D
Population Day: We all counts
Question 5 Explanation: 

Family Planning- Empowering People, Developing Nation

ವಿಶ್ವ ಜನಸಂಖ್ಯಾ ದಿನವನ್ನು (ಡಬ್ಲ್ಯೂಪಿಡಿ) ಪ್ರತಿವರ್ಷ ಜುಲೈ 11 ರಂದು ಆಚರಿಸಲಾಗುತ್ತದೆ. ಜಾಗತಿಕ ಜನಸಂಖ್ಯಾ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಈ ದಿನದ ಉದ್ದೇಶ. Family Planning- Empowering People, Developing Nation ಇದು ಈ ವರ್ಷದ ಧ್ಯೇಯವಾಕ್ಯ.

Question 6

6. ಈ ಕೆಳಗಿನ ಯಾವ ಸಂಸ್ಥೆಗೆ “ಗೋಲ್ಡನ್ ಪೀಕಾಕ್ ಎನ್ವಿರಾನ್ಮೆಂಟ್ ಮ್ಯಾನೇಜ್ಮೆಂಟ್ ಪ್ರಶಸ್ತಿ (ಜಿಪಿಎಂಎ)” ಲಭಿಸಿದೆ?

A
ಡನ್ಫೊಸ್ ಇಂಡಿಯಾ
B
ವಿಪ್ರೋ ಲಿಮಿಟೆಡ್
C
ಟಾಟಾ ಗ್ರೂಪ್
D
ಇನ್ಪೋಸಿಸ್
Question 6 Explanation: 
ಡನ್ಫೊಸ್ ಇಂಡಿಯಾ

ಹವಾಮಾನ ಮತ್ತು ಇಂಧನ ದಕ್ಷತೆ ಪರಿಹಾರ ಸಂಸ್ಥೆ ಡನ್ಫೋಸ್ ಇಂಡಿಯಾಗೆ ಭಾರತ ಪರಿಸರ ನಿರ್ವಹಣೆಯ 19 ನೇ ವಿಶ್ವ ಕಾಂಗ್ರೆಸ್ನಲ್ಲಿ 'ಗೋಲ್ಡನ್ ಪೀಕಾಕ್ ಪ್ರಶಸ್ತಿ' ನೀಡಲಾಗಿದೆ.

Question 7

7. ಈ ಕೆಳಗಿನ ಯಾವ ದೇಶದಲ್ಲಿ 2017 ಕುಟುಂಬ ಯೋಜನೆ ಶೃಂಗಸಭೆ (ಎಫ್ಪಿಎಸ್) ಆಯೋಜಿಸಲಾಗಿದೆ?

A
ರಷ್ಯಾ
B
ಚೀನಾ
C
ಭಾರತ
D
ಯುಕೆ
Question 7 Explanation: 
ಯುಕೆ

2017 ಕುಟುಂಬ ಯೋಜನೆ ಶೃಂಗಸಭೆ (ಎಫ್ಪಿಎಸ್) ಯು ಜುಲೈ 11, 2017 ರಂದು ಲಂಡನ್ ನಲ್ಲಿ ಆರಂಭಗೊಂಡಿದೆ. UNFPA, ಯುನೈಟೆಡ್ ಕಿಂಗ್ಡಮ್ ಮತ್ತು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಈ ಶೃಂಗಸಭೆಯನ್ನು ಆಯೋಜಿಸಿವೆ.

Question 8

8. ಸರಕು ಮತ್ತು ಸೇವಾ ತೆರಿಗೆ ಇಂಟೆಲಿಜೆನ್ಸ್ ನ ನೂತನ ಡೈರೆಕ್ಟರ್ ಜನರಲ್ ಆಗಿ ಯಾರು ನೇಮಕಗೊಂಡಿದ್ದಾರೆ?

A
ಜಾನ್ ಜೋಸೆಫ್
B
ರವೀಂದ್ರ ಜೈನ್
C
ಸುಧೀಂದ್ರ ಸಿಂಗ್
D
ಮನ್ವಿತ್ ಮೌರ್ಯ
Question 8 Explanation: 
ಜಾನ್ ಜೋಸೆಫ್

ಡಾ. ಜಾನ್ ಜೋಸೆಫ್, ಭಾರತೀಯ ರೆವಿನ್ಯೂ ಸರ್ವಿಸ್ (ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್) ನ 1983ನೇ ಬ್ಯಾಚ್ ಅಧಿಕಾರಿಯಾಗಿ ರವರನ್ನು ಸರಕು ಮತ್ತು ಸೇವಾ ತೆರಿಗೆ ಇಂಟೆಲಿಜೆನ್ಸ್ ನ ಡೈರೆಕ್ಟರ್ ಜನರಲ್ ಆಗಿ ನೇಮಕ ಮಾಡಲಾಗಿದೆ.

Question 9

9. ಈ ಕೆಳಗಿನ ಯಾರು “2017 ಫಾರ್ಮುಲಾ ಒನ್ ಆಸ್ಟ್ರಿಯನ್ ಗ್ರ್ಯಾಂಡ್ ಪ್ರಿಕ್ಸ್” ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು?

A
ಡೆನಿಯಲ್ ರಿಕ್ಕಿಯಾರ್ಡೊ
B
ಲೇವಿಸ್ ಹ್ಯಾಮಿಲ್ಟನ್
C
ವಲ್ಟೆರಿ ಬೊಟ್ಟಸ್
D
ಸೆಬಾಸ್ಟಿಯನ್ ವೆಟ್ಟಲ್
Question 9 Explanation: 
ವಲ್ಟೆರಿ ಬೊಟ್ಟಸ್
Question 10

10. ಮಹಿಳೆಯರಿಗೆ ಉಚಿತ ಚುಚ್ಚುಮದ್ದಿನ ಗರ್ಭನಿರೋಧಕವನ್ನು ಪ್ರಾರಂಭಿಸದ ಭಾರತದ ಮೊದಲ ರಾಜ್ಯ ಯಾವುದು?

A
ಆಂಧ್ರ ಪ್ರದೇಶ
B
ತಮಿಳುನಾಡು
C
ಮಹಾರಾಷ್ಟ್ರ
D
ತೆಲಂಗಣ
Question 10 Explanation: 
ಮಹಾರಾಷ್ಟ್ರ

ಮಹಾರಾಷ್ಟ್ರ ಸರ್ಕಾರ ಮಹಿಳೆಯರಿಗೆ ಉಚಿತ ಚುಚ್ಚುಮದ್ದಿನ ಗರ್ಭನಿರೋಧಕವನ್ನು ಪ್ರಾರಂಭಿಸದೆ. ಆ ಮೂಲಕ ಚುಚ್ಚುಮದ್ದಿನ ಗರ್ಭನಿರೋಧಕವನ್ನು ಜಾರಿಗೆ ತಂದ ಮೊದಲ ರಾಜ್ಯವೆನಿಸಿದೆ. ಪುಣೆ, ಮುಂಬೈ, ರಾಯ್ಗಡ್, ನಂದೂರುಬಾರ್, ಅಹಮದ್ನಗರ, ಔರಂಗಾಬಾದ್, ಕೊಲ್ಹಾಪುರ, ಸಾಂಗ್ಲಿ, ರತ್ನಗಿರಿ ಮತ್ತು ಬೀಡ್ ನಲ್ಲಿ ರಾಜ್ಯದ ಸಾರ್ವಜನಿಕ ಆರೋಗ್ಯ ಇಲಾಖೆ ಜುಲೈ 10, 2017 ರಂದು "ಅಂಟರಾ" ಕಾರ್ಯಕ್ರಮವನ್ನು ಪ್ರಾರಂಭಿಸಿದೆ. 23 ಜಿಲ್ಲೆಯ ಆಸ್ಪತ್ರೆಗಳು, 20 ವೈದ್ಯಕೀಯ ಕಾಲೇಜುಗಳು ಮತ್ತು 12 ಮಹಿಳಾ ಆಸ್ಪತ್ರೆಗಳಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.

There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜುಲೈ1011122017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.